• Home
 • »
 • News
 • »
 • lifestyle
 • »
 • Lotus Benefits: ಕೊಬ್ಬು ನಿಯಂತ್ರಣ, ಹೃದಯದ ಆರೋಗ್ಯ ಕಾಪಾಡುವ ಕಮಲದ ಹೂವಿನ ಆರೋಗ್ಯ ಪ್ರಯೋಜನಗಳು

Lotus Benefits: ಕೊಬ್ಬು ನಿಯಂತ್ರಣ, ಹೃದಯದ ಆರೋಗ್ಯ ಕಾಪಾಡುವ ಕಮಲದ ಹೂವಿನ ಆರೋಗ್ಯ ಪ್ರಯೋಜನಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಮಲದ ಹೂವು ತನ್ನ ಸೌಂದರ್ಯ ಮತ್ತು ಮೃದುತ್ವಕ್ಕೆ ಹೆಸರುವಾಸಿ ಆಗಿದೆ. ಜೊತೆಗೆ ಕೆಸರಿನಲ್ಲಿ ಅರಳುವ ಕಮಲದ ಹೂವು ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ. ಕೆಸರಿನಲ್ಲಿ ಅರಳುವ ಕಮಲದ ಹೂವು ಮತ್ತು ಕಾಂಡ ಎಲೆ ಎಲ್ಲವೂ ಔಷಧೀಯ ಗುಣಗಳಿಂದ ಸಮೃದ್ಧ ಆಗಿವೆ.

 • Share this:

  ಇನ್ನೇನು ದೀಪಾವಳಿ (Diwali) ಬರಲಿದೆ. ಈಗಾಗಲೇ ಬೆಳಕಿನ ಹಬ್ಬಕ್ಕೆ (Festival of Light) ದೇಶ (Country) ಸಜ್ಜುಗೊಳ್ತಿದೆ. ಮನೆ ಮನೆಗಳಲ್ಲಿ ಲಕ್ಷ್ಮೀ ಪೂಜೆ (Lakshmi Puja) ಮಾಡಲಾಗುತ್ತದೆ. ದೇಶದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ಬಾರಿ ದೀಪಾವಳಿ ಹಬ್ಬ ಅಕ್ಟೋಬರ್ 24 ರಂದು ಬಂದಿದ್ದು, ಆಚರಣೆ ಮಾಡಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಿ, ಧನಕಾದಿಕ ಸಂಪತ್ತು, ಸಮೃದ್ಧಿಗಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಯಿಂದ ಮಾತ್ರ ಐಶ್ವರ್ಯ ಮತ್ತು ವೈಭವ ಪಡೆಯಲು ಸಾಧ್ಯ ಎಂಬುದಕ್ಕೆ ಪುರಾಣ ಮತ್ತು ಕಥೆಗಳಿವೆ. ದೇವಿ ಮಹಾಲಕ್ಷ್ಮಿಯ ಚಿತ್ರಗಳು ಮತ್ತು ಪ್ರತಿಮೆಗಳಲ್ಲಿ ಯಾವಾಗಲೂ ಕಮಲ ಹೂವು (Lotus Flower) ಇರುತ್ತದೆ.


  ಸೌಂದರ್ಯ ಮತ್ತು ಮೃದುತ್ವಕ್ಕೆ ಹೆಸರುವಾಸಿ ಕಮಲ ಹೂವು


  ಕಮಲದ ಹೂವು ತನ್ನ ಸೌಂದರ್ಯ ಮತ್ತು ಮೃದುತ್ವಕ್ಕೆ ಹೆಸರುವಾಸಿ ಆಗಿದೆ. ಜೊತೆಗೆ ಕೆಸರಿನಲ್ಲಿ ಅರಳುವ ಕಮಲದ ಹೂವು ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ. ಕೆಸರಿನಲ್ಲಿ ಅರಳುವ ಕಮಲದ ಹೂವು ಮತ್ತು ಕಾಂಡ, ಎಲೆ ಎಲ್ಲವೂ ಔಷಧೀಯ ಗುಣಗಳಿಂದ ಸಮೃದ್ಧ ಆಗಿವೆ. ಕಮಲದ ಹೂವಿನ ಅದ್ಭುತ ಸೌಂದರ್ಯವನ್ನು ಕಡಿಮೆ ಮಾಡಲು ಕೆಸರಿಗೂ ಸಾಧ್ಯವಿಲ್ಲ.


  ದೇವಿ ಲಕ್ಷ್ಮಿ ಇಷ್ಟ ಪಡುವ ಕಮಲ ಹೂವು ತನ್ನ ಸೌಂದರ್ಯಕ್ಕೆ ಮಾತ್ರವಲ್ಲದೆ ಹಲವು ಔಷಧೀಯ ಗುಣಗಳಿಂದ ಹೆಸರುವಾಸಿ ಆಗಿದೆ. ನದಿ, ಸರೋವರ, ಕೊಳ ಇತ್ಯಾದಿಗಳಲ್ಲಿ ಬೆಳೆಯುವ ಈ ಹೂವಿನ ಬೀಜಗಳು, ಎಲೆಗಳು, ಕಾಂಡಗಳು ಇತ್ಯಾದಿಗಳನ್ನು ಅನೇಕ ರೀತಿಯ ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ.


  ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


  ಕಮಲದ ಹೂವಿನ ಪ್ರಯೋಜನಗಳು?


  ಕಮಲದ ಹೂವು ರಕ್ತಸ್ರಾವ, ಕೆಮ್ಮು, ಜ್ವರ, ಯಕೃತ್ತು ಮತ್ತು ಹೊಟ್ಟೆ ಸಮಸ್ಯೆ ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಏಷ್ಯಾದಲ್ಲಿ ಈ ಹೂವಿನ ವಿವಿಧ ಭಾಗಗಳನ್ನು ಸಾಮಾನ್ಯವಾಗಿ ಅಡುಗೆ ಮತ್ತು ಪಾನೀಯಗಳಲ್ಲಿ ಬಳಕೆ ಮಾಡುತ್ತಾರೆ. ಕಮಲ ಹೂವಿನ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಎಂದು ನೋಡೋಣ.


  ಕಮಲದ ಹೂವಿನ ಔಷಧೀಯ ಗುಣಗಳು


  WebMD ಯ ವರದಿ ಪ್ರಕಾರ, ಕಮಲ ಉರಿಯೂತ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಕೋಶಗಳು ಮತ್ತು ಬ್ಯಾಕ್ಟೀರಿಯಾ ಕೊಲ್ಲುವ ರಾಸಾಯನಿಕ ಹೊಂದಿದೆ. ಕಮಲ ಹೂವಿನಲ್ಲಿರುವ ಅಂಶಗಳು ರಕ್ತದ ಸಕ್ಕರೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ.


  ಇದು ಕೊಬ್ಬನ್ನು ಒಡೆಯಲು ಸಹಕಾರಿ. ಮತ್ತು ಹೃದಯ ಮತ್ತು ರಕ್ತನಾಳಗಳ ರಕ್ಷಿಸುತ್ತದೆ. ಕಮಲ ಚರ್ಮ, ಯಕೃತ್ತು ಮತ್ತು ಮೆದುಳಿಗೆ ಸಹ ಪ್ರಯೋಜನಕಾರಿಯಾಗಿದೆ.


  ಕಮಲದ ಹೂವು ಯಾವ ರೋಗಗಳ ತಡೆಗೆ ಉಪಯುಕ್ತವಾಗಿದೆ


  ಆತಂಕ ಮತ್ತು ಒತ್ತಡ ನಿವಾರಿಸುತ್ತದೆ, ದುರ್ವಾಸನೆ ನಿವಾರಿಸುತ್ತದೆ, ರಕ್ತಸ್ರಾವ ಕಡಿಮೆ ಮಾಡುತ್ತದೆ, ಅತಿಸಾರ ಸಮಸ್ಯೆ ಕಡಿಮೆ ಮಾಡುತ್ತದೆ, ಜೀರ್ಣಕಾರಿ ಸಮಸ್ಯೆ ತಡೆಯುತ್ತದೆ, ಜ್ವರ ತಡೆಗೆ ಸಹಕಾರಿ, ಯಕೃತ್ತಿನ ಸಮಸ್ಯೆಗೆ ಪರಿಹಾರ ನೀಡುತ್ತದೆ, ಚರ್ಮ ರೋಗ, ನೋಯುತ್ತಿರುವ ಗಂಟಲು ಮತ್ತು ಕೆಮ್ಮು, ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ


  ಇಂಡಿಯನ್ ಜರ್ನಲ್ ಆಫ್ ಅನಿಮಲ್ ರಿಸರ್ಚ್‌ ವರದಿ ಪ್ರಕಾರ, ಕಮಲ ಹೂವು ಕೆಲವು ಜನರಲ್ಲಿ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಲಕ್ಷಣ ಕಡಿಮೆ ಮಾಡಲು ಇದು ಸಹಕಾರಿ. ಆದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸಬೇಕು.


  ಉತ್ಕರ್ಷಣ ನಿರೋಧಕಗಳ ನಿಧಿ


  ಕಮಲದ ಸಸ್ಯವು ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಅಂತಹ ಅನೇಕ ಫ್ಲೇವನಾಯ್ಡ್ ಮತ್ತು ಆಲ್ಕಲಾಯ್ಡ್ ಸಂಯುಕ್ತ ಹೊಂದಿದೆ. ಆಂಟಿಆಕ್ಸಿಡೆಂಟ್‌ಗಳು ದೇಹ ಅನಾರೋಗ್ಯ ಕಾಪಾಡಲು ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತದೆ.


  ಕಮಲ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ


  ಕಮಲ ಎಲೆಯ ಸಾರವು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಇದು ಬಾಯಿ ಮತ್ತು ಹಲ್ಲುಗಳಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾ ತೊಡೆದು ಹಾಕುತ್ತದೆ.


  ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


  ಕಮಲದ ಅಡ್ಡ ಪರಿಣಾಮಗಳು


  ಆಹಾರದಲ್ಲಿ ಕಮಲದ ಹೂವಿನ ಬಳಕೆ ಸುರಕ್ಷಿತವಾಗಿದೆ. ಕೆಲವು ಜನರಲ್ಲಿ ಚರ್ಮದ ತುರಿಕೆಯಂತಹ ಅಲರ್ಜಿಯ ಪ್ರತಿಕ್ರಿಯೆ ಉಂಟು ಮಾಡಬಹುದು.

  Published by:renukadariyannavar
  First published: