• Home
  • »
  • News
  • »
  • lifestyle
  • »
  • Lumpy Virus: ಜಾನುವಾರುಗಳ ಸಾವಿಗೆ ಕಾರಣವಾಗುತ್ತಿರುವ ಲಂಪಿ ವೈರಸ್ ಮನುಷ್ಯರಿಗೂ ಹರಡುತ್ತದೆಯೇ?

Lumpy Virus: ಜಾನುವಾರುಗಳ ಸಾವಿಗೆ ಕಾರಣವಾಗುತ್ತಿರುವ ಲಂಪಿ ವೈರಸ್ ಮನುಷ್ಯರಿಗೂ ಹರಡುತ್ತದೆಯೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಂಪಿ ವೈರಸ್ ಜಾನುವಾರುಗಳನ್ನು ಬಾಧಿಸುತ್ತಿದೆ. ರೈತರು ಈಗ ತಮ್ಮ ಹಸು ಮತ್ತು ಎಮ್ಮೆಗೆ ಬಂದಿರುವ ಈ ಸೋಂಕಿನಿಂದ ಕಂಗಾಲಾಗಿದ್ದಾರೆ. ಹಳ್ಳಿಗಳಲ್ಲಿ ಮತ್ತು ಹಸು ಕೇಂದ್ರಗಳಲ್ಲಿ ಜಾನುವಾರಗಳ ಸಾವು ಆತಂಕ ಹೆಚ್ಚಿಸಿದೆ.

  • Share this:

    ಇತ್ತೀಚಿನ ದಿನಗಳಲ್ಲಿ ಮನುಷ್ಯರು (Human) ಮಾತ್ರವಲ್ಲದೇ ಸಾಕು ಪ್ರಾಣಿಗಳೂ (Domestic Animals) ಸಹ ಕಾಯಿಲೆಗೆ (Disease) ಮತ್ತು ಸೋಂಕಿಗೆ (Virus) ತುತ್ತಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿ ಹಸುಗಳಲ್ಲಿ ಸೋಂಕು ಕಂಡು ಬಂದಿದೆ. ಈ ಮಾರಣಾಂತಿಕ ಸೋಂಕಿಗೆ ಹಲವು ಹಸು ಮತ್ತು ಎಮ್ಮೆಗಳು ಪ್ರಾಣ ತ್ಯಾಗ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಹಸುಗಳು ಸೋಂಕಿಗೆ ತುತ್ತಾಗಿರುವ ಚಿತ್ರಗಳನ್ನು ಗಮನಿಸಿರಬಹುದು. ಲಂಪಿ ವೈರಸ್ ಜಾನುವಾರುಗಳನ್ನು ಬಾಧಿಸುತ್ತಿದೆ. ರೈತರು ಈಗ ತಮ್ಮ ಹಸು ಮತ್ತು ಎಮ್ಮೆಗೆ ಬಂದಿರುವ ಈ ಸೋಂಕಿನಿಂದ ಕಂಗಾಲಾಗಿದ್ದಾರೆ. ಹಳ್ಳಿಗಳಲ್ಲಿ ಮತ್ತು ಹಸು ಕೇಂದ್ರಗಳಲ್ಲಿ ಜಾನುವಾರಗಳ ಸಾವು ಆತಂಕ ಹೆಚ್ಚಿಸಿದೆ. ಹಸುಗಳ ದೇಹದ ಮೇಲೆ ಅನೇಕ ಗುಳ್ಳೆಗಳು ಕಾಣಿಸಿಕೊಳ್ಳುವ ಈ ಕಾಯಿಲೆಯನ್ನು ಲಂಪಿ ವೈರಸ್ ಎನ್ನಲಾಗಿದೆ.


    ಜಾನುವಾರುಗಳಲ್ಲಿ ಲಂಪಿ ವೈರಸ್ ಅಟ್ಯಾಕ್


    ಲಂಪಿ ವೈರಸ್ ಹಸುಗಳು, ಎಮ್ಮೆಗಳು ಮತ್ತು ಜಿಂಕೆಗಳಿಗೆ ಸೋಂಕು ಹರಡುವಂತೆ ಮಾಡಿದೆ. ಈಗ ಲಂಪಿ ವೈರಸ್ ಒಂದು ಚರ್ಮದ ಕಾಯಿಲೆ ಆಗಿದೆ. ಲಂಪಿ ವೈರಸ್ ಇದು ಲಕ್ಷಾಂತರ ಹಸುಗಳನ್ನು ಬಲಿ ಪಡೆದಿದೆ.


    ಲಂಪಿ ವೈರಸ್ ನಿಂದ ಕಂಗಾಲಾದ ಜನತೆ


    ಮನುಷ್ಯರು, ಹಸುಗಳು ಮತ್ತು ಎಮ್ಮೆಗಳಿಂದ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಪ್ರತಿದಿನ ಸೇವನೆ ಮಾಡುತ್ತಾರೆ. ಇನ್ನು ರೈತಾಪಿ ವರ್ಗ ಜಾನುವಾರುಗಳಲ್ಲಿ ಹರಡಿರುವ ಲಂಪಿ ವೈರಸ್ ನಿಂದ ಕಂಗಾಲಾಗಿದ್ದಾರೆ. ಇನ್ನು ಲಂಪಿ ವೈರಸ್ ಗೆ ತುತ್ತಾಗಿರುವ ಜಾನುವಾರುಗಳ ಹಾಲು, ಗೋಮೂತ್ರ, ಗೋಮಯ ವಸ್ತುಗಳ ಬಳಕೆ ಸುರಕ್ಷಿತವೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.


    ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


    ಈ ಮೊದಲು ಮಂಗನ ಕಾಯಿಲೆ ವೈರಸ್‌ ಮನುಷ್ಯರಲ್ಲಿ ಹರಡಿತ್ತು. ಇದು ಮಂಗಗಳಿಂದ ಮನುಷ್ಯರಿಗೆ ಹರಡಿತ್ತು. ಇಂತಹ ರೋಗಗಳನ್ನು ಝೂನೋಟಿಕ್ ಕಾಯಿಲೆ ಎಂದು ಕರೆಯುತ್ತಾರೆ. ಹಾಗಾದ್ರೆ ಜಾನುವಾರಗಳಲ್ಲಿ ಹರಡಿರುವ ಲಂಪಿ ವೈರಸ್ ಮನುಷ್ಯರಿಗೂ ತಗುಲುತ್ತದೆಯೇ? ಎಂಬ ಬಗ್ಗೆ ತಿಳಿಯವುದು ಮುಖ್ಯ.


    ಗಡ್ಡೆ ರೋಗ ಎಂದರೇನು?


    ಲಂಪಿ ರೋಗವು ವಾಸ್ತವದಲ್ಲಿ ವೈರಲ್ ಸೋಂಕಿನ ಒಂದು ವಿಧ.  ಇದು ಹಸುಗಳಲ್ಲಿ ಹರಡುವ ವೈರಸ್ ಆಗಿದೆ. ಇದುವರೆಗೆ ಯಾವುದೇ ಪ್ರಾಣಿಗಳು ಅಥವಾ ಮನುಷ್ಯರು ಈ ವೈರಸ್ ಸೋಂಕಿಗೆ ತುತ್ತಾಗಿಲ್ಲ. ಈ ರೋಗವು ನೊಣ, ಸೊಳ್ಳೆ ಅಥವಾ ಹಸುಗಳ ರಕ್ತ ಕುಡಿಯುವ ಯಾವುದೇ ಕೀಟದಿಂದ ಹರಡುತ್ತದೆ ಎನ್ನಲಾಗಿದೆ.


    ಲಂಪಿ ವೈರಸ್ ಕಾಯಿಲೆಯ ಲಕ್ಷಣಗಳು


    ಈ ವೈರಸ್ ಸೋಂಕಿತ ಹಸುಗಳಲ್ಲಿ ಜ್ವರ, ನಿರಂತರವಾಗಿ ಬೆಳೆಯುತ್ತಿರುವ ಗಡ್ಡೆ, ಚರ್ಮದ ಮೇಲೆ ಗುಳ್ಳೆಗಳು ಕಂಡು ಬರುತ್ತವೆ. ಈ ಸ್ಥಿತಿಯು ಎಷ್ಟು ಗಂಭೀರವಾಗಿದೆ ಅಂದ್ರೆ ರೋಗಕ್ಕೆ ತುತ್ತಾದ ಹಸುಗಳು ಸಹ ಸಾಯುತ್ತವೆ. ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿ ದೀರ್ಘಕಾಲದ ಕಾಯಿಲೆಯ ಈ ಲಕ್ಷಣಗಳನ್ನು ದೃಢಪಡಿಸಿದೆ.


    ಲಂಪಿ ವೈರಸ್ ಮನುಷ್ಯರಿಗೆ ಹರಡುತ್ತದೆಯೇ?


    ಲಂಪಿ ವೈರಸ್ ಹೊಸ ಸೋಂಕಲ್ಲ. ಈ ರೋಗವು ಕೆಲವು ವರ್ಷಗಳ ಹಿಂದೆ ಇತ್ತು. ಈ ಹಿಂದೆ ಹಲವು ಆಫ್ರಿಕನ್ ದೇಶಗಳಲ್ಲಿ ಹಸುಗಳಿಗೆ ಲಂಪಿ ಸೋಂಕು ಕಾಣಿಸಿಕೊಂಡಿತ್ತು. 2012 ರ ಸುಮಾರಿಗೆ ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಇದರ ಹರಡುವಿಕೆ ಇತ್ತು, ಇದರ ಪ್ರಭಾವವು 2019 ರಿಂದ ಏಷ್ಯಾದಲ್ಲಿ ಹೆಚ್ಚು ಕಂಡು ಬರ್ತಿದೆ. ಇದುವರೆಗೆ ಮನುಷ್ಯರಿಗೆ ಈ ಕಾಯಿಲೆ ಹರಡಿಲ್ಲ.


    ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ಕೂಡ ಈ ರೋಗ ಝೂನೋಟಿಕ್ ಅಲ್ಲ ಎಂದು ದೃಢಪಡಿಸಿದೆ. ಈ ರೋಗವು ಹಸುಗಳಿಂದ ಮನುಷ್ಯರಿಗೆ ಹರಡಲ್ಲ ಎಂದು ಸ್ಪಷ್ಟ ಪಡಿಸಿದೆ.


    ಡೈರಿ ಉತ್ಪನ್ನಗಳು ಸುರಕ್ಷಿತವೇ?


    ಡೈರಿ ಉತ್ಪನ್ನಗಳ ಬಳಕೆ ಅಪಾಯಕಾರಿ ಎಂದು ಹೇಳುವ ಯಾವ ಪ್ರಕರಣವೂ ಇಲ್ಲಿಯವರೆಗೆ ಕಂಡು ಬಂದಿಲ್ಲ. ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ ಡೈರಿ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು ಅಥವಾ ಅಸುರಕ್ಷಿತ ಎಂದು ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ಮುನ್ನೆಚ್ಚರಿಕೆ ಕ್ರಮ


    ಲಂಪಿ ವೈರಸ್ ಗೆ ತುತ್ತಾಗಿರುವ ಹಸುಗಳ ಹಸಿ ಹಾಲನ್ನು ಸೇವಿಸಬೇಡಿ. ಹಾಲನ್ನು ಕುದಿಸಿದ ನಂತರವೇ ಕುಡಿಯಿರಿ. ಹಾಲಿನ ಉತ್ಪನ್ನಗಳಾದ ಚೀಸ್, ತುಪ್ಪ ತಿನ್ನುವ ಮೊದಲು, ಅವುಗಳನ್ನು ಬಿಸಿ ಮಾಡಿ ಅಥವಾ ಚೆನ್ನಾಗಿ ಬೇಯಿಸಿ ತಿನ್ನಿ.

    Published by:renukadariyannavar
    First published: