Hair Care: ಕಡು ಕಪ್ಪು ಕೂದಲು ಬೇಕು ಅಂದ್ರೆ ಈ ಎಣ್ಣೆಗಳನ್ನು ಟ್ರೈ ಮಾಡಿ

Hair Care Tips: ಅರ್ಗಾನ್ ಎಣ್ಣೆಯು ಕೂದಲಿನ ಆರೈಕೆಯಲ್ಲಿ ಶ್ರೀಮಂತವಾಗಿದೆ. ಆರ್ಗಾನ್ ಸಾರವು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬ ಹೆಣ್ಣು ಮಕ್ಕಳ ಬಹುದೊಡ್ಡ ಆಸೆ ಏನೆಂದರೆ ನೀಳವಾದ, ದಪ್ಪನೆಯ, ಕಡು ಕಪ್ಪಿನ ಕೂದಲು. (Black Hair) ತ್ವಚೆಯ ಸೌಂದರ್ಯದ ಬಗ್ಗೆ ಎಷ್ಟು ಕಾಳಜಿ (Important) ವಹಿಸುತ್ತರೋ ಅದೇ ರೀತಿ ಕೂದಲಿನ ಆರೈಕೆಯನ್ನು ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಜೆನೆಟಿಕ್ ಆಗಿ, ಉತ್ತಮ ಆಹಾರ ಸೇವನೆಯಿಂದಾಗಿ, ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡುವುದರಿಂದ ಹೆಲ್ತಿ ಹೇರ್ ನಮ್ಮದಾಗಿಸಿಕೊಳ್ಳಬಹುದು.. ಕೆಲವು ಉತ್ತಮ ಎಣ್ಣೆ ಹಾಕಿ ಸ್ಯ್ಕಾಲ್ಪ್ ಮಸಾಜ್ ( Oily Scalp) ಮಾಡುವುದು ಕೂದಲಿನ ಪೋಷಣೆಗೆ (Nourishment) ತುಂಬಾ ಸಹಕಾರಿಯಾಗಿದೆ, ಕೇವಲ ಎಣ್ಣೆ ಹಾಕಿ ಬಿಡಬಾರದು 5-10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡುವುದರಿಂದ ರಕ್ತ (Blood) ಸಂಚಾರವಾಗುತ್ತದೆ. ಇದರಿಂದ ಕೂದಲಿನ ಬೇರುಗಳು ಯಾಂತ್ರಿಕವಾಗಿ ಉತ್ತೇಜಿಸುವ ಮೂಲಕ ಕೂದಲಿನ ಬೆಳವಣಿಗೆ ಮತ್ತು ದಪ್ಪವನ್ನು ಹೆಚ್ಚಿಸುತ್ತದೆ.

ಕೂದಲಿಗೆ ಯಾವ್ಯಾವುದೋ ಎಣ್ಣೆಯನ್ನು ಆಯ್ಕೆ ಮಾಡುವ ಬದಲು ಈ ಕೆಳಗಿನ ಎಣ್ಣೆಗಳನ್ನು ಬಳಸುವುದರಿಂದ ನಮ್ಮ ಕೂದಲಿನ ಉತ್ತಮ ಪೋಷಣೆಗೆ ಸಹಾಯವಾಗುತ್ತದೆ.

1) ತೆಂಗಿನ ಎಣ್ಣೆ

ಕೂದಲ ರಕ್ಷಣೆಯ ವಿಷಯಕ್ಕೆ ಬಂದಾಗ, ಕೊಬ್ಬರಿ ಎಣ್ಣೆ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲಿರುವ ಪೋಷಕಾಂಶಗಳು ಒಣ ಕೂದಲಿಗೆ, ತಲೆ ಹೊಟ್ಟು ಮತ್ತು ಕಪ್ಪು ಕೂದಲಿಗೆ ತುಂಬಾ ಸಹಕಾರಿ. ದಿ ಕೈಂಡ್ ಪಾಪ್ಪಿ ಸಂಸ್ಥಾಪಕ ಅಟೋಮನ್ ಗ್ರಾಂಟ್‌ ಹೇಳುವ ಪ್ರಕಾರ, ತೆಂಗಿನ ಎಣ್ಣೆಯು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲಿನ ಬೆಳವಣಿಗೆಗೆ ಸೂಕ್ತವಾದ ಸ್ವಚ್ಛ ಮತ್ತು ಆರೋಗ್ಯಕರ ನೆತ್ತಿಯನ್ನು ಸೃಷ್ಟಿಸಲು ಕೊಬ್ಬರಿ ಎಣ್ಣೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಹಚ್ಚಿಕೊಂಡರೆ ತುಂಬಾ ಸೂಕ್ತ.

ಇದನ್ನೂ ಓದಿ: Hair Care: ಎಲ್ಲ ರೀತಿಯ ಕೂದಲಿನ ಸಮಸ್ಯೆಗಳಿಗೆ ತೆಂಗಿನೆಣ್ಣೆ ರಾಮಬಾಣ..!

2) ರೋಸಮೆರಿ ಓಯಿಲ್

ರೋಸಮೆರಿ ಎಣ್ಣೆಯು ಕೂದಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಸ್ಪ್ಲಿಟ್ ಹೇರ್ ಅನ್ನು ಕಡಿಮೆ ಮಾಡಲು ಮತ್ತು ಕೂದಲನ್ನು ರಕ್ಷಿಸುತ್ತದೆ.

3) ಪೆಪ್ಪರ್ ಮಿಂಟ್ ಎಣ್ಣೆ

ಪುದೀನಾ ಎಣ್ಣೆಯು ಕೂದಲಿನ ಬೆಳವಣಿಗೆಗೆ ಸೂಕ್ತವಾಗಿದೆ. ಕೂದಲಿನ ಬೆಳವಣಿಗೆಗೆ ಸಕ್ರಿಯವಾಗಿ ಬೇಕಿರುವ ಅನಾಜೆನ್ ಹಂತವನ್ನು ಪುದೀನಾ ಎಣ್ಣೆಯು ವೇಗಗೊಳಿಸುತ್ತದೆ ಎಂದು ಇದು ಸೂಚಿಸುತ್ತದೆ. ಪುದೀನಾ ಎಣ್ಣೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ನೆತ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.

4) ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್‌ನಲ್ಲಿಆ್ಯಂಟಿಮೈಕ್ರೋಬಿಯಲ್ ಅಂಶವಿದ್ದು, ಒಣ ಮತ್ತು ತುರಿಕೆ ನೆತ್ತಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಶಿಲೀಂಧ್ರಗಳು ಮತ್ತು ಬೇರೆ ಉತ್ಪನ್ನಗಳಿಂದ ನೆತ್ತಿಯ ರಚನೆಯನ್ನು ತೆರವುಗೊಳಿಸಲು ಇದು ಅತ್ಯುತ್ತಮವಾಗಿದೆ.

5) ವಿಟಮಿನ್ –ಇ ಎಣ್ಣೆ

ಮೇಲೆ ಹೇಳಿದಂತೆ, ಆಕ್ಸಿಡೇಟಿವ್ ಒತ್ತಡವು ಆರೋಗ್ಯಕರ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಅಲ್ಲಿ ವಿಟಮಿನ್ ಇ, ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಪ್ರಬಲ ಪೋಷಕಾಂಶ ಹೊಂದಿದ್ದು, ಇದು ಕೂದಲ ಒಡೆಯುವಿಕೆಯನ್ನು ತಡೆಯುತ್ತದೆ. ವಿಟಮಿನ್ ಇ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಹೊಳೆಯುವ ಜೊತೆಗೆ ಮಾಯಿಶ್ಚರೈಸ್ ಆಗಿರುತ್ತದೆ. ಈ ಎಣ್ಣೆ ಆರೋಗ್ಯಕರ ಕೂದಲಿಗೆ ಅಡಿಪಾಯವಾಗಿದೆ.

6) ಹರಳೆಣ್ಣೆ

ಕೆಲವರಿಗೆ ಹುಬ್ಬು ಸರಿಯಿಲ್ಲದಿದ್ದರೆ ಹರಳೆಣ್ಣೆ ಹಚ್ಚಿಕೊಳ್ಳಲು ಸಲಹೆ ನೀಡಲಾಗುತ್ತೆ. ಹಾಗಾದರೆ ಕೂದಲಿನ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ನೀವೇ ಯೋಚಿಸಿ. ಹರಳೆಣ್ಣೆ ಮಸಾಜ್‌ನಿಂದ ರಕ್ತ ಸಂಚಲನ ಹೆಚ್ಚಾಗಿ ಕೂದಲು ಗಟ್ಟಿಗೊಳ್ಳುತ್ತದೆ. ಆದರೆ ಈ ಎಣ್ಣೆಯನ್ನು ಸ್ವಲ್ಪವೇ ಬಳಸಬೇಕು. ಒಂದು ಚಮಚದಷ್ಟು ಹಚ್ಚಿಕೊಂಡರೆ ಸಾಕು.

7) ಜೊಜೊಬಾ ಎಣ್ಣೆ

ತ್ವಚೆಗೆ ಪೋಷಣೆ ನೀಡುವ ಜೊಜೊಬಾ ಎಣ್ಣೆ ಕೂದಲಿಗೂ ತುಂಬಾ ಸಹಕಾರಿ. ಕೂದಲಿಗೆ ಬೆಳವಣಿಗೆ ಮತ್ತು ಕೂದಲಿನ ಬುಡ ತಂಪಿರುವಂತೆ ನೋಡಿಕೊಳ್ಳುತ್ತದೆ. ಅಂಟಿಲ್ಲದಿರುವುದು ಜೊಜೊಬಾ ಎಣ್ಣೆಯ ಮತ್ತೊಂದು ಗುಣ. ಇದನ್ನು ಹಚ್ಚಿಕೊಂಡರೆ ಕೂದಲು ಎಣ್ಣೆ ಹಚ್ಚಿದಂತೆ ಕಾಣುವುದಿಲ್ಲ.

8) ಕುಂಬಳಕಾಯಿ ಬೀಜದ ಎಣ್ಣೆ

ತಲೆ ಕೂದಲು ಉದುರುವಿಕೆಯಿಂದ ಹಿಡಿದು ಸೀಳು ಕೂದಲು ಹಾಗೂ ತಲೆ ಹೊಟ್ಟಿನ ಸಮಸ್ಯೆಯವರೆಗೆ ಪ್ರತಿಯೊಬ್ಬರ ನೆತ್ತಿಯ ಭಾಗದ ತೊಂದರೆಗಳನ್ನು ಕುಂಬಳಕಾಯಿ ಬೀಜಗಳ ಎಣ್ಣೆ ಸುಲಭವಾಗಿ ಸರಿಪಡಿಸುತ್ತದೆ.ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲ ಪೋಷಣೆಗೆ ಸಹಕಾರಿ.

ಇದನ್ನೂ ಓದಿ: White Hair: ಬಿಳಿ ಕೂದಲಿನ ಸಮಸ್ಯೆಗೆ ಅಂಗೈನಲ್ಲಿದೆ ಪರಿಹಾರ

9) ಆರ್ಗಾನ್‌ ಆಯಿಲ್

ಅರ್ಗಾನ್ ಎಣ್ಣೆಯು ಕೂದಲಿನ ಆರೈಕೆಯಲ್ಲಿ ಶ್ರೀಮಂತವಾಗಿದೆ. ಆರ್ಗಾನ್ ಸಾರವು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಮೂಲಕ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ಕೂದಲನ್ನು ತೇವಗೊಳಿಸಲು ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಈ ಎಣ್ಣೆಯಲ್ಲಿ ವಿಟಮಿನ್ ಇ ಇರುತ್ತದೆ.

10) ಲ್ಯಾವೆಂಡರ್ ಆಯಿಲ್

ರೋಸ್ಮರಿ ಎಣ್ಣೆಯಂತಹವು ನಿಮ್ಮ ಚರ್ಮದ ಮೇಲೆ ಸೂಕ್ಮ ಪರಿಣಾಮ ಬೀರಿದರೆ ನೀವು ಲ್ಯಾವೆಂಡರ್ ಎಣ್ಣೆ ಉಪಯೋಗಿಸಬಹುದು. ಲ್ಯಾವೆಂಡರ್ ಎಣ್ಣೆಯು ಕೂದಲಿನ ಬೇರುಗಳ ಸಂಖ್ಯೆ ಮತ್ತು ಆಳವನ್ನು ಹೆಚ್ಚಿಸುತ್ತದೆ.
Published by:vanithasanjevani vanithasanjevani
First published: