• Home
  • »
  • News
  • »
  • lifestyle
  • »
  • Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ..? ಭಾರತದಲ್ಲಿ ಗೋಚರವಾಗುತ್ತಾ? ಇಲ್ಲಿದೆ ಮಾಹಿತಿ

Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ..? ಭಾರತದಲ್ಲಿ ಗೋಚರವಾಗುತ್ತಾ? ಇಲ್ಲಿದೆ ಮಾಹಿತಿ

ಚಂದ್ರಗ್ರಹಣ

ಚಂದ್ರಗ್ರಹಣ

ಗ್ರಹಣದ ಒಟ್ಟು ಅವಧಿ 5 ಗಂಟೆ, 2 ನಿಮಿಷಗಳು. ಪೂರ್ಣ ಗ್ರಹಣದ ಅವಧಿ 14 ನಿಮಿಷಗಳು. ಒಟ್ಟು ಚಂದ್ರ ಗ್ರಹಣ ಭಾರತದಲ್ಲಿ ಮಧ್ಯಾಹ್ನ 2:17ಕ್ಕೆ ಪ್ರಾರಂಭವಾಗಿ ಸಂಜೆ 7:19ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭೂಮಿಯು ಶೇಕಡಾ 101.6 ರಷ್ಟು ಚಂದ್ರನನ್ನು ಆವರಿಸುತ್ತದೆ.

  • Share this:

ಈ ವರ್ಷದ ಮೊದಲ ಚಂದ್ರಗ್ರಹಣ(Lunar Eclipse) ನೋಡಲು ಎಲ್ಲರೂ ಕಾತುರರಾಗಿದ್ದೀರಾ? ಹಾಗಾದರೆ, ಮೇ 26, 2021ರಂದು ಗೋಚರವಾಗುವ ಮೊದಲ ಸೂಪರ್ ಚಂದ್ರ(Super Moon) ಹಾಗೂ ಕೆಂಪು ಚಂದ್ರನನ್ನು(Red Moon) ನೋಡಲು ಇಡೀ ಜಗತ್ತೇ ಸಜ್ಜಾಗಿದೆ. ಇದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಆಸ್ಟ್ರೇಲಿಯ, ಓಷಿಯಾನಿಯಾದ ಪ್ರದೇಶಗಳಲ್ಲಿ, ಅಲಾಸ್ಕಾ ಮತ್ತು ಕೆನಡಾದ ಹೆಚ್ಚಿನ ಭಾಗಗಳಲ್ಲಿ, ಯುಎಸ್‍ಎಯ(USA) ಬಹುಪಾಲು ಸ್ಥಳಗಳು, ಹವಾಯಿ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ (South Amercia)ಬಹುಪಾಲು ಪ್ರದೇಶಗಳಲ್ಲಿ ಗೋಚರಿಸುತ್ತದೆ.


ಯಾವ ಸಮಯ ಮತ್ತು ದಿನಾಂಕದಂದು ಚಂದ್ರಗ್ರಹಣ ಗೋಚರ?


ಈ ಚಂದ್ರಗ್ರಹಣ ಮೇ 26ರಂದು ಸಂಭವಿಸಲಿದ್ದು, ಈ ಅರೆನೆರಳಿನ ಗ್ರಹಣವು ಜಾಗತಿಕ ಕಾಲಮಾನದ ಪ್ರಕಾರ, 08:47:39ರಲ್ಲಿ (ಯುಟಿಸಿ) ಪ್ರಾರಂಭವಾಗಿ, ಮೇ 26 ರಂದು 13:49:44 ಕ್ಕೆ (ಯುಟಿಸಿ) ಕೊನೆಗೊಳ್ಳುತ್ತದೆ. ಚಂದ್ರನು ಭೂಮಿಯ ಮೂಲಕ ಹಾದುಹೋದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಚಂದ್ರನ ವ್ಯಾಸದ ಸುಮಾರು 70% ಭೂಮಿಯ ಮುಳುಗಿದಾಗ ಮಾತ್ರ ಬರಿಗಣ್ಣಿಗೆ ಗೋಚರಿಸುತ್ತದೆ.


ಈ ಗ್ರಹಣವನ್ನು ಯಾರು ನೋಡಬಹುದು?


ಹುಣ್ಣಿಮೆ ದಿನದಂದು ಸಂಭವಿಸುವ ಈ ಸಂಪೂರ್ಣ ಗ್ರಹಣವನ್ನು ಆಸ್ಟ್ರೇಲಿಯನ್ನರು, ಪಶ್ಚಿಮ ಯುಎಸ್, ಪಶ್ಚಿಮ ದಕ್ಷಿಣ ಅಮೆರಿಕಾ ಅಥವಾ ಆಗ್ನೇಯ ಏಷ್ಯಾದಲ್ಲಿ ನೋಡಬಹುದು ಮತ್ತು ಈ ಒಟ್ಟು ಚಂದ್ರಗ್ರಹಣದ ಸಮಯದಲ್ಲಿ ಸುಮಾರು 14 ನಿಮಿಷಗಳ ಕಾಲ ಕೆಂಪುಛಾಯೆ ಕಾಣಸಿಗುತ್ತದೆ.


ಇದನ್ನೂ ಓದಿ:Siddaramaiah: ಪ್ರಧಾನಿ ಮೋದಿ ಕಣ್ಣೀರು ಹಾಕಿ ಜನರಿಗೆ ಮೋಸ ಮಾಡ್ತಿದಾರೆ; ಸಿದ್ದರಾಮಯ್ಯ ವಾಗ್ದಾಳಿ

ಚಂದ್ರ ಗ್ರಹಣ ಯಾವ ಸಮಯದಲ್ಲಿ ನಡೆಯುತ್ತದೆ?


ಗ್ರಹಣದ ಒಟ್ಟು ಅವಧಿ 5 ಗಂಟೆ, 2 ನಿಮಿಷಗಳು. ಪೂರ್ಣ ಗ್ರಹಣದ ಅವಧಿ 14 ನಿಮಿಷಗಳು. ಒಟ್ಟು ಚಂದ್ರ ಗ್ರಹಣ ಭಾರತದಲ್ಲಿ ಮಧ್ಯಾಹ್ನ 2:17ಕ್ಕೆ ಪ್ರಾರಂಭವಾಗಿ ಸಂಜೆ 7:19ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭೂಮಿಯು ಶೇಕಡಾ 101.6 ರಷ್ಟು ಚಂದ್ರನನ್ನು ಆವರಿಸುತ್ತದೆ.


ಭಾರತದಲ್ಲಿ ಗೋಚರಿಸುತ್ತದೆಯೇ?


ಈ ಚಂದ್ರಗ್ರಹಣವು ಭಾರತದಲ್ಲಿ(India) ಗೋಚರಿಸುವುದಿಲ್ಲ. ಹೌದು, ಭಾರತದ ಜನರು ರಕ್ತ ಚಂದ್ರನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಪೂರ್ವ ಭಾರತದಲ್ಲಿ ವಾಸಿಸುವ ಆಕಾಶ ವೀಕ್ಷಕರು ಚಂದ್ರಗ್ರಹಣದ ಕೊನೆಯ ಭಾಗವನ್ನು, ಪೂರ್ವ ದಿಗಂತಕ್ಕೆ ಬಹಳ ಹತ್ತಿರದಲ್ಲಿ ಚಂದ್ರೋದಯಕ್ಕೆ ಸ್ವಲ್ಪ ಮುಂಚೆ ನೋಡಬಹುದು. ಚಂದ್ರನ ಭಾಗಶಃ ಗ್ರಹಣ ಮಧ್ಯಾಹ್ನ 3: 15 ರ ಸುಮಾರಿಗೆ ಪ್ರಾರಂಭವಾಗಿ ಸಂಜೆ 6: 22 ಕ್ಕೆ ಕೋಲ್ಕತ್ತಾದಲ್ಲಿ ಕೊನೆಗೊಳ್ಳುತ್ತದೆ.


ಏನಿದು ಸೂಪರ್ ಮೂನ್?


ಚಂದ್ರ ತನ್ನ ಕಕ್ಷೆಯಲ್ಲಿ ಸುತ್ತಿ ಬರುವಾಗ ಕೆಲವೊಮ್ಮೆ ಭೂಮಿಗೆ ಬಹಳ ಹತ್ತಿರ ಸುತ್ತಿ ಬರುತ್ತಾನೆ. ಆಗ ಚಂದ್ರ ತುಂಬಾ ದೊಡ್ಡದಾಗಿ ಕಾಣಿಸುವುದಲ್ಲದೇ ಚಂದ್ರನ ಬೆಳಕು ಕೂಡ ಜಾಸ್ತಿ ಇರುತ್ತದೆ. ಈ ವೇಳೆ ಪ್ರತಿ ಹುಣ್ಣಮೆಯ ಚಂದ್ರನ ಗಾತ್ರಕ್ಕಿಂತ 14 ಪಾಲು ದೊಡ್ಡದಾಗಿರುತ್ತದೆ ಹಾಗೂ ಬೆಳಕು ಕೂಡ 30 ಪಾಲು ಹೆಚ್ಚು ಇರುತ್ತದೆ. ಇಂತಹ ಒಂದು ಘಟನೆ 2016 ನವೆಂಬರ್ 14 ಸೋಮವಾರ ರಾತ್ರಿ ಸಂಭವಿಸಿತ್ತು. ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ವರ್ಷಕ್ಕೆ ಒಂದೆರಡು ಬಾರಿ ಸೂಪರ್ ಮೂನ್ ಬರುತ್ತದೆ. ಆದರೆ 70 ವರ್ಷದ ನಂತರ ಬಂದಿರುವ ನವೆಂಬರ್ 14ರ ಸೂಪರ್ ಮೂನ್ ತುಂಬಾ ವಿಶೇಷವಾಗಿತ್ತು.


ಯಾಕೆ ಚಂದ್ರ ಕೆಂಪಾಗಿ ಕಾಣಿಸುತ್ತಾನೆ?


ಯಾವಾಗ ಚಂದ್ರ ಸಂಪೂರ್ಣವಾಗಿ ಭೂಮಿಯ ನೆರಳಿನಿಂದ ಆವರಿಸುತ್ತಾನೋ ಆಗ ಕಪ್ಪಾಗಿ ಗೋಚರಿಸುತ್ತಾನೆ. ಆದ ಸಂಪೂರ್ಣವಾಗಿ ಕಪ್ಪಾಗುವುದಿಲ್ಲ. ಬದಲಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಹಾಗಾಗಿ ಕೆಂಪು ಅಥವಾ ರಕ್ತ ಚಂದ್ರ ಎಮದು ಕರೆಯಲಾಗುತ್ತದೆ. ಸೂರ್ಯನ ಬೆಳಕು ಎಲ್ಲಾ ಬಣ್ಣಗಳನ್ನು ಹೊಂದಿರುತ್ತದೆ. ಭೂಮಿಯ ವಾತಾವರಣವನ್ನು ರೂಪಿಸುವ ಅನಿಲದ ಕಣಗಳು ನೀಲಿ ತರಂಗಾಂತರಗಳ ಬೆಳಕನ್ನು ಚದುರಿಸುವ ಸಾಧ್ಯತೆಯಿದೆ. ಆದರೆ ಕೆಂಪು ತರಂಗಾಂತರಗಳು ಹಾದುಹೋಗುತ್ತವೆ.


ಇದನ್ನು ರೇಲೀ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಆಕಾಶವು ನೀಲಿ ಬಣ್ಣದಿಂದ ಕೂಡಿರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಹೆಚ್ಚಾಗಿ ಕೆಂಪು ಬಣ್ಣದ್ದಾಗಿರುತ್ತವೆ. ಇನ್ನು ಚಂದ್ರಗ್ರಹಣದ ಸಂದರ್ಭದಲ್ಲಿ, ಕೆಂಪು ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗಬಹುದು ಮತ್ತು ಚಂದ್ರನ ಕಡೆಗೆ ವಕ್ರೀಭವನಗೊಳ್ಳುತ್ತದೆ ಅಥವಾ ಬಾಗುತ್ತದೆ. ನೀಲಿ ಬೆಳಕನ್ನು ಶೋಧಿಸಲಾಗುತ್ತದೆ. ಇದರಿಂದ ಗ್ರಹಣ ಸಮಯದಲ್ಲಿ ಚಂದ್ರ ಮಸುಕಾದ ಕೆಂಪು ಬಣ್ಣದಿಂದ ಕೂಡಿದಂತೆ ಕಾಣುತ್ತಾನೆ.


2021ರಲ್ಲಿ ಗೋಚರಿಸಲಿವೆ ನಾಲ್ಕು ಗ್ರಹಣಗಳು


ಈ ವರ್ಷ ಎರಡು ಸೂರ್ಯಗ್ರಹಣ, ಎರಡು ಚಂದ್ರಗ್ರಹಣ ಗೋಚರಿಸಲಿದೆ.
ಮೇ-26- ಚಂದ್ರಗ್ರಹಣ
ಜೂನ್ 10- ಸೂರ್ಯಗ್ರಹಣ
ನವೆಂಬರ್ 19-ಭಾಗಶಃ ಚಂದ್ರ ಗ್ರಹಣ
ಡಿಸೆಂಬರ್ 4-ಸೂರ್ಯ ಗ್ರಹಣ
ನವೆಂಬರ್ 19 ರಂದು ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.
ಭಾರತ, ಯುರೋಪ್, ಏಷ್ಯಾ, ಆಸ್ಟ್ರೇಲಿಯ, ಉತ್ತರ ಆಫ್ರಿಕ, ಪಶ್ಚಿಮ ಆಫ್ರಿಕ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾಸಾಗರ ಮತ್ತು ಆರ್ಟಿಕ್‌ ದೇಶಗಳು ಈ ಅದ್ಭುತ ಘಟನೆಗೆ ಸಾಕ್ಷಿಯಾಗಬಹುದು.

Published by:Latha CG
First published: