ಲಿವರ್ ಸಿರೋಸಿಸ್ (Liver Cirrhosis) ಎಂಬುದು ಒಂದು ಮಾರಣಾಂತಿಕ ಕಾಯಿಲೆ (Deadly Disease). ಈ ಲಿವರ್ ಸಿರೋಸಿಸ್ ಕಾಯಿಲೆ ಉಂಟಾದ ಸಂದರ್ಭದಲ್ಲಿ ಯಕೃತ್ತು ಕ್ರಮೇಣವಾಗಿ ಕೆಲಸ ಮಾಡುವುದನ್ನೇ ನಿಲ್ಲಿಸಿ ಬಿಡುತ್ತದೆ. ಈ ಸಮಸ್ಯೆ ಎದುರಾದರೆ ಇದಕ್ಕೆ ಉಳಿದಿರುವ ಒಂದೇ ಪರಿಹಾರೋಪಾಯ ಅಂದ್ರೆ ಅದು ಯಕೃತ್ತಿನ ಕಸಿ ಮಾಡುವುದು. ಯಕೃತ್ತಿನ ಕಸಿ ಮಾತ್ರ ಯಕೃತ್ತು ಹಾನಿಗೆ ಇರುವ ಚಿಕಿತ್ಸೆ ಆಗಿದೆ. ಇನ್ನು ಯಕೃತ್ತಿನ ಸಿರೋಸಿಸ್ ಕಾಯಿಲೆ ಅಪಾಯವು ಹೆಪಟೈಟಿಸ್ ವೈರಸ್ ಸೋಂಕು ಉಂಟು ಮಾಡುತ್ತದೆ. ಆಲ್ಕೋಹಾಲ್ (Alcohol) ಅತಿಯಾದ ಸೇವನೆ ಯಕೃತ್ತಿನ ಕಾಯಿಲೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗೂ ಇದು ಸ್ವಯಂ ನಿರೋಧಕ ಅಸ್ವಸ್ಥತೆ ಉಂಟು ಮಾಡುತ್ತದೆ.
ಯಕೃತ್ತು ಸಿರೋಸಿಸ್ ಕಾಯಿಲೆ
ಆಯುರ್ವೇದ ತಜ್ಞ ಡಾ.ಶರದ್ ಕುಲಕರ್ಣಿ ಯಕೃತ್ತು ಸಿರೋಸಿಸ್ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ 7 ರಿಂದ 8 ಲಕ್ಷ ಜನರು ಯಕೃತ್ತು ಸಿರೋಸಿಸ್ ಕಾಯಿಲೆಗೆ ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.
ಯಕೃತ್ತಿನ ಸಿರೋಸಿಸ್ ಕಾಯಿಲೆ ಮಾರಣಾಂತಿಕ ಕಾಯಿಲೆಯಾಗಿದೆ. ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಔಷಧ ಮತ್ತು ಚಿಕಿತ್ಸೆ ಸಹಾಯದಿಂದ, ಅದರ ಯಕೃತ್ತಿ ಸಿರೋಸಿಸ್ ಕಾಯಿಲೆಯ ಗಂಭೀರ ಪರಿಣಾಮ ಉಂಟಾಗುವುದನ್ನು ತಡೆಯಬಹುದು. ಇದಕ್ಕೆ ನೀವು ಕೆಲವು ಆಯುರ್ವೇದ ಗಿಡಮೂಲಿಕೆಗಳ ಸಹಾಯ ಪಡೆಯಬಹುದು ಅಂತಾ ಸಲಹೆ ನೀಡಿದ್ದಾರೆ.
ಯಕೃತ್ತಿನ ಸಿರೋಸಿಸ್ ಕಾಯಿಲೆಯ ವಿಶಿಷ್ಟ ಲಕ್ಷಣ ಯಾವುದು?
ಯಕೃತ್ತಿನ ಸಿರೋಸಿಸ್ ಕಾಯಿಲೆ ಇದ್ದಾಗ ಹೊಟ್ಟೆಯ ಬಲಭಾಗದಲ್ಲಿ ನೋವು ಉಂಟಾಗುತ್ತದೆ. ವಾಂತಿ ಆಗುವುದು, ಯಕೃತ್ತು ಹಿಗ್ಗುವುದು, ಜಾಂಡೀಸ್ ಸಮಸ್ಯೆ, ದೌರ್ಬಲ್ಯ ಉಂಟಾಗುವುದು, ಕೀಲು ನೋವು, ಜ್ವರ ಬರುವುದು, ಹೊಟ್ಟೆಯಲ್ಲಿ ನೀರು ತುಂಬುವುದು, ವಾಕರಿಕೆ ಸೇರಿದಂತೆ ಕೆಲವು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಯಕೃತ್ತಿನ ಸಿರೋಸಿಸ್ ಕಾಯಿಲೆ ನಿಯಂತ್ರಿಸಲು ಈ ಪದಾರ್ಥಗಳು ಪ್ರಯೋಜನಕಾರಿ
ಅಲೋವೆರಾ ಮತ್ತು ಆಮ್ಲಾ ರಸ
ಅಲೋವೆರಾ ಮತ್ತು ಆಮ್ಲಾ ಜ್ಯೂಸ್ ಸೇವನೆಯು ಯಕೃತ್ತು ಸಿರೋಸಿಸ್ ಹಾಗೂ ಯಕೃತ್ತಿನ ಹಾನಿ ಸಮಸ್ಯೆ ನಿಯಂತ್ರಿಸಲು ಸಾಕಷ್ಟು ಪ್ರಯೋಜನಕಾರಿ ಎಂದು ಆಯುರ್ವೇದ ಹೇಳುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಐದು ಮಿಲಿ ಅಲೋವೆರಾ ಮತ್ತು ಆಮ್ಲಾ ರಸ ಕುಡಿದರೆ ಅದು ಕಾಯಿಲೆ ನಿಯಂತ್ರಿಸಲು ಪರಿಣಾಮಕಾರಿ ಅಂತಾರೆ ತಜ್ಞರು.
ತ್ರಿಫಲ ಚೂರ್ಣ
ಆಯುರ್ವೇದದ ಶಕ್ತಿಶಾಲಿ ಮೂಲಿಕೆ ಎಂದೇ ಹೆಸರು ಪಡೆದಿದೆ ತ್ರಿಫಲ. ಇದರಲ್ಲಿರುವ ಔಷಧೀಯ ಗುಣಗಳು ಯಕೃತ್ತಿನ ಆರೋಗ್ಯ ಸುಧಾರಣೆಗೆ ಪ್ರಯೋಜನಕಾರಿ. ಪ್ರತಿದಿನ ರಾತ್ರಿ ಒಂದು ಚಮಚ ತ್ರಿಫಲವನ್ನು ಒಂದು ಗ್ಲಾಸ್ ನೀರಿನ ಜೊತೆ ಸೇವನೆ ಮಾಡಿದರೆ ಅದು ಯಕೃತ್ತಿನ ಹಾನಿ ಕಡಿಮೆ ಮಾಡುತ್ತದೆ.
ಅರ್ಜುನ್ ಮರ
ಆಯುರ್ವೇದ ಗುಣಗಳಿಂದ ಕೂಡಿದ ಒಂದು ರೀತಿಯ ಮರ ಅರ್ಜುನ. ಇದರ ತೊಗಟೆ ಅನೇಕ ರೋಗ ಗುಣಪಡಿಸಲು ಹಲವು ವರ್ಷಗಳಿಂದ ಬಳಕೆ ಮಾಡಲಾಗ್ತಿದೆ. ಯಕೃತ್ತಿನ ಸಿರೋಸಿಸ್ ನಿಯಂತ್ರಿಸಲು ಇದು ಪರಿಣಾಮಕಾರಿ ಅಂತಾರೆ ತಜ್ಞರು. ಅರ್ಜುನ ಮರದ ಕಷಾಯವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಅರ್ಧ ಗ್ಲಾಸ್ ಕುಡಿದರೆ ಯಕೃತ್ತಿನ ಹಾನಿ ಕಡಿಮೆ ಮಾಡಲು ಸಹಕಾರಿ.
ತುಳಸಿ ಎಲೆಗಳು
ತುಳಸಿ ಎಲೆಯು ಹಲವು ಕಾಯಿಲೆಗಳ ನಿಯಂತ್ರಣಕ್ಕೆ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಹೆಪಟೊ ರಕ್ಷಣಾತ್ಮಕ ಗುಣಗಳನ್ನು ತುಳಸಿ ಎಲೆ ಹೊಂದಿವೆ. ಇದು ಯಕೃತ್ತಿನ ಹಾನಿಯಿಂದ ರಕ್ಷಣೆ ಮಾಡುತ್ತದೆ. ಲಿವರ್ ಸಿರೋಸಿಸ್ ಕಾಯಿಲೆ ನಿಯಂತ್ರಿಸಲು ತುಳಸಿ ಎಲೆ ಅಥವಾ ರಸವನ್ನು ಕುಡಿಯುವಂತೆ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ನಿಮಗೆ 30 ವರ್ಷ ದಾಟಿದೆಯಾ? ಕಡ್ಡಾಯವಾಗಿ ಈ ಕೆಲಸ ಮಾಡಿ
ಲಿವರ್ ಸಿರೋಸಿಸ್ ಪತ್ತೆ ಹಚ್ಚುವುದು ಹೇಗೆ?
ಕೇವಲ ರೋಗ ಲಕ್ಷಣಗಳ ಆಧಾರದ ಮೇಲೆ ಲಿವರ್ ಸಿರೋಸಿಸ್ ಕಾಯಿಲೆ ಎಂದು ಹೇಳಲಾಗುವುದಿಲ್ಲ. ಇದನ್ನು ಪತ್ತೆ ಹಚ್ಚಲು ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ, CT ಸ್ಕ್ಯಾನ್, USG ಮಾಡಿಸುವಂತೆ ತಜ್ಞರು ಸೂಚಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ