news18-kannada Updated:November 24, 2020, 5:43 PM IST
ಬ್ಲ್ಯಾಕ್ ಟೀ
ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಎದ್ದಾಗ ಬಿಸಿ ಬಿಸಿ ಚಹಾ ಕುಡಿದರೆ ಮನಸ್ಸಿಗೆ ಅದೇನೋ ಆನಂದ. ಒಂದು ಕಪ್ ಟೀ ಕುಡಿದರೆ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ.
ಅದರಲ್ಲೂ ಚಹಾದ ಅಸಲಿ ರುಚಿ ಇರುವುದು ಖಾಲಿ ಚಹಾದಲ್ಲಿ (ಬ್ಲ್ಯಾಕ್ ಟೀ). ಆದರೆ ಹೆಚ್ಚಿನವರು ಹಾಲು ಮಿಶ್ರಿತ ಟೀ ಮೊರೆ ಹೋಗುತ್ತಾರೆ. ಇದೀಗ ಬ್ಲ್ಯಾಕ್ ಟೀ ಕುಡಿಯುವುದರಿಂದ ಬುದ್ದಿಮಾಂದ್ಯತೆ ಮತ್ತು ಆಲ್ಜೈಮರ್ (ಮರೆವು) ರೋಗಗಳ ಅಪಾಯವನ್ನು ದೂರವಾಗುತ್ತದೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ.
ರಷ್ಯಾದ ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರು 921 ಜನರ ಮೇಲೆ ನಡೆಸಿದ ಅಧ್ಯಯನದಿಂದ ಇಂತಹದೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಹೆಚ್ಚಿನ ಫ್ಲೇವನಲ್ ಸೇವಿಸುವ ಜನರಲ್ಲಿ, ಅಂದರೆ ದಿನಕ್ಕೆ ಒಂದು ಕಪ್ ಚಹಾ ಕುಡಿಯುವವರಲ್ಲಿ ಬುದ್ಧಿಮಾಂದ್ಯತೆ ಅಥವಾ ಆಲ್ಜೈಮರ್ ಅಪಾಯವು ಶೇ. 50 ಕ್ಕಿಂತ ಕಡಿಮೆ ಎಂದು ಸಂಶೋಧನೆಯಿಂದ ದೃಢಪಟ್ಟಿದೆ. ಕಪ್ಪು ಚಹಾದ ಹೊರತಾಗಿ, ಆಲಿವ್ ಎಣ್ಣೆ, ಪೇರಳೆ, ಕಿತ್ತಳೆ ಮತ್ತು ಕೋಸುಗಡ್ಡೆಗಳಲ್ಲಿ ಫ್ಲೇವನಲ್ಸ್ ಅಂಶಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಪೋಷಕಾಂಶಗಳು 'ಬುದ್ಧಿಮಾಂದ್ಯತೆ' ಅಪಾಯದಿಂದ ರಕ್ಷಿಸುತ್ತವೆ.
ಬ್ಲ್ಯಾಕ್ ಟೀ ಕುಡಿಯುವುದರಿಂದ ಸಿಗುವ ಇತರೆ ಪ್ರಯೋಜನಗಳು:
1. ರೋಗನಿರೋಧಕ ಶಕ್ತಿ ಹೆಚ್ಚಳ: ಕಪ್ಪು ಚಹಾದಲ್ಲಿ ಆ್ಯಂಟಿ-ಆಕ್ಸಿಡೆಂಟ್ಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ಕಾರಣದಿಂದಾಗಿ, ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯವು ಗಣನೀಯವಾಗುತ್ತದೆ ಮತ್ತು ಆರೋಗ್ಯವು ಸುಧಾರಿಸುತ್ತದೆ.
2. ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ: ಕಪ್ಪು ಚಹಾದಲ್ಲಿ ಕಂಡುಬರುವ ಆ್ಯಂಟಿ-ಆಕ್ಸಿಡೆಂಟ್ಗಳು ದೇಹದಲ್ಲಿ ಇರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮದ ಆರೋಗ್ಯ ಹೆಚ್ಚಿಸುವುದಲ್ಲದೆ, ಯೌವ್ವನವನ್ನು ಕಾಪಾಡಲು ಸಹಾಯ ಮಾಡುತ್ತದೆ.3. ಬೆವರಿನ ವಾಸನೆ ನಿವಾರಿಸುತ್ತದೆ: ಕಪ್ಪು ಚಹಾ ಕುಡಿಯುವುದರಿಂದ ಬೆವರಿನ ವಾಸನೆಯಿಂದಲೂ ಪರಿಹಾರ ಸಿಗಲಿದೆ. ಬ್ಲ್ಯಾಕ್ ಟೀನಲ್ಲಿ ಬೆವರಿನ ವಾಸನೆಯಿಂದ ಉಂಟಾಗುವ ಬ್ಯಾಕ್ಟೀರಿಯಾಗಳು ನಿರ್ನಾಮವಾಗುವ ಪದಾರ್ಥಗಳಿವೆ.
Published by:
HR Ramesh
First published:
November 24, 2020, 5:43 PM IST