To Let: ಬೆಂಗಳೂರಲ್ಲಿ ಬ್ರೋಕರ್​​ಗೆ ದುಡ್ಡು ಕೊಡದೇ ಬಾಡಿಗೆ ಮನೆ ಹುಡುಕೋದು ಸುಲಭ... ಹೀಗೆ ಮಾಡಿ ಸಾಕು

Rent House: ಬಾಡಿಗೆ ಮನೆ(Rent House) ಹುಡುಕುವುದು ಎಷ್ಟು ಕಷ್ಟ ಅಂತ ಹುಡುಕಿದವನಿಗೆ ಗೊತ್ತು. ಗಲ್ಲಿ ಗಲ್ಲಿಯಲ್ಲಿ ತಿರುಗಿದರೂ ತಮಗೆ ಇಷ್ಟವಾಗುವಂತಹ ಬಾಡಿಗೆ ಮನೆ ಸಿಗುವುದು ಕಷ್ಟ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
To Let: ಬೆಂಗಳೂರಲ್ಲಿ ಬ್ರೋಕರ್ ಗೆ ದುಡ್ಡು ಕೊಡದೇ ಬಾಡಿಗೆ ಮನೆ ಹುಡುಕೋದು ಸುಲಭ...ಹೀಗೆ ಮಾಡಿ ಸಾಕು‘ಬೆಂಗಳೂರಲ್ಲಿ ಏನ್​ ಗುರು ಬಾಡಿಗೆ ಮನೆಗೆ ಕಡಿಮೆನಾ.. ಬೀದಿಗೆ ಐದು ಐದು ಖಾಲಿ ಮನೆಗಳು ಸಿಗುತ್ತೆ’ ಈ ರೀತಿ ಡೈಲಾಗ್​ನ ನಿಮ್ಮ ಸ್ನೇಹಿತ(Friends)ರ ಬಾಯಿಯಲ್ಲಿ, ಅಥವಾ ನಿಮ್ಮ ಪರಿಚಯಸ್ಥರ ಬಾಯಿಯಲ್ಲಿ ಕೇಳಿರುತ್ತೀರಾ. ಆದರೆ ಈ ಬೆಂಗಳೂರ(Bengaluru)ಲ್ಲಿ ಬಾಡಿಗೆ ಮನೆ(Rent House) ಹುಡುಕುವುದು ಎಷ್ಟು ಕಷ್ಟ ಅಂತ ಹುಡುಕಿದವನಿಗೆ ಗೊತ್ತು. ಗಲ್ಲಿ ಗಲ್ಲಿಯಲ್ಲಿ ತಿರುಗಿದರೂ ತಮಗೆ ಇಷ್ಟವಾಗುವಂತಹ ಬಾಡಿಗೆ ಮನೆ ಸಿಗುವುದು ಕಷ್ಟ.ಕೆಲಸ(Work) ಅರಸಿ ಬೆಂಗಳೂರಿಗೆ ಬಂದಿದ್ದವರೆಲ್ಲ ಕೊರೋನಾ(Corona) ಕಾಟದಿಂದ ಬೇಸತ್ತು ಮತ್ತೆ ಊರಿಗೆ ಹೊರಟು ಹೋಗಿದ್ದಾರೆ. ಬೆಂಗಳೂರಿನಲ್ಲಿ ಹಲವಾರು ಮನೆಗಳು ಖಾಲಿ ಇರುವ ಬೋರ್ಡ್​(Board) ಕಾಣುತ್ತೆ . ಆದರೆ ಹುಡುಕುವುದು ಮಾತ್ರ ಕಷ್ಟ. ಹೋಗಲಿ ಬ್ರೋಕರ್(Broker)​ಗೆ ಹೇಳೋಣ ಅಂದರೆ. ಒಂದು ತಿಂಗಳ ಬಾಡಿಗೆ ಹಣ(Rent Amount)ವನ್ನು ಆತನಿಗೆ ಕೊಡಬೇಕು. ಸುಮ್ಮನೆ ಯಾಕು ಖರ್ಚು ಎಂದು ಅದೆಷ್ಟೋ ಮಂದಿ ತಾವೇ ಮನೆ ಹುಡುಕಿ, ಹುಡಕಿ ಸುಸ್ತಾಗಿದ್ದಾರೆ.  ನಿಮಿಗಿಷ್ಟದಂತಿರುವ ಮನೆಗಳನ್ನು ನೀವು ಸುಲಭವಾಗಿ ಹುಡಕುವುದು ಹೇಗೆ ಎಂಬುದನ್ನು ನಾವು ಹೇಳುತ್ತೆವೆ... ಮುಂದೆ ಓದಿ

ಮನೆಯನ್ನು ಕೂತಲ್ಲೇ ಆನ್​ಲೈನ್​ನಲ್ಲಿ ಹುಡುಕಿ

ಈಗ ಎಲ್ಲರ ಕೈನಲ್ಲೂ ಮೊಬೈಲ್ ಇದ್ದೇ ಇರುತ್ತೆ. ಜೊತೆಗೆ ಆ ಆ್ಯಪ್ ಈ ಆ್ಯಪ್ ಅಂತ ಬಳಸತ್ತಾನೆ ಇರುತ್ತಾರೆ.. ಕಾರ್ ಬುಕ್ ಮಾಡಲು ಕಾರ್ ಆ್ಯಪ್ ಇದ್ದರೆ, ಊಟಕ್ಕೂ ಆ್ಯಪ್ ಇದೆ. ಇಷ್ಟು ದಿನ ವಿಳಾಸ ಹುಡುಕಲು ಇದ್ದ ಆ್ಯಪ್, ಈಗ ಮನೆ ಹುಡುಕಲು ಹಲವಾರು ಆ್ಯಪ್​ಗಳು ಇವೆ. ಇದರಿಂದ ನೀವು ಕೂತಲ್ಲೆ ಮನೆಯನ್ನು ಹುಡುಕಬಹುದು. ಈ ಕೆಳಗಿರುವ ವೆಬ್​ಸೈಟ್​ಗಳ  ಲಿಂಕ್​ ಮೇಲೆ  ಕ್ಲಿಕ್​ ಮಾಡಿ, ನಿಮಗಿಷ್ಟವಿರುವ ಏರಿಯಾದಲ್ಲಿ, ನಿಮಗಿಷ್ಟವಾದ ರೀತಿಯ ಬಾಡಿಗೆ ಅಥವಾ ಲೀಸ್​ಗೆ ಮನೆಯನ್ನು ಹುಡುಕಿಕೊಳ್ಳಿ.

-Noboroker.com : ಬಾಡಿಗೆ ಮನೆ ಹುಡುಕಲು ಇದು ಅತ್ಯಂತ ಜನಪ್ರಿಯ ವೆಬ್​ಸೆಟ್​, ನಿಮಗೆ ಈ ವೆಬ್​ಸೈಟ್​ನಲ್ಲಿ ಹೆಚ್ಚು ಶುಲ್ಕವಿಲ್ಲದೇ ಮನೆಯನ್ನು ಹುಡುಕಬಹದು.

- Quicker.com: ಈ ವೆಬ್​ಸೈಟ್​​ನಲ್ಲೂ ನಿಮಗೆ ಸೂಕ್ತವಾಗಿರುವ ಮನೆಯನ್ನು ಸುಲಭವಾಗಿ ಹುಡುಕಹುದು.

- Nestway.com : ಈ ವೆಬ್​ಸೈಟ್​ನಲ್ಲೂ ಸುಲಭವಾಗಿ ನಿಮಗಿಷ್ಟವಾದ ಮನೆಗಳನ್ನು ಹುಡುಕಬಹುದು

ಇದಲ್ಲದೇ ಮನೆ ಹುಡುಕಲಿ ಇನ್ನೂ ಹತ್ತು ಹಲವು ವೆಬ್​ಸೈಟ್​ಗಳು ಇವೆ. ಕೆಲ ವೆಬ್​ಸೈಟ್​ಗಳಲ್ಲಿ ಶುಲ್ಕ ಪಾವತಿಸಿದರೆ. ನಿಮಗಿಷ್ಟವಾದ ಮನೆಗಳನ್ನು ಅದು ತೋರಿಸುತ್ತದೆ. ಇದರಿಂದ ನೀವೇ ಹೋಗಿ ಮನೆ ಹುಡುಕಿ, ಅದರ ಬಾಡಿಗೆ ಎಷ್ಟು, ಆಡ್ವಾನ್ಸ್​ ಎಷ್ಟು ಎಂದು ಕೇಳುವ ಪ್ರಶ್ನೆಯೆ ಇರಲ್ಲ.

ಇದನ್ನು ಓದಿ : ಉಳಿತಾಯ ಬ್ಯಾಂಕ್ ಖಾತೆಗಳಿಗೂ ಚಾಲ್ತಿ ಖಾತೆಗಳಿಗೂ ವ್ಯತ್ಯಾಸವೇನು..?

ನಿಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಹುಡುಕಿ

ಹೌದು, ಇದೇನಪ್ಪಾ ವಿಚಿತ್ರವಾಗಿ ಹೇಳುತ್ತಿದ್ದೇವೆ ಅಂದುಕೊಂಡರಾ? ಇಲ್ಲ ಈಗ ಸಣ್ಣ ಪುಟ್ಟ  ವಿಚಾರಗಳನ್ನು ಕೂಡ ಉದ್ದುದ್ದ ಸಾಲಿನಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ. ಹೀಗಿರುವಾಗ ನಮಗೆ ಬೇಕು ಅಂದಾಗ ಇಲ್ಲಿ ಹುಡುಕುವುದರಲ್ಲಿ ತಪ್ಪೇನಿಲ್ಲ.  ನಿಮ್ಮ ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವೀಟರ್​ ಅಕೌಂಟ್​ಗಳಲ್ಲಿ ನಿಮ್ಮ ರೇಂಜ್​ಗೆ ಬೇಕಿರುವ ಮನೆಯ ಬಗ್ಗೆ ಪೋಸ್ಟ್ ಮಾಡಿ. ಈ ಎಲ್ಲ ಸಾಮಾಜಿಕ ಜಾಲತಾಣದಗಳಲ್ಲೂ ಈಗ ಬುಸಿನೆಸ್​​ ಮಾಡುವ ಅವಕಾಶವಿದೆ. ನಿಮಗೆ ಬೇಕಿರುವ ಮನೆಯ ಮಾಲೀಕರೆ ನಿಮ್ಮನ್ನು ಸಂಪರ್ಕಿಸಬಹುದು ಅಥವಾ ಮನೆಗಳ ಬಗ್ಗೆ ಮಾಹಿತಿಯನ್ನು ನೀವು ಸುಲಭವಾಗಿ ಪಡೆಯಬಹುದು.

ಇದನ್ನು ಓದಿ : Car Loan ತಗೊಳ್ಬೇಕಾ? ಈ ಡಾಕ್ಯುಮೆಂಟ್ಸ್ ಸರಿ ಇದ್ರೆ ಮಾತ್ರ ಸಾಧ್ಯ.. ನಿಮ್ಮ ಬಳಿ ಇದ್ಯಾ ಒಂದ್ಸಲ ಚೆಕ್ ಮಾಡಿ!

ನಿಮ್ಮ ಸ್ನೇಹಿತರೊಂದಿಗೆ ಮನೆ ಬಗ್ಗೆ ವಿಚಾರಿಸಿ

ಮನೆ ಹುಡುಕುವ ಮುನ್ನ ನಿಮ್ಮ ಸ್ನೇಹಿತರು ಪರಿಚಯಸ್ಥರಿಗೆ ಯಾವುದಾದರು ಖಾಲಿ ಇರುವ ಮನೆ ಬಗ್ಗೆ ಕೇಳಿ. ಯಾಕಂದರೆ ನಮಗೆ ಹತ್ತಿರವಾದವರಿಗೆ ತಿಳಿದಿರುವಷ್ಟು ಮಾಹಿತಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ನಿಮಗೆ ರೇಂಜ್​, ನಿಮ್ಮ ಇಷ್ಟಗಳು ಅವರಿಗೆ ಮೊದಲೇ ತಿಳಿದಿರುತ್ತದೆ. ಈ ಎಲ್ಲ ಪ್ರಯತ್ನಗಳನ್ನು ಮಾಡಿದ ಬಳಿಕವೂ ಮನೆ ಸಿಗದಿದ್ದರೆ, ನೀವು ಬ್ರೋಕರ್​ಗೆ ಹೇಳಬಹುದು. ಮೊದಲು ಪ್ರಯತ್ನಿಸಿದೇ ಬ್ರೋಕರ್​ಗೆ ಹೇಳಿದರೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತೆ.
Published by:Vasudeva M
First published: