Coronavirus: ಕೊರೊನಾ ವೈರಸ್​ನ ಈ ಲಕ್ಷಣಗಳು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಂತೆ

Long COVID Symptoms: ಇತ್ತೀಚಿನ ಅಧ್ಯಯನವೊಂದರಲ್ಲಿ, ತಜ್ಞರು ಕಡಿಮೆ ಲೈಂಗಿಕ ಕಾರ್ಯಕ್ಷಮತೆಯ ಜೊತೆ ಸಂಬಂಧಿಸಿರುವ ಕೆಲ ಮೂರು ರೋಗಲಕ್ಷಣಗಳನ್ನು ಕಂಡುಕೊಂಡಿದ್ದಾರೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೊರೊನಾ ಪರೀಕ್ಷೆಯ (Corona Test) ಮೂಲಕ ನಾವು ಸಾಮಾನ್ಯವಾಗಿ SARs-CoV-2 ವೈರಸ್‌ನಿಂದ ಸೋಂಕಿಗೆ (Virus) ಒಳಗಾಗಿದ್ದೇವೆಯೇ ಇಲ್ಲವೇ ಎಂಬ ಬಗ್ಗೆ ತಿಳಿದುಕೊಳ್ಳುತ್ತೇವೆ. ಆದರೂ, ನೆಗೆಟಿವ್ (Negative) ಬಂದಿದೆ ಎಂದ ಮಾತ್ರಕ್ಕೆ , ಕೊರೊನಾ ನಿಮ್ಮ ದೇಹದಲ್ಲಿ ಇಲ್ಲ ಎಂದಲ್ಲ. ಕೇವಲ ನಿಮ್ಮಿಂದ ಬೇರೆ ಅವರಿಗೆ ಹರಡುವುದಿಲ್ಲ ಎಂದರ್ಥ. ಅನೇಕ ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬಹಳ ದಿನಗಳ ಕಾಲ ಇದನ್ನು ಅನುಭವಿಸಿದ್ದಾರೆ.  ಈ ಕೊರೊನಾ ಹೃದಯ (Heart) ಮತ್ತು ಮೆದುಳು (Brain) ಸೇರಿದಂತೆ ನಮ್ಮ ದೇಹದ ವಿವಿಧ ಭಾಗಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ಗೊತ್ತು.  ಈಗ ಇದು ನಮ್ಮ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇತ್ತೀಚಿನ ಅಧ್ಯಯನವೊಂದರಲ್ಲಿ, ತಜ್ಞರು ಕಡಿಮೆ ಲೈಂಗಿಕ ಕಾರ್ಯಕ್ಷಮತೆಯ ಜೊತೆ ಸಂಬಂಧಿಸಿರುವ ಕೆಲ ಮೂರು ರೋಗಲಕ್ಷಣಗಳನ್ನು ಕಂಡುಕೊಂಡಿದ್ದಾರೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.  ಡಾ ಸಾಂಘ್ವಿ ಅವರ ಪ್ರಕಾರ, ಪುರುಷರು ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ಯಾವುದೇ ರೋಗಲಕ್ಷಣಗಳನ್ನು ಕಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

ಕೂದಲು ಉದುರುವಿಕೆ ಹೆಚ್ಚಾಗುವುದು

ಕೊರೊನಾ ಸೋಂಕಿಗೆ ತುತ್ತಾಗಿ, ಕೂದಲು ಉದುರುವಿಕೆ ಅಥವಾ ಯಾವುದೇ ರೀತಿಯ ಲೈಂಗಿಕ ಸಮಸ್ಯೆಯ ಲಕ್ಷಣಗಳು ಕಂಡು ಬಂದರೆ, ನಿರ್ಲಕ್ಷ್ಯ ಬೇಡ ಎಂದಿದ್ದಾರೆ. ಅವರ ಪ್ರಕಾರ, ಕೂದಲು ಉದುರುವಿಕೆಯು ಪುರುಷರ ಲೈಂಗಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಆದ್ದರಿಂದ ಈ ರೋಗಲಕ್ಷಣವನ್ನು ನಿರ್ಲಕ್ಷಿಸದಿರುವುದು ಮುಖ್ಯವಾಗಿದೆ.ಆದರೂ ಹೆಚ್ಚು ಚಿಂತಿಸಬೇಡಿ. ಜ್ವರ, ಅನಾರೋಗ್ಯ ಅಥವಾ ಒತ್ತಡದಿಂದ ಉಂಟಾಗುವ ಕೂದಲು ಉದುರುವಿಕೆ ಸಮಯಕ್ಕೆ ತಕ್ಕಂತೆ ಮತ್ತೆ ಬೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಳ್ಳುಳ್ಳಿ ಇದ್ರೆ ಸಾಕು ನಿಮ್ಮ ಬಾತ್​ ರೂಂ ಲಕ ಲಕ ಅಂತ ಹೊಳೆಯುತ್ತೆ

ಕಾಮಾಸಕ್ತಿ ಕಡಿಮೆಯಾಗುವುದು

ಕಾಮಾಸಕ್ತಿ ಅಥವಾ ಕಡಿಮೆ ಲೈಂಗಿಕ ಬಯಕೆಯನ್ನು ಅನುಭವಿಸಿದರೆ, ಅವರು ತಮ್ಮ ವೈದ್ಯರೊಂದಿಗೆ ಚಿಕಿತ್ಸೆಯ ಬಗ್ಗೆ ಚರ್ಚಿಸಬೇಕು ಏಕೆಂದರೆ ಕಾರಣ ನಿರ್ಧರಿಸಲು ಸಹಾಯ ಮಾಡಬಹುದು, ಇದು ಚಿಕಿತ್ಸೆಗೆ ಸಹ ಸಹಾಯಕ. ನಿಮ್ಮ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಮತ್ತು ನೀವು ಸಾಕಷ್ಟು ನಿದ್ರೆ ಮತ್ತು ವ್ಯಾಯಾಮವನ್ನು ಮಾಡುವುದು ನಿಮಗೆ ಬಹಳ ಮುಖ್ಯವಾಗುತ್ತದೆ. ಹಾಗೆಯೇ ಆರೋಗ್ಯಯುತ ಆಹಾರ ಸಹ. ಅಲ್ಲದೇ, ನಿಮ್ಮ ಭಾವನಾತ್ಮಕ ಅಗತ್ಯಗಳ ಬಗ್ಗೆ ನಿಮ್ಮ ಸಂಗಾತಿ ಜೊತೆ ಮುಕ್ತ ಚರ್ಚೆಗಳನ್ನು ನಡೆಸುವುದು ಮುಖ್ಯ ಎಂದಿದ್ದಾರೆ ಡಾ ಸಾಂಘ್ವಿ.

ಶೀಘ್ರ ಸ್ಖಲನ

ವೈದ್ಯರ ಪ್ರಕಾರ ಅಕಾಲಿಕ ಸ್ಖಲನವು ಇದರ ಒಂದು ಲಕ್ಷಣವಾಗಿದೆ. ಆದರೆ ಈ ಸಂಶೋಧನೆಯು ಹೆಚ್ಚು ಕಾಲ ಕೋವಿಡ್ ಸಮಸ್ಯೆ ಅನುಭವಿಸಿದ್ದ ಪುರುಷರಿಗೆ ವಿಳಂಬ ಸ್ಖಲನ ಸಮಸ್ಯೆಯಾಗಿದೆ ಎಂದು ಕಂಡುಹಿಡಿದಿದೆ. ಪುರುಷರಿಗೆ ಸ್ಖಲನವಾಗಲು ಕಷ್ಟವಾದಾಗ ಅಥವಾ ಉದ್ರೇಕಗೊಂಡಾಗಲೂ ಸ್ಖಲನ ಮಾಡಲು ವಿಫಲವಾದಾಗ ಇದು ಸಂಭವಿಸುತ್ತದೆ. ಕಾರಣವನ್ನು ಅವಲಂಬಿಸಿ ಚಿಕಿತ್ಸೆಯು ಬದಲಾಗುತ್ತದೆ, ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: ಈರುಳ್ಳಿ ತಿಂದ್ರೆ ನಿಮ್ಮ ಕೊಬ್ಬು ಬೇಗ ಕರಗುತ್ತಂತೆ, ಹೇಗೆ? ಇಲ್ಲಿದೆ ನೋಡಿ

ಮೊದಲೇ ಮುಂಜಾಗ್ರತೆ ತೆಗೆದುಕೊಳ್ಳಿ

ದೀರ್ಘ ಕೋವಿಡ್ ರೋಗಲಕ್ಷಣಗಳು ಬಹಳಷ್ಟಿವೆ. ಜ್ವರ, ನಿರಂತರ ಕೆಮ್ಮು, ಆಯಾಸ, ಮೈ ನೋವು, ಉಸಿರಾಟದ ತೊಂದರೆ, ಎದೆ ನೋವು, ಪರೋಸ್ಮಿಯಾ ಅಥವಾ ಅನೋಸ್ಮಿಯಾ ಹೀಗೆ. ಈ ಎಲ್ಲಾ ಕೊರೊನಾ ಸಂಬಂಧಿತ ಸಮಸ್ಯೆಗಳಿಂದ ದೂರವಿರಲು ಉತ್ತಮ ಮಾರ್ಗವೆಂದರೆ COVID-19 ವಿರುದ್ಧ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು. ಮಾಸ್ಕ್ ಧರಿಸಿ, ಹತ್ತಿರದ ಸಂಪರ್ಕವನ್ನು ತಪ್ಪಿಸಿ, ಸರಿಯಾದ ಕೈ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
Published by:Sandhya M
First published: