ಅವಳಲ್ಲಿ... ಅವನಿಲ್ಲಿ... ದೂರವಿದ್ದಷ್ಟೂ ಪ್ರೀತಿ ಜಾಸ್ತಿಯಂತೆ!

ಹತ್ತಿರ ಇರುವುದಕ್ಕಿಂತ ದೂರವಿದ್ದಷ್ಟೂ ಪ್ರೀತಿಯ ಬಂಧನ ಗಟ್ಟಿಯಾಗಿರುತ್ತದೆ ಎಂದು ಒಂದು ಅಧ್ಯಯನ ತಿಳಿಸಿದೆ. ಇದಕ್ಕೆ ಕಾರಣವೇನು? ಸಮೀಕ್ಷೆಯಲ್ಲಿ ಕಂಡುಹಿಡಿಯಲಾದ ಅಂಶಗಳೇನು? ಇಲ್ಲಿವೆ ಮಾಹಿತಿ...

sushma chakre | news18
Updated:February 3, 2019, 10:52 PM IST
ಅವಳಲ್ಲಿ... ಅವನಿಲ್ಲಿ... ದೂರವಿದ್ದಷ್ಟೂ ಪ್ರೀತಿ ಜಾಸ್ತಿಯಂತೆ!
ಸಾಂದರ್ಭಿಕ ಚಿತ್ರ
  • News18
  • Last Updated: February 3, 2019, 10:52 PM IST
  • Share this:
ದೂರವಿದ್ದರೆ ಸಂಬಂಧ ಹಳಸಲಾಗುತ್ತದೆ ಎಂಬ ಮಾತು ಪ್ರೇಮಿಗಳ ವಿಷಯದಲ್ಲಿ ಅನ್ವಯವಾಗುವುದಿಲ್ಲ. ಯಾಕೆಂದರೆ ದೂರವಿದ್ದಷ್ಟೂ ಅವರ ನಡುವಿನ ಪ್ರೀತಿ ಗಟ್ಟಿಯಾಗುತ್ತಾ ಹೋಗುತ್ತದೆ. ಹೌದು, ಅವನಲ್ಲಿ.. ಅವಳಿಲ್ಲಿ.. ಮಾತೂ ಉಂಟು.. ಕಥೆಯೂ ಉಂಟು... ಇದು ಈಗಿನ ಪೀಳಿಗೆಯ ಪ್ರೇಮಿಗಳ ಕಹಾನಿ.

ಯಾವುದೋ ದೂರದೂರಿನಲ್ಲಿರುವ ಹುಡುಗನ ಜೊತೆಗೆ ಮಗಳ ಮದುವೆಯನ್ನು ಮಾಡಬೇಕೆಂದರೆ ಹಿಂದೆಲ್ಲ ನೂರು ಬಾರಿ ಯೋಚಿಸುತ್ತಿದ್ದರು. ಹುಡುಗ ಹೇಗೋ ಏನೋ.. ಹತ್ತಿರದ ಊರಿನವನಾದರೆ ಆತನ ಕುಟುಂಬದ ಹಿನ್ನೆಲೆಯನ್ನು ತಿಳಿಯಲು ಸುಲಭವಾಗುತ್ತದೆ ಎಂಬೆಲ್ಲ ಲೆಕ್ಕಾಚಾರಗಳಿರುತ್ತಿತ್ತು. ಆದರೆ, ತಂತ್ರಜ್ಞಾನಗಳು ಮುಂದುವರೆದಂತೆಲ್ಲ ಬೇರೆ ಬೇರೆ ರಾಜ್ಯ, ದೇಶದವರು ಕೂಡ ನಮಗೆ ಆಪ್ತರೇ ಎಂಬಂತಾಗುತ್ತಿದ್ದಾರೆ.

ಹುಡುಗೀರಿಗೆ ಹೇಗಿದ್ರೆ ಇಷ್ಟವಾಗುತ್ತೆ ಗೊತ್ತಾ?; ಹುಡುಗರಿಗೆ ಗೊತ್ತಿಲ್ಲದ 9 ಸೀಕ್ರೆಟ್​ಗಳು

ಆಕೆಯ ಜೊತೆಗೆ ಜೀವನಪೂರ್ತಿ ಒಟ್ಟಿಗೇ ಇರಬೇಕೆಂಬುದು ಆತನ ಕನಸು. ಆದರೆ, ಆಕೆಗೆ ಆತನ ಜೊತೆಗೆ ಕೆರಿಯರ್​ ಕೂಡ ಮುಖ್ಯ. ಆತನೊಂದಿಗೆ ಕೆಲಸ ಮಾಡುತ್ತಿದ್ದ ಆಕೆಗೆ ಫಾರಿನ್​ಗೆ ಹೋಗುವ ಅವಕಾಶ ಸಿಗುತ್ತದೆ. ಕೈತುಂಬ ಸಂಬಳ. ಅಲ್ಲಿ ಒಂದೆರಡು ವರ್ಷ ಇದ್ದುಬಂದರೂ ಭವಿಷ್ಯ ಕಟ್ಟಿಕೊಳ್ಳಲು ಇನ್ನಷ್ಟು ಸಹಾಯವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಆಕೆ ಹೊರಟು ನಿಂತೇ ಬಿಟ್ಟಳು.

ಆಕೆ ಕ್ಯಾಲಿಫೋರ್ನಿಯದಲ್ಲಿ, ಆತ ಬೆಂಗಳೂರಿನಲ್ಲಿ. ದೂರವಿದ್ದರೂ ಪ್ರತಿದಿನ ವಿಡಿಯೋ ಕಾಲ್​ ಇದ್ದೇ ಇರುತ್ತಿತ್ತು. ಸಾವಿರಾರು ಕಿ.ಮೀ. ದೂರದಲ್ಲಿದ್ದರೂ ಅವರಿಬ್ಬರ ಬರ್ತಡೇ, ನ್ಯೂಇಯರ್​ನಂತಹ ಸಂಭ್ರಮಾಚರಣೆಗಳು ಸ್ಕೈಪ್​ ಮೂಲಕವೇ ನಡೆಯುತ್ತಿತ್ತು. ಹಾಗಾಗಿ, ದೂರವಿದ್ದರೂ ಅವರಿಬ್ಬರ ನಡುವಿನ ಸಂಬಂಧ ಮೊದಲಿನಂತೆಯೇ ಇತ್ತು. ವಿಡಿಯೋ ಕಾಲ್​ ಇದ್ದುದರಿಂದ ಇಬ್ಬರಿಗೂ ದೂರವಿದ್ದೇವೆಂಬ ಬೇಸರ ಕಾಡುತ್ತಲೇ ಇರಲಿಲ್ಲ.

ಬಾಚಣಿಗೆಯಲ್ಲಿ ಕೂದಲು ಕಿತ್ತುಬರುತ್ತಾ?; ಕೂದಲು ಉದುರುವಿಕೆಗೆ ಮನೆಯಲ್ಲೇ ಇದೆ ರಾಮಬಾಣ

ಮೊದಲೆಲ್ಲ ಹೀಗಿರಲಿಲ್ಲ. ಹೆಂಡತಿ ತವರಿಗೆ ಹೋದರೂ ಆಕೆ ಮರಳಿ ಬರುವವರೆಗೆ ಗಂಡನಿಗೆ ಚಡಪಡಿಕೆ. ಎರಡು ದಿನಕ್ಕೊಮ್ಮೆ ಪತ್ರ ವಿನಿಯಮವಾದರೂ ಆ ಪತ್ರ ಕೈಗೆ ತಲುಪುವವರೆಗೆ ಕಾಯಲೇಬೇಕಾಗಿತ್ತು. ಆಮೇಲೆ ಫೋನ್​ ಬಂದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು. ಇದೀಗ ಏನಿದ್ದರೂ ವಿಡಿಯೋ ಕಾಲ. ಇದನ್ನು ವರ್ಚುವಲ್ ರಿಯಾಲಿಟಿ ಎಂದು ಹೇಳಲಾಗುತ್ತದೆ. ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದವರನ್ನು ವಿಡಿಯೋ ಮೂಲಕ ನೋಡುತ್ತ ನಮ್ಮ ಜೊತೆಗೇ ಇದ್ದಾರೆ ಎಂಬ ಅನುಭವ ಪಡೆಯುವುದು ಈಗಿನವರಿಗೆ ಅಭ್ಯಾಸವಾಗುತ್ತಿದೆ. ಹಾಗಾಗಿಯೇ, ಗಂಡ-ಹೆಂಡತಿ ದೂರವಿದ್ದರೂ ಆ ಅಂತರ ಕಾಡುವುದಿಲ್ಲ.ಈ ಕಂಪನಿಗಳಲ್ಲಿ ಡೇಟಿಂಗ್ ಹೋಗಲೂ ಸಿಗುತ್ತೆ ರಜೆ!

ಅಧ್ಯಯನದ ಪ್ರಕಾರ, ಪ್ರತಿದಿನ ನೋಡುವ, ಮಾತನಾಡುವ, ಒಂದೇ ಕಡೆ ವಾಸವಾಗಿರುವವರಿಗಿಂತ ದೂರದಲ್ಲಿರುವವರ ನಡುವಿನ ಸಂಬಂಧ ಇನ್ನಷ್ಟು ಚೆನ್ನಾಗಿರುತ್ತದೆ. ಯಾವುದೇ ನಿರ್ಬಂಧಗಳಿಲ್ಲದೆ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿರುತ್ತಾರೆ, ತಮ್ಮೆಲ್ಲ ಅಭಿಪ್ರಾಯಗಳನ್ನು ಅವರು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಎಲ್ಲರ ಕೈಯಲ್ಲೂ ಸ್ಮಾರ್ಟ್​ಫೋನ್ ಇರುವುದರಿಂದ ಬೇಕಾದಾಗ ಫೋಟೋ ಕ್ಲಿಕ್ಕಿಸಿಕೊಂಡು, ವಿಡಿಯೋ ಕಾಲ್​ ಮಾಡಿಕೊಂಡು ಆರಾಮಾಗಿರಬಹುದು. ಇದರಿಂದ ನಮ್ಮ ಆಪ್ತರು ಹತ್ತಿರದಲ್ಲಿಯೇ ಇದ್ದಾರೆ ಎಂದೆನಿಸುತ್ತದ ಎಂಬ ಅಭಿಪ್ರಾಯವನ್ನು ಅಧ್ಯಯನಕ್ಕೊಳಗಾದವರು ತಿಳಿಸಿದ್ದಾರೆ. ಹೀಗಾಗಿ, ದೂರವಿರುವ ಜೋಡಿಗಳು ಸ್ಮಾರ್ಟ್​ಫೋನ್​ಗೊಂದು ಥ್ಯಾಂಕ್ಸ್​ ಹೇಳಲೇಬೇಕು ತಾನೇ??

First published:February 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ