ಕೋಟಿ ಕೋಟಿ ಲಾಟರಿ ಗೆದ್ದರೂ ದಕ್ಕಿಸಿಕೊಳ್ಳಲು ಕ್ರಿಮಿನಲ್​ಗಳ ಕಾಟ: ಎಮೋಜಿ ಮುಖವಾಡದ ಮೊರೆ ಹೋದ ವಿಜೇತೆ

news18
Updated:July 3, 2018, 5:13 PM IST
ಕೋಟಿ ಕೋಟಿ ಲಾಟರಿ ಗೆದ್ದರೂ ದಕ್ಕಿಸಿಕೊಳ್ಳಲು ಕ್ರಿಮಿನಲ್​ಗಳ ಕಾಟ: ಎಮೋಜಿ ಮುಖವಾಡದ ಮೊರೆ ಹೋದ ವಿಜೇತೆ
news18
Updated: July 3, 2018, 5:13 PM IST
-ನ್ಯೂಸ್ 18 ಕನ್ನಡ

ಲಾಟರಿ ಗೆದ್ದು ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾಗಿರುವ ಅದೆಷ್ಟೋ ಮಂದಿಯ ಬಗ್ಗೆ ನಾವು ಕೇಳಿರುತ್ತೇವೆ ಇಲ್ಲಾ ನೋಡಿರುತ್ತೇವೆ. ಲಾಟರಿ ಮೂಲಕ ಅದೃಷ್ಟ ಖುಲಾಯಿಸುತ್ತಿದ್ದಂತೆ ದೂರದ ಬಂಧು-ಮಿತ್ರರು ಕೂಡ ಹತ್ತಿರವಾಗುವುದು ಸಾಮಾನ್ಯ. ಅದರಲ್ಲೂ ಲಾಟರಿ ಹೊಡೆದರೆ ಒಂದಷ್ಟು ಮಂದಿ ಕಪ್ಪು ಹಣ ಹೊಂದಿರುವವರು ಆ ಲಾಟರಿ ಟಿಕೆಟ್​ಗಾಗಿ ದಂಬಾಲು ಬೀಳುತ್ತಾರೆ. ಈ ಟಿಕೆಟ್​​ ಅನ್ನು ಬಳಸಿ ಬ್ಲಾಕ್​ ಮನಿಯನ್ನು ವೈಟ್​ ಮಾಡುವ ಪ್ಲಾನಿಂಗ್​ನಲ್ಲಿರುತ್ತಾರೆ ಕಪ್ಪುಕುಳಗಳು.

ಅಂತದರಲ್ಲಿ ಇತ್ತೀಚೆಗೆ ಜಮೈಕಾದ ಮಹಿಳೆಯೊಬ್ಬರಿಗೆ ಒಂದು ಮಿಲಿಯನ್ ಡಾಲರ್ ಮೊತ್ತದ ಲಾಟರಿ ಹೊಡೆದಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಬರೋಬ್ಬರಿ 6.86 ಕೋಟಿ ರೂ. ಆದರೆ ಈ ಲಾಟರಿ ಬಹುಮಾನವನ್ನು ಪಡೆಯುವಾಗ ತನ್ನನ್ನು ಯಾರೂ ಗುರುತಿಸದಂತೆ ಈ ಮಹಿಳೆ ಮಾಡಿದ ಉಪಾಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.


Loading...

ಸಾಮಾನ್ಯವಾಗಿ ಚಾಟಿಂಗ್ ಮೆಸೆಂಜರ್​ನಲ್ಲಿ ಬಳಕೆಯಲ್ಲಿರುವ ಇಮೋಜಿ ಮುಖವಾಡವನ್ನು ಧರಿಸಿ ಬಹುಮಾನ ಮೊತ್ತವನ್ನು ಜಮೈಕನ್ ಮಹಿಳೆ ಪಡೆದಿರುವುದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಸೂಪರ್ ಲೊಟ್ಟೊ ಲಾಟರಿ ತೆಗೆದು ಕೆಲವೇ ಗಂಟೆಗಳಲ್ಲಿ ಜಾಕ್​ಪಾಟ್ ಹೊಡೆದಿರುವ ಜಮೈಕಾದ ಎನ್.ಗ್ರೆ ಅವರು ಮುಖವಾಡ ಬಳಸಿರುವುದು ಹಾಸ್ಯಸ್ಪದವಾಗಿದ್ದರೂ ಅವರ ಉದ್ದೇಶ ಮಾತ್ರ ಕ್ರಿಮಿನಲ್​ಗಳಿಂದ ರಕ್ಷಣೆಯಾಗಿದೆ.


ಜಮೈಕಾ ಭಾಗದಲ್ಲಿ ಅಪರಾಧ ಕೃತ್ಯಗಳು, ಕೊಲೆ ಮತ್ತು ದರೋಡೆ ಪ್ರಮಾಣ ಹೆಚ್ಚಾಗುತ್ತಿದ್ದು, ಲಾಟರಿ ಗೆದ್ದಿರುವ ವಿಷಯ ಬಹಿರಂಗವಾದರೆ ತಾನೂ ಅಪರಾಧಿಗಳ ಕೃತ್ಯಕ್ಕೆ ಬಲಿಯಾಗಬಹುದು ಎಂಬ ಭಯ ಎನ್.ಗ್ರೆ ಅವರನ್ನು ಕಾಡಿದೆ. ಹೀಗಾಗಿ ಹೊಸ ಉಪಾಯದ ಮೊರೆ ಹೋಗಿದ್ದಾರೆ ಜಮೈಕನ್ ಮಹಿಳೆ.

ಎನ್.ಗ್ರೆ ಅವರ ನಿರ್ಧಾರವನ್ನು ಬೆಂಬಲಿಸಿರುವ ಸೂಪರ್ ಲೊಟ್ಟೊ ಸಂಸ್ಥೆಯ ಮುಖ್ಯಸ್ಥ ' ಜಮೈಕಾ ಇತರೆ ನಗರಗಳಂತೆ ಸುರಕ್ಷಿತವಾಗಿಲ್ಲ ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೊಸ ಮಾರ್ಗಗಳನ್ನು ಜನರು ಅನುಸರಿಸುತ್ತಿದ್ದಾರೆ. ನಮ್ಮ ಕಂಪನಿ ಮೂಲಕ ಅವರಿಗೆ ಸಿಗುವ ಬಹುಮಾನದೊಂದಿಗೆ ಅವರ ಸುರಕ್ಷತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

ಲಾಟರಿ ಬಹುಮಾನವನ್ನು ಸ್ವೀಕರಿಸುತ್ತಿರುವ ಎನ್.ಗ್ರೆ ಅವರ ಫೋಟೋ ಜಮೈಕಾ ಗ್ಲೀನರ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅವರ ಈ ಎಮೋಜಿ ಲುಕ್​ನ ಉಪಾಯವನ್ನು ಜನರು ಕೊಂಡಾಡಿದ್ದಾರೆ.

'ನಾನು ಉದ್ಯೋಗಿಯಾಗಿದ್ದರೂ ಲಾಟರಿ ಗೆದ್ದ ಮಾತ್ರಕ್ಕೆ ನನ್ನ ಕೆಲಸ ಬಿಡಲು ತಯಾರಿಲ್ಲ. ಬಹುಮಾನ ಮೊತ್ತದಿಂದ ನನ್ನ ಸಾಲವನ್ನು ತೀರಿಸಿ, ಪ್ರವಾಸ ಹೋಗಲು ಬಯಸುತ್ತೇನೆ. ಹಾಗೆಯೇ ನನ್ನ ಸಮುದಾಯದ ಯುವಕರಿಗಾಗಿ ಸಮುದಾಯ ಭವನನ್ನು ನಿರ್ಮಿಸುತ್ತೇನೆ. ಇದರಿಂದ ಯುವಕರಲ್ಲಿ ಮುಂದಿನ ದಿನಗಳಲ್ಲಿ ಪ್ರಯೋಜನವಾಗಲಿದೆ ಎಂದು ಭಾವಿಸುತ್ತೇನೆ' ಎಂದು ಎನ್.ಗ್ರೆ ತಿಳಿಸಿದ್ದಾರೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ