ಪುರುಷರೇ ಹುಷಾರ್..! ಕಡಿಮೆ ವೀರ್ಯಾಣು ಹೊಂದಿದ್ದರೆ ಈ ಆರೋಗ್ಯ ಸಮಸ್ಯೆಗಳು ಕಾಡಬಹುದು..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿರುವ ಪುರುಷರಲ್ಲಿ ಸ್ನಾಯುವಿನ ಶಕ್ತಿ ಮತ್ತು ಮೂಳೆ ಸಾಂದ್ರತೆ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಆಸ್ಟಿಯೋಪೋರೋಸಿಸ್ ಉಂಟಾಗುತ್ತದೆ.

  • Share this:

ಯಾವುದೇ ಮಹಿಳೆ ಗರ್ಭ ಧರಿಸುವಲ್ಲಿ ವೀರ್ಯ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಮಹಿಳೆಯರಷ್ಟೇ ಪುರುಷರು ಕೂಡ ಆರೋಗ್ಯದ ಜೊತೆಜೊತೆಯಲ್ಲಿ ವೀರ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ವೀರ್ಯಗಳ ಸಂಖ್ಯೆ ಕಡಿಮೆಯಾದಲ್ಲಿ ಆತಂಕ ಖಿನ್ನತೆ, ಇನ್ನಿತರ ಗಂಭೀರ ಸಮಸ್ಯೆಗಳು ಕಾಡಬಹುದು. ಅಲ್ಲದೇ ಇತ್ತೀಚೆಗೆ ಪುರುಷರಲ್ಲೂ ಫಲವತ್ತತೆಯ ಸಮಸ್ಯೆ ಕಂಡು ಬರುತ್ತಿದ್ದು, ಇವುಗಳಿಗೆ ಧೂಮಪಾನ, ಮದ್ಯಪಾನ, ಸ್ಟಿರಾಯ್ಡ್ ಬಳಕೆ, ಅನಾರೋಗ್ಯಕರ ಆಹಾರ ಸೇವನೆ ಇವೆಲ್ಲವೂ ಕಾರಣವಾಗುತ್ತದೆ. ಹಾಗಾಗಿ ಪ್ರತಿ ಪುರುಷರು ವೀರ್ಯದ ಸಂಖ್ಯೆ ಕಾಯ್ದುಕೊಳ್ಳಲು ಆರೋಗ್ಯಯುತ ಆಹಾರ ಸೇವನೆಯ ಅಭ್ಯಾಸ ರೂಢಿಸಿಕೊಳ್ಳಬೇಕು.


ಇತ್ತೀಚಿನ ಸಂಶೋಧನೆಯ ಪ್ರಕಾರ, ಕಡಿಮೆ ವೀರ್ಯಾಣುಗಳನ್ನು ಹೊಂದಿರುವ ಪುರುಷ ಆರೋಗ್ಯ ಸಮಸ್ಯೆಗಳಿಗೆ ಈಡಾಗುತ್ತಿದ್ದಾನೆ ಎಂದು ತಿಳಿದು ಬಂದಿದೆ. ಇದು ಅನಾರೋಗ್ಯಕರ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಕಡಿಮೆ ವೀರ್ಯಾಣು ಹೊಂದಿರುವ ಸುಮಾರು 5000ಕ್ಕೂ ಹೆಚ್ಚು ಪುರುಷರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ 20ರಷ್ಟು ರೋಗಿಗಳು ದೇಹದ ಕೊಬ್ಬು, ರಕ್ತದೊತ್ತಡ, ಹೆಚ್ಚು ಕೊಲೆಸ್ಟ್ರಾಲ್ ಹೊಂದಿದ್ದರು. ಅಲ್ಲದೇ ಇವರಲ್ಲಿ ಹೆಚ್ಚಿನವರು ಟೆಸ್ಟೋಸ್ಟೇರಾನ್ ಮಟ್ಟವೂ ಕಡಿಮೆ ಇತ್ತು. ಅಲ್ಲದೇ ವೀರ್ಯಾಣುಗಳ ಗಣತಿ ಕಡಿಮೆ ಇರುವ ಪುರುಷರು ಇನ್ನಿತರ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಬೇಕು. ಮಹಿಳೆಯು ಗರ್ಭಿಣಿಯಾಗಲು ಸಮಸ್ಯೆ ಎದುರಾದರೆ ಆ ದಂಪತಿಗೆ ಕಡಿಮೆ ವೀರ್ಯಾಣುಗಳಿರುವುದರ ಜೊತೆಗೆ ವೀರ್ಯದ ಗುಣಮಟ್ಟ ಕಡಿಮೆ ಇರುತ್ತದೆ ಎಂದರ್ಥ.


ಕಡಿಮೆ ವೀರ್ಯಾಣು ಹೊಂದಿರುವ ಪುರುಷರು ಚಯಾಪಚಯ ರೋಗಲಕ್ಷಣಗಳನ್ನು ಹೊಂದಿದ್ದರು ಮತ್ತು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮತ್ತು ರಕ್ತದೊತ್ತಡವನ್ನು ಒಳಗೊಂಡಂತೆ ಅಪಾಯಕಾರಿ ಅಂಶಗಳನ್ನು ಹೊಂದಿದ್ದರು. ಈ ಅಂಶಗಳು ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹವನ್ನು ಹೆಚ್ಚಿಸುವ ಅಪಾಯವನ್ನು ಉಂಟು ಮಾಡುತ್ತದೆ.


ಇದನ್ನೂ ಓದಿ:One Nation, One Ration Card: ಜುಲೈ 31ರೊಳಗೆ ಎಲ್ಲಾ ರಾಜ್ಯಗಳಲ್ಲೂ ಯೋಜನೆ ಅನುಷ್ಠಾನಕ್ಕೆ ಸುಪ್ರೀಂ ಸೂಚನೆ

ಡಿಯೋಸ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ವಿನೀತ್ ಮಲ್ಹೋತ್ರಾ ಅವರು ವೀರ್ಯಾಣು ಎಣಿಕೆ ಕೇವಲ ಲೈಂಗಿಕ ಅಥವಾ ಸಂತಾನೋತ್ಪತ್ತಿ ಆರೋಗ್ಯದ ಸೂಚಕವಲ್ಲ, ಆದರೆ ಕಡಿಮೆ ವೀರ್ಯಾಣುಗಳ ಸಂಖ್ಯೆಯು ಹೃದಯ, ಮಧುಮೇಹ ಮತ್ತು ಸಂತಾನೋತ್ಪತ್ತಿ ಕ್ಯಾನ್ಸರ್‍ಗಳ ಹಲವಾರು ರೋಗಗಳ ಉಪಸ್ಥಿತಿಯನ್ನು ಸೂಚಿಸುತ್ತದೆ. ಈ ಎಲ್ಲಾ ಕಾರಣಗಳಿಂದ ಕೆಲವರು ಚಿಕ್ಕವಯಸ್ಸಿನಲ್ಲೇ ಸಾವನ್ನಪ್ಪುತ್ತಾರೆ. ಹಾಗಾಗಿ ರಕ್ತದೊತ್ತಡ, ಮಧುಮೇಹ ಅಥವಾ ಕೊಲೆಸ್ಟ್ರಾಲ್ ಅನ್ನು ಪರೀಕ್ಷೆ ಮಾಡುವಂತೆ ಪುರುಷರು ತಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಆಗಾಗ್ಗೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.


ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿರುವ ಪುರುಷರಲ್ಲಿ ಸ್ನಾಯುವಿನ ಶಕ್ತಿ ಮತ್ತು ಮೂಳೆ ಸಾಂದ್ರತೆ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಆಸ್ಟಿಯೋಪೋರೋಸಿಸ್ ಉಂಟಾಗುತ್ತದೆ, ಇದರಿಂದ ಮೂಳೆಗಳು ಮತ್ತು ಕೀಲುಗಳು ದುರ್ಬಲಗೊಳ್ಳುತ್ತವೆ ಮತ್ತು ಸುಲಭವಾಗಿ ಮುರಿತಕ್ಕೊಳಗಾಗುತ್ತವೆ. ಫಲವತ್ತತೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಸಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ಅದು ಕೊನೆಯದಾಗಿ ಜೀವನದ ಮೇಲೆ ಪರಿಣಾಮ ಬೀರುತ್ತದೆ.


ಫಲವತ್ತತೆ ಮತ್ತು ವೀರ್ಯಾಣುಗಳ ಎಣಿಕೆ, ಮತ್ತು ಗುಣಮಟ್ಟವು ಪುರುಷರಿಗೆ ಆರೋಗ್ಯದ ಮೌಲ್ಯಮಾಪನಕ್ಕೆ ಅವಕಾಶವನ್ನು ನೀಡುತ್ತದೆ ಮತ್ತು ಹಲವಾರು ರೋಗಗಳಿಗೆ ತುತ್ತಾಗುವುದನ್ನು ತಡೆಯುತ್ತದೆ.


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಸಾಮಾನ್ಯ ವೀರ್ಯಾಣು ಪ್ರತಿ ಮಿಲಿಲೀಟರ್ ವೀರ್ಯಕ್ಕೆ ಸುಮಾರು 20 ಮಿಲಿಯನ್ ಇರುತ್ತದೆ. ಕಡಿಮೆ ವೀರ್ಯಾಣು ಸಂಖ್ಯೆಯನ್ನು ಆಲಿಗೋಸ್ಪೆರ್ಮಿಯಾ ಎಂದೂ ಕರೆಯುತ್ತಾರೆ. ಇದು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಮೇಲೆ ತಿಳಿಸಿದ್ದಕ್ಕಿಂತ ಕಡಿಮೆ ವೀರ್ಯಾಣುಗಳ ಸಂಖ್ಯೆಯನ್ನು ಹೊಂದಿದ್ದರೆ ಅದನ್ನು ವೀರ್ಯಾಣುಗಳ ಸಂಖ್ಯೆ ಕಡಿಮೆ ಇದೆ ಎಂದು ಪರಿಗಣಿಸಲಾಗುತ್ತದೆ.




ಪುರುಷ ಬಂಜೆತನವು ವಿವಿಧ ಅಂಶಗಳಿಂದ ಉಂಟಾಗಬಹುದು:


ಒತ್ತಡ, ಆಲ್ಕೋಹಾಲ್ ಮತ್ತು ಮಾದಕವಸ್ತು ಬಳಕೆ, ವೃಷಣಗಳ ಹಿಂದಿನ ಶಸ್ತ್ರಚಿಕಿತ್ಸೆಗಳು ಮತ್ತು ವೆರಿಕೋಸೆಲೆ, ಬೊಜ್ಜು, ಮಧುಮೇಹ ಇತ್ಯಾದಿ. ಸಾಮಾನ್ಯ ವೀರ್ಯಾಣುಗಳ ಸಂಖ್ಯೆಯೊಂದಿಗೆ ಹೋಲಿಸಿದಾಗ, ಕಡಿಮೆ ವೀರ್ಯಾಣುಗಳಿರುವ ಪುರುಷರಲ್ಲಿ ಹೆಚ್ಚಿನ ಬಿಎಂಐ, ಸೊಂಟದ ಸುತ್ತಳತೆ, ರಕ್ತದೊತ್ತಡ, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ಗಳು ಮತ್ತು ಮೆಟಾಬಾಲಿಕ್ ಸಿಂಡ್ರೋಮ್, ಆಸ್ಟಿಯೋಪೋರೋಸಿಸ್ ಮತ್ತು ಆಸ್ಟಿಯೋಪೆನಿಯಾದ ಹರಡುವಿಕೆ ಹೆಚ್ಚಾಗಿದೆ ಎಂದರ್ಥ.

top videos
    First published: