ಬಹಳಷ್ಟು ಜನರಿಗೆ ಪೆಟ್ರೋಲ್ ವಾಸನೆ, ಬಣ್ಣದ ವಾಸನೆ, ಪೇಂಟ್, ಹೊಸ ಬಟ್ಟೆಯ, ಹೊಸ ವಸ್ತುಗಳ ಕಟು ವಾಸನೆ ಇವೆಲ್ಲ ಬಹಳ ಇಷ್ಟವಾಗುತ್ತದೆ. ಇದರಲ್ಲಿ ಹೊಸ ಕಾರ್‌ನ ಪರಿಮಳ (Smell) ಕೂಡ ಒಂದು. ಆದರೆ ಹೀಗೆ ಹೊಸ ಕಾರಿನ ಪರಿಮಳವನ್ನು ನೀವು ಇಷ್ಟಪಡುತ್ತೀರಾ? ಅದರಲ್ಲಿ ಲಾಂಗ್ ಡ್ರೈವ್ (Long Drive) ಹೋಗುತ್ತೀರಾ ಎಂದಾದರೆ ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಇದರಲ್ಲಿರುವ ರಾಸಾಯನಿಕಗಳ ವಾಸನೆಯನ್ನು ಮೂಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು. ಹೌದು, ಈ ಸುದ್ದಿ ಬಹಳಷ್ಟು ಜನರಿಗೆ ಆಘಾತವನ್ನು ಉಂಟುಮಾಡಬಹುದು. ಆದರೆ ನಿಮಗೆ ಇಷ್ಟವಾಗುವಂಥ ಹೊಸ ಕಾರಿನ (New Car) ವಾಸನೆಯು ತುಂಬಾ ಅಪಾಯಕಾರಿಯಾಗಿದೆ. ಈ ಕುರಿತು ನಡೆದಂತಹ ಹೊಸ ಅಧ್ಯಯನದಲ್ಲಿ, ಹೊಸ ಕಾರುಗಳಲ್ಲಿ ಲಾಂಗ್ ಡ್ರೈವ್ ಮಾಡುವುದು ಕ್ಯಾನ್ಸರ್‌ಗೆ (Cancer) ಕಾರಣವಾಗಬಹುದು ಎಂದು ಕಂಡುಬಂದಿದೆ.
20 ನಿಮಿಷಗಳ ಡ್ರೈವ್ ಕೂಡ ಅಪಾಯಕಾರಿಯಂತೆ!
ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಚೀನಾದ ಬೀಜಿಂಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರ ತಂಡವು ಇತ್ತೀಚಿನ ಹೊಸ ಅಧ್ಯಯನ ನಡೆಸಿದೆ. ಅದರ ಪ್ರಕಾರ, ದೀರ್ಘಕಾಲದವರೆಗೆ ಹೊಸ ಆಟೋಮೊಬೈಲ್ಅನ್ನು ಚಾಲನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.
ಅಲ್ಲದೇ 20 ನಿಮಿಷಗಳ ಕಾಲ ವಾಹನ ಚಲಾಯಿಸುವುದರಿಂದ ಕೂಡ ಅಪಾಯಕಾರಿ ಹಾನಿಕಾರಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳಬಹುದು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಅಧ್ಯಯನ ಏನು ಹೇಳುತ್ತದೆ?
ಅಧ್ಯಯನದ ವೇಳೆ ಸಂಶೋಧಕರು, ವಿವಿಧ ವಸ್ತುಗಳನ್ನು ಗುರುತಿಸಲು ಸಂವೇದಕಗಳನ್ನು ಬಳಸಿ, ಹೊಸ ವಾಹನಗಳಲ್ಲಿನ ಗಾಳಿಯ ಗುಣಮಟ್ಟವನ್ನು ತನಿಖೆ ಮಾಡಿದರು. ಈ ವೇಳೆ ಆಟೋಮೊಬೈಲ್‌ಗಳನ್ನು ಬಿಗಿಯಾಗಿ ಮುಚ್ಚಲಾಯಿತು. ಸತತ 12 ದಿನಗಳವರೆಗೆ "ವಿವಿಧ ಪರಿಸರದ ಪರಿಸ್ಥಿತಿಗಳಲ್ಲಿ" ಹೊರಗೆ ಬಿಡಲಾಯಿತು.
ಇದನ್ನೂ ಓದಿ: ಒಡವೆ ಸೇರಿದಂತೆ ಮನೆಯಲ್ಲಿನ ಈ ವಸ್ತುಗಳನ್ನು ಕ್ಲೀನ್ ಮಾಡಲು ಟೂತ್ಪೇಸ್ಟ್ ಬೆಸ್ಟ್
ಈ ಹೊಸ ವಾಹನಗಳಲ್ಲಿ U.S. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯು ಕ್ಯಾನ್ಸರ್ಗೆ ಕಾರಣವಾಗಬಹುದೆಂದು ಹೇಳುವ ಫಾರ್ಮಾಲ್ಡಿಹೈಡ್, ಚೀನಾದ ರಾಷ್ಟ್ರೀಯ ಸುರಕ್ಷತೆಯ ಅಗತ್ಯತೆಗಳಿಗಿಂತ 34.9% ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದೆ.
ಹೊಸ ಕಾರಿನ ವಾಸನೆ ಹೇಗೆ ಅಪಾಯಕಾರಿಯಾಗಬಹುದು?
ಈ ಬಾಷ್ಪಶೀಲ ಸಾವಯವ ಸಂಯುಕ್ತಗಳ ಮಿಶ್ರಣದಿಂದ "ಹೆಚ್ಚಿನ ಸಂಭಾವ್ಯ ಆರೋಗ್ಯ ಅಪಾಯ" ಎಂದು ಹೇಳಲಾಗಿದೆ. ಆದ್ದರಿಂದ ಹೊಸ ಕಾರುಗಳಿಗೆ ವಿಶಿಷ್ಟವಾದ ವಾಸನೆಯನ್ನು ನೀಡುವ ರಾಸಾಯನಿಕಗಳು ಚಾಲಕರಿಗೆ ಹೆಚ್ಚಿನ ಆರೋಗ್ಯ ಅಪಾಯವನ್ನು ಉಂಟುಮಾಡುತ್ತವೆ.
ಇದನ್ನೂ ಓದಿ: ಈ ದೇಶಗಳಲ್ಲಿ 1 ಚಹಾ ಕುಡಿಯೋ ದುಡ್ಡಲ್ಲಿ ಇಲ್ಲಿ 3 ಲೋಟ ಕುಡಿಯಬಹುದು
ಅಧ್ಯಯನದ ಪ್ರಕಾರ, ಹೊಸ ಕಾರಿನಲ್ಲಿ ಚಾಲಕರು ಮತ್ತು ಪ್ರಯಾಣಿಕರಿಗೆ ಕ್ಯಾನ್ಸರ್ ಅಪಾಯ ಹೆಚ್ಚಾಗುವಲ್ಲಿ ಇನ್ಹಲೇಷನ್ ಮಾರ್ಗವು ಮಹತ್ವದ್ದು. ತಾಪಮಾನವು ಏರಿದಾಗ ಸಂಯುಕ್ತಗಳ ಸಾಂದ್ರತೆಯು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ.
“ಈ ಅಧ್ಯಯನವು ತಮ್ಮ ವಾಹನಗಳಲ್ಲಿ ಗಮನಾರ್ಹ ಸಮಯವನ್ನು ಕಳೆಯುವ ಜನರಿಗೆ ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್‌ನ ಇನ್ಹಲೇಷನ್‌ಗೆ ಸಂಬಂಧಿಸಿದ ಸಂಭಾವ್ಯ ಅಪಾಯವನ್ನು ಎತ್ತಿ ತೋರಿಸುತ್ತದೆ.
ಇದಲ್ಲದೆ, ವೈವಿಧ್ಯಮಯ ಹವಾಮಾನವನ್ನು ಹೊಂದಿರುವ ದೇಶಗಳಿಂದ ರಾಸಾಯನಿಕ ಸಾಂದ್ರತೆಗಳಲ್ಲಿನ ವ್ಯತ್ಯಾಸವು ಕ್ಯಾಲಿಫೋರ್ನಿಯಾ ರಾಜ್ಯಕ್ಕೆ ನೇರವಾಗಿ ಅನ್ವಯಿಸುವುದಿಲ್ಲ" ಎಂದು ಹೇಳಿದೆ.
ಅಲ್ಲದೇ ಬೆಂಜೀನ್ ಮತ್ತು ಫಾರ್ಮಾಲ್ಡಿಹೈಡ್ ಪ್ರಾಪ್ 65 ಪಟ್ಟಿಯಲ್ಲಿರುವುದರಿಂದ, ವಾಹನಗಳಲ್ಲಿ ಪ್ರಯಾಣದ ಸಮಯ ಮತ್ತು ಈ ಎರಡೂ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರ ಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಕುರಿತು ಮೊದಲೂ ನಡೆದಿತ್ತು ಅಧ್ಯಯನ
ಅಂದಹಾಗೆ ಈ ರೀತಿಯ ಅಧ್ಯಯನ ನಡೆಸಿರುವುದು ಇದೇ ಮೊದಲಲ್ಲ. 2021 ರಲ್ಲಿ, ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ತಜ್ಞರು ಹೊಸ ಆಟೋಮೊಬೈಲ್ ಅನ್ನು ದೀರ್ಘಕಾಲದವರೆಗೆ ಚಾಲನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಾಗಬಹುದು ಎಂದು ಹೇಳಿದ್ದರು. ಅಲ್ಲದೇ ಹೊಸ ಕಾರನ್ನು 20 ನಿಮಿಷಗಳ ಕಾಲ ಅದನ್ನು ಚಾಲನೆ ಮಾಡುವುದು ಅಪಾಯಕಾರಿ ಎಂದೂ ಅಧ್ಯಯನದಲ್ಲಿ ಹೇಳಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ