ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ; ಇದರಿಂದ ಕೊಳೆತ ಕಾಲು ಸರಿಯಾಗುತ್ತೆ

ಅಸ್ಥಿ ಮಜ್ಜೆಗೂ ಹೊಸಾ ಚೈತನ್ಯ ತುಂಬೋ ಈ ಆಕ್ಸಿಜನ್ ಆ ಮೂಲಕವೂ ಹೊಸಾ ಕೋಶಗಳ ಉಗಮಕ್ಕೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಗಾಯ ಗುಣವಾಗಿ ಆರೋಗ್ಯಕರ ಕೋಶಗಳು ಮರುಜನ್ಮ ನೀಡುತ್ತವೆ.

news18-kannada
Updated:September 9, 2019, 5:33 PM IST
ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ; ಇದರಿಂದ ಕೊಳೆತ ಕಾಲು ಸರಿಯಾಗುತ್ತೆ
ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ
  • Share this:
ಗುಬ್ಬಿ ತಾಲ್ಲೂಕಿನ ವೆಂಕಟೇಶ ಬಾಬು ಬೆಂಗಳೂರಿನಲ್ಲಿ ಬದುಕು ಅರಸಿ ಬಂದು ಕೂಲಿ ಕೆಲಸ ಮಾಡುತ್ತಿದ್ದರು. ತಂದೆ, ತಾಯಿ ತಂಗಿ ಇರೋ ಕುಟುಂಬಕ್ಕೆ ಇವನೇ ಆಧಾರ. ಆದರೆ ಏಪ್ರಿಲ್ ತಿಂಗಳಲ್ಲಿ ಫುಟ್​​ಪಾತ್​​ ಮೇಲೆ ಲಾರಿಯಿಂದ ಮೂಟೆ ಇಳಿಸುತ್ತಿದ್ದ ಈತನಿಗೆ ಕುಡಿದ ಮತ್ತಿನಲ್ಲಿ ಕಾರ್ ಓಡಿಸುತ್ತಿದ್ದ ವ್ಯಕ್ತಿಯೊಬ್ಬ ಜೋರಾಗಿ ಬಂದು ಗುದ್ದೇಬಿಟ್ಟಿದ್ದರು.

ಕಾರು ಗುದ್ದಿದ ರಭಸದಲ್ಲಿ ಸ್ಥಳದಲ್ಲೇ ಮೂರ್ಛೆ ಹೋಗಿದ್ದ 20 ವರ್ಷದ ವೆಂಕಟೇಶ್ ಬಾಬು ಒಂದು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ಕಳೆದರು. ಆವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು. ಇದರಿಂದಾಗಿ, ವೈದ್ಯರು ಕಾಲು ಕತ್ತರಿಸಲೇ ಬೇಕು ಎಂದು ಹೇಳಿದ್ದರು. ಅಷ್ಟರಲ್ಲಿ ಅವನ ಪಾಲಿನ ಸಂಜೀವಿನಿಯಾಗಿ ಬಂದಿದ್ದು ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ. ಈ ನೂತನ ಚಿಕಿತ್ಸೆ, ವೆಂಕಟೇಶ್ ಬಾಬು

ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರೋ ಹೈಪರ್ಬೇರಿಕ್ ಆಕ್ಸಿಜನ್ ಥೆರಪಿಯಿಂದಾಗಿ ವೆಂಕಟೇಶ್​​ ಬಾಬು ಇಂದು ನಡೆಯೋಕೆ ಸಾಧ್ಯವಾಗಿದೆ. ಗ್ಯಾಂಗ್ರಿನ್ ರೀತಿಯಲ್ಲಿ ಬಹುತೇಕ ಕೊಳೆತೇ ಹೋಗಿದ್ದ ಅವರ ಕಾಲಿನಿಂದ ಮೂಳೆ ಹೊರಬಂದಿತ್ತು. ಆದರೆ ಪ್ರಾಣವಾಯು ಆಮ್ಲಜನಕದ ಬಳಕೆಯಿಂದ ವಿಶಿಷ್ಟ ಚಿಕಿತ್ಸೆ ಪಡೆದ ವೆಂಕಟೇಶ್ ಬಾಬು ಈಗ ಮತ್ತೆ ತನ್ನ ಎಂದಿನ ಬದುಕಿಗೆ ಮರಳೋಕೆ ಸಜ್ಜಾಗಿದ್ದಾರೆ.

ಅತ್ಯಂತ ಪರಿಶುದ್ಧ ಆಮ್ಲಜನಕವನ್ನು ಸುಮಾರು 40 ಸಾವಿರ ಲೀಟರ್​​ಗಳನಷ್ಟು ಒಂದು ವಿಶಿಷ್ಟ ಚೇಂಬರ್​​ನೊಳಕ್ಕೆ ನಿಧಾನಕ್ಕೆ ಹರಿಬಿಡಲಾಗುತ್ತೆ. ಈ ಚೇಂಬರ್​ನೊಳಕ್ಕೆ ಮಲಗಿರುವ ರೋಗಿ ಈ ಶುದ್ಧ ಆಕ್ಸಿಜನ್​​ ಅನ್ನು ಉಸಿರಾಡುತ್ತಾರೆ. ಆ ಆಮ್ಲಜನಕ ಉಸಿರಿನ ಮೂಲಕ ರಕ್ತದ ಪ್ಲಾಸ್ಮಾದೊಳಗೆ ಸೇರಿಹೋಗುತ್ತದೆ. ಆಗ ರಕ್ತವೂ ತಲುಪಲಾರದ ದೇಹದ ನಾನಾ ಮೂಲೆಗಳಿಗೆ ಈ ಆಮ್ಲಜನಕ ತಲುಪುತ್ತದೆ. ಕೋಶಗಳಿಗೆ ಜೀವ ತುಂಬುವ ತನ್ನ ವಿಶಿಷ್ಟ ಗುಣವನ್ನು ಆಕ್ಸಿಜನ್ ದೇಹದೊಳಗೆ ಮಾಡುತ್ತದೆ. ಆಗ ದೇಹದ ಕೋಶಗಳಲ್ಲಿ ಇರೋ ಎಲ್ಲಾ ಬಗೆಯ ಸೋಂಕುಗಳೂ ಸತ್ತು, ಹೊಸಾ ರಕ್ತನಾಳಗಳು ಹುಟ್ಟುತ್ತವೆ.

ಅಸ್ಥಿ ಮಜ್ಜೆಗೂ ಹೊಸಾ ಚೈತನ್ಯ ತುಂಬೋ ಈ ಆಕ್ಸಿಜನ್ ಆ ಮೂಲಕವೂ ಹೊಸಾ ಕೋಶಗಳ ಉಗಮಕ್ಕೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಗಾಯ ಗುಣವಾಗಿ ಆರೋಗ್ಯಕರ ಕೋಶಗಳು ಮರುಜನ್ಮ ನೀಡುತ್ತವೆ. ಸಾಮಾನ್ಯವಾಗಿ ಸೇನೆಯ ಏರ್ಫೋರ್ಸ್ ಮತ್ತು ನೇವಿಯಲ್ಲಿ ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ ಬಳಸಲಾಗುತ್ತದೆ. ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಹಾವೀರ್ ಜೈನ್ ಆಸ್ಪತ್ರೆ ಚಿಕಿತ್ಸಾ ಘಟಕ ಆರಂಭವಾಗಿದ್ದು ಅನೇಕ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ತಿದ್ದಾರೆ.

ಮಧುಮೇಹದಿಂದಾಗಿ ಉಂಟಾಗುವ ಗ್ಯಾಂಗ್ರಿನ್, ಟೆಟಾನಸ್, ಗ್ಯಾಸ್ ಗ್ಯಾಂಗ್ರಿನ್ ಮುಂತಾದ ಅನೇಕ ಖಾಯಿಲೆಗಳಲ್ಲಿ ದೇಹದ ಅಂಗಗಳನ್ನೇ ಕತ್ತರಿಸೋ ಪರಿಸ್ಥಿತಿ ಎದುರಾಗಿರುತ್ತೆ. ಇಂಥಾ ಪ್ರಸಂಗಗಳಲ್ಲಿ ಹೈಪರ್ಬೇರಿಕ್ ಆಕ್ಸಿಜನ್ ಥೆರಪಿ ಅತೀ ದೊಡ್ಡ ಪ್ರಯೋಜನ ನೀಡುತ್ತದೆ. ಶೇಕಡಾ 99ರಷ್ಟು ಪ್ರಕರಣಗಳಲ್ಲಿ ಈ ಚಿಕಿತ್ಸೆ ಯಶಸ್ವಿಯಾಗೋದು ರೋಗಿಗಳಿಗೆ ಹೊಸಾ ಆಶಾಭಾವನೆ ಮೂಡಿಸಿದೆ.

ಸೌಮ್ಯ ಕಳಸ
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ