Music Therapy: ಕೇವಲ 13 ನಿಮಿಷ ಸಂಗೀತ ಕೇಳಿ, ನಿಮ್ಮ Stress ಎಲ್ಲಾ ಮಾಯ ಆಗುತ್ತೆ!

ನಮ್ಮ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಂಗೀತವು ಸಹ ಪರಿಣಾಮಕಾರಿಯಾಗಿದೆ ಎಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಿಡುವಿಲ್ಲದ ಲೈಫ್‌ನಲ್ಲಿ ಒತ್ತಡ ಕಡಿಮೆ (Reducing stress) ಮಾಡಿಕೊಳ್ಳುವುದೇ ಒಂದು ಸವಾಲು. ಮನಸ್ಸನ್ನು ಶಾಂತಗೊಳಿಸಲು, ಕೆಲಸಗಳಿಂದ ಆರಾಮ ಪಡೆಯಲು ಜನ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಯೋಗ, ಪ್ರವಾಸ, ಕುಟುಂಬದವರ ಜೊತೆ ಊಟ, ಒಂದೊಳ್ಳೆ ಸಿನಿಮಾ ಹೀಗೆ ಹಲವಾರು ಮಾರ್ಗ ಅನುಸರಿಸುತ್ತಾರೆ. ಹಾಗೆ ಮ್ಯೂಸಿಕ್ ಕೂಡ ನಮ್ಮ ಸ್ಟ್ರೆಸ್ ಫುಲ್ ಲೈಫ್‌ಗೆ ಮದ್ದಿದ್ದಂತೆ. ನಿಮಗೆ ಗೊತ್ತಾ ಸಂಗೀತಕ್ಕೆ ನಮ್ಮ ಒತ್ತಡದ ಬದುಕನ್ನು ಹದಗೊಳಿಸುವ ಮಹಾನ್ ಶಕ್ತಿಇದೆ. ಹೌದು ಸ್ವಲ್ಪ ಹೊತ್ತು ನಮ್ಮ ಮೆಚ್ಚಿನ ಸಂಗೀತ(Favorite Music) ಕೇಳುವುದರಿಂದ ನಮಲ್ಲಿ ಹೊಸ ಉತ್ತೇಜನ (Excitement) ಬರುತ್ತದೆ. ಈ ಬಗ್ಗೆ ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ (British Academy of Sound Therapy) ಥೆರಪಿ ಅಧ್ಯಯನವೊಂದನ್ನು ನಡೆಸಿದೆ.

ಸಂಗೀತಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ, ಅದ್ಬುತ ಶಕ್ತಿ ಇದೆ.ಒತ್ತಡ ನಿವಾರಿಸಲು ಅಥವಾ ಭಾವನೆಯನ್ನು ಉತ್ತೇಜಿಸಲು ಸಂಗೀತ ಕೇಳುವುದು ಅತ್ಯಂತ ಸುಲಭ ವಿಧಾನ. ಇದರ ಗುಣಕಾರಕ ಶಕ್ತಿಯಿಂದಾಗಿ, ಸಂಗೀತ ಚಿಕಿತ್ಸೆಯನ್ನು ಪುರಾತನ ಕಾಲದಿಂದ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಶಕ್ತಿಇದೆ. ಒಬ್ಬ ವ್ಯಕ್ತಿಯ ಮನಃಶಾಸ್ತ್ರೀಯ ಅಗತ್ಯಗಳನ್ನು ಪೂರೈಸಲು ಕೈಗೊಳ್ಳುವ ಕ್ರಮಗಳಲ್ಲಿ ಇದೂ ಒಂದು.

ಹೌದು 13 ನಿಮಿಷಗಳ ಕಾಲ ಸಂಗೀತವನ್ನು ಆಲಿಸುವುದು ದೈನಂದಿನ ಜೀವನದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ ಥೆರಪಿ ಅಧ್ಯಯನಗಳು ತಿಳಿಸಿವೆ. 7,581 ಜನರನ್ನು ಸಮೀಕ್ಷೆ ಮಾಡಿದ್ದು, ಪ್ರತಿ 9 ಜನರಲ್ಲಿ ಒಬ್ಬರು ಹೇಳಿರುವ ಪ್ರಕಾರ ತಮ್ಮ ನೆಚ್ಚಿನ ಕಲಾವಿದರ ಸಂಗೀತ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದಿದ್ದಾರೆ. ಸಂಗೀತ ವಿಶ್ರಾಂತಿ ಮತ್ತು ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಸದಾ ಹೆಡ್​ಫೋನ್ ಬಳಸುವವರು ಎಚ್ಚರದಿಂದಿರಿ, ಹೊಸಾ ಹೊಸಾ ಸಮಸ್ಯೆಗಳಿಗೆ ಅದೇ ಕಾರಣವಂತೆ!

ಒತ್ತಡ ಮುಕ್ತ

17ನೇ ಶತಮಾನದಲ್ಲಿ ಬರಹಗಾರ ವಿಲಿಯಂ ಕಾಂಗ್ರೆವ್ ಬರೆದ ನಾಟಕದ ಸಾಲಿನಲ್ಲಿ ’’ಸಂಗೀತಕ್ಕೆ ಕಲ್ಲು ಮನಸ್ಸನ್ನು ಕರಗಿಸುವ ಶಕ್ತಿ ಇದೆ” ಎಂದು ಬರೆದಿದ್ದಾರೆ. ತಮಾಷೆಯಾಗಿ ಹೇಳುವುದಾದರೆ ವಿಲಿಯಂ ಬರೆದ ಸಾಲುಗಳಲ್ಲಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿಲ್ಲ. ಆದರೆ ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ ಥೆರಪಿ ಸಂಶೋಧಕರು ಕೇವಲ 13 ನಿಮಿಷಗಳ ಕಾಲ ಸಂಗೀತ ಆಲಿಸಿದರೆ ನಿಮ್ಮ ಮನಸ್ಸು ಒತ್ತಡ ಮುಕ್ತವಾಗುತ್ತದೆ ಎಂದಿದ್ದಾರೆ.

ದೈನಂದಿನ ಬದುಕಿನ ಎಲ್ಲಾ ಚಿಂತೆಗಳು ಮಾಯವಾಗಲು ಒಂದು ಹಾಡನ್ನು ಕೇಳಿದರೆ ಸಾಕಾಗುವುದಿಲ್ಲ. ಬದಲಾಗಿ, ನೀವು 13 ನಿಮಿಷಗಳ ಕಾಲ ಅಂದರೆ ಮೂರು ನಿಮಿಷಗಳಿಗಿಂತ ಹೆಚ್ಚು ಇರುವ ನಾಲ್ಕು ಹಾಡುಗಳನ್ನು ಕೇಳಬೇಕು ಎಂದು ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ ಥೆರಪಿಯ ಸಂಶೋಧಕರು ಹೇಳುತ್ತಾರೆ. ಕಡಿಮೆ ಸೌಂಡ್ ಎಫೆಕ್ಟ್‌ನಲ್ಲಿ ವಾದ್ಯಗಳ ಜೊತೆ ಇರುವ ಸಂಗೀತ ಕೇಳಲು ಸಂಶೋಧಕರು ಶಿಫಾರಸ್ಸು ಮಾಡುತ್ತಾರೆ.

13 ನಿಮಿಷಗಳ ಸಂಗೀತದ ಆಲಿಕೆಯ ಮ್ಯಾಜಿಕ್

13 ನಿಮಿಷಗಳ ಕಾಲ ಸಂಗೀತವನ್ನು ಕೇಳುವುದು ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನಕಾರಾತ್ಮಕ ಆಲೋಚನೆಗಳನ್ನು ಹೊರಹಾಕುತ್ತದೆ ಮತ್ತು ನಿಮಗೆ ರಾತ್ರಿಯಲ್ಲಿ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ ಥೆರಪಿ ಅಧ್ಯಯನವು ತಮ್ಮ ಮೆಚ್ಚಿನ ಇಲ್ಲಾ ಉತ್ತಮ ಸಂಗೀತ ಕೇಳಿದ ಮೇಲೆ ಅವರಲ್ಲಿ ಸಂತೋಷದ ಭಾವನೆ ಹೆಚ್ಚಿರುತ್ತದೆ ಮತ್ತು ಉಲ್ಲಾಸ ಭರಿತರಾಗಿರುತ್ತಾರೆ ಎಂದಿದೆ. ವಿಶೇಷವಾಗಿ ಲವಲವಿಕೆಯ ಮತ್ತು ಸಕಾರಾತ್ಮಕ ಸಾಹಿತ್ಯವನ್ನು ಹೊಂದಿರುವ ಹಾಡುಗಳುನಿಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಉತ್ಸಾಹ ನೀಡುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಸಂಗೀತ ಆಲಿಸುವುದರಿಂದ ಉಂಟಾಗುವ ಅದ್ಭುತ ಪರಿಣಾಮಗಳೇನು?

ವೈಜ್ಞಾನಿಕ ಕ್ಷೇತ್ರದಲ್ಲೂ ಸಂಗೀತದ ಕಮಾಲ್

ಹಲವಾರು ವರ್ಷಗಳಿಂದ, ವೈಜ್ಞಾನಿಕ ಸಮುದಾಯವು ಸಂಗೀತದ ಅನೇಕ ಪ್ರಯೋಜನಗಳ ಬಗ್ಗೆ ಕಂಡುಕೊಂಡಿದೆ. ನಮ್ಮ ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯನ್ನು ಸುಧಾರಿಸಲು ಸಂಗೀತವು ಸಹ ಪರಿಣಾಮಕಾರಿಯಾಗಿದೆ ಎಂದು ವೈಜ್ಞಾನಿಕವಾಗಿ ತಿಳಿದು ಬಂದಿದೆ.

ಹಲವು ಮನಸ್ಸಿಗೆ ಸಂಬಂಧಪಟ್ಟ ರೋಗಗಳಿಗೆ ಸಂಗೀತ ಔಷಧಿಯಾಗಿದೆ. ಬ್ರಿಟಿಷ್ ಅಕಾಡೆಮಿ ಆಫ್ ಸೌಂಡ್ ಥೆರಪಿ ಸಮೀಕ್ಷೆ ಪ್ರಕಾರ 13 ನಿಮಿಷಗಳ ಕಾಲ ಸಂಗೀತವನ್ನು ಆಲಿಸಿದ ನಂತರ 90%ಕ್ಕಿಂತ ಹೆಚ್ಚು ಜನರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಬಹುದು ಎಂದು ತಿಳಿಸಿದ್ದಾರಂತೆ.
Published by:vanithasanjevani vanithasanjevani
First published: