Foreign Culture: ಇವೇ ನೋಡಿ ಭಾರತದಲ್ಲಿ ಈಗಲೂ ಕಾಣಬಹುದಾದ ಆ ವಿದೇಶಿ ಸಂಸ್ಕೃತಿಗಳು!

ನಿಮಗೆ ಗೊತ್ತೆ ಕೇವಲ ಭಾರತೀಯತೆಗೆ ಒಳಪಟ್ಟ ವಿವಿಧ ಸಂಸ್ಕೃತಿಯಲ್ಲದೆ ಇಲ್ಲಿ ವಿದೇಶಿ ಸಂಸ್ಕೃತಿಯು ತಳುಕಿ ಹಾಕಿಕೊಂಡಿದೆ ಎಂಬ ವಿಚಾರ..! ಹೌದು, ಇಂದು ನಾವು ಭಾರತದಲ್ಲಿ ಕಾಣಬಹುದಾದ ಅಥವಾ ಅನುಭವಿಸಬಹುದಾದ ನಾಲ್ಕು ವಿದೇಶಿ ಸಂಸ್ಕೃತಿಗಳ ಬಗ್ಗೆ ತಿಳಿಸುತ್ತಿದ್ದೇವೆ. ತಪ್ಪದೆ ಓದಿ ಹಾಗೂ ಅವಕಾಶ ಸಿಕ್ಕರೆ ನೀವು ಆ ಸ್ಥಳಗಳಿಗೊಮ್ಮೆ ಭೇಟಿ ನೀಡಿ ಸ್ವತಃ ಅನುಭವ ಪಡೆಯಿರಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತ (India) ಮೊದಲಿನಿಂದಲೂ ಭವ್ಯವಾದ ಶ್ರೀಮಂತಿಕೆಯುಳ್ಳ ದೇಶ. ಈ ಭವ್ಯ ಶ್ರೀಮಂತಿಕೆಗೆ ಪ್ರಮುಖ ಕಾರಣವೆಂದರೆ ಇಲ್ಲಿರುವ ಹಲವು ವೈವಿಧ್ಯಮಯ ಸಂಸ್ಕೃತಿ (Culture)-ಸಂಪ್ರದಾಯಗಳು (Tradition). ವಿವಿಧತೆಯಲ್ಲೂ ಏಕತೆಯ ಭಾವ ಹೊಂದಿರುವ ಭಾರತದಲ್ಲಿರುವ ಪ್ರತಿಯೊಂದು ರಾಜ್ಯಗಳು ತಮ್ಮದೆ ಆದ ವಿಶಿಷ್ಟ ಶೈಲಿ, ಆಚಾರ-ವಿಚಾರ ಹಾಗೂ ಜೀವನಶೈಲಿಯ (Lifestyle) ಪದ್ಧತಿಗಳನ್ನು ಹೊಂದಿದೆ ಎಂದರೂ ತಪ್ಪಾಗಲಾರದು. ಆದರೆ, ನಿಮಗೆ ಗೊತ್ತೆ ಕೇವಲ ಭಾರತೀಯತೆಗೆ ಒಳಪಟ್ಟ ವಿವಿಧ ಸಂಸ್ಕೃತಿಯಲ್ಲದೆ ಇಲ್ಲಿ ವಿದೇಶಿ ಸಂಸ್ಕೃತಿಯು ತಳುಕಿ ಹಾಕಿಕೊಂಡಿದೆ ಎಂಬ ವಿಚಾರ..! ಹೌದು, ಇಂದು ನಾವು ಭಾರತದಲ್ಲಿ ಕಾಣಬಹುದಾದ ಅಥವಾ ಅನುಭವಿಸಬಹುದಾದ ನಾಲ್ಕು ವಿದೇಶಿ ಸಂಸ್ಕೃತಿಗಳ (Foreign culture) ಬಗ್ಗೆ ತಿಳಿಸುತ್ತಿದ್ದೇವೆ. ತಪ್ಪದೆ ಓದಿ ಹಾಗೂ ಅವಕಾಶ ಸಿಕ್ಕರೆ ನೀವು ಆ ಸ್ಥಳಗಳಿಗೊಮ್ಮೆ ಭೇಟಿ ನೀಡಿ ಸ್ವತಃ ಅನುಭವ ಪಡೆಯಿರಿ.

ಭಾರತವು 1947 ರಲ್ಲಿ ಸ್ವಾತಂತ್ರ್ಯ ಪಡೆಯಿತು. ಅದರ ತರುವಾಯವೂ ಸಹ ಅನೇಕ ವಿದೇಶಿಯರು ಇಲ್ಲಿಯೇ ನೆಲೆಸಿದರು. ಇವರಲ್ಲಿ ಯಹೂದಿಯರು, ಫ್ರೆಂಚರು, ಚೀನಿಯರು ಹೀಗೆ ಹಲವು ಸಂಪ್ರದಾಯದ ಜನರು ಇಲ್ಲಿಯೇ ನೆಲೆಸಿ ಭಾರತವನ್ನು ತಮ್ಮ ತಮ್ಮ ಸಂಸ್ಕೃತಿಗಳ ಜೀವನಶೈಲಿಯಿಂದ ಮತ್ತಷ್ಟು ಸಿರಿವಂತಗೊಳಿಸಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.

ಪಾಂಡೆಚೆರಿ
ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿ ಅಥವಾ ಪಾಂಡಿಚೆರಿಯು ಮೊದಲಿನಿಂದಲೂ ತನ್ನಲ್ಲಿ ಫ್ರೆಂಚ್ ಪ್ರಭಾವವಿರುವುದನ್ನು ಎದ್ದು ಕಾಣುವಂತೆ ತೋರಿಸುತ್ತದೆ. ಇದನ್ನು ಫ್ರಾನ್ಸಿನ ಪೂರ್ವದ ರಿವಿಯೆರಾ ಎಂತಲೂ ಕರೆಯಲಾಗುತ್ತದೆ. ಇಲ್ಲಿ ಭಾರತೀಯ ಸಂಸ್ಕೃತಿಯು ಫ್ರೆಂಚ್ ಸಂಸ್ಕೃತಿಯೊಂದಿಗೆ ವಿಶಿಷ್ಟವಾಗಿ ಸಂಯೋಜಿಸಲ್ಪಟ್ಟ ರೀತಿಯನ್ನು ಕಣ್ಣಾರೆ ಕಾಣುವುದಲ್ಲದೆ ಅನುಭವಿಸಲೂ ಬಹುದಾಗಿದೆ.

ಇದನ್ನೂ ಓದಿ:  Friends: 30ರ ವಯೋಮಾನದ ನಂತರ ಹೆಚ್ಚಿನ ಜನರು ತಮ್ಮ ಸ್ನೇಹಿತರಿಂದ ದೂರ ಸರಿಯುತ್ತಾರಂತೆ!

ಇಲ್ಲಿನ ಫ್ರೆಂಚ್ ಕ್ವಾರ್ಟರ್ ಬೀದಿ ಹಾಗೂ ಫ್ರೆಂಚ್ ವಾಸ್ತುಶೈಲಿಯ ಹಲವು ರಚನೆಗಳು ಮತ್ತು ಇಂದಿಗೂ ಭಾರತದಲ್ಲೇ ನೆಲೆಸಿರುವ ಹಲವು ಫ್ರೆಂಚ್ ಜನರು ನಿಮಗೆ ಇಲ್ಲಿ ಕಂಡುಬರುತ್ತಾರೆ. ಹಾಗಾಗಿ, ಒಮ್ಮೊಮ್ಮೆ ನೀವು ಫ್ರೆಂಚ್ ನಲ್ಲಿದ್ದೀರಿ ಎಂಬ ಭಾವನೆ ಇಲ್ಲಿದ್ದಾಗ ಬಂದರೂ ಅಚ್ಚರಿಯಾಗದೆ ಇರಲಾರದು.

ಕೊಚ್ಚಿ
ಸೊಲೋಮನ್ ರಾಜನ ಸಮಯದಲ್ಲಿ ಇಸ್ರೇಲ್ ದೇಶವು ಇಬ್ಭಾಗವಾದಾಗ ಬಹು ಸಂಖ್ಯೆಯಲ್ಲಿ ಅಲ್ಲಿನ ಯಹೂದಿಯರು ಕೊಚ್ಚಿ ಕೋಟೆಯ ಮಲಬಾರ್ ಕರಾವಳಿಗೆ ವಲಸೆ ಬಂದರೆನ್ನಲಾಗುತ್ತದೆ. ಇಲ್ಲಿ ಹದಿನಾರನೇ ಶತಮಾನದ ಪರದೇಸಿ ಸಿನಾಗಾಗ್ ಪ್ರಸಿದ್ಧವಾಗಿದ್ದು ಯಹೂದಿಯರ ವಸಾಹತುಗಳನ್ನು ಬಿಂಬಿಸುವಂತಹ ಹಲವು ಅಂಗಡಿ-ಮುಗ್ಗಟ್ಟುಗಳು ಇಲ್ಲಿವೆ.

ಮುಂಬೈ
ಪಾರ್ಸಿ ಸಮುದಾಯದ ಪ್ರಭಾವವನ್ನು ಭಾರತದಲ್ಲಿ ಅತಿ ಹೆಚ್ಚಾಗಿ ಮುಂಬೈನಲ್ಲಿ ಕಾಣಬಹುದಾಗಿದೆ. ಲಿಖಿತ ದಾಖಲೆಗಳ ಪ್ರಕಾರ ಪಾರ್ಸಿಗಳು ಮೊದಲಿಗೆ ಭಾರತದ ಗುಜರಾತ್ ನಲ್ಲಿರುವ ಸಂಜನ್ ಪಟ್ಟಣಕ್ಕೆ ಬಂದರೆಂದು ನಮೂದಿಸಲಾಗಿದ್ದರೂ ಸಮಯ ಕಳೆಯದಂತೆ ಆ ಸಮುದಾಯದವರು ಮಹಾರಾಷ್ಟ್ರದ ಅದರಲ್ಲೂ ವಿಶೇಷವಾಗಿ ಮುಂಬೈಗೆ ಬಂದು ನೆಲೆಸಿದರೆನ್ನಲಾಗಿದೆ. ಸದ್ಯ ಮುಂಬೈ ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಪಾರ್ಸಿಗಳಿಗೆ ನೆಲೆಯಾಗಿದೆ. ದಾದರ್ ಪಾರ್ಸಿ ಕಾಲೋನಿ ಈ ಸಮುದಾಯದವರ ಪ್ರಭಾವವನ್ನು ಕಾಣಬಹುದಾದ ಪ್ರತಿಷ್ಠಿತ ಪ್ರದೇಶವಾಗಿದೆ.

ಕೊಲ್ಕತ್ತಾ
ಚೀನಿಯರ ಉಪಸ್ಥಿತಿ ಹಾಗೂ ಪ್ರಭಾವವನ್ನು ಭಾರತದಲ್ಲಿ ಹೆಚ್ಚಿನ ಮಟ್ಟಿಗೆ ಕೊಲ್ಕತ್ತಾದಲ್ಲಿ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಕೊಲ್ಕತ್ತಾದ ತಂಗ್ರಾ ಎಂಬ ಸ್ಥಳದಲ್ಲಿ ಹೆಚ್ಚಿನ ಚೀನಾ ಜೀವನಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ಸೆಂಟ್ರಲ್ ಕೊಲ್ಕತ್ತಾದ ಹಳೆಯ ಚೈನಾ ಮಾರುಕಟ್ಟೆಯಲ್ಲಿ 5000 ಕ್ಕೂ ಹೆಚ್ಚು ಚೀನಾ ಮೂಲದ ಭಾರತೀಯರು ಇರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ:  World Best Place: ಉಳಿಯೋಕೆ ಇಡೀ ವಿಶ್ವದಲ್ಲೇ ಈ 10 ನಗರಗಳು ಬೆಸ್ಟ್!

ಅವರು ಭಾರತೀಯರಾಗಿದ್ದರೂ ಇಂದಿಗೂ ತಮ್ಮ ಚೀನಿ ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಜೀವಂತವಾಗಿರಿಸಿದ್ದಾರೆ. ಇಲ್ಲಿ ನೀವು ನೈಜವಾದ ಚೀನಾ ಖಾದ್ಯಗಳ ಆನಂದವನ್ನು ಅನುಭವಿಸಬಹುದು ಹಾಗೂ ಚೈನೀಸ್ ಹೊಸ ವರ್ಷದ ಸಂದರ್ಭದಲ್ಲಿ ಇಲ್ಲಿ ಅದ್ದೂರಿಯಾಗಿ ನಡೆಯುವ ಹೊಸ ವರ್ಷಾಚರಣೆಯನ್ನೂ ಸಹ ಕಾಣಬಹುದು.
Published by:Ashwini Prabhu
First published: