Love: ಪ್ರೀತಿ ಅಂದ್ರೆ ನಿಜವಾಗ್ಲೂ ಏನು? ಅದರಲ್ಲಿ ಎಷ್ಟು ವಿಧ ಇದೆ? ನಿಮ್ದು ಯಾವ ಬಗೆಯ ಪ್ರೀತಿ?

ನಾವು ಯಾವ ರೀತಿಯ ಪ್ರೀತಿಯ ಹುಡುಕಾಟದಲ್ಲಿ ನಾವಿದ್ದೇವೆ ಎಂದು ಅರ್ಥ ಮಾಡಿಕೊಂಡು ಅಂತಹ ಪ್ರೀತಿ ಬೆಳೆಸಿಕೊಳ್ಳುವುದು ಉತ್ತಮ.

Photo: Google

Photo: Google

  • Share this:
ಈ ‘ಪ್ರೀತಿ’(Love) ಎಂಬುದು ಬರೆಯಲು ಚಿಕ್ಕ ಪದವಾಗಿರಬಹುದು, ಆದರೆ ಈ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ(Important Role) ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ನಮ್ಮ ಮನೆಗಳಲ್ಲಿ ಸಾಕುವ ಪ್ರಾಣಿಗಳಿಂದ(Pets) ಹಿಡಿದು ನಮ್ಮ ಮನೆಯಲ್ಲಿರುವ ವಯಸ್ಸಾದ ನಮ್ಮ ಅಜ್ಜ ಅಜ್ಜಿಯವರೆಗೂ ತಮ್ಮನ್ನು ಎಲ್ಲರೂ ಪ್ರೀತಿಯಿಂದ(From Love) ಮಾತಾಡಿಸಬೇಕು, ನೋಡಿಕೊಳ್ಳಬೇಕು ಎಂದೆನಿಸುವುದು ಸಹಜವಾದ ವಿಷಯ. ಎರಡು ಮನಸ್ಸನ್ನು(Two Hearts) ಒಂದು ಮಾಡುವುದೇ ಈ ಪ್ರೀತಿ ಎಂದು ಹೇಳಬಹುದು.

ನಮಗೆ ಯಾವ ಪ್ರೀತಿ ಸರಿ ಎಂದು ಹುಡುಕಬೇಕು?

ಇಬ್ಬರು ವ್ಯಕ್ತಿಗಳು ಪರಸ್ಪರರ ಬಗ್ಗೆ ಸಾಕಷ್ಟು ಕಾಳಜಿ ವಹಿಸುವಾಗ, ಈ ಭಾವನೆಯು ಪೋಷಿಸುತ್ತದೆ. ಪ್ರೀತಿಯು ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಬಂಧಗಳನ್ನು ಒಳಗೊಂಡಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಆದರೆ ನಾವು ಯಾವ ರೀತಿಯ ಪ್ರೀತಿಯ ಹುಡುಕಾಟದಲ್ಲಿ ನಾವಿದ್ದೇವೆ ಎಂದು ಅರ್ಥ ಮಾಡಿಕೊಂಡು ಅಂತಹ ಪ್ರೀತಿ ಬೆಳೆಸಿಕೊಳ್ಳುವುದು ಉತ್ತಮ.

ಪ್ರೀತಿ ಉಳಿದಿರುವುದೇ ನಂಬಿಕೆ & ಕಾಳಜಿ ಮೇಲೆ

ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಆದರೂ, ಪ್ರೀತಿಯ ಬಗ್ಗೆ ವಿಭಿನ್ನ ಜನರು ವಿಭಿನ್ನವಾದ ದೃಷ್ಟಿಕೋನಗಳನ್ನು ಹೊಂದಿದ್ದಾರೆ ಮತ್ತು ಅವರು ಬಯಸುವ ಅಥವಾ ನೀಡಲು ಬಯಸುವ ಪ್ರೀತಿಯ ರೀತಿಯ ಬಗ್ಗೆ ಅವರು ಸ್ಪಷ್ಟವಾಗಿರಬೇಕು.

ಇದನ್ನೂ ಓದಿ: Love Secret: ಪ್ರೀತಿಯನ್ನ ಗುಟ್ಟಾಗಿ ಇರಿಸೋಕೆ ಇಲ್ಲೊಂದಷ್ಟು ಸಖತ್ ಟಿಪ್ಸ್ ಇದೆ ನೋಡಿ

ಪ್ರೀತಿಯಲ್ಲಿ ಅನೇಕ ವಿಧಗಳು

ಪ್ರೀತಿಯ ವಿವಿಧ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರ್ಥೈಸಿಕೊಂಡು ನಮ್ಮಿಂದ ಇನ್ನೊಬ್ಬ ವ್ಯಕ್ತಿ ಯಾವ ತರಹದ ಪ್ರೀತಿಯನ್ನು ನಿರೀಕ್ಷಿಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಅದೇ ರೀತಿಯ ಪ್ರೀತಿ ಮುಂದುವರೆಸಿಕೊಂಡು ಹೋಗುವುದರಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಬಹುದಾಗಿದೆ. ಬನ್ನಿ ಹಾಗಾದರೆ ಈ ಪ್ರೀತಿಯಲ್ಲಿರುವ 4 ವಿಧಗಳ ಬಗ್ಗೆ ತಿಳಿದುಕೊಳ್ಳೋಣ.

1. ಭಾವನಾತ್ಮಕ ಪ್ರೀತಿ

ಇದು ಪ್ರೀತಿಯ ವಿಧಗಳಲ್ಲಿಯೇ ತುಂಬಾನೇ ಬಲವಾದದ್ದು ಎಂದು ಹೇಳಬಹುದು. ಏಕೆಂದರೆ ಒಬ್ಬ ವ್ಯಕ್ತಿಯು ಇನ್ನೊಬ್ಬರೊಡನೆ ಭಾವನಾತ್ಮಕ ಪ್ರೀತಿ ಹೊಂದಿದ್ದರೆ, ಆ ವ್ಯಕ್ತಿಯು ತನ್ನ ಮನಸ್ಸಿನಿಂದ ಅದನ್ನು ಅನುಭವಿಸುತ್ತಾನೆ. ಇದು ನಿಮಗೆ ಸಂತೋಷ, ಕಣ್ಣೀರು, ಸಾಂತ್ವನ ತರುತ್ತದೆ ಮತ್ತು ಎಲ್ಲಾ ರೀತಿಯ ಭಾವನೆಗಳನ್ನು ಪ್ರೇರೇಪಿಸುತ್ತದೆ. ಭಾವನಾತ್ಮಕ ಪ್ರೀತಿಯಲ್ಲಿ, ನಿಮ್ಮ ಸಂಗಾತಿಯು ಕೇವಲ ದೈಹಿಕ ಅನ್ಯೋನ್ಯತೆ ಹೊಂದದೇ, ನಿಮ್ಮ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದು ನೀವು ಬಯಸುತ್ತೀರಿ.

2. ದೈಹಿಕ ಪ್ರೀತಿ

ಈ ಪ್ರೀತಿ ನಿಮ್ಮ ಸಂಗಾತಿಯೊಂದಿಗೆ ನೀವು ಹಂಚಿಕೊಳ್ಳಲು ಬಯಸುತ್ತೀರಿ ಮತ್ತು ಇದು ದೈಹಿಕ ಆಕರ್ಷಣೆಗೆ ಸಂಬಂಧಿಸಿದೆ. ದೈಹಿಕ ಪ್ರೀತಿಯಲ್ಲಿ ಇನ್ನೊಬ್ಬರ ಸ್ಪರ್ಶವು ನಿಮಗೆ ಪ್ರೀತಿ ಮತ್ತು ಆತ್ಮೀಯತೆ ವ್ಯಕ್ತಪಡಿಸುತ್ತದೆ. ಭದ್ರತೆಯ ಪ್ರಜ್ಞೆಯನ್ನು ಸಹ ಒದಗಿಸುತ್ತದೆ. ಈ ದೈಹಿಕ ಪ್ರೀತಿ ನಿಮಗೆ ಹೆಚ್ಚಿನ ಸಂತೋಷವನ್ನು ಮತ್ತು ಹೆಚ್ಚು ಅಗತ್ಯವಿರುವ ಕಾಮ ಪ್ರಚೋದಕ ಸ್ಪರ್ಶ ನೀಡುತ್ತದೆ.

3. ಪ್ಲೇಟೋನಿಕ್ ಪ್ರೀತಿ

ಪ್ಲೇಟೋನಿಕ್ ಪ್ರೀತಿಯು ನಿಮಗೆ ಯಾವುದೇ ಲೈಂಗಿಕ ಅಥವಾ ಪ್ರಣಯ ಭಾವನೆಗಳನ್ನು ಹೊಂದಿರುವುದಿಲ್ಲ. ಆದರೆ, ನಿಮ್ಮ ನಿಕಟತೆಯು ನಿಮ್ಮ ಸಂಗಾತಿಯ ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಪ್ಲೇಟೋನಿಕ್ ಪ್ರೀತಿಗೆ ಗ್ರೀಕ್ ತತ್ವಜ್ಞಾನಿ ಪ್ಲೇಟೋ ಹೆಸರಿಡಲಾಗಿದೆ, ಆದರೆ ಅವರು ಎಂದಿಗೂ ಈ ಪದವನ್ನು ಸ್ವತಃ ಬಳಸಲಿಲ್ಲ.

ಇದನ್ನೂ ಓದಿ: Pigmentation: ಮುಖದ ಮೇಲೆ ಬಂಗು ಬಂದರೆ ಈ ರೀತಿ ಮಾಡಿ ಸಾಕು..! ಆ ಕಪ್ಪು ಕಲೆಗಳಿಗೆ ಮನೆಯಲ್ಲೇ ಇದೆ ಪರಿಹಾರ

4. ಸ್ವಯಂ ಪ್ರೀತಿ

ಈ ರೀತಿಯ ಪ್ರೀತಿ ಅನುಭವಿಸಲು ಇನ್ನೊಬ್ಬ ವ್ಯಕ್ತಿಯ ಉಪಸ್ಥಿತಿಯ ಅಗತ್ಯವಿಲ್ಲ. ಎಲ್ಲಿಯವರೆಗೆ ಅದು ಆರೋಗ್ಯಕರವಾಗಿರುತ್ತದೆಯೋ, ಸ್ವಯಂ ಪ್ರೀತಿ ನಿಮ್ಮ ಯೋಗಕ್ಷೇಮಕ್ಕೆ ಸಂಬಂಧಿಸಿರುವುದರಿಂದ ನಿಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ವಯಂ ಪ್ರೀತಿಯಲ್ಲಿ, ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತೆಯೇ ನೀವು ನಿಮ್ಮನ್ನು ನೋಡಿಕೊಳ್ಳಬೇಕು.
Published by:Latha CG
First published: