ಯಕೃತ್ತು (Liver) ಮನುಷ್ಯನ ಜೀವನದ (Life) ಮುಖ್ಯವಾದ ಅಂಗವಾಗಿದೆ (Part). ಯಕೃತ್ತು ಒಮ್ಮೆ ಹಾನಿಯಾದರೆ ಅದು ಬೇಗ ಸರಿ ಹೋಗುವುದಿಲ್ಲ. ಯಕೃತ್ತು ಸಂಪೂರ್ಣ ಹಾನಿಯಾದರೆ ಮನುಷ್ಯನ ಜೀವಕ್ಕೆ ಕುತ್ತು ಬರುತ್ತದೆ. ಇದಕ್ಕೆ ಇರುವ ಪರಿಹಾರ ಅಂದ್ರೆ ಯಕೃತ್ತಿನ ಕಸಿ ಮಾಡುವುದು ಆಗಿದೆ. ಯಕೃತ್ತು ಕಶೇರುಕಗಳಲ್ಲಿ ಕಂಡು ಬರುವ ಮಾನವನ ದೇಹದ (Body) ಪ್ರಮುಖ ಭಾಗ ಅಂತಾರೆ ವೈದ್ಯರು. ಇದರ ಮುಖ್ಯ ಕಾರ್ಯ ಚಟುವಟಿಕೆ ಅಂದ್ರೆ ದೇಹದ ಚಯಾಪಚಯ ಚೆನ್ನಾಗಿ ನಡೆಯಲು ಸಹಾಯ ಮಾಡುವುದು ಆಗಿದೆ. ಇದರ ಜೊತೆಗೆ ಪ್ರೋಟೀನ್ ಗಳನ್ನು ಸಂಶ್ಲೇಷಿಸುಸಿ ಹಾಗೂ ಜೀರ್ಣಕ್ರಿಯೆಗೆ ಅಗತ್ಯವಾದ ರಾಸಾಯನಿಕಗಳನ್ನು ತಯಾರು ಮಾಡುತ್ತದೆ.
ಯಕೃತ್ತು ಮತ್ತು ಆರೋಗ್ಯ
ಯಕೃತ್ತು ಮಾನವ ದೇಹದಲ್ಲಿ ಹೊಟ್ಟೆಯ ಮೇಲಿನ ಬಲ ಭಾಗದಲ್ಲಿ ಡಯಾಫ್ರಾಮ್ ಅಡಿ ಇದೆ. ಇದು ಹೊಟ್ಟೆ, ಬಲ ಮೂತ್ರಪಿಂಡ ಮತ್ತು ಸಣ್ಣ ಕರುಳಿನ ಮೇಲೆ ಇದೆ. ಈ ಕೋನ್ ಆಕಾರದ ಅಂಗ ಕೆಂಪು ಕಂದು ಬಣ್ಣದಿಂದ ಕೂಡಿದೆ. ಸುಮಾರು
ಯಕೃತ್ತಿನ ಆರೋಗ್ಯದ ವಿಚಾರದಲ್ಲಿ ಮುಖ್ಯ ವಿಷಯಗಳು ಹೀಗಿವೆ
ಯಕೃತ್ತು ಮಾನವ ದೇಹದ ಅತಿದೊಡ್ಡ ಭಾಗ ಎಂಬುದು ನಿಮಗೆ ಗೊತ್ತಿರಲಿ. ಮತ್ತು ಹಾರ್ಟ್ ನಷ್ಟೇ ಯಕೃತ್ತು ಕೂಡ ಹಾನಿಯಾದರೆ ಜೀವಕ್ಕೆ ಕುತ್ತು ಬರುತ್ತದೆ. ಯಕೃತ್ತು ನಿಮ್ಮ ಹೊಟ್ಟೆಯ ಬಲಭಾಗದಲ್ಲಿರುವ ಪಕ್ಕೆಲುಬುಗಳ ಹಿಂದೆ ಇದೆ.
ಒಂದು ವೇಳೆ ಒಳಗೆ ಯಕೃತ್ತಿನ ಭಾಗಕ್ಕೆ ಹಾನಿಯಾದರೆ ಅದನ್ನು ತಾನೇ ಸರಿ ಮಾಡಿಕೊಳ್ಳುತ್ತದೆ. ಇದು ಹೊಸ ಆರೋಗ್ಯಕರ ಯಕೃತ್ತಿನ ಅಂಗಾಂಶ ರಚನೆಗೆ ಸಹಕಾರಿ.
ಯಕೃತ್ತು ಆರೋಗ್ಯಕರ ಮಾನವ ದೇಹಕ್ಕೆ ಪ್ರಮುಖ ಅಂಗ. ಇದು ಸ್ಕ್ಯಾವೆಂಜಿಂಗ್ ಮತ್ತು ಸಂಶ್ಲೇಷಣೆ ಜೊತೆಗೆ ಕೆಲವು ಪ್ರಮುಖ ಕಾರ್ಯಗಳ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು, ವಿಷ ಹಾಗೂ ದೇಹದ ತ್ಯಾಜ್ಯ ಹೊರ ಹಾಕಲು ಸಹಕಾರಿ ಆಗಿದೆ.
ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ. ಸಮತೋಲನ ಕಾಪಾಡಿಕೊಳ್ಳಲು ಸಹಕಾರಿ. ಯಕೃತ್ತು ದೇಹದ ಒಂದು ದೊಡ್ಡ ಅಂಗವಾಗಿದೆ, ಅದರ ಗಾತ್ರವು ಫುಟ್ಬಾಲ್ನ ಗಾತ್ರಕ್ಕೆ ಸಮಾನವಾಗಿದೆ. ಇದು ಆಹಾರ ಜೀರ್ಣವಾಗಲು ಮತ್ತು ದೇಹದಿಂದ ತ್ಯಾಜ್ಯವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಆದರೆ ವ್ಯಕ್ತಿಯ ಕೆಟ್ಟ ಅಭ್ಯಾಸ ಅಥವಾ ಆನುವಂಶಿಕ ಕಾರಣಗಳಿಂದಾಗಿ, ಯಕೃತ್ತು ಕ್ಷೀಣಿಸುತತ್ತದೆ. ಮತ್ತು ಅನೇಕ ಅಪಾಯಕಾರಿ ರೋಗಗಳು ಸುತ್ತುವರೆಯುತ್ತವೆ. ಯಕೃತ್ತು ಹಾನಿಯಾದ್ರೆ ಅದು ಬೇಗ ದುರ್ಬಲವಾಗುತ್ತದೆ. ಕ್ಯಾನ್ಸರ್, ಸಿರೋಸಿಸ್, ಫ್ಯಾಟಿ ಲಿವರ್,
ಹೆಪಟೈಟಿಸ್ ಎ, ಬಿ ಮತ್ತು ಸಿ ಯಂತಹ ಅಪಾಯಕಾರಿ ಕಾಯಿಲೆ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಯಕೃತ್ತಿನ ಆರೋಗ್ಯ ಚೆನ್ನಾಗಿ ಕಾಪಾಡಲು 5 ಸುಲಭ ಯೋಗಾಸನ ಮಾಡಿ. ರೋಗಗಳ ಅಪಾಯ ತಪ್ಪಿಸಿ.
ಧನುರಾಸನ
ಧನುರಾಸನ ಮಾಡಿದಾಗ ಯಕೃತ್ತು ಹಿಗ್ಗುತ್ತದೆ ಮತ್ತು ಕ್ರಿಯಾಶೀಲವಾಗುತ್ತದೆ. ಈ ಯೋಗಾಸನದ ನಿಯಮಿತ ಅಭ್ಯಾಸವು ಕ್ರಮೇಣ ಯಕೃತ್ತನ್ನು ಬಲಪಡಿಸುತ್ತದೆ ಮತ್ತು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ತಡೆಯುತ್ತದೆ.
ಭುಜಂಗಾಸನ
ಭುಜಂಗಾಸನವು ಯಕೃತ್ತನ್ನು ಸಕ್ರಿಯಗೊಳಿಸುತ್ತದೆ. ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ತುಂಬಾ ಸುಲಭವಾದ ಯೋಗಾಸನ. ಇದನ್ನು ನಾಗರ ಭಂಗಿ ಎಂದೂ ಕರೆಯುತ್ತಾರೆ. ಪ್ರತಿದಿನ 5 ನಿಮಿಷ ಇದನ್ನು ಮಾಡಿದರೆ ಸಿರೋಸಿಸ್ ಮತ್ತು ಫ್ಯಾಟಿ ಲಿವರ್ ಅಪಾಯ ಕಡಿಮೆಯಾಗುತ್ತದೆ.
ಅಧೋಮುಖ ಶ್ವಾನಾಸನ
ಅಧೋಮುಖ ಶ್ವಾನಾಸನ ಮಾಡುವ ಮೂಲಕ ಹೆಪಟೈಟಿಸ್ ಕಾಯಿಲೆ ತಡೆಯಬಹುದು. ಇದು ಅನೇಕ ಅದ್ಭುತ ಪ್ರಯೋಜನ ನೀಡುತ್ತದೆ. ಪಿತ್ತಜನಕಾಂಗದಲ್ಲಿ ಉರಿಯೂತ ತಡೆಯುತ್ತದೆ, ಜೊತೆಗೆ ಪಿತ್ತರಸದ ಉತ್ಪಾದನೆ ಹೆಚ್ಚಿಸಲು ಸಹಾಯ ಮಾಡುತ್ತದೆ.
ಅನುಲೋಮ್ ವಿಲೋಮ್
ಅನುಲೋಮ್-ವಿಲೋಮ್ ಒಂದು ಪ್ರಾಣಾಯಾಮ ಆಗಿದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಈ ಕಾರಣದಿಂದಾಗಿ, ಯಕೃತ್ತು ಸಾಕಷ್ಟು ಪೋಷಣೆ ಮತ್ತು ಆಮ್ಲಜನಕ ಪಡೆಯುತ್ತದೆ ಮತ್ತು ಅದರ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಹೃದಯಾಘಾತಕ್ಕೂ ಮುನ್ನಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ, ಎಚ್ಚರ!
ಕಪಾಲಭಾತಿ ಪ್ರಾಣಾಯಾಮ
ಪ್ರತಿನಿತ್ಯ ಕಪಾಲಭಾತಿ ಮಾಡಿದರೆ ಯಕೃತ್ತು ಆರೋಗ್ಯಕರವಾಗುತ್ತದೆ. ಇದು ದೇಹದಲ್ಲಿ ರಕ್ತದ ಹರಿವು ಹೆಚ್ಚಿಸುತ್ತದೆ. ಯಕೃತ್ತನ್ನು ಕಾಪಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ