ಅಬ್ಬಾ..! ಗಂಡನ ಜನನಾಂಗ ಕತ್ತರಿಸಿದ ಹೆಂಡತಿ: ತನಿಖೆಯಲ್ಲಿ ಬಯಲಾಯ್ತು ಅಸಲಿ ಸತ್ಯ

news18
Updated:November 3, 2018, 7:18 PM IST
ಅಬ್ಬಾ..! ಗಂಡನ ಜನನಾಂಗ ಕತ್ತರಿಸಿದ ಹೆಂಡತಿ: ತನಿಖೆಯಲ್ಲಿ ಬಯಲಾಯ್ತು ಅಸಲಿ ಸತ್ಯ
news18
Updated: November 3, 2018, 7:18 PM IST
-ನ್ಯೂಸ್ 18 ಕನ್ನಡ

ಓ ಮೈ ಗಾಡ್...ಪೊಲೀಸ್ ಅಧಿಕಾರಿಗಳ ತಂಡ ಮನಸ್ಸಾಸ್ ನಗರದ ಪ್ರಮುಖ ಅಪಾರ್ಟ್​ಮೆಂಟ್​ಗೆ ತಲುಪುತ್ತಿದ್ದಂತೆ ಉದ್ಗರಿಸಿದ ಮೊದಲ ವಾಕ್ಯ. ಕೊಠಡಿಯಲ್ಲಿ ಬಿದ್ದಿದ್ದ ಮನೆಯ ಮಾಲೀಕನನ್ನು ನೋಡಿ ಒಂದು ಬಾರಿ ತನಿಖಾ ಅಧಿಕಾರಿಗಳು ದಂಗಾಗಿದ್ದರು. ಮತ್ತೊಂದು ಕೋಣೆಯಲ್ಲಿ ಹೆದರಿ ಬಸವಳಿದ್ದ ಮಹಿಳೆ ಕೂತಿದ್ದರು. ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಕೆಲವೊತ್ತು ವಿಚಾರಣೆ ನಡೆಸಿದರು. ಇದಾದ ಬಳಿಕ ಹಿರಿಯ ತನಿಖಾಧಿಕಾರಿಯೊಬ್ಬರು ನಗುತ್ತಾ ಇಬ್ಬರು ಪೊಲೀಸರು ಹೋಗಿ ಮಹಿಳೆ ಹೇಳಿದ ಸ್ಥಳದಿಂದ ಅಂಗವನ್ನು ಹುಡುಕಿ ತನ್ನಿ ಎಂದು ನಿರ್ದೇಶಿಸಿದರು. ಹಾಗೆಯೇ ಆಂಬುಲೆನ್ಸ್​ನ್ನು ಕರೆಸಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದರು.

ಅಮೆರಿಕದ ಮನಸ್ಸಾಸ್ ನಗರದಲ್ಲಿ ನಡೆದ ಈ ಘಟನೆ ಇದು. ವ್ಯಕ್ತಿಯನ್ನು ಆಸ್ಪತ್ರೆ ಸೇರಿಸಿದ ಬಳಿಕ ಹಿರಿಯ ಅಧಿಕಾರಿಯೊಬ್ಬರು ಇಬ್ಬರು ಪೊಲೀಸರೊಂದಿಗೆ ಬೀದಿಯಲ್ಲಿ ಸಣ್ಣ ತುಂಡೊಂದನ್ನು ಹುಡುಕುತ್ತಿದ್ದರು. ಅರ್ಧ ರಾತ್ರಿಯ ಅಂಧಕಾರದ ನಡುವೆ ಹುಡುಕುವುದು ತುಸು ಕಷ್ಟವಾಗಿದ್ದರೂ, ಟಾರ್ಚ್​ ಬೆಳಕಿನಲ್ಲಿ ತಮ್ಮ ಪ್ರಯತ್ನ ಮುಂದುವರೆಸಿದ್ದರು. ಆದರೆ ಜೊತೆಗಿದ್ದ ಕಿರಿಯ ಪೋಲಿಸ್​ ಅಧಿಕಾರಿಗೆ ತಾನು ಹುಡುಕುತ್ತಿರುವ ವಸ್ತುವಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದರಿಂದ ತನ್ನ ಸಹೋದ್ಯೋಗಿಯೊಂದಿಗೆ ನಿಜವಾಗಲೂ ನಾವು ಈ ಕತ್ತಲೆಯಲ್ಲಿ ಏನು ಹುಡುಕುತ್ತೀದ್ದೀವಿ? ಅಂಥದ್ದೇನು ನಮ್ಮ ಡಿಪಾರ್ಟ್ಮೆಂಟ್ ಕಳೆದುಕೊಂಡಿದೆ ಎಂದು ಪ್ರಶ್ನಿಸಿಯೇ ಬಿಟ್ಟನು. ಇದನ್ನು ಕೇಳಿದ ಹಿರಿಯ ತನಿಖಾಧಿಕಾರಿ ನಿನಗೆ ಹುಡುಕಾಟದಲ್ಲಿ ಬೆರಳಿನಂತಿರುವ ಒಂದು ತುಂಡು ಸಿಕ್ಕರೆ ಅಷ್ಟು ತಿಳಿಸು, ಆದರೆ ಅದನ್ನು ನೀನು ಕೈಯಿಂದ ಮುಟ್ಟಬೇಡ ಎಂದರು.

ಇದನ್ನು ಕೇಳಿದ ಮತ್ತೊಬ್ಬ ಪೊಲೀಸಪ್ಪನಿಗೆ ನಗು ತಡೆಯಲಾಗಲಿಲ್ಲ. ತನ್ನ ಕಿರಿಯ ಅಧಿಕಾರಿಯ ನಗು ಕೇಳಿದೊಡನೆ ಹಿರಿಯ ತನಿಖಾಧಿಕಾರಿ ಕೂಡ ನಗಲು ಆರಂಭಿಸಿದರು. ಈಗಲೂ ಕೂಡ ಏನೂ ತಿಳಿಯದಿದ್ದ ಆ ಅಧಿಕಾರಿಯ ಸಂಶಯ ಮತ್ತಷ್ಟು ಬಿಗಡಾಯಿಸಿತು. ಹಾಗಾಗಿ ಮತ್ತೊಮ್ಮೆ ತನ್ನ ಸಹೋದ್ಯೋಗಿಯನ್ನು ಕೇಳಿದ- ಅಲ್ಲಯ್ಯ ಅಷ್ಟಕ್ಕೂ ಆ ಮಹಿಳೆ ಮಾಡಿದ್ದಾದರು ಏನು? ಈ ಕತ್ತಲೆಗೂ ಆ ಮಹಿಳೆಗೂ, ನಾವು ಹುಡುಕುವುದಕ್ಕೂ ಏನಯ್ಯಾ ಸಂಬಂಧ?. ಈ ಪೊಲೀಸ್ ಕೆಲಸನೇ ಬೇಡವಾಗಿತ್ತು. ಅದೇನು ಹುಡುಕಬೇಕೊ, ಅದ್ಯಾವ ವಸ್ತುವೊ ಎಂದು ಗೊಣಗುತ್ತಾ ಬೀದಿಯಲ್ಲಿ ಕಣ್ಣಾಡಿಸುತ್ತಿದ್ದನು.

ಸಂಶಯದಿಂದಲೇ ಹುಡುಕುತ್ತಾ ಮುಂದೆ ಹೋಗುತ್ತಿದ್ದಂತೆ ಅಧಿಕಾರಿ, ಸರ್..ಸರ್ ಎಂದು ಹಿರಿಯ ಅಧಿಕಾರಿಯನ್ನು ಕರೆದನು. ಇದು ಕೇಳುತ್ತಿದ್ದಂತೆ ತನಿಖಾಧಿಕಾರಿ ಮತ್ತು ಪೊಲೀಸ್ ಸ್ಥಳಕ್ಕೆ ಓಡಿ ಹೋದರು. ತಮ್ಮ ಕೈಯಲ್ಲಿದ್ದ ಕೋಲಿನಿಂದ ಪೊಲೀಸ್ ತೋರಿಸಿದ ತುಂಡನ್ನು ಅಲುಗಾಡಿಸಿ ಪರೀಕ್ಷಿಸಿದರು. ಇದೇ ವಸ್ತುವೆಂದು ಖಚಿತ ಪಡಿಸಿದ ಅಧಿಕಾರಿ ಅದನ್ನು ಪ್ಲಾಸ್ಟಿಕ್​ ಕವರ್​ನಲ್ಲಿ ಸುತ್ತಿ ತೆಗೆದುಕೊಳ್ಳುವಂತೆ ಸೂಚಿಸಿದರು. ಅಲ್ಲದೆ ಅದನ್ನು ಶೀಘ್ರದಲ್ಲೇ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು.

ಇಷ್ಟೊತ್ತು ನಾವು ಹುಡುಕಿದ್ದು ಮನುಷ್ಯನೊಬ್ಬನ ದೇಹದ ಬಹುಮುಖ್ಯ ಭಾಗ ಎಂಬುದು ಪೊಲೀಸ್​ಗೆ ಅರ್ಥವಾಯ್ತು. ಸುಮಾರು ಒಂಭತ್ತುವರೆ ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಕತ್ತರಿಸಲ್ಪಟ್ಟ ಶಿಶ್ನುವಿನ ತುಂಡನ್ನು ಮತ್ತೆ ಜೋಡಿಸಲಾಯಿತು. ಕೆಲ ಹೊತ್ತಿನ ಬಳಿಕ ಪ್ರಜ್ಞೆಗೆ ಮರಳಿದ ವ್ಯಕ್ತಿಯಿಂದ ಪೊಲೀಸರು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ದೂರಿನ ವಿಚಾರಣೆ ಅಲ್ಲದೆ ಕೆಲವೇ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿತು.
ಅದು 1989, ಮನೆಯವರ ಇಷ್ಟದಂತೆ ಜಾನ್​ ಮತ್ತು ಲೊರೆನಾ ವಿವಾಹಿತರಾಗಿದ್ದರು. ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಪ್ರೀತಿ ಪ್ರಣಯದಲ್ಲಿ ಮಿಂದೆದ್ದಿದ್ದರು. ಆದರೆ  ತನ್ನ ಪತಿಗೆ ಲೈಂಗಿಕತೆ ​ಕುರಿತು ವಿಶೇಷ ಆಸಕ್ತಿ ಮತ್ತು ಅದೊಂದು ಚಟವೆಂಬುದು ಲೊರೆನಾ ತಿಳಿಯಲು ಸ್ವಲ್ಪ ಸಮಯ ಬೇಕಾಯಿತು. ಈ  ಒಂದು ಸ್ವಭಾವವೇ ಲೊರೆನಾಳನ್ನು ಚಿಂತೆಗೀಡು ಮಾಡಿತು.

Loading...

ದಿನಕಳೆದಂತೆ ಜಾನ್​ನ ಲೈಂಗಿಕ ಪ್ರವೃತಿ ವಿಕ್ಷಲಣ ಮತ್ತು ವಿಚಿತ್ರ ರೂಪ ಪಡೆದುಕೊಂಡಿತು. ಇದರಿಂದ ಲೊರೆನಾ ಮೇಲೆ ದೈಹಿಕ ದೌರ್ಜನ್ಯಗಳು ಉಂಟಾಗಿದ್ದವು. ಎಷ್ಟೋ ಬಾರಿ ದೈಹಿಕ ಹಲ್ಲೆಗಳ ಮೂಲಕ ಲೈಂಗಿಕ ತೃಪ್ತಿಯನ್ನು ಜಾನ್ ಪಡೆಯುತ್ತಿದ್ದನು. ಮಾನಸಿಕವಾಗಿ ಹಿಂಸೆಗೆ ಒಳಗಾಗಿದ್ದ ಲೊರೆನಾ ಜೀವನದಲ್ಲಿ ಪಡಬಾರದ ಕಷ್ಟವನ್ನೆಲ್ಲಾ ಅನುಭವಿಸಿದಳು.

ಇವೆಲ್ಲದರ ನಡುವೆ ಲೊರೆನಾ ತಾಯಿಯಾಗಬೇಕೆಂದು ಅಪಾರ ಕನಸು ಕಂಡಿದ್ದರು. ಆದರೆ ಇದಕ್ಕೆ ವಿರುದ್ಧ ಎಂಬಂತೆ ಜಾನ್ ವರ್ತಿಸುತ್ತಿದ್ದನು. ಅವನಿಗೆ ಮಗುವನ್ನು ಪಡೆಯುವ ಯಾವುದೇ ಆಸಕ್ತಿ ಇರಲಿಲ್ಲ. ಇದಕ್ಕಾಗಿ ಲೊರೆನಾ ಅಂಗಾಲಾಚುತ್ತಿದ್ದರೂ ಕೂಡ ಜಾನ್ ಮನಸು ಕರಗಿರಲಿಲ್ಲ. ಅದೊಂದು ದಿನ ಲೊರೆನಾ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯ ಜಾನ್​ಗೆ ತಿಳಿಯಿತು. ಇದರಿಂದ ಕುಪಿತಗೊಂಡ ಜಾನ್, ತನಗೆ ಮಕ್ಕಳು ಬೇಡವೆಂದು ವಾದಿಸಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದನು.

ಜಾನ್ ಪಾಲಿಗೆ ಹೆಣ್ಣು ಎಂಬುದು ಕೇವಲ ಭೋಗದ ವಸ್ತು ಅಷ್ಟೇ ಆಗಿತ್ತು. ತನ್ನ ಪತ್ನಿಯು ತನ್ನ ಲೈಂಗಿಕ ಗುಲಾಮ ಎಂದೇ ಅವನು ಭಾವಿಸಿದ್ದರು. ತಾನು ಗರ್ಭವತಿ ಆಗಿರುವುದನ್ನು ಸಂತೋಷದಿಂದ ಸ್ವೀಕರಿಸಲಿದ್ದಾರೆ ಎಂಬ ಲೊರೆನಾ ಲೆಕ್ಕಚಾರಗಳು ತಲೆಕೆಳಗಾಗಿತ್ತು. ಏಕೆಂದರೆ ಇದರ ನಂತರವೇ ಜಾನ್ ಹೆಚ್ಚು ಹಿಂಸಿಸಲು ಪ್ರಾರಂಭಿಸಿದ್ದನು. ತನ್ನ ಮೇಲಿನ ಲೈಂಗಿಕ ಕಿರುಕುಳವನ್ನು ಲೊರೆನಾ ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದಳು.

ಪತ್ನಿಯ ಸಹನೆಯನ್ನೇ ಬಂಡವಾಳ ಮಾಡಿಕೊಂಡ ಜಾನ್​ ತನ್ನ ಹಿಂಸಾ ಪ್ರವೃತ್ತಿಯನ್ನು ಮುಂದುವರೆಸಿದ್ದನು. ಇದನ್ನು ಪ್ರತಿಭಟಿಸಲು ಲೊರೆನಾ ಅಶಕ್ತಳಾಗಿದ್ದಳು. ಆದರೂ ತನ್ನ ಆಕ್ರಮಣಕಾರಿ ಸ್ವಭಾವದಿಂದ ಲೊರೆನಾಳನ್ನು ಪ್ರತಿನಿತ್ಯ ಲೈಂಗಿಕವಾಗಿ ಬಳಸಿಕೊಳ್ಳುವುದು ಜಾನ್​ಗೆ ಸಾಮಾನ್ಯ ಸಂಗತಿಯಾಗಿತ್ತು.

ಅದೊಂದು ದಿನ ಸಂಜೆ ಮನೆಗೆ ಹಿಂತಿರುಗಿದ್ದ ಜಾನ್ ಲೈಂಗಿಕ ಸಂಬಂಧವನ್ನು ಬಯಸಿದ್ದನು. ಇದನ್ನು ಸ್ಪಲ್ಪಮಟ್ಟಿಗೆ ವಿರೋಧಿಸಲು ಯಶಸ್ವಿಯಾದ ಲೊರೆನಾಳ ಮೇಲೆ ಜಾನ್ ಅತ್ಯಾಚಾರ ಎಸಗಿದ್ದನು. ತನ್ನ ದುಷ್ಕೃತ್ಯ ಮುಗಿಯುತ್ತಿದ್ದಂತೆ ಜಾನ್ ನಿದ್ರೆ ಜಾರಿದನು. ಆದರೆ ಲೊರೆನಾ ಮಾತ್ರ ನೋವಿನಿಂದ ರಾತ್ರಿಯಿಡೀ ಅಳುತ್ತಾ ಮೂಲೆ ಸೇರಿದ್ದಳು.

ಸ್ವಲ್ಪ ಹೊತ್ತಿನ ಬಳಿಕ ಕಣ್ಣೀರು ಒರೆಸುತ್ತಾ ಇಂದು ತೀರ್ಮಾನ ಆಗಲೇ ಬೇಕೆಂಬ ನಿರ್ಧಾರಕ್ಕೆ ಲೊರೆನಾ ಬಂದಿದ್ದಳು. ಸೀದಾ ಬಾತ್​ರೂಮ್​ಗೆ ಹೋಗಿ ಮುಖವನ್ನು ತೊಳೆದುಕೊಂಡಳು. ಕನ್ನಡಿಯನ್ನು ದಿಟ್ಟಿಸಿ ನೋಡುತ್ತಾ ತನಗೆ ತಾನೇ ದೈರ್ಯ ತಂದುಕೊಂಡಳು. ಅಲ್ಲಿಂದ ದೃಢ ನಿಶ್ಚಯದೊಂದಿಗೆ ಅಡುಗೆ ಮನೆಗೆ ಹೋದ ಲೊರೆನಾ, ಹರಿತವಾದ ಚಾಕುವೊಂದನ್ನು ಕೈಗೆತ್ತಿಕೊಂಡಳು. ಅದನ್ನು ತೆಗೆದುಕೊಂಡು ಜಾನ್ ಮಲಗಿದ್ದ ಕೊಠಡಿಗೆ ಆಗಮಿಸಿದ ಲೊರೆನಾಗೆ ಮುಂದೆ ಏನು ಮಾಡಬೇಕೆಂದು ಮಾತ್ರ ತೋಚಲಿಲ್ಲ.

ಗಾಢ ನಿದ್ರೆಯಲ್ಲಿದ್ದ ತನ್ನ ಪತ್ನಿಯನ್ನು ಕೊಲ್ಲಬೇಕೆಂಬ ಬಯಕೆಯಂತು ಲೊರೆನಾಗೆ ಇರಲಿಲ್ಲ. ಸ್ವಲ್ಪ ಸಮಯದ ನಂತರ ದೈರ್ಯ ಮಾಡಿದ ಲೊರೆನಾ, ತನ್ನ ಚಿತ್ರಹಿಂಸೆಗೆ ಕಾರಣವಾಗುತ್ತಿರುವ ಅಂಗವನ್ನು ಇಲ್ಲವಾಗಿಸಲು ನಿರ್ಧರಿಸಿದಳು. ಯಾವುದೇ ಅರಿವಿಲ್ಲದಂತೆ ಮಲಗಿದ್ದ ಜಾನ್​ನ ಶಿಶ್ನವನ್ನು ಲೊರೆನಾ ಕತ್ತರಿಸಿದ್ದಾಳೆ. ನೋವಿನಿಂದ ಎಚ್ಚರಗೊಂಡ ಜಾನ್ ಒಮ್ಮೆಲೆ ಕಿರುಚಿ ಪ್ರಜ್ಞೆ ಕಳೆದುಕೊಂಡು ಕೊಠಡಿಯಲ್ಲೇ ಅಂಗಾತ ಬಿದ್ದರು. ಇದೇ ಕೋಪದಲ್ಲಿ ಮನೆಯಿಂದ ಹೊರಟ ಲೊರೆನಾ ತನ್ನ ಪತ್ನಿಯ ದೇಹಾಂಗದ ಭಾಗವನ್ನು ನಗರದ ಕಸ ಎಸೆಯುವ ಭಾಗದಲ್ಲಿ ಎಸೆದಿದ್ದಾಳೆ. ಬಳಿಕ ಮನೆಗೆ ಹಿಂತಿರುಗಿದಾಗ ಜಾನ್ ಬಿದ್ದಿರುವುದನ್ನು ಕಂಡು ಭಯಗೊಂಡ ಲೊರೆನಾ ಪೊಲೀಸ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಲೊರೆನಾಳ ಸಂಪೂರ್ಣ ವಿಚಾರಣೆಯ ಬಳಿಕ ನ್ಯಾಯಾಲಯವು ಜಾನ್ ವಿರುದ್ದ ಅತ್ಯಾಚಾರದ ಶಿಕ್ಷೆಯನ್ನು ವಿಧಿಸಿತು. ಅಲ್ಲದೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಲೊರೆನಾಗೆ 45 ದಿನಗಳ ಕಾಲ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. 1995 ರಲ್ಲಿ ಜಾನ್ ಮತ್ತು ಲೊರೆನಾ ಕಾನೂನುಬದ್ಧವಾಗಿ ವಿಚ್ಛೇದನ ಪಡೆದರು.

ಶಿಕ್ಷೆಯ ಬಳಿಕ... 
ಇಡೀ ಪ್ರಕರಣ ಅಂದು ಅಮೆರಿಕದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಅನೇಕ ಕಡೆ ಚರ್ಚೆಗಳು ನಡೆದವು. ಶಿಕ್ಷೆಯನ್ನು ಅನುಭವಿಸಿ ಹೊರಬಂದ ಜಾನ್ ಹೊಸ ವ್ಯಕ್ತಿಯಾಗಿ ಜೀವನ ರೂಪಿಸಲು ನಿರ್ಧರಿಸಿದ್ದನು. ಅದಕ್ಕಾಗಿ ಹೊಸ ಮ್ಯೂಸಿಕ್ ಬ್ಯಾಂಡ್​ವೊಂದನ್ನು ಪ್ರಾರಂಭಿಸಿ ಕೈ ಸುಟ್ಟುಕೊಂಡರು. ಜಾನ್ ಜೀವನವನ್ನೇ ಆಧರಿಸಿ ತೆಗೆಯಲಾದ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದರು. ಇದ್ಯಾವುದೂ ವರ್ಕ್​ ಆಗುತ್ತಿಲ್ಲವೆಂದು ಡೆಲಿವರಿ ಬಾಯ್, ಚಾಲಕ, ಬಾರ್​ಟೆಂಡರ್​ ಆಗಿಯು ಕೆಲಸ ಮಾಡಿದರು. ಇದರ ನಡುವೆ ಎರಡನೇ ಮದುವೆಯಾದ ಜಾನ್ ಮೇಲೆ ಕಿರುಕುಳದ ಆರೋಪದ ದೂರು ದಾಖಲಾಯಿತು. ಮತ್ತೊಮ್ಮೆ ಜಾನ್​ನ್ನು ಬಂಧಿಸಲಾಯಿತು.

ಮತ್ತೊಂದೆಡೆ ಲೊರೆನಾ ಬ್ಯೂಟಿ ಸಲೂನ್​ನಲ್ಲಿ ಕೆಲಸ ಮಾಡುತ್ತಿದ್ದಳು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು. ಇದರ ಎಡೆಯಲ್ಲಿ ಬೇರೊಂದು ಮದುವೆಯಾದ ಲೊರೆನಾ ಒಂದು ಮಗುವಿನ ತಾಯಿಯಾದಳು. 2009 ರಲ್ಲಿ ಟಿವಿ ಕಾರ್ಯಕ್ರಮವೊಂದರಲ್ಲಿ ವಿಶೇಷ ಅತಿಥಿಗಳಾಗಿ ಜಾನ್ ಮತ್ತು ಲೊರೆನಾ  ಕಾಣಿಸಿಕೊಂಡರು. ಈ ವೇಳೆ ಜಾನ್ ಸಾರ್ವಜನಿಕವಾಗಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದರು. ಅಲ್ಲದೆ ಈಗಲೂ ತಾನು ಲೊರೆನಾಳನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಲವ್ ​- ಸೆಕ್ಸ್- ದೋಖಾ: ಕೆಲಸ ಮುಗಿದ ಮೇಲೆ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹರಿಬಿಟ್ಟ ಮಾಜಿ ಪ್ರಿಯತಮ..!

ಈ ಪ್ರಕರಣ ಮೇಲೆ ಅನೇಕ ಹಾಸ್ಯದ ಕಾರ್ಯಕ್ರಮಗಳು ಸೃಷ್ಟಿಯಾದವು. ಇದನ್ನೇ ಮೂಲವಾಗಿಸಿ ಕೆಲ ಜಾಹೀರಾತುಗಳು ಮೂಡಿ ಬಂದವು. ಅನೇಕ ಸಿನಿಮಾದಲ್ಲಿ ಈ ಘಟನೆಯನ್ನು ಕೇಂದ್ರವಾಗಿಸಿ ಚಿತ್ರಕಥೆಯನ್ನು ಹೆಣೆಯಲಾಯಿತು. ಅಲ್ಲದೆ ಈ ರೀತಿಯ ಘಟನೆಗೆ ವೈದ್ಯಲೋಕ 'ಬಾಬ್ಬಿಟಿಸ್' ಎಂದು ಹೆಸರನ್ನಿಟ್ಟಿತು. ಏಕೆಂದರೆ ಈ ಘಟನೆ ನಡೆದಾಗ ಜಾನ್​ನ ಸರ್​ನೇಮ್ ಬಾಬಿಟ್ ಆಗಿತ್ತು. ಇದೀಗ ಅಮೆರಿಕದಲ್ಲಿ ಇಂತಹ ಘಟನೆಗಳು ಸಂಭವಿಸಿದರೆ ಬಾಬ್ಬಿಟಿಸ್ ಎಂಬ ಪದದಿಂದ ಇಡೀ ಪ್ರಕರಣವನ್ನು ಗುರುತಿಸಲಾಗುತ್ತದೆ.
First published:November 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ