• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Liver And Health: ಯಕೃತ್ತಿನ ಅನಾರೋಗ್ಯ ಈ ಸಮಸ್ಯೆಗಳನ್ನು ಹೆಚ್ಚಿಸುತ್ತದೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ತಪ್ಪಿಸುವ ಬಗೆ ಇಲ್ಲಿದೆ

Liver And Health: ಯಕೃತ್ತಿನ ಅನಾರೋಗ್ಯ ಈ ಸಮಸ್ಯೆಗಳನ್ನು ಹೆಚ್ಚಿಸುತ್ತದೆ, ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ತಪ್ಪಿಸುವ ಬಗೆ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯಕರ ಪಿತ್ತಜನಕಾಂಗವು ನಿರ್ದಿಷ್ಟ ಮಟ್ಟದ ಕೊಬ್ಬನ್ನು ಹೊಂದಿರುತ್ತದೆ. ಆದರೆ ಈ ಪ್ರಮಾಣವು ಯಕೃತ್ತಿನ ತೂಕದ 5 ರಿಂದ 10 ಪ್ರತಿಶತವನ್ನು ಮೀರಿದರೆ ಇದು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಅಥವಾ ಸ್ಟೀಟೋಸಿಸ್ಗೆ ಕಾರಣ ಆಗಬಹುದು. ಇದರಲ್ಲಿ ರೋಗಿಯ ಸ್ಥಿತಿಯು ಕಾಲಾನಂತರದಲ್ಲಿ ಗಂಭೀರ ಸ್ಥಿತಿಗೆ ತಲುಪುತ್ತದೆ.

ಮುಂದೆ ಓದಿ ...
 • Share this:

ಯಕೃತ್ತು (Liver) ದೇಹದ (Body) ಅತ್ಯಂತ ಪ್ರಮುಖ ಅಂಗ (Parts) ಆಗಿದೆ. ದೇಹವು ಚೆನ್ನಾಗಿ ಕೆಲಸ ಮಾಡಲು ಯಕೃತ್ತಿನ ಆರೋಗ್ಯ (Health) ಕಾಪಾಡುವುದು ಅತೀ ಅವಶ್ಯಕ. ಅಂತಹ ಸ್ಥಿತಿಯಲ್ಲಿ ಯಕೃತ್ತಿನ ಬಗ್ಗೆ ಕಾಳಜಿ (Care) ವಹಿಸದೇ ಇರುವುದು ಹಾಗೂ ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆ ಆಗುವುದು ವಿವಿಧ ರೀತಿಯ ರೋಗಕ್ಕೆ ಕಾರಣ ಆಗುತ್ತದೆ. ಇದನ್ನು ಫ್ಯಾಟಿ ಲಿವರ್ ಎಂದು ಕರೆಯುತ್ತಾರೆ. ಯಕೃತ್ತಿನಲ್ಲಿ ಎರಡು ವಿಧಗಳಿವೆ. ಒಂದು ಆಲ್ಕೊಹಾಲ್ಯುಕ್ತ ಮತ್ತು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತು. ಕ್ಲೀವ್ಲ್ಯಾಂಡ್ ಕ್ಲಿನಿಕ್ ಹೇಳುವ ಪ್ರಕಾರ, ಆರೋಗ್ಯಕರ ಪಿತ್ತಜನಕಾಂಗವು ನಿರ್ದಿಷ್ಟ ಮಟ್ಟದ ಕೊಬ್ಬನ್ನು ಹೊಂದಿರುತ್ತದೆ.


ಆದರೆ ಈ ಪ್ರಮಾಣವು ಯಕೃತ್ತಿನ ತೂಕದ 5 ರಿಂದ 10 ಪ್ರತಿಶತವನ್ನು ಮೀರಿದರೆ ಇದು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಅಥವಾ ಸ್ಟೀಟೋಸಿಸ್ಗೆ ಕಾರಣ ಆಗಬಹುದು. ಇದರಲ್ಲಿ ರೋಗಿಯ ಸ್ಥಿತಿಯು ಕಾಲಾನಂತರದಲ್ಲಿ ಗಂಭೀರ ಆಗುತ್ತದೆ. ಈ ಸಮಯದಲ್ಲಿ ಅವನು ಯಕೃತ್ತಿನ ಉರಿಯೂತ, ಫೈಬ್ರೋಸಿಸ್ ಮತ್ತು ಸಿರೋಸಿಸ್ನಂತಹ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು.


ಆಲ್ಕೊಹಾಲ್ಯುಕ್ತ ಮತ್ತು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತು ಎಂದರೇನು?


ಆಲ್ಕೊಹಾಲ್ಯುಕ್ತ ಕೊಬ್ಬಿನ ಯಕೃತ್ತು (ARLD) ಅತಿಯಾದ ಮದ್ಯ ಸೇವನೆಯಿಂದ ಉಂಟಾಗುವ ಸ್ಥಿತಿಯಾಗಿದೆ. ಹಾಗೂ ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಕಡಿಮೆ ಅಥವಾ ಆಲ್ಕೊಹಾಲ್ ಸೇವನೆ ಮಾಡದ ಜನರಲ್ಲಿ ಕಂಡು ಬರುತ್ತದೆ. ಹೆಚ್ಚಿನ ಕ್ಯಾಲೊರಿ ಸೇವನೆ ಮಾಡುವುದದರಿಂದ ಈ ಸಮಸ್ಯೆ ಸಂಭವಿಸುತ್ತದೆ. ಈ ರೋಗವು ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬನ್ನು ಹೊಂದಿರುವುದಕ್ಕೆ ಸಂಬಂಧ ಪಟ್ಟಿದೆ.


ಇದನ್ನೂ ಓದಿ: ಜೋಳದಲ್ಲೂ ಇದೆ ಔಷಧೀಯ ಗುಣ, ಈ ಖಾಯಿಲೆಗಳಿಗೆ ಇದೇ ರಾಮಬಾಣ!


ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತಿನ ಲಕ್ಷಣಗಳು


ಕ್ಲೀವ್ಲ್ಯಾಂಡ್ ಕ್ಲಿನಿಕ್ ತಜ್ಞರು ಹೇಳುವ ಪ್ರಕಾರ, ಸಾಯಂಕಾಲ ಅಥವಾ ರಾತ್ರಿ ವೇಳೆ ಕೈ ಮತ್ತು ಪಾದಗಳ ಮೇಲೆ ಹೆಚ್ಚಿದ ತುರಿಕೆ ಕೊಬ್ಬಿನ ಯಕೃತ್ತನ್ನು ಸೂಚಿಸುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ಊತ, ಚರ್ಮದ ಮೇಲ್ಮೈಗಿಂತ ಸ್ವಲ್ಪ ಕೆಳಗಿರುವ ರಕ್ತನಾಳಗಳು ಹಿಗ್ಗುವಿಕೆ, ಗುಲ್ಮ, ಕೆಂಪು ಅಂಗೈಗಳು, ಕಾಮಾಲೆ ಮುಂತಾದ ಲಕ್ಷಣಗಳು ಕಂಡು ಬರುತ್ತವೆ.


ಆದಾಗ್ಯೂ ಮೇಯೊ ಕ್ಲಿನಿಕ್ ಕೇರ್ ನೆಟ್‌ವರ್ಕ್ ಪ್ರಕಾರ, ಕೊಬ್ಬಿನ ಪಿತ್ತ ಜನಕಾಂಗದ ಕಾಯಿಲೆಯಲ್ಲಿ ತುರಿಕೆ ಅಪರೂಪವಾಗಿರುತ್ತದೆ. ಪ್ರಾಥಮಿಕ ಪಿತ್ತರಸ ಸಿರೋಸಿಸ್ (PBC), ಪ್ರಾಥಮಿಕ ಸ್ಕ್ಲೆರೋಸಿಂಗ್, ಕೋಲಾಂಜೈಟಿಸ್ (PSC),ಮತ್ತು ಗರ್ಭಾವಸ್ಥೆಯ ಇಂಟ್ರಾಹೆಪಾಟಿಕ್ ಕೊಲೆಸ್ಟಾಸಿಸ್ ಸೇರಿದಂತೆ ಇತರ ರೀತಿಯ ಯಕೃತ್ತಿನ ಕಾಯಿಲೆಗಳಲ್ಲಿ ಹೆಚ್ಚು ಸಾಮಾನ್ಯ ಆಗಿದೆ.


ಯಕೃತ್ತಿನ ಕಾಯಿಲೆ ತುರಿಕೆಗೆ ಏಕೆ ಕಾರಣವಾಗುತ್ತದೆ?


ವಿಜ್ಞಾನಿಗಳು ಇನ್ನೂ ಯಕೃತ್ತಿನ ಕಾಯಿಲೆಗೆ ಸಂಬಂಧಪಟ್ಟಂತೆ ತುರಿಕೆ ಆಗುತ್ತದೆಯೇ ಎಂಬ ಕಾರಣಕ್ಕೆ  ಕೆಲವು ತಜ್ಞರು ಇದು ಹಲವಾರು ಅಂಶಗಳ ಪರಿಣಾಮ ಆಗಿರಬಹುದು ಎಂದಿದ್ದಾರೆ. ಇದರಲ್ಲಿ ಪಿತ್ತ ಜನಕಾಂಗದ ಕಾಯಿಲೆ ಇರುವ ಜನರ ಚರ್ಮದ ಅಡಿಯಲ್ಲಿ ಹೆಚ್ಚಿನ ಮಟ್ಟದ ಪಿತ್ತರಸ ಲವಣಗಳು ನಿರ್ಮಾಣ ಆಗುತ್ತವೆ.


ಇದು ಸೀರಮ್ ಅಲ್ಕಲೈನ್ ಫಾಸ್ಫೇಟೇಸ್ (ALP) ಉಪಸ್ಥಿತಿ ಸಹ ಒಳಗೊಂಡಿದೆ. ಇದು ರಕ್ತದಲ್ಲಿ ಕಂಡು ಬರುವ ಕಿಣ್ವವಾಗಿದ್ದು ಅದು ದೇಹದಲ್ಲಿನ ಪ್ರೋಟೀನ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ.


ಕೊಬ್ಬಿನ ಯಕೃತ್ತಿನ ಅಪಾಯ ಯಾರಿಗಿರುತ್ತದೆ?


ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು, ಅಧಿಕ ಟ್ರೈಗ್ಲಿಸರೈಡ್, ಬೊಜ್ಜು, ಪಿಸಿಓಎಸ್, ಹೈಪೋಥೈರಾಯ್ಡಿಸಮ್, ಮೆಟಾಬಾಲಿಕ್ ಸಿಂಡ್ರೋಮ್, ಸ್ಲೀಪ್ ಅಪ್ನಿಯ, ಟೈಪ್ 2 ಡಯಾಬಿಟಿಸ್ ಮತ್ತು ವಯಸ್ಸಾದ ವಯಸ್ಕರು ಈ ಕಾಯಿಲೆಯ ಅಪಾಯ ಹೆಚ್ಚು ಹೊಂದಿರುತ್ತಾರೆ.


ಇದನ್ನೂ ಓದಿ: ಮೂಲವ್ಯಾಧಿಗೆ ಇಲ್ಲಿದೆ ಸರಳ ಮನೆಮದ್ದು, ಖಂಡಿತಾ ಬೇಗ ಗುಣವಾಗುತ್ತೆ ಅಂತಾರೆ ಡಾಕ್ಟರ್


ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ತಪ್ಪಿಸುವುದು ಹೇಗೆ?

top videos


  ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು, ನಿಯಮಿತ ವ್ಯಾಯಾಮ ಮಾಡುವುದು, ಮದ್ಯಪಾನ ಮತ್ತು ಧೂಮಪಾನ ತ್ಯಜಿಸುವುದು ಬಹಳ ಮುಖ್ಯ. NAFLD ಯನ್ನು ಗುಣಪಡಿಸಲು ಯಾವುದೇ ಔಷಧಿ ಇಲ್ಲ. ಹಾಗಾಗಿ ಹೆಚ್ಚು ಹಣ್ಣು ಮತ್ತು ತರಕಾರಿ ಸೇವಿಸಿ. ಸಂಸ್ಕರಿಸಿದ ಮತ್ತು ಎಣ್ಣೆಯುಕ್ತ ಆಹಾರ ಸೇವನೆ ಕಡಿಮೆ ಮಾಡಿ. ಆರೋಗ್ಯಕರ ಆಹಾರ ಸೇವಿಸಿ.

  First published: