ನಿಮ್ಮ ಬಿಪಿ, ಹೃದಯದ ಬಡಿತ ಕಾಫಿ ಮೇಲಿನ ಆಸೆಯನ್ನು ಪ್ರಚೋದಿಸುತ್ತದೆ; ಸಂಶೋಧನೆಯಿಂದ ಬಹಿರಂಗ

ಅತಿ ರಕ್ತದೊತ್ತಡ, ಎದೆ ನೋವು, ಅಸಹಜ ಹೃದಯ ಬಡಿತದ ಸಮಸ್ಯೆ ಹೊಂದಿರುವವರು, ಕೆಫೀನ್ ರಹಿತ ಕಾಫಿ ಸೇವನೆಗೆ ಆದ್ಯತೆ ನೀಡುತ್ತಾರೆ ಇಲ್ಲವೇ ಅದನ್ನು ಬಿಟ್ಟು ಬಿಡುತ್ತಾರೆ. ಈ ರೀತಿ ಆರೋಗ್ಯ ಸಮಸ್ಯೆ ಇಲ್ಲದವರು ಕಾಫಿ ಸೇವಿಸುತ್ತಾರೆ ಎಂದು ಸಂಶೋಧನೆಯಿಂದ ಅಧ್ಯಯನ ಲೇಖಕರು ಕಂಡುಕೊಂಡಿದ್ದಾರೆ.

ಕಾಫಿ

ಕಾಫಿ

 • Share this:
  ಬ್ಲ್ಯಾಕ್ ಕಾಫಿ, ಸ್ಟ್ರಾಂಗ್‌ ಕಾಫಿ, ಸಕ್ಕರೆ ರಹಿತ ಕಾಫಿ, ಗಟ್ಟಿ ಹಾಲಿನ ನೊರೆ ಭರಿತ ಕಾಫಿ...! ಕಾಫಿಯ ವಿಷಯಕ್ಕೆ ಬಂದರೆ ಪ್ರತಿಯೊಬ್ಬರದೂ ವಿಭಿನ್ನ ಆದ್ಯತೆ. ಒಂದು ಲೋಟ ಕಾಫಿ ಕುಡಿಯುವುದು ಅಂದ್ರೆ ಅದು ಸಾಮಾನ್ಯ ಸಂಗತಿ. ಆದರೆ ಇನ್ನು ಕೆಲವರಿಗೆ ದಿನದಲ್ಲಿ 4-5 ಬಾರಿ ಕಾಫಿ ಕುಡಿಯದಿದ್ರೆ ತಲೆನೂ ಓಡಲ್ಲ, ಕೆಲಸವೂ ಆಗಲ್ಲ. ಒಟ್ಟಿನಲ್ಲಿ ಏನೋ ಕಳೆದುಕೊಂಡ ಭಾವ!

  ಇದಕ್ಕೂ ನಮ್ಮ ವಂಶವಾಹಿನಿಗೂ ಏನಾದರೂ ಸಂಬಂಧವಿರಬಹುದೇ ಎಂದು ಅನ್ನಿಸಲೂಬಹುದು. ಅಮೆರಿಕದ ನ್ಯೂಟ್ರಿಷಿಯನ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ನಾವು ಕುಡಿಯುವ ಕಾಫಿಯ ಪ್ರಮಾಣವು ನಮ್ಮ ಆರೋಗ್ಯ ಯಾವ ಹಂತದಲ್ಲಿದೆ ಎನ್ನುವುದರ ಸೂಚಕವಾಗಿರಬಹುದು. ದಕ್ಷಿಣ ಆಸ್ಟ್ರೇಲಿಯ ವಿಶ್ವವಿದ್ಯಾಲಯದ (UniSA) ಸಂಶೋಧಕರು ನಡೆಸಿದ ಅಧ್ಯಯನವು ನಾವು ಸೇವಿಸುವ ಕಾಫಿಯ ಪ್ರಭಾವವು ನಮ್ಮ ಹೃದಯ ರಕ್ತನಾಳದ ಆರೋಗ್ಯದ ಮೇಲೆ ಉಂಟು ಮಾಡುವ ಪ್ರಭಾವವನ್ನು ಗುರುತಿಸಿದೆ. ಯುಕೆ ಬಯೋಬ್ಯಾಂಕ್‌ನ ದತ್ತಾಂಶವನ್ನು ತೆಗೆದುಕೊಂಡು, ಸಂಶೋಧಕರು 390,435 ಜನರ ಕಾಫಿ ಸೇವನೆಯ ಪರಿಣಾಮಗಳನ್ನು ಗುರುತಿಸಿದರು. ಅವರ ರಕ್ತದೊತ್ತಡದ ಮಟ್ಟ ಮತ್ತು ಹೃದಯ ಬಡಿತದೊಂದಿಗೆ ಹೋಲಿಸಿ ನೋಡಲಾಯಿತು.

  ಅತಿ ರಕ್ತದೊತ್ತಡ, ಎದೆ ನೋವು, ಅಸಹಜ ಹೃದಯ ಬಡಿತದ ಸಮಸ್ಯೆ ಹೊಂದಿರುವವರು, ಕೆಫೀನ್ ರಹಿತ ಕಾಫಿ ಸೇವನೆಗೆ ಆದ್ಯತೆ ನೀಡುತ್ತಾರೆ ಇಲ್ಲವೇ ಅದನ್ನು ಬಿಟ್ಟು ಬಿಡುತ್ತಾರೆ. ಈ ರೀತಿ ಆರೋಗ್ಯ ಸಮಸ್ಯೆ ಇಲ್ಲದವರು ಕಾಫಿ ಸೇವಿಸುತ್ತಾರೆ ಎಂದು ಸಂಶೋಧನೆಯಿಂದ ಅಧ್ಯಯನ ಲೇಖಕರು ಕಂಡುಕೊಂಡಿದ್ದಾರೆ.

  ಹುಬ್ಬಳ್ಳಿಯಲ್ಲಿ ಐವರು ಕೋವಿಡ್ ಸೋಂಕಿತರ ಸಾವು; ಆಕ್ಸಿಜನ್​​ ಕೊರತೆಯಿಂದ ದುರಂತ?

  ಅಧ್ಯಯನದ ಪ್ರಮುಖ ಸಂಶೋಧಕ ಮತ್ತು ಯುನಿಸಾದ ಆಸ್ಟ್ರೇಲಿಯಾ ಸೆಂಟರ್ ಫಾರ್ ಪ್ರೆಸಿಷನ್ ಹೆಲ್ತ್‌ನ ನಿರ್ದೇಶಕರಾದ ಎಲಿನಾ ಹಿಪ್ಪೆನೆನ್‌ಗೆ, ಇದು ಸಕಾರಾತ್ಮಕ ವಿಷಯವಾಗಿದ್ದು, ನಮ್ಮ ವಂಶವಾಹಿನಿ ಎಳೆ ನಮ್ಮ ಕಾಫಿ ಸೇವನೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಅಲ್ಲದೆ ಅತಿಯಾಗಿ ಕಾಫಿ ಕುಡಿಯುವುದರಿಂದ ನಮ್ಮನ್ನು ರಕ್ಷಿಸುತ್ತದೆ ಎಂದಿದ್ದಾರೆ.

  ಇನ್ನು ಬಹುತೇಕ ಜನರು ತಮ್ಮ ರಕ್ತದೊತ್ತಡವನ್ನು ಸರಿಯಾಗಿ ಗಮನಿಸುತ್ತಾರೆ. ಅದರ ಆಧಾರದ ಮೇಲೆ ಸುರಕ್ಷಿತವಾಗಿ ಕೆಫೀನ್ ಬಳಕೆಯ ಬಗ್ಗೆ ಯೋಚಿಸುತ್ತಾರೆ. ಅಲ್ಲದೇ ಅದನ್ನು ಸ್ವಯಂ ನಿಯಂತ್ರಿಸುತ್ತಾರೆ ಕೂಡ. ಇದು ನಿಜವಾಗಿಯೂ ಅನುವಂಶಿಕ ಕಾರ್ಯವಿಧಾನದ ಪರಿಣಾಮಕಾರಿ ರಕ್ಷಣಾತ್ಮಕ ತಂತ್ರವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಕಾಫಿ ಕುಡಿಯುವವರು ಅದನ್ನು ತಮ್ಮ ವಂಶವಾಹಿನಿಯಿಂದಲೇ ಕೆಫಿನ್ ಮಟ್ಟ ಸಹಿಸಿಕೊಳ್ಳುವ ಶಕ್ತಿ ಪಡೆದಿರುತ್ತಾರೆ. ಆದರೆ ಕಡಿಮೆ ಪ್ರಮಾಣದಲ್ಲಿ ಕುಡಿಯುವವರಿಗೆ ಇದು ಬೇರೆಯದೇ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

  ನೀವೇನಾದರೂ ಒಂದು ಕಪ್‌ಗಿಂತಲೂ ಹೆಚ್ಚಿನ ಕಾಫಿ ಕುಡಿಯುತ್ತಿದ್ದರೆ, ನಿಮ್ಮ ದೇಹ ಅದನ್ನು ಬೇಡ ಎಂದು ಹೇಳುತ್ತಿದ್ದರೆ, ಖಂಡಿತಾ ನಿಮ್ಮ ದೇಹದ ಮಾತನ್ನು ಆಲಿಸಿ. ಇದು ನಿಮ್ಮ ಆರೋಗ್ಯದ ಜೊತೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ನಿಮಗಿಂತಲೂ ಚೆನ್ನಾಗಿ ನಿಮ್ಮ ದೇಹ ಅದನ್ನು ಅರ್ಥ ಮಾಡಿಕೊಂಡಿರುತ್ತದೆ ಎನ್ನುತ್ತಾರೆ ಎಲೀನಾ ಹಿಪ್ಪೆನೆನ್ .
  Published by:Latha CG
  First published: