ಲವ್​ - ಸೆಕ್ಸ್​- ದೋಖಾ: ಪ್ರಿಯತಮನ ಮನೆಗೆ ಹೋದವಳು ಅಸ್ಥಿಪಂಜರವಾಗಿದ್ದಳು..!

ಪ್ರೀತಿ ಪ್ರೇಮ ಪ್ರಣಯ ಹೀಗೆ ಮುಂದುವರೆದಿತ್ತು. ಅದೊಂದು ದಿನ ನೊಯೆಲ್ ತನ್ನ ಮನೆಗೆ ಶಾಲಿನಿಯನ್ನು ಆಹ್ವಾನಿಸಿದ್ದನು. ಮೊದಲೇ ಮೂಡಿದ್ದ ಪ್ರೀತಿ, ಅದರಲ್ಲಿದ್ದ ರೋಮ್ಯಾಂಟಿಕ್ ಭಾವನೆಗಳು  ನೊಯೆಲ್​ನ ಕೋರಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು.

zahir | news18
Updated:November 9, 2018, 8:21 PM IST
ಲವ್​ - ಸೆಕ್ಸ್​- ದೋಖಾ: ಪ್ರಿಯತಮನ ಮನೆಗೆ ಹೋದವಳು ಅಸ್ಥಿಪಂಜರವಾಗಿದ್ದಳು..!
ಪ್ರೀತಿ ಪ್ರೇಮ ಪ್ರಣಯ ಹೀಗೆ ಮುಂದುವರೆದಿತ್ತು. ಅದೊಂದು ದಿನ ನೊಯೆಲ್ ತನ್ನ ಮನೆಗೆ ಶಾಲಿನಿಯನ್ನು ಆಹ್ವಾನಿಸಿದ್ದನು. ಮೊದಲೇ ಮೂಡಿದ್ದ ಪ್ರೀತಿ, ಅದರಲ್ಲಿದ್ದ ರೋಮ್ಯಾಂಟಿಕ್ ಭಾವನೆಗಳು  ನೊಯೆಲ್​ನ ಕೋರಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು.
zahir | news18
Updated: November 9, 2018, 8:21 PM IST
-ನ್ಯೂಸ್ 18 ಕನ್ನಡ

ಸಾಮಾಜಿಕ ಜಾಲತಾಣದ ಲವ್​ಸ್ಟೋರಿಗಳು ಹಳತಾಯಿತು. ಇದೀಗೆನಿದ್ದರೂ ಡೇಟಿಂಗ್ ಆ್ಯಪ್​ ಮೂಲಕ ಶುರುವಾಗುವ ಸಂಬಂಧಗಳೇ ಸುದ್ದಿಯಾಗುವುದು. ಶಾಲಿನಿ ಜೀವನದಲ್ಲೂ ನಡೆದಿದ್ದೂ ಕೂಡ ಅದೇ ಕಥೆ. ಡೇಟಿಂಗ್ ಅಪ್ಲಿಕೇಶನ್ ಮೂಲಕ ಪ್ರೀತಿ ಪ್ರೇಮ ಎಂದು ಸುತ್ತಾಡಿದ್ದಳು. ಆದರೆ ಸಂಬಂಧ ಗಟ್ಟಿಗೊಳ್ಳುವ ಮುನ್ನವೇ ಶಾಲಿನಿಯ ಅವಶೇಷಗಳು ಮಾತ್ರ ದೊರೆಯಿತು ಎಂಬುದು ನಗ್ನ ಸತ್ಯ.

ಹದಿಹರೆಯದಲ್ಲಿವ  ಆಕರ್ಷಣೆ ಮತ್ತು ಚಂಚಲತೆ ಶಾಲಿನಿ ಜೀವನದಲ್ಲೂ ಇತ್ತು. ಸದಾ ಇಂಟರ್ನೆಂಟ್ ಬಳಸುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಅಷ್ಟೇನು ಸಕ್ರೀಯವಾಗಿರಲಿಲ್ಲ. ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದ ಶಾಲಿನಿ ಮೆಕ್ಸಿಕೋ ನಗರದಲ್ಲಿ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಹೊಸ ದೇಶದಲ್ಲಿ ಅಂತಹ ಫ್ರೆಂಡ್ಸ್​ಗಳಿಲ್ಲದಿದ್ದರೂ, ಕೆಲ ಗೆಳೆಯ ಗೆಳೆತಿಯರನ್ನು ಆರಿಸಿಕೊಳ್ಳುವ ಚಾಕಚಕ್ಯತೆ ಶಾಲಿನಿಯಲ್ಲಿತ್ತು. ಹೀಗೆ ತನಗೆ ಬೇಕಾದಂತೆ ಖಾಸಾ ದೋಸ್ತ್​ಗಳನ್ನು ಆಯ್ದುಕೊಂಡಿದ್ದಳು. ಅಲ್ಲದೆ ಈ ನಡುವೆ ಹೊಸ ಗೆಳೆಯನನ್ನು ಕೂಡ ಶಾಲಿನಿ ಆರಿಸಿಕೊಂಡಿದ್ದಳು. ಅದೂ ಕೂಡ ಟಿಂಡೆಂರ್ ಎಂಬ ಡೇಟಿಂಗ್ ಆ್ಯಪ್ ಮೂಲಕ.

ಹೊಸ ಗೆಳೆಯ, ಹೊಸ ಪರಿಚಯ

ನೋಯೆಲ್, 26 ವರ್ಷದ ಸ್ಫುರ ದ್ರೂಪಿ ವೈದ್ಯಕೀಯ ವಿದ್ಯಾರ್ಥಿ. ಅದಕ್ಕಿಂತ ಹೆಚ್ಚಾಗಿ ಶಾಲಿನಿಯ ಕೆಲ ಗೆಳೆತಿಯರ ಸ್ನೇಹಿತ. ಟಿಂಡೆಂರ್ ಮೂಲಕ ಪರಿಚಯವಾದ ಇವರ ಸ್ನೇಹ ಶೀಘ್ರದಲ್ಲೇ ಫ್ರೆಂಡ್ಸ್​ ರೂಪ ಪಡೆದುಕೊಂಡಿತು. ದಿನನಿತ್ಯದ ಚಾಟಿಂಗ್, ಕಾಲೇಜ್ ಜೀವನ ಹರಟೆ ಹೀಗೆ ರಾತ್ರಿ ಬೆಳಿಗ್ಗೆ ಎನ್ನದೇ ವಿಷಯಗಳ ವಿನಿಮಯವಾಗುತ್ತಿತ್ತು.

ಇಬ್ಬರೂ ಮೆಕ್ಸಿಕೋ ನಗರದಲ್ಲೇ ಇದ್ದ ಕಾರಣ ಭೇಟಿ ಕೂಡ ತುಂಬಾ ಸುಲಭವಾಗಿತ್ತು. ಹಾಗೆಯೇ ಭೇಟಿಯಾಗಲು ಆರಂಭಿಸಿದರು. ಇಬ್ಬರ ಅಭಿರುಚಿಯಲ್ಲಿ ಒಂದೇ ರೀತಿ ಕಾರಣ ಮತ್ತಷ್ಟು ಹತ್ತಿರವಾದರು. ಈ ಸಾಮಿಪ್ಯವೇ ನೊಯೆಲ್​ಗೆ ಶಾಲಿನಿ ಮೇಲೆ ಪ್ರೀತಿ ಮೂಡುವಂತೆ ಮಾಡಿತು. ತನ್ನ ಪ್ರೇಮ ನಿವೇದನೆಯನ್ನು ಶಾಲಿನಿಗೆ ಪ್ರಸ್ತಾಪಿಸಿದನು. ಮೊದಲೇ ನೊಯೆಲ್​ ಎಂಬ ಸ್ಫುರದ್ರೂಪಿಯನ್ನು ಮೆಚ್ಚಿದ್ದ ಶಾಲಿನಿಗೆ ನೋ ಎನ್ನಲು ಕಾರಣಗಳಿರಲಿಲ್ಲ. ಹೀಗಾಗಿ ಡೇಟಿಂಗ್​ಗೆ ಒಪ್ಪಿಗೆ ನೀಡಿದ್ದಳು. ಜೊತೆಯಾಗಿಯೇ ನಗರದ ಪ್ರಮುಖ ಪಬ್ ಕ್ಲಬ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಆತ್ಮೀಯತೆ ಚುಂಬನ ಮತ್ತು ಅಪ್ಪುಗೆಗೆ ಮಾತ್ರ ಸೀಮಿತವಾಗಿಟ್ಟಿದ್ದರು ಶಾಲಿನಿ.

ಆದರೆ ನೊಯೆಲ್ ಮನದಲ್ಲಿರುವ ಪ್ರೇಮ ಅದಾಗಲೇ ಕಾಮದ ರೂಪಕ್ಕೆ ತಿರುಗಿತ್ತು. ರಾತ್ರಿ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಸೆಕ್ಸ್​ ಕುರಿತಾದ ವಿಷಯಗಳನ್ನು ಪ್ರಸ್ತಾಪಿಸಲು ಪ್ರಾರಂಭಿಸಿದನು. ಆದರೆ ಅದೆಲ್ಲವೂ ರೋಮ್ಯಾಂಟಿಕ್ ರೂಪದಲ್ಲಿದ್ದ ಕಾರಣ ಶಾಲಿನಿ ಕೂಡ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಫೋನಿನಲ್ಲಿ ಏನೇ ಮಾತನಾಡಿದರೂ ಭೇಟಿಯಾದಾಗ ಮಾತ್ರ ನೊಯೆಲ್ ತುಂಬಾ ಸಭ್ಯನಾಗಿರುತ್ತಿದ್ದ. ಇದರಿಂದ ತನ್ನ ಪಾರ್ಟನರ್ ಮನಸ್ಸಿನಲ್ಲಿ ಕೆಟ್ಟ ಭಾವನೆಗಳಿಲ್ಲ ಎಂದೇ ಶಾಲಿನಿ ಭಾವಿಸಿದ್ದಳು.
Loading...

ಪ್ರೇಮ ಕಾಮದ ರೂಪ ಪಡೆದಾಗಿತ್ತು..!

ಪ್ರೀತಿ ಪ್ರೇಮ ಪ್ರಣಯ ಹೀಗೆ ಮುಂದುವರೆದಿತ್ತು. ಅದೊಂದು ದಿನ ನೊಯೆಲ್ ತನ್ನ ಮನೆಗೆ ಶಾಲಿನಿಯನ್ನು ಆಹ್ವಾನಿಸಿದ್ದನು. ಮೊದಲೇ ಮೂಡಿದ್ದ ಪ್ರೀತಿ, ಅದರಲ್ಲಿದ್ದ ರೋಮ್ಯಾಂಟಿಕ್ ಭಾವನೆಗಳು  ನೊಯೆಲ್​ನ ಕೋರಿಕೆಯನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ತನ್ನ ಸ್ನೇಹಿತೆಯರೊಂದಿಗೆ ಸಿನಿಮಾಗೆ ಹೋಗುವ ಪ್ಲಾನ್​ನ್ನು ಮುಂದೂಡಿದ ಶಾಲಿನಿ ನೊಯೆಲ್ ಮನೆಗೆ ತೆರಳಿದ್ದಳು. ಆದರೆ ಬಾಯ್​ಫ್ರೆಂಡ್​ನ್ನು ಭೇಟಿಯಾಗಿ ಚಿತ್ರಮಂದಿರಕ್ಕೆ ಬರುವುದಾಗಿ ತನ್ನ ಗೆಳೆತಿಗೆ ತಿಳಿಸಿದ್ದಳು. ಆದರೆ ಇದ್ಯಾವ ವಿಷಯ ಕೂಡ ನೊಯೆಲ್​ಗೆ ಗೊತ್ತಿರಲಿಲ್ಲ.

ತನ್ನ ಪ್ರಿಯತಮೆ ಬರುತ್ತಿದ್ದಂತೆ ನೋಯೆಲ್ ತುಂಬು ಹೃದಯದಿಂದ ಮನೆಯೊಳಗೆ ಸ್ವಾಗತಿಸಿದಳು. ಕುಡಿಯಲು ಕಾಫಿ ನೀಡಿದ ನೋಯೆಲ್ ಶಾಲಿನಿಯನ್ನು ತನ್ನ ಕೊಠಡಿಗೆ ಕರೆದುಕೊಂಡು ಹೋದನು. ಅಲ್ಲೇ ಕೂತು ಮಾತುಕತೆ ಆರಂಭಿಸಿ ನಿಧಾನಕ್ಕೆ ಮನದ ಇಂಗಿತವನ್ನು ವ್ಯಕ್ತಪಡಿಸಿದನು. ಶಾಲಿನಿಯನ್ನು​ ಲೈಂಗಿಕ ಸಂಬಂಧಕ್ಕಾಗಿ ನೊಯೆಲ್ ಕರೆಸಿಕೊಂಡಿದ್ದನು. ಆದರೆ ಅದಕ್ಕೆ ಒಪ್ಪಲು ಮಾತ್ರ ಶಾಲಿನಿ ತಯಾರಿರಲಿಲ್ಲ. ತನ್ನ ಪ್ರಿಯತಮನಿಗೆ ಅರ್ಥ ಮಾಡಿಸಲು ಶಾಲಿನಿ ಪ್ರಯತ್ನಿಸಿದಳು. ಆದರೆ ಇಂತಹದೊಂದು ಅವಕಾಶವನ್ನು ಮಿಸ್ ಮಾಡಬಾರದೆಂದು ನೊಯೆಲ್ ತನ್ನ ಗೆಳೆತಿಯ ಮನವೊಲಿಸಲು ಮುಂದಾದನು. ನೊಯೆಲ್ ಏನೇ ಹೇಳಿದರೂ ಶಾಲಿನಿ ಮಾತ್ರ ವಿವಾಹ ಪೂರ್ವ ಸಂಬಂಧಕ್ಕೆ ಸುತಾರಂ ತಯಾರಿರಲಿಲ್ಲ.

ಇದರಿಂದ ಒತ್ತಾಯಪೂರ್ವಕ ಲೈಂಗಿಕ ಬಂಧಕ್ಕೆ ನೊಯೆಲ್ ಮುಂದಾದ. ಮೊದಲೇ ಸಿಟ್ಟಾಗಿದ್ದ ಶಾಲಿನಿ ನೊಯೆಲ್​ನೊಂದಿಗೆ ತಿರುಗಿ ಬಿದ್ದಳು. ಅಲ್ಲದೆ ತನ್ನ ಮುಟ್ಟದಂತೆ ಆಕ್ರೋಶ ವ್ಯಕ್ತಪಡಿಸಿದಳು. ನೊಯೆಲ್ ಮಾತ್ರ ತನ್ನ ತೀರ್ಮಾನದಿಂದ ಹಿಂದೆ ಸರಿಯುವ ಮೂಡ್​ನಲ್ಲಿರಲಿಲ್ಲ. ಪ್ರೇಮ ಕಾಮದ ರೂಪಕ್ಕೆ ಇಳಿದಿತ್ತು. ಶಾಲಿನಿ ಮೇಲೆ ಅತ್ಯಾಚಾರ ಎಸೆಗುವ ಮನಸ್ಥಿತಿಯಲ್ಲಿ ನೊಯೆಲ್ ಇದ್ದ. ಮೈ ಮೇಲೆ ಕೈ ಹಾಕುತ್ತಿದ್ದ ನೊಯೆಲ್ ಮೇಲೆ ಶಾಲಿನಿ ಸಂಪೂರ್ಣ ಕುಪಿತಗೊಂಡಳು. ತನ್ನ ಶಕ್ತಿಯನ್ನೆಲ್ಲಾ ಸೇರಿಸಿ ದೂಡಿದಳು. ಅಲ್ಲೇ ಪಕ್ಕದಲ್ಲಿದ್ದ ಹೂದಾನಿಯಿಂದ ನೊಯೆಲ್ ಮೇಲೆ ಹಲ್ಲೆ ಮಾಡಿ, ತನ್ನ ಉಡುಪುಗಳನ್ನು ಸರಿಪಡಿಸಿಕೊಂಡಳು.

ರೂಮ್​ನಿಂದ ಹೊರ ನಡೆಯುವ ಪ್ರಯತ್ನದಲ್ಲಿದ್ದ ಶಾಲಿನಿಯನ್ನು ಮತ್ತೆ ಎಳೆದುಕೊಳ್ಳುವ ಪ್ರಯತ್ನ ಮಾಡಿದನು. ಆದರೆ ಈ ಬಾರಿ ಶಾಲಿನಿ ದೂಡಿದಾಗ ನೊಯೆಲ್ ಕೆಳಗೆ ಬಿದ್ದು ಬಿಟ್ಟಿದ್ದ. ಅಲ್ಲೇ ಕೆಳಗಿದ್ದ ಜಿಮ್ ಡಂಬಲ್ಸ್​ ತೆಗೆದು ಶಾಲಿನಿಯ ತಲೆಗೆ ಹೊಡೆದೇ ಬಿಟ್ಟಿದ್ದಾನೆ.  ಶಾಲಿನಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಳು. ಇನ್ನೇನು ತನ್ನ ಕಾರ್ಯ ಸಾಧಿಸಲು ಶಾಲಿನಿಯನ್ನು ಮಂಚದ ಮೇಲೆ ಮಲಗಿಸಿದ​. ವಿವಸ್ತ್ರಗೊಳಿಸಿದರೂ ಶಾಲಿನಿ ಪ್ರತಿರೋಧ ತೋರದಿದ್ದ ಕಾರಣ ನೊಯೆಲ್ ಸಂಶಯಗೊಂಡ.

ತಾನು ಹೊಡೆದ ಏಟಿಗೆ ಶಾಲಿನಿಯ ಪ್ರಾಣ ಪಕ್ಷಿ ಹಾರಿಹೋಗಿರುವುದು ಈ ವೇಳೆ ಗೊತ್ತಾಯಿತು. ಭಯಭೀತಿಯಿಂದ ನೊಯೆಲ್ ಮುಂದೇನು ಎಂದು ತಿಳಿಯದೇ ಚಿಂಚಿತನಾದನು. ತಾನು ಕೊಲೆಗಾರನಾಗಿರುವುದು ಆಗಲೇ ನೊಯೆಲ್ ಅರಿವಿಗೆ ಬಂದಿತ್ತು. ಹೀಗಾಗಿ ಈ ಕೊಲೆಯ ಸಾಕ್ಷಿಯನ್ನು ನಾಶಪಡಿಸಲು ಯೋಜನೆ ರೂಪಿಸಿದನು. ತನ್ನ ವೈದ್ಯಕೀಯ ಬುದ್ದಿಯನ್ನೇ ಇಲ್ಲೂ ಕೂಡ ಬಳಸಿದ. ಮೊದಲು ಶಾಲಿನಿಯ ಮೊಬೈಲ್ ಸ್ವಿಚ್ ಆಫ್ ಮಾಡಿದ ನೊಯೆಲ್ ದೇಹವನ್ನು ಇಲ್ಲದಾಗಿಸಲು ಸಕಲ ತಯಾರಿಯಲ್ಲಿ ತೊಡಗಿದನು.

ಇದಕ್ಕಾಗಿ ಮನೆಯ ಮೇಲಿರುವ ಒಂದು ಟ್ಯಾಂಕ್​ನಲ್ಲಿ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೋಕ್ಲೀರಿಕ್ ಸೇರಿಸಿ ಅಪಾಯಕಾರಿ ಆ್ಯಸಿಡ್​ನ್ನು ತಯಾರಿಸಿದ. ನಂತರ ಶಾಲಿನಿಯ ದೇಹವನ್ನು ತುಂಡು ತುಂಡಾಗಿಸಿ ಆ್ಯಸಿಡ್​ ಟ್ಯಾಂಕ್​ನಲ್ಲಿ ಹಾಕಿದನು. ಬಳಿಕ ರಕ್ತ ಕಲೆಗಳನ್ನು ಸ್ವಚ್ಛಗೊಳಿಸುವ ಪ್ರಯತ್ನ ಮಾಡಿದ. ಹೆದರಿ ವಿಚಲಿತನಾಗಿದ್ದ ನೊಯೆಲ್,​ ಶಾಲಿನಿಯ ದೇಹವು ಸಂಪೂರ್ಣ ಕರಗಲು ಕಾಯುತ್ತಿದ್ದನು. ಇದಾದ ಬಳಿಕ ಉಳಿದ ದೇಹವಶೇಷವನ್ನು ದೂರದಲ್ಲಿ ಹೋಗಿ ಎಸೆಯುವ ಪ್ಲಾನ್​ ರೂಪಿಸಿದ್ದ. ಶಾಲಿನಿ ಬಂದಿದ್ದಾಳೆ ಎಂದು ಗುರುತು ಸಿಗದಿರಲು ಅವಳ ಬಟ್ಟೆಗಳನ್ನು ಒಂದು ಕವರ್​ನಲ್ಲಿ ತುಂಬಿಸಿ ಅದೆಲ್ಲವನ್ನು ಎಸೆಯಲು ಸೂಕ್ತ ಸ್ಥಳದ ಹುಡುಕಾಟಕ್ಕಾಗಿ ಮನೆಯಿಂದ  ಹೊರ ಹೋದನು. ಇತ್ತ ಕಡೆ ಶಾಲಿನಿಯ ಸ್ನೇಹಿತೆಯರು ಚಿತ್ರಮಂದಿರದಲ್ಲಿ ಕಾಯುತ್ತಿದ್ದರು. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಎಷ್ಟೇ ಪ್ರಯತ್ನಿಸಿದರೂ ಸಂಪರ್ಕಕ್ಕೆ ಮಾತ್ರ ಸಿಗುತ್ತಿರಲಿಲ್ಲ.

ಇದರಿಂದ ಭಯಗೊಂಡ ಗೆಳೆತಿಯರು ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದರು. ಕುಟಂಬದವರು ಹಲವರನ್ನು ಸಂಪರ್ಕಿಸಿದರೂ ಶಾಲಿನಿಯ ಸುಳಿವು ಮಾತ್ರ ದೊರೆತಿರಲಿಲ್ಲ. ಈ ಸಂದರ್ಭದಲ್ಲಿ ಶಾಲಿನಿಯ ಡೇಟಿಂಗ್ ಪಾರ್ಟನರ್​ನನ್ನು ವಿಚಾರಿಸುವಂತೆ ಗೆಳೆತಿಯೊಬ್ಬಳು ಸೂಚಿಸಿದಳು. ಆದರೆ ಅದಾಗಲೇ ನೊಯೆಲ್ ತನ್ನ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದನು. ಇದರಿಂದ ಸಂಶಯ ಕೂಡ ಹೆಚ್ಚಾಯಿತು. ಮೆಕ್ಸಿಕೊ ಪೊಲೀಸರಿಗೆ ದೂರು ನೀಡಿದರು. ಅದರಂತೆ ಕ್ರೈಂ ಪೊಲೀಸರು ನೊಯೆಲ್ ಮನೆಯನ್ನು ಪರಿಶೀಲಿಸಿದರು. ಆ್ಯಸಿಡ್ ಟ್ಯಾಂಕ್, ಶಾಲಿನಿ ಉಡುಪುಗಳು ಅಲ್ಲಿ ಸಿಕ್ಕವು. ಪೊಲೀಸರಿಗೆ ಶಾಲಿನಿ ಹತ್ಯೆಯಾಗಿರುವುದು ಕನ್ಫರ್ಮ್ ಆಗಿತ್ತು. ಆ್ಯಸಿಡ್​ನಿಂದ ದೇಹವನ್ನು ಹೊರ ತೆಗೆಯುವ ಪ್ರಯತ್ನ ಮಾಡಿದರು. ಆದರೆ ಅಸ್ಥಿಪಂಜರ ಹೊರತುಪಡಿಸಿ ಬೇರೇನೂ ಉಳಿದಿರಲಿಲ್ಲ. ಮತ್ತೊಂದು ತಂಡ ಆರೋಪಿ ನೊಯೆಲ್​ಗಾಗಿ ಬಲೆ ಬೀಸಿದ್ದರು. ಸತತ ಮೂರು ಗಂಟೆಗಳ ಕಾರ್ಯಾಚರಣೆಯಿಂದ ನೊಯೆಲ್​ನನ್ನು ಬಂಧಿಸಲು ಮೆಕ್ಸಿಕೊ ಪೊಲೀಸರು ಯಶಸ್ವಿಯಾದರು. ತಾನೇ ನಂಬಿ ಪ್ರೀತಿಸಿದ ಪ್ರಿಯತಮ ಕೊಲೆಗೈದು ಜೈಲು ಪಾಲಾದರೆ, ಟಿಂಡೆಂರ್​ನಲ್ಲಿರುವ ಶಾಲಿನಿ ಖಾತೆ ಒಂದು ಲವ್ ಸೆಕ್ಸ್​ ದೋಖಾ ಕಹಾನಿಗೆ ಸಾಕ್ಷಿಯಾಗಿ ಉಳಿಯಿತು.
First published:November 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ