ಎಚ್ಚರ! ಟೈಟ್​​ ಪ್ಯಾಂಟ್ ಧರಿಸಿ ಕಾರು ಚಲಾಯಿಸುತ್ತೀರಾ?

ಆದರೆ ಹೃಷಿಕೇಶಕ್ಕೆ ತಲುಪುತ್ತಿದ್ದಂತೆ ಕಾಲು ಊದಿಕೊಂಡಿರುವುದು ಸೌರಭ್​ ಶರ್ಮಾ ಅವರಿಗೆ ತಿಳಿಯಿತು. ಬಳಿಕ ಕಣ್ಣು ಮಂಜಾಯಿತು. ಸ್ವಲ್ಪ ಹೊತ್ತಿದೆ ಪ್ರಜ್ನೆ ತಪ್ಪಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲುಪಿಸಿದ್ದಾರೆ.

news18-kannada
Updated:November 23, 2019, 7:41 AM IST
ಎಚ್ಚರ! ಟೈಟ್​​ ಪ್ಯಾಂಟ್ ಧರಿಸಿ ಕಾರು ಚಲಾಯಿಸುತ್ತೀರಾ?
ಸಾಂದರ್ಭಿಕ ಚಿತ್ರ
  • Share this:
ಆಟೋಮ್ಯಾಟಿಕ್​ ಗಿಯರ್​ ಹೊಂದಿರುವ ಕಾರ್ ಡ್ರೈವ್​ ಮಾಡುವುದು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಎಲ್ಲರಿಗೂ ಇಷ್ಟ. ಆಗಾಗ ಕ್ಲಚ್​ ಒತ್ತುವ ಮತ್ತು ಗೇರ್​ ಹಾಕುವ ಕಿರಿ ಕಿರಿಯೇ ಇರುವುದಿಲ್ಲ. ಸುಮ್ಮನೆ ಕುಳಿತುಕೊಂಡು ಸ್ವಲ್ಪ ಸ್ಟೇರಿಂಗ್​ತಿರುಗಿಸದರೆ ಸಾಕು. ಆದರೆ ಕಾರು ಚಾಲನೆ ಮಾಡುವಾಗ ಟೈಟ್​ ಜೀನ್ಸ್​ ಧರಿಸಿದರೆ ಮಾತ್ರ ಕಥೆ ಅಷ್ಟೆ.! ಇತ್ತೀಚೆಗೆ ಘಟನೆಯೊಂದು ನಡೆದಿದ್ದು. ಕಾರು ಚಾಲಕರನ್ನು ಬೆರಗುಗೊಳಿಸುವಂತೆ ಮಾಡಿದೆ. 30 ವರ್ಷದ ಉದ್ಯಮಿಯೊಬ್ಬರು ಸಾವಿನಿಂದ ಪಾರಾಗಿ ಬಂದಿದ್ದಾರೆ.

ದೆಹಲಿ ಮೂಲದ ಸೌರಭ್​ ಶರ್ಮಾ ಎಂಬವರು ಅಟೋಮ್ಯಾಟಿಕ್​ ಕಾರಿನಲ್ಲಿ ಹೃಷಿಕೇಶಕ್ಕೆ ಡ್ರೈವ್​ ಮಾಡಿದ್ದರು. ಈ ವೇಳೆ ಟೈಟ್​ ಜೀನ್ಸ್​ ಧರಿಸಿಕೊಂಡಿದ್ದರು. ಸುಮಾರು 8 ಗಂಟೆಗಳ ಕಾಲ ಸೌರಭ್​​ ಶರ್ಮಾ ಕಾರನ್ನು ಚಾಲನೆ ಮಾಡಿದ್ದಾರೆ. ಅಟೋಮ್ಯಾಟಿಕ್​ ಕಾರಿನಲ್ಲಿ ಕ್ಲಚ್​ ಇಲ್ಲದೆ ಇರುವುದರಿಂದ ಎಡಗಾಲಿಗೆ ಏನು ಕೆಲಸವಿಲ್ಲದೆ ಹಾಗೇ ಡ್ರೈವ್​ ಮಾಡಿದ್ದಾರೆ.

ಆದರೆ ಹೃಷಿಕೇಶಕ್ಕೆ ತಲುಪುತ್ತಿದ್ದಂತೆ ಕಾಲು ಊದಿಕೊಂಡಿರುವುದು ಸೌರಭ್​ ಶರ್ಮಾ ಅವರಿಗೆ ತಿಳಿಯಿತು. ಬಳಿಕ ಕಣ್ಣು ಮಂಜಾಯಿತು. ಸ್ವಲ್ಪ ಹೊತ್ತಿದೆ ಪ್ರಜ್ನೆ ತಪ್ಪಿದ್ದಾರೆ. ಕೂಡಲೇ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲುಪಿಸಿದ್ದಾರೆ.

ಆಸ್ಪತ್ರೆಗೆಯಲ್ಲಿ ಅವರಿಗೆ ಕಡಿಮೆ ರಕ್ತದ ಮತ್ತು ಕಿಡ್ನಿ ಸರಿಯಾಗಿ ಕೆಲಸ ಮಾಡದಿರುವುದು ತಿಳಿದುಬಂದಿದೆ. ಆನಂತರ 24 ಗಂಟೆಗಳ ಕಾಲ ಡಯಾಲಿಸಿಸ್​ ಮಾಡಿಸಿ ಚಿಕಿತ್ಸೆ ಕೊಡಲಾಗಿದೆ. ಇದರಿಂದಾಗಿ ಸೌರಭ್​ ಶರ್ಮಾ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಪ್ರಯಾಣದ ವೇಳೆ  ಸೌರಭ್​ ಶರ್ಮಾ ಬಿಗಿಯಾದ ಪ್ಯಾಂಟ್​ ಧರಿಸಿದ್ದಾರೆ. ಮಾತ್ರದಲ್ಲದೆ, ನಿರಂತರ ಡ್ರೈವಿಂಗ್​ ಮಾಡುತ್ತ ವಿಶ್ರಾಂತಿ ತೆಗೆದುಕೊಳ್ಳದೆ ಕಾರು ಚಲಾಯಿಸಿದ್ದಾರೆ. ಇದರಿಂದ ಕಾಲಿಗೂ ಯಾವುದೇ ಕೆಲವಿಲ್ಲದೆ ಕಡಿಮೆ ರಕ್ತದ ಒತ್ತಡ ಕಂಡು ಬಂದಿದೆ ಎನ್ನಲಾಗಿದೆ.

ಇನ್ನು ವಾಹನ ಚಾಲನೆ ವೇಳೆ ವಿಶ್ರಾಂತಿ ತೆಗೆದುಕೊಂಡು ಡ್ರೈವ್​ ಮಾಡುವುದು ಒಳಿತು. ಮಾತ್ರವಲ್ಲದೆ, ಡ್ರೈವಿಂಗ್ ವೇಳೆ ಸಡಿಲವಾದ ಉಡುಪು ಧರಿಸಿದರೆ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: Bigg Boss Kannada 7: ಸೊಪ್ಪು ಮಾರುವವನ ಜತೆ ನಟಿ ಚೈತ್ರಾ ಕೋಟೂರ್ ಮದುವೆ: ಇದರ ಹಿಂದಿನ ಅಸಲಿಯತ್ತೇನು?ಇದನ್ನೂ ಓದಿ:  ಶಿಯೋಮಿ ಮಿ ಬ್ಯಾಂಡ್ 3i ಬಿಡುಗಡೆ; ಕಡಿಮೆ ಬೆಲೆ ಮಿ.ಕಾಂನಲ್ಲಿ ಲಭ್ಯ
First published: November 23, 2019, 7:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading