ಅತಿಯಾದ ಪೊಸೆಸಿವ್​ನೆಸ್​ ಕೂಡ ಪ್ರೀತಿಗೆ ಮುಳ್ಳಾಗಬಹುದು!

ನಿಮ್ಮ ಪ್ರತಿಯೊಂದು ವಿಚಾರವನ್ನೂ ಆತ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾನೆ, ನಿಮ್ಮ ಮೇಲೆ ಅನುಮಾನ ಪಡುತ್ತಿದ್ದಾನೆ ಎನಿಸಿದಾಗ ವಿರೋಧಿಸುವುದು ಉತ್ತಮ. ನಿಮಗಿಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದುವುದು, ಬ್ಲ್ಯಾಕ್​ಮೇಲ್ ಮಾಡುವುದು ಕೂಡ ದೌರ್ಜನ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • RedWomb
 • Last Updated :
 • Share this:
  ಅವಳ ಹೆಸರು ಶಾಲಿನಿ (ಹೆಸರು ಬದಲಿಸಲಾಗಿದೆ). ತನ್ನ ಊರಿನಿಂದ ಶಾಲೆಗೆ ನಡೆದೇ ಹೋಗಬೇಕಾಗಿತ್ತು. ಆಕೆಯ ಶಾಲೆಗೇ ಬರುತ್ತಿದ್ದ ಅರುಣ್ (ಹೆಸರು ಬದಲಾಯಿಸಲಾಗಿದೆ) ಶಾಲಿನಿಯನ್ನು ಹಿಂಬಾಲಿಸುತ್ತಿದ್ದ. ನಂತರ ಟ್ಯೂಷನ್ ಕ್ಲಾಸಿಗೂ ಆತ ಆಕೆಯನ್ನು ಹಿಂಬಾಲಿಸತೊಡಗಿದೆ. ಇದನ್ನು ನೋಡಿದ ಶಾಲಿನಿಯ ಸ್ನೇಹಿತರು ಆಕೆಯನ್ನು ರೇಗಿಸುತ್ತಿದ್ದರು. ಅದನ್ನು ಕೇಳಿ ಶಾಲಿನಿಗೂ ಆತನ ಬಗ್ಗೆ ವಿಶೇಷವಾದ ಆಸಕ್ತಿ ಬೆಳೆಯತೊಡಗಿತ್ತು. ಒಂದು ದಿನ ಅರುಣ್ ಶಾಲಿನಿಗೆ ಐ ಲವ್ ಯೂ ಎಂದು ಬರೆದ ಪತ್ರವೊಂದನ್ನು ಕೊಟ್ಟ. ಅರುಣ್ ಶಾಲಿನಿ ವಿಚಾರದಲ್ಲಿ ಹುಚ್ಚನಾಗಿದ್ದ.

  ಅರುಣ್ ನೀಡಿದ ಪ್ರಪೋಸ್ ಅನ್ನು ಶಾಲಿನಿ ಒಪ್ಪಿಕೊಂಡಿದ್ದಕ್ಕೆ ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಕೆ ಬೇರೆ ಯಾರದ್ದಾದರೂ ಜೊತೆ ಮಾತನಾಡಿದರೆ ಅರುಣ್​ಗೆ ಬಹಳ ಬೇಗ ಕೋಪ ಬರುತ್ತಿತ್ತು. ಆಕೆಯ ಫೋನಿಗೆ ಯಾವುದಾದರೂ ಹುಡುಗರು ಮೆಸೇಜ್ ಮಾಡಿದ್ದಾರಾ? ಎಂದು ದಿನವೂ ಚೆಕ್ ಮಾಡುತ್ತಿದ್ದ. ಬೇರೆಯವರ ಜೊತೆ ಸಮಯ ಕಳೆದರೆ ಕೋಪಿಸಿಕೊಳ್ಳುತ್ತಿದ್ದ. ಆಕೆಯ ಬಗ್ಗೆ ಆತ ತುಂಬ ಪೊಸೆಸಿವ್ ಆಗಿದ್ದ. ಇದಕ್ಕೆ ಛೇಡಿಸುತ್ತಿದ್ದ ಸ್ನೇಹಿತೆಯರು ನೀನೆಷ್ಟು ಅದೃಷ್ಟವಂತೆ, ಆತ ನಿನ್ನ ಬಗ್ಗೆ ಎಷ್ಟು ಕೇರ್ ತಗೋತಾನೆ ಎಂದು ಹೇಳುತ್ತಿದ್ದರು.

  ಇದನ್ನೂ ಓದಿ: 105ನೇ ವಯಸ್ಸಿನಲ್ಲಿ 4ನೇ ಕ್ಲಾಸ್​ ಪಾಸಾದ ಕೇರಳದ ಅಜ್ಜಿ; ಶತಾಯುಷಿಯ ಅಂಕ ನೋಡಿದರೆ ಅಚ್ಚರಿ ಪಡ್ತೀರ!

  ಆದರೆ, ಆ ಪೊಸೆಸಿವ್​ನೆಸ್​ ಎಷ್ಟು ಹಿಂಸೆ ನೀಡುತ್ತದೆ ಎಂಬುದು ಶಾಲಿನಿಗೆ ಮಾತ್ರ ಗೊತ್ತಿತ್ತು. ಆತನ ಯಾವ ವಿಚಾರಕ್ಕೆ ತನ್ನ ಮೇಲೆ ಕೂಗಾಡುತ್ತಾನೆ ಎಂಬುದು ಆಕೆಗೂ ಗೊತ್ತಾಗುತ್ತಿರಲಿಲ್ಲ. ಎಲ್ಲರೊಂದಿಗೆ ಬೆರೆತು, ಖುಷಿ ಖುಷಿಯಾಗಿದ್ದ ಶಾಲಿನಿ ಬರುಬರುತ್ತಾ ಒಂಟಿಯಾಗಿರತೊಡಗಿದಳು. ರಾತ್ರಿ ಮಲಗಿದ್ದಾಗಲೂ ಆತ ಕೂಗಾಡಿದಂತೆ ಕನಸು ಬಿದ್ದು ಎದ್ದು ಕೂತು ಅಳುತ್ತಿದ್ದಳು. ಇಂತಹ ಸಮಯದಲ್ಲಿ ತಮ್ಮ ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಳ್ಳಲಾಗದೆ, ಸ್ನೇಹಿತರ ಜೊತೆಗೂ ಇಂತಹ ವಿಚಾರವನ್ನು ಚರ್ಚಿಸಲಾಗದೆ ಆಕೆ ಪರದಾಡುತ್ತಿದ್ದಳು. ಈ ರೀತಿಯ ಪೊಸೆಸಿವ್​ನೆಸ್​ ಇರುವವರನ್ನು ಮದುವೆಯಾದರೆ ಮುಂದೆ ಮದುವೆಯಾದಮೇಲೂ ಬಹಳ ಕಷ್ಟವಾಗುತ್ತದೆ ಎಂಬುದು ಆಕೆಗೆ ಅರ್ಥವಾಗತೊಡಗಿತ್ತು. ಹಾಗಂತ ಅರುಣ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ಶಾಲಿನಿಗೆ ಧೈರ್ಯವಿರಲಿಲ್ಲ.

  ಇದನ್ನೂ ಓದಿ: ಚೀನಾದಿಂದ ಬಂದ ವರನನ್ನೇ ಬಿಟ್ಟು ಮಗಳ ಮದುವೆ ರಿಸೆಪ್ಷನ್ ನಡೆಸಿದ ಕೇರಳ ಕುಟುಂಬ!

  ತೀರಾ ಪೊಸೆಸಿವ್ ಆಗಿ ವರ್ತಿಸುವುದು ಕೂಡ ಮಾನಸಿಕ ಹಿಂಸೆಯೇ ಆಗುತ್ತದೆ. ಹೀಗಿದ್ದಾಗ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ. ನಿಮ್ಮ ಪ್ರತಿಯೊಂದು ವಿಚಾರವನ್ನೂ ಆತ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾನೆ, ನಿಮ್ಮ ಮೇಲೆ ಅನುಮಾನ ಪಡುತ್ತಿದ್ದಾನೆ ಎಂದೆನಿಸಿದಾಗ ಕಾಂಪ್ರಮೈಸ್ ಆಗುವುದರ ಬದಲು ವಿರೋಧಿಸುವುದು ಉತ್ತಮ. ಬೇರೆಯವರ ಮುಂದೆ ನಿಮ್ಮನ್ನು ಟೀಕಿಸುವುದು, ಅವಹೇಳನ ಮಾಡುವುದು, ದೈಹಿಕ ಹಲ್ಲೆ ನಡೆಸುವುದು ಕೂಡ ಮಾನಸಿಕ ಕಿರುಕುಳವೇ.

  ಇದನ್ನೂ ಓದಿ: ಕೊರೋನಾ ವೈರಸ್​​ನಿಂದ ಆಸ್ಪತ್ರೆ ಸೇರಿದ ಅಪ್ಪ; ಹಸಿವಿನಿಂದ ಕುಳಿತಲ್ಲೇ ಶವವಾದ ಮಗ!

  ಆ ಬಟ್ಟೆ ಧರಿಸಬೇಡ, ಅವರೊಂದಿಗೆ ಹೋಗಬೇಡ, ಇವರೊಂದಿಗೆ ಕೂರಬೇಡ ಎಂದು ನಿರ್ಬಂಧ ವಿಧಿಸುವುದು ಕೂಡ ತಪ್ಪು. ಇದರಿಂದ ಬೇರೆಯವರ ಮುಂದೆ ನೀವು ಮುಜುಗರಕ್ಕೆ ಈಡಾದಂತಾಗುತ್ತದೆ. ನಿಮಗಿಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಬಂಧ ಹೊಂದುವುದು, ಬ್ಲ್ಯಾಕ್​ಮೇಲ್ ಮಾಡುವುದು ಕೂಡ ದೌರ್ಜನ್ಯ. ಇಂಥದ್ದೇನಾದರೂ ನಡೆದಾಗ ಸುಮ್ಮನಿರುವ ಬದಲು ಅವರಿಗೆ ತಿಳಿಹೇಳಿ. ಆದರೂ ಕೇಳದಿದ್ದರೆ ಅಂಥವರನ್ನು ನಿರ್ಲಕ್ಷಿಸುವುದು ಉತ್ತಮ.
  First published: