• Home
 • »
 • News
 • »
 • lifestyle
 • »
 • Lungs Health: ಈ ಪದಾರ್ಥಗಳ ಸೇವನೆ ಶ್ವಾಸಕೋಶದ ಸಮಸ್ಯೆಗೆ ಪರಿಹಾರ ನೀಡುತ್ತೆ

Lungs Health: ಈ ಪದಾರ್ಥಗಳ ಸೇವನೆ ಶ್ವಾಸಕೋಶದ ಸಮಸ್ಯೆಗೆ ಪರಿಹಾರ ನೀಡುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ ವ್ಯಕ್ತಿಯನ್ನು ಕಾಡುವ ಹೆಚ್ಚು ರೋಗಗಳಿಂದ ಶ್ವಾಸಕೋಶಗಳು ದುರ್ಬಲವಾಗುತ್ತಾ ಹೋಗುತ್ತವೆ. ಹಾಗಾಗಿ ನೀವು ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಶ್ವಾಸಕೋಶವನ್ನು ಆರೋಗ್ಯಕರವಾಗಿ ಇಡುವುದು ತುಂಬಾ ಅವಶ್ಯಕ.

ಮುಂದೆ ಓದಿ ...
 • Share this:

  ಶ್ವಾಸಕೋಶಗಳು (Lungs) ಪ್ರತೀ ವ್ಯಕ್ತಿಯ (Person) ಉಸಿರಾಟದ (Breathing) ವ್ಯವಸ್ಥೆಯ ಮುಖ್ಯ ಭಾಗ (Part) ಆಗಿದೆ. ಅದು ನಿಮಗೆ ಉಸಿರಾಡಲು ಹಾಗೂ ಪ್ರಾಣವಾಯು ನೀಡಲು ಸಹಾಯ ಮಾಡುತ್ತದೆ. ಶ್ವಾಸಕೋಶಗಳು ಎದೆಯ (Chest) ಎರಡೂ ಬದಿಯಲ್ಲಿರುವ ಒಂದು ಜೋಡಿ ಸ್ಪಂಜಿನ ಹಾಗೂ ಗಾಳಿ ತುಂಬಿದ ಅಂಗಗಳು ಆಗಿವೆ. ವಿಷಕಾರಿ ವಸ್ತುಗಳನ್ನು ತಾವಾಗಿಯೇ ಫಿಲ್ಟರ್ ಮಾಡಿ ಹೊರ ಹಾಕುವ ದೇಹದ ಭಾಗಗಳಲ್ಲಿ ಶ್ವಾಸಕೋಶಗಳು ಒಂದಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ ವ್ಯಕ್ತಿಯನ್ನು ಕಾಡುವ ಹೆಚ್ಚು ರೋಗಗಳಿಂದ ಶ್ವಾಸಕೋಶಗಳು ದುರ್ಬಲವಾಗುತ್ತಾ ಹೋಗುತ್ತವೆ. ಹಾಗಾಗಿ ನೀವು ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಶ್ವಾಸಕೋಶವನ್ನು ಆರೋಗ್ಯಕರವಾಗಿ ಇಡುವುದು ತುಂಬಾ ಅವಶ್ಯಕ.


  ಮಾಲಿನ್ಯ ಮತ್ತು ಶ್ವಾಸಕೋಶಗಳ ಆರೋಗ್ಯ


  ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ಹೆಚ್ಚುತ್ತಿದೆ. ಅದರಲ್ಲೂ ಬೃಹತ್ ನಗರಗಳಾದ ದೆಹಲಿ, ನೋಯ್ಡಾದಂತಹ ಅತ್ಯಂತ ಕಲುಷಿತ ನಗರಗಳಲ್ಲಿ ವಾಸಿಸುತ್ತಿದ್ದರೆ ನಿಮ್ಮ ಶ್ವಾಸಕೋಶಗಳಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ.


  ಇತ್ತೀಚಿನ ದಿನಗಳಲ್ಲಿ ನಾವು ಅಪಾಯಕಾರಿ ಮಟ್ಟದ ಮಾಲಿನ್ಯವನ್ನೇ ಉಸಿರಾಡುತ್ತಿದ್ದೇವೆ. ಎಲ್ಲೆಡೆ ವಿಷಕಾರಿ ವಾಯು ಜನರ ದೇಹ ಸೇರುತ್ತಿದೆ. ಹೀಗೆ ಸೇರುವ ವಿಷ ಶ್ವಾಸಕೋಶಗಳನ್ನು ಹಾಳು ಮಾಡುತ್ತದೆ. ಸಂಶೋಧಕರು ಮತ್ತು ಪರಿಸರವಾದಿಗಳು ಭವಿಷ್ಯದ ಪರಿಣಾಮ ಇನ್ನೂ ಕೆಟ್ಟದಾಗಿ ಇರಲಿದೆ ಎಂದು ಭಯಭೀತರಾಗಿದ್ದಾರೆ.


  ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


  ವಿಶ್ವ ಶ್ವಾಸಕೋಶ ದಿನ


  ಅಲ್ಲದೆ, ನಿಮ್ಮ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಎಲ್ಲಾ ಅಂಶಗಳು ಗಾಳಿಯ ಮೂಲಕ ನಿಮ್ಮ ಶ್ವಾಸಕೋಶ ತಲುಪುತ್ತವೆ ಎಂದು ಹೇಳಿದ್ದಾರೆ. ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಶ್ವಾಸಕೋಶ ದಿನ 2022 ಅನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗ್ತಿದೆ. ಶ್ವಾಸಕೋಶ ಆರೋಗ್ಯ ಇದರ ಉದ್ದೇಶವಾಗಿದೆ. ನಾವು ಒಟ್ಟಾಗಿ ಜಾಗತಿಕವಾಗಿ ಉತ್ತಮ ಶ್ವಾಸಕೋಶ ಆರೋಗ್ಯ ಉತ್ತೇಜಿಸುವ ಗುರಿ ಹೊಂದಿದ್ದೇವೆ.


  ಬೆಳ್ಳುಳ್ಳಿ


  ಬೆಳ್ಳುಳ್ಳಿ ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆ ಆಗಿದೆ. ಆದರೆ ಬೆಳ್ಳುಳ್ಳಿ ಇಷ್ಟ ಪಡದ ಕೆಲವರು ಇದ್ದಾರೆ. ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ಗಿಡಮೂಲಿಕೆ ಸ್ಥಾನಮಾನ ಸಹ ನೀಡುತ್ತದೆ.  NCBI ಪ್ರಕಾರ ಆಹಾರದಲ್ಲಿ ಹಸಿ ಬೆಳ್ಳುಳ್ಳಿ ಬಳಕೆಯು ಶ್ವಾಸಕೋಶದ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಸಾಧ್ಯತೆ 44 ಪ್ರತಿಶತ ಕಡಿಮೆ ಮಾಡುತ್ತದೆ. ಶ್ವಾಸಕೋಶ ಆರೋಗ್ಯದ ಜೊತೆಗೆ ಬೆಳ್ಳುಳ್ಳಿಯು ಹೃದಯ, ರಕ್ತದೊತ್ತಡ, ಸೋಂಕು ಮತ್ತು ಮೂಳೆಗಳ ಆರೋಗ್ಯಕ್ಕೆ ಲಾಭಕಾರಿ ಆಗಿದೆ.


  ಶುಂಠಿ


  NIH ಪ್ರಕಾರ ಶುಂಠಿಯು ಶಕ್ತಿಯುತ ಮೂಲಿಕೆ. ಬಲವಾದ ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿರುವ ಇದು ಶ್ವಾಸಕೋಶ ಆರೋಗ್ಯವಾಗಿ ಇಡಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸಲು ಪ್ರಯೋಜನಕಾರಿ ಆಗಿದೆ.


  ಇದು ಶ್ವಾಸಕೋಶದಿಂದ ವಾಯು ಮಾಲಿನ್ಯ ಮತ್ತು ತಂಬಾಕು ಹೊಗೆ ತೊಡೆದು ಹಾಕಲು ಸಹಕಾರಿ. ಶ್ವಾಸಕೋಶದಲ್ಲಿನ ಕಫ, ಬ್ರಾಂಕೈಟಿಸ್ ಮತ್ತು ಆಸ್ತಮಾ ಸೇರಿ ಅನೇಕ ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳ ನಿಯಂತ್ರಣಕ್ಕೆ ಇದು ಪರಿಣಾಮಕಾರಿ ಆಗಿದೆ.


  ಸೇಬು


  ಸೇಬು ಹಣ್ಣು ಆರೋಗ್ಯವರ್ಧಕ ಪದಾರ್ಥ ಆಗಿದೆ. ಅದರಲ್ಲಿರುವ ಕ್ವೆರ್ಸೆಟಿನ್ ಎಂಬ ಉತ್ಕರ್ಷಣ ನಿರೋಧಕದಲ್ಲಿ ಸಮೃದ್ಧವಾಗಿರುವ ಸೇಬುಗಳು ಶ್ವಾಸಕೋಶ ವಿವಿಧ ಮಾಲಿನ್ಯಕಾರಕ ಮತ್ತು ಉದ್ರೇಕಕಾರಿಗಳಿಂದ ರಕ್ಷಿಸುತ್ತವೆ. ಕೆಲವು ಅಧ್ಯಯನಗಳ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟುವಲ್ಲಿ ಕ್ವೆರ್ಸೆಟಿನ್ ಕೂಡ ಹೆಚ್ಚು ಉಪಯುಕ್ತ ಆಗಿದೆ.


  ದಾಳಿಂಬೆ


  ಕ್ಯಾನ್ಸರ್ ರೋಗಿಗಳು ದಾಳಿಂಬೆ ಸೇವನೆ ಮಾಡುವುದು ತುಂಬಾ ಪ್ರಯೋಜನಕಾರಿ. ಖನಿಜ ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿರುವ ದಾಳಿಂಬೆ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಥೋಸಯಾನಿನ್‌ಗಳ ಪ್ರಬಲ ಮೂಲ ಆಗಿದೆ. ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್, ಸ್ತನ, ಕೊಲೊನ್ ಮತ್ತು ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ದಾಳಿಂಬೆ ಸೇವನೆ ಮಾಡಿ. ಆಹಾರದಲ್ಲಿ ಸೇರಿಸಿ ಪ್ರಯೋಜನ ಪಡೆಯಿರಿ.


  ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


  ಅರಿಶಿನ


  ಅರಿಶಿನವು ಅದರ ಔಷಧೀಯ ಜೀವಿರೋಧಿ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಅರಿಶಿನವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

  Published by:renukadariyannavar
  First published: