ಕೊರೋನಾ ಸಮಯದಲ್ಲಿ ನಿರುದ್ಯೋಗ ಸಮಸ್ಯೆಯೇ? ನಿಮ್ಮ ನೆರವಿಗೆ ಬರಲಿದೆ PF ಖಾತೆ!

ನಿಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ EPFO ಶುಭ ಸುದ್ದಿಯೊಂದನ್ನು ನೀಡಿದ್ದು ನಿಮ್ಮ ಪಿಎಫ್ ಖಾತೆಯಿಂದ ನೀವು ಮುಂಗಡ ಮೊತ್ತವನ್ನು ಪಡೆದುಕೊಳ್ಳಬಹುದಾಗಿದ್ದು ಇದನ್ನು ಮರುಪಾವತಿ ಮಾಡಬೇಕಾಗಿಲ್ಲ.

ಇಪಿಎಫ್​ಒ

ಇಪಿಎಫ್​ಒ

 • Share this:

  ಕೊರೋನಾದಿಂದಾಗಿ ನೂರಾರು ಜನರ ಬದುಕು ದುಸ್ಥರವಾಗಿದೆ. ದಿನನಿತ್ಯದ ಉದ್ಯೋಗವನ್ನೇ ತಮ್ಮ ಹೊಟ್ಟೆ ಹೊರೆಯುವುದಕ್ಕಾಗಿ ನಂಬಿದ್ದವರು ಇಂದು ಮುಂದೇನು ಎಂಬ ಯೋಚನೆಯಲ್ಲಿದ್ದಾರೆ. ಎಷ್ಟೋ ಜನರು ಭವಿಷ್ಯಕ್ಕೆ ಹೆದರಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಖಿನ್ನತೆಗೆ ಒಳಗಾಗಿದ್ದಾರೆ. ಮೊದಲನೆಯ ಬಾರಿಗೆ ಕೊರೋನಾ ಅಲೆ ದೇಶವನ್ನು ವ್ಯಾಪಿಸಿದಾಗ ಸರಕಾರವು ಸಾಲದ ಕಂತನ್ನು ಸ್ವಲ್ಪ ಸಮಯದವರೆಗೆ ಮುಂದೂಡಿ ಸಾಲಗಾರರಿಗೆ ನೆರವನ್ನು ನೀಡಿತು.  ಅಂತೆಯೇ ಪಿಎಫ್ ಹಣವನ್ನು ಸಂಕಷ್ಟದ ಸಮಯದಲ್ಲಿ ಬಳಸಬಹುದೆಂದು ಖಾತೆ ಪ್ರವೇಶವನ್ನು ಸರಳೀಕರಣಗೊಳಿಸಿತು. ಅದೇ ರೀತಿ ಈ ಬಾರಿ ಕೂಡ ಪಿಎಫ್ ಖಾತೆಯಿಂದ ನೀವು 75% ದಷ್ಟು ಮರುಪಾವತಿ ಮಾಡದ ಮುಂಗಡ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.


  ಹೌದು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ EPFO ಶುಭ ಸುದ್ದಿಯೊಂದನ್ನು ನೀಡಿದ್ದು ನಿಮ್ಮ ಪಿಎಫ್ ಖಾತೆಯಿಂದ ನೀವು ಮುಂಗಡ ಮೊತ್ತವನ್ನು ಪಡೆದುಕೊಳ್ಳಬಹುದಾಗಿದ್ದು ಇದನ್ನು ಮರುಪಾವತಿ ಮಾಡಬೇಕಾಗಿಲ್ಲ. ಇಪಿಎಫ್ ಸದಸ್ಯರು ನಿರುದ್ಯೋಗದ ಸಮಯದಲ್ಲಿ ಮರುಪಾವತಿ ಮಾಡದ ಮುಂಗಡ ಹಣವನ್ನು ಪಡೆದುಕೊಳ್ಳಬಹುದು ಎಂದು ಟ್ವೀಟ್ ಮಾಡಿದೆ. EPFO ನೀಡಿರುವ ಮಾಹಿತಿಯ ಪ್ರಕಾರ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೆ ನಿರುದ್ಯೋಗಿಗಳಾಗಿರುವ ಸದಸ್ಯರು ಇದೀಗ ತಮ್ಮ ಖಾತೆಯಲ್ಲಿ ಲಭ್ಯವಿರುವ 75% ದವರೆಗೆ ಮರುಪಾವತಿ ಮಾಡದೇ ಇರುವ ಮುಂಗಡ ಹಣವನ್ನು ಪಡೆದುಕೊಳ್ಳಬಹುದು. ಆರ್ಥಿಕ ತುರ್ತು ಪರಿಸ್ಥಿತಿಗಳಲ್ಲಿ ಬೇರೆ ಉದ್ಯೋಗವನ್ನು ಹುಡುಕುತ್ತಿರುವ ಸಮಯದಲ್ಲಿ ಈ ನೆರವು ಅವರಿಗೆ ಸಹಕಾರಿಯಾಗಲಿದೆ ಅದೇ ರೀತಿ ಅವರ ಇಪಿಎಫ್ ಖಾತೆಗಳನ್ನು ಮುಚ್ಚದಿರುವ ಕಾರಣ ಅವರ ಪಿಂಚಣಿ ಸದಸ್ಯತ್ವವನ್ನು ಅವರು ಮುಂದುವರಿಸುತ್ತಾರೆ ಎಂದು ಸಂಸ್ಥೆ ತಿಳಿಸಿದೆ.


  ಇದಲ್ಲದೆ ಕೋವಿಡ್ – 19 ಸಾಂಕ್ರಾಮಿಕದ ಸಮಯದಲ್ಲಿ ಇಪಿಎಫ್ ಸದಸ್ಯರ ಕುಟುಂಬ ಮತ್ತು ಅವರನ್ನು ಅವಲಂಬಿಸಿರುವವರು ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದು. ಇಡಿಎಫ್‌ಐ ಯೋಜನೆ, 1976 ರಲ್ಲಿ ತಿದ್ದುಪಡಿ ಮಾಡುವ ಮೂಲಕ EPFO ಅದನ್ನು ಅನುಮತಿಸಿದೆ.
  • ಇಪಿಎಫ್ ಸದಸ್ಯ ಸೇವೆಯಲ್ಲಿದ್ದಾಗ ಸಾವು ಸಂಭವಿಸಿದಲ್ಲಿ, ಸದಸ್ಯರ ನಾಮಿನಿ ಅಥವಾ ಕಾನೂನು ಹಕ್ಕುದಾರರಿಗೆ ಗರಿಷ್ಠ 7 ಲಕ್ಷ ರೂ.

  • ಮೃತ ಸದಸ್ಯ ಸಾವಿಗೆ 12 ತಿಂಗಳ ಮೊದಲು ನಿರಂತರ ಉದ್ಯೋಗದಲ್ಲಿದ್ದರೆ, ಕನಿಷ್ಠ ಆಶ್ವಾಸನೆ ಮೊತ್ತ ರೂ 2.5 ಲಕ್ಷ.

  • ಉದ್ಯೋಗಿ ಯಾವುದೇ ಕೊಡುಗೆಯನ್ನು ನೀಡಬೇಕಾಗಿಲ್ಲ

  • ಮೊತ್ತವನ್ನು ನಾಮಿನಿ ಅಥವಾ ಕಾನೂನು ಹಕ್ಕುದಾರರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.


  ಇದನ್ನೂ ಓದಿ: ಈ ಇಸವಿಯ 1 ರೂ. ನೋಟು ನಿಮ್ಮ ಬಳಿ ಇದ್ದರೆ ಕ್ಷಣಾರ್ಧದಲ್ಲಿ 7 ಲಕ್ಷ ರೂ. ನಿಮ್ಮ ಕೈಯಲ್ಲಿ.. ಹೇಗೆಂದು ತಿಳಿಯಿರಿ

  ಕೋವಿಡ್ ಸಂಕಷ್ಟದಲ್ಲಿರುವವರಿಗೆ EPFO ಒದಗಿಸುತ್ತಿರುವ ಈ ಕೊಡುಗೆಯು ಆರ್ಥಿಕವಾಗಿ ಸಹಕಾರಿಯಾಗಿದೆ. ಪಿಎಫ್ ಹಣವನ್ನು ಪಡೆದುಕೊಳ್ಳುವ ವ್ಯವಸ್ಥೆಯು ಈಗ ಅತ್ಯಂತ ಸುಲಭವಾಗಿದ್ದು ಇದರಿಂದ ಸದಸ್ಯರು ತಮ್ಮ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸದಸ್ಯರ ಕುಟುಂಬ ಸದಸ್ಯರಿಗೆ ಕೂಡ EPFO ನೆರವನ್ನು ನೀಡುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಅಂತೂ ಇಂತು ಈ ಬಾರಿಯ ಸಾಂಕ್ರಾಮಿಕದ ಸಮಯದಲ್ಲಿ EPFO ತೆಗೆದುಕೊಂಡಿರುವ ನಿರ್ಧಾರವು ಪ್ರಶಂಸನೀಯವಾದುದು.

  First published: