ದೀರ್ಘಕಾಲ ಕುಳಿತುಕೊಳ್ಳುವುದು, ಕುಳಿತೇ ಕೆಲಸ (Sitting Work) ಮಾಡುವುದು, ಹೆಚ್ಚು ದೈಹಿಕ ಚಟುವಟಿಕೆಯಲ್ಲಿ (Physical Activities) ತೊಡಗಿಸಿಕೊಳ್ಳದೇ ಇರುವುದು, ಒಂದೇ ಸ್ಥಾನದಲ್ಲಿ ಹೆಚ್ಚು ಹೊತ್ತು ಕುಳಿತಿರುವುದು, ದೀರ್ಘಕಾಲ ಒಂದೇ ಭಂಗಿಯಲ್ಲಿ ಕುಳಿತಿರುವುದು, ಮನೆಯಿಂದಲೇ ಕೆಲಸ ಮಾಡುವುದು, ಮೊಬೈಲ್, ಟಿವಿ ನೋಡುತ್ತಾ, ಗಂಟೆಗಟ್ಟಲೇ ಕುಳಿತುಕೊಳ್ಳುವುದು, ಹಾಗೂ ಸತತವಾಗಿ ದಿನದ ದೀರ್ಘ ಸಮಯ ಕುಳಿತೇ ಕಳೆಯುವುದು ಬೊಜ್ಜು ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ಸ್ಥೂಲಕಾಯದ (Obesity) ನಡುವಿನ ಸಂಪರ್ಕದ ಬಗ್ಗೆ ಸಂಶೋಧನೆ ಮತ್ತು ಅಧ್ಯಯನಗಳು ಏನು ಹೇಳಿವೆ? ನಿಜವಾಗಿಯೂ ದೀರ್ಘಕಾಲ ಕುಳಿತುಕೊಳ್ಳುವುದು ಬೊಜ್ಜು ಉಂಟು ಮಾಡುತ್ತದೆಯೇ? ಎಂಬುದರ ಬಗ್ಗೆ ತಿಳಿಯೋಣ.
ದೀರ್ಘಕಾಲ ಕುಳಿತುಕೊಳ್ಳುವುದು ಬೊಜ್ಜು ಉಂಟು ಮಾಡುತ್ತದೆಯೇ?
ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಚಟುವಟಿಕೆಯಿಂದ ದೂರ ಉಳಿಯುತ್ತಿದ್ದಾರೆ. ಆದರೆ ದೈಹಿಕ ಚಟುವಟಿಕೆ ಕೊರತೆ ಸ್ಥೂಲಕಾಯ ಉಂಟು ಮಾಡುತ್ತದೆ ಮತ್ತು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಹಾಗೂ ದೀರ್ಘಕಾಲ ಕುಳಿತುಕೊಂಡಿರುವುದು ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
ಎನ್ ಸಿಬಿಐ ಅಧ್ಯಯನ ಪ್ರಕಾರ, ಸಾಮಾನ್ಯ ವ್ಯಕ್ತಿಗಿಂತ, ಬೊಜ್ಜು ಹೊಂದಿರುವ ಜನರು ದಿನವಿಡೀ 2 ಗಂಟೆ ಹೆಚ್ಚು ಕುಳಿತುಕೊಳ್ಳುತ್ತಾರೆ. ಜಡ ಜೀವನಶೈಲಿಯಿಂದ ಬೊಜ್ಜು ಮತ್ತು ಆರೋಗ್ಯ ಸಮಸ್ಯೆ ಬೆಳೆಯುತ್ತವೆ ಎಂದು ಹೇಳಿದೆ.
ಹೆಚ್ಚು ಆಹಾರ ಸೇವಿಸುವುದು, ತಿನ್ನುತ್ತಲೇ ಟಿವಿ ನೋಡುವುದು, ಮನೆಯಿಂದ ಕೆಲಸ ಮಾಡುವುದು, ಡಿಜಿಟಲೀಕರಣ ಮತ್ತು ಗೇಮಿಂಗ್ ಜಗತ್ತಿನಲ್ಲಿ ನಿರತರಾಗಿರುವ ಜನರು ಬೊಜ್ಜು, ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಾರೆ ಎಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಸಹ ಬೊಜ್ಜು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕಾರಣ ಕಾರ್ಟೂನ್ ನೋಡುವುದು, ಗೇಮಿಂಗ್ ಹವ್ಯಾಸವಾಗಿದೆ. ಈ ರೀತಿಯ ಎಲ್ಲಾ ಹವ್ಯಾಸ, ಕೆಟ್ಟ ಅಭ್ಯಾಸಗಳು ಸ್ಥೂಲಕಾಯ ಸಮಸ್ಯೆಗೆ ಕಾರಣವಾಗುತ್ತದೆ.
ಸಂಶೋಧನೆ ಏನ್ ಹೇಳುತ್ತದೆ?
ಎನ್ ಸಿಬಿಐ ಪ್ರಕಾರ, ದೈಹಿಕವಾಗಿ ವ್ಯಕ್ತಿಯು ಸಕ್ರಿಯವಾಗಿ ಇರದೇ ಹೋದರೆ, ಹೆಚ್ಚಿನ ಸಮಯ ಕುಳಿತು ಕಳೆಯುತ್ತಿದ್ದರೆ, ಅಂತಹವರ ಹೊಟ್ಟೆ ಮತ್ತು ಸೊಂಟದ ಕೊಬ್ಬು ಹೆಚ್ಚುತ್ತದೆ ಎಂದು ಹೇಳಿದೆ. ದಿನದಲ್ಲಿ ಕುಳಿತುಕೊಳ್ಳುವ ಸಮಯವನ್ನು ಮಿತಿಗೊಳಿಸುವುದು, ನಿಯಮಿತ ದೈಹಿಕ ಚಟುವಟಿಕೆ ಮಾಡುತ್ತಾ ಹೋದರೆ ಬೊಜ್ಜು ಮತ್ತು ಹೊಟ್ಟೆ ಕೊಬ್ಬು ಕರಗಿಸಬಹುದು ಎಂದು ಹೇಳಿದೆ.
ತೂಕ ಇಳಿಕೆ ನಂತರ ಮತ್ತೆ ದೀರ್ಘಕಾಲ ಕುಳಿತೇ ಇರುವ ದಿನಚರಿಯಿಂದ ಬೊಜ್ಜಿನ ಅಪಾಯ
ಈಗಾಗಲೇ ತೂಕ ಇಳಿಸಿದ್ದರೆ, ಮತ್ತೆ ದೈಹಿಕ ಚಟುವಟಿಕೆ ಮಾಡದೇ ದೀರ್ಘಕಾಲ ಕುಳಿತುಕೊಳ್ಳುವ ಅಭ್ಯಾಸ ಮುಂದುವರೆಸಿದರೆ ಮತ್ತೆ ಹೊಟ್ಟೆ ಕೊಬ್ಬು ಹೆಚ್ಚಾಗಬಹುದು. ಹಾಗಾಗಿ ತೂಕ ಇಳಿಕೆ ನಂತರ ದೈಹಿಕವಾಗಿ ಸಕ್ರಿಯವಾಗಿರಬೇಕು. ದೀರ್ಘಕಾಲದ ಬೊಜ್ಜಿನಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಸಮಸ್ಯೆ ಹೆಚ್ಚಾಗುತ್ತವೆ. ಹಾಗಾಗಿ ಪ್ರತೀ 30 ನಿಮಿಷದ ನಂತರ ಎದ್ದು ನಿಂತು ಸ್ಟ್ರೆಚಿಂಗ್ ಅಥವಾ ನಡೆದಾಡಿ.
ಬೊಜ್ಜು ಕಡಿಮೆ ಮಾಡಲು ಈ ಅಭ್ಯಾಸ ಫಾಲೋ ಮಾಡಿ
ಲಿಫ್ಟ್ ಬದಲಿಗೆ ಮೆಟ್ಟಿಲು ಬಳಸಿ
ಕಚೇರಿಯಿಂದ ಮನೆ ಹತ್ತಿರವಿದ್ದರೆ ನಡೆದುಕೊಂಡೇ ಹೋಗಿ. ಬಸ್, ಆಟೋ ಬಳಸಬೇಡಿ. ಕಚೇರಿಗೆ ಹೋಗುವಾಗ ಮೆಟ್ಟಿಲಿದ್ದರೆ, ಅದನ್ನೇ ಬಳಸಿ. ಲಿಫ್ಟ್ ಮತ್ತು ಎಲಿವೇಟರ್ ಬಳಕೆ ಬೇಡ. ಇದು ನಿಮ್ಮನ್ನು ದೈಹಿಕವಾಗಿ ಸದೃಢ ಮತ್ತು ಸಕ್ರಿಯವಾಗಿರಿಸುತ್ತದೆ. ಹಾಗೂ ನಿಧಾನವಾಗಿ ಬೊಜ್ಜು ಕಡಿಮೆಯಾಗುತ್ತದೆ.
ವಾಕಿಂಗ್ ಮಾಡಿ
ದಿನವೂ ನಿಯಮಿತವಾಗಿ ವಾಕಿಂಗ್ ಮಾಡಿದರೆ ಬೇಗ ಬೊಜ್ಜು ಕರಗುತ್ತದೆ. ಹಾಗೂ ರೋಗಗಳು ಕಾಡುವುದಿಲ್ಲ. ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ.
ಹೆಚ್ಚು ನೀರು ಕುಡಿಯಿರಿ
ಯಾವಾಗಲೂ ಕೆಲಸದ ಮೇಜಿನ ಬಳಿ ನೀರಿನ ಬಾಟಲಿ ಇಡಿ. ಆಗಾಗ್ಗೆ ನೀರು ಕುಡಿಯುತ್ತಾ ದೇಹವನ್ನು ಹೈಡ್ರೀಕರಿಸಿ. ಇದು ಬೊಜ್ಜು ಹೆಚ್ಚಾಗುವ ಚಿಂತೆಯನ್ನು ದೂರ ಮಾಡುತ್ತದೆ. ಆರೋಗ್ಯಕ್ಕೂ ಉತ್ತಮ.
ನಿಯಮಿತವಾಗಿ ವ್ಯಾಯಾಮ ಮಾಡಿ
ದಿನವೂ ನಿಯಮಿತವಾಗಿ 30 ನಿಮಿಷ ವ್ಯಾಯಾಮ ಮಾಡಿ. ಜಾಗಿಂಗ್, ವಾಕಿಂಗ್, ಸೈಕ್ಲಿಂಗ್ ಮುಂತಾದ ಸರಳ ವ್ಯಾಯಾಮ ಮಾಡಿ.
ವಿರಾಮ ತೆಗೆದುಕೊಳ್ಳಿ
ದೀರ್ಘಕಾಲ ಕೆಲಸ ಮಾಡುವುದು, ಟಿವಿ ನೋಡುವುದನ್ನು ತಪ್ಪಿಸಿ. ಮಧ್ಯದಲ್ಲಿ ಸಣ್ಣ ವಿರಾಮ ತೆಗೆದುಕೊಳ್ಳಿ. ಆಗಾಗ್ಗೆ ಎದ್ದು ತಿರುಗಾಡಿ. ಹೀಗೆ ದೇಹವನ್ನು ಸಕ್ರಿಯವಾಗಿರಿಸಿ. ಇದು ಕೊಬ್ಬು ಕರಗಿಸುತ್ತದೆ.
ಇದನ್ನೂ ಓದಿ: ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದೆಂದು ಅತಿಯಾಗಿ ಸೇವಿಸಬೇಡಿ, ಲಿವರ್ ಹಾಳಾಗುತ್ತೆ
ಆರೋಗ್ಯಕರ ಆಹಾರ ಸೇವಿಸಿ
ಆರೋಗ್ಯಕರ ಊಟ ಮಾಡಿ. ಕ್ಯಾಲೋರಿ ಮತ್ತು ಕೊಬ್ಬಿನ ಪದಾರ್ಥ ಸೇವನೆ ತಪ್ಪಿಸಿ. ಅನಾರೋಗ್ಯಕರ ಜಂಕ್ ಫುಡ್ ಸೇವನೆ ಬೇಡ. ಪೋಷಕಾಂಶ ಭರಿತ ಆಹಾರ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ