• Home
  • »
  • News
  • »
  • lifestyle
  • »
  • Lyme Disease: ದೇಶದಲ್ಲಿ ಕಾಣಿಸಿಕೊಂಡಿದೆ ಲೈಮ್ ಕಾಯಿಲೆ! ಇದರ ಲಕ್ಷಣ, ಇದಕ್ಕೆ ಪರಿಹಾರವೇನು?

Lyme Disease: ದೇಶದಲ್ಲಿ ಕಾಣಿಸಿಕೊಂಡಿದೆ ಲೈಮ್ ಕಾಯಿಲೆ! ಇದರ ಲಕ್ಷಣ, ಇದಕ್ಕೆ ಪರಿಹಾರವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲೈಮ್ ಕಾಯಿಲೆಗೆ ಸಂಬಂಧಿಸಿದ ಕೆಲವು ಅಥವಾ ಇತರೆ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗ್ತಿದೆ. ವಾಸ್ತವದಲ್ಲಿ ಹಸಿರು ಹುಲ್ಲು ಅಥವಾ ತೇವಾಂಶ ಇರುವ ನೈಸರ್ಗಿಕ ಪರಿಸರದಲ್ಲಿ ಕಂಡು ಬರುವ ಉಣ್ಣಿಗಳ ಕಡಿತವಾದಾಗ ಉಂಟಾಗುವ ಕಾಯಿಲೆಯೇ ಲೈಮ್ ರೋಗ ಆಗಿದೆ.

  • Share this:

    ಕರೋನಾ ಸೋಂಕಿನ (Corona Virus) ನಂತರ ಹಲವು ವೈರಸ್ ಮತ್ತು ಕಾಯಿಲೆ ಅಪಾಯ (Disease Danger) ಜನರನ್ನು ಬಾಧಿಸುತ್ತಿದೆ. ಭಾರತದಲ್ಲಿ (India) ಈಗ ಲೈಮ್ ಡಿಸೀಸ್ (Lyme Disease) ಎಂಬ ಸೋಂಕು ತಗುಲಿದ್ದು, ಈ ವಿಷಯ ಮುನ್ನೆಲೆಗೆ ಬಂದಿದೆ. ಲೈಮ್ ಕಾಯಿಲೆಗೆ ಸಂಬಂಧಿಸಿದ ಕೆಲವು ಅಥವಾ ಇತರೆ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗ್ತಿದೆ. ವಾಸ್ತವದಲ್ಲಿ ಹಸಿರು ಹುಲ್ಲು ಅಥವಾ ತೇವಾಂಶ ಇರುವ ನೈಸರ್ಗಿಕ ಪರಿಸರದಲ್ಲಿ ಕಂಡು ಬರುವ ಉಣ್ಣಿಗಳ ಕಡಿತವಾದಾಗ ಉಂಟಾಗುವ ಕಾಯಿಲೆಯೇ ಲೈಮ್ ರೋಗ ಆಗಿದೆ. ಆರಂಭದಲ್ಲಿ ಸೊಳ್ಳೆ ಕಚ್ಚಿದಂತೆ ಕಾಣುವ ಇದರಿಂದ ತೀವ್ರತರ ಸಂಧಿವಾತ ಉಂಟಾಗುತ್ತದೆ.


    ಏನಿದು ಲೈಮ್ ಡಿಸೀಸ್?


    ಲೈಮ್ ಡಿಸೀಸ್ ಅಸೋಸಿಯೇಷನ್ ​ಹೇಳುವ ​ಪ್ರಕಾರ, ಈ ವೈರಸ್ ಸೋಂಕು ವಿಶ್ವದ 80 ಪ್ರತಿಶತ ದೇಶಗಳಲ್ಲಿ ಹರಡಿದೆ. ಆದರೆ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಆದರೆ ಜಾಗ್ರತೆ ವಹಿಸಬೇಕು. ಹಾಗೂ ಸಮಯಕ್ಕೆ ಸರಿಯಾಗಿ ರೋಗ ಲಕ್ಷಣ ಅರ್ಥ ಮಾಡಿಕೊಳ್ಳಬೇಕಿದೆ. ಲೈಮ್ ಕಾಯಿಲೆ ಬಗ್ಗೆ ಡಾ. ಆರ್.ಆರ್. ದತ್ತಾ ಅವರು ಏನ್ ಹೇಳಿದ್ದಾರೆ ನೋಡೋಣ.


    ಲೈಮ್ ಕಾಯಿಲೆ ಎಂಬುದು ಬೊರೆಲಿಯಾ ಬ್ಯಾಕ್ಟೀರಿಯಾ ಹೊಂದಿರುವ ಉಣ್ಣೆ ಕಚ್ಚುವಿಕೆಯಿಂದ ಹರಡುವ ಸೋಂಕು ಆಗಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡಲ್ಲ. ಆದ್ರೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡುವುದು ಮುಖ್ಯ.




    ಇಲ್ಲದೇ ಹೋದ್ರೆ ಅದು ಬೇರೆ ಭಾಗಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಹುಲ್ಲು ಮತ್ತು ಕಾಡು ಪ್ರದೇಶಗಳಲ್ಲಿ ಕಂಡು ಬರುವ ಉಣ್ಣಿಗಳ ಸಂಪರ್ಕಕ್ಕೆ ಬಂದ್ರೆ ಈ ಕಾಯಿಲೆ ಬರುತ್ತದೆ.


    ಲೈಮ್ ಕಾಯಿಲೆ ಯಾವೆಲ್ಲಾ ಲಕ್ಷಣ ಉಂಟು ಮಾಡುತ್ತದೆ?


    ತಜ್ಞರ ಪ್ರಕಾರ ಉಣ್ಣಿಗಳ ಕಡಿತದಿಂದ ಆರಂಭದಲ್ಲಿ ಕಚ್ಚುವಿಕೆ ಸ್ಥಳದಲ್ಲಿ ಒಂದು ಗುಳ್ಳೆ ಅಥವಾ ಉಂಡೆ ಉಂಟಾಗುತ್ತದೆ. ಈ ಉಂಡೆಯ ಮೇಲೆ ತುರಿಕೆ ಶುರುವಾಗಿ ಲೈಮ್ ಕಾಯಿಲೆ ಹರಡುತ್ತದೆ.


    ಲೈಮ್ ಕಾಯಿಲೆಯು ಸಂಧಿವಾತ, ಅರಿವಿನ ಸಮಸ್ಯೆ, ದೀರ್ಘಕಾಲದ ಆಯಾಸ ಮತ್ತು ನಿದ್ರೆಯ ಸಮಸ್ಯೆ ಸೇರಿ ಹಲವು ದೀರ್ಘಕಾಲದ ರೋಗ ಲಕ್ಷಣ ಉಂಟು ಮಾಡುತ್ತದೆ ಅಂತಾರೆ ತಜ್ಞರು.


    ಲೈಮ್ ಕಾಯಿಲೆ ಸಮಸ್ಯೆ ಮಾರಕವೇ?


    ಇತ್ತೀಚೆಗೆ ಬಹಿರಂಗಪಡಿಸಿದ ಸಂಶೋಧನೆಗಳು ಹೇಳಿದ ಪ್ರಕಾರ, ಲೈಮ್ ಕಾಯಿಲೆ ಮೂರು ಹಂತಗಳಲ್ಲಿ ಹರಡುತ್ತದೆ. ಪ್ರತಿ ಹಂತವು ಮೊದಲಿಗಿಂತ ಹೆಚ್ಚು ಮಾರಕವಾಗುತ್ತಾ ಹೋಗುತ್ತದೆ ಎಂದು ಹೇಳಲಾಗಿದೆ.


    ಲೈಮ್ ಕಾಯಿಲೆಯ ಮೊದಲ ಹಂತ


    ಮೊದಲ ಹಂತದಲ್ಲಿ ರೋಗಿ ಜ್ವರ, ಆಯಾಸ, ತಲೆನೋವು, ಸ್ನಾಯು ನೋವು, ಜಂಟಿ ಸ್ನಾಯು ಬಿಗಿತ ಮತ್ತು ಊದಿಕೊಂಡ ದುಗ್ಧರಸ ಗ್ರಂಥಿ ಮತ್ತು ದದ್ದು ಉಂಟಾಗುತ್ತದೆ. ಹಾಗೂ ಸಮಯಕ್ಕೆ ಚಿಕಿತ್ಸೆ ನೀಡದೇ ಹೋದ್ರೆ ಸ್ಥಿತಿ ಗಂಭೀರ ಆಗುತ್ತದೆ.


    ಲೈಮ್ ಕಾಯಿಲೆ ಎರಡನೇ ಹಂತ


    ಲೈಮ್ ಕಾಯಿಲೆ ಎರಡನೇ ಹಂತದಲ್ಲಿ, ಈ ಸಮಸ್ಯೆಗಳು ಹೆಚ್ಚಾಗುತ್ತವೆ. ಕುತ್ತಿಗೆ ನೋವು, ದೇಹದ ವಿವಿಧ ಭಾಗಗಳಲ್ಲಿ ದದ್ದು, ಅನಿಯಮಿತ ಹೃದಯ ಬಡಿತ ಅಥವಾ ಕಡಿಮೆ ದೃಷ್ಟಿ ಸಮಸ್ಯೆ ಉಂಟಾಗುತ್ತದೆ.


    ಲೈಮ್ ಕಾಯಿಲೆ ಮೂರನೇ ಹಂತ


    ಉಣ್ಣೆ ಕಚ್ಚಿದ 12 ತಿಂಗಳ ನಂತರ ಮೂರನೇ ಹಂತ ಶುರುವಾಗುತ್ತದೆ. ದೇಹದಲ್ಲಿ ಊತ, ಕೈಯ ಹಿಂಭಾಗ ಮತ್ತು ಪಾದಗಳ ಮೇಲ್ಭಾಗ ಚರ್ಮ ಮಸುಕಾಗುತ್ತದೆ. ಚರ್ಮದ ಅಂಗಾಂಶ ಹಾಗೂ ಕೀಲು ಹಾನಿ ಆಗುತ್ತದೆ.


    ಇದನ್ನೂ ಓದಿ: ಮಧುಮೇಹಿಗಳು ದಾಳಿಂಬೆ ಹಣ್ಣು ತಿಂದ್ರೆ ಸಕ್ಕರೆ ಮಟ್ಟ ಹೆಚ್ಚಾಗುತ್ತಾ? ತಜ್ಞರು ಹೇಳೋದೇನು?


    ಲೈಮ್ ಕಾಯಿಲೆಗೆ ಪರಿಹಾರ


    ಲೈಮ್ ಕಾಯಿಲೆ ರೋಗಿಗೆ ತಿನ್ನಲು ಮತ್ತು ಅನ್ವಯಿಸಲು ಪ್ರತಿಜೀವಕ ನೀಡಲಾಗುತ್ತದೆ. ರೋಗಿಯು ಇತರ ರೋಗಲಕ್ಷಣ, ದದ್ದು, ನಿರಂತರ ಜ್ವರ ಮತ್ತು ದೇಹದ ಅಸ್ವಸ್ಥತೆಯಿದ್ದಾಗ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು