Nails Health: ಉಗುರು ಪದೇ ಪದೇ ಕಟ್ ಆಗ್ತಿದ್ರೆ ಮೊದಲು ಈ ಟಿಪ್ಸ್ ಫಾಲೋ ಮಾಡಿ

Foods For Nails: ಆರೋಗ್ಯವಂತ ಉಗುರು ಕಾಪಾಡಿಕೊಳ್ಳುವುದು ಕಷ್ಟಕರವೇನಲ್ಲ. ನಿಮ್ಮ ಉಗುರುಗಳು ಬಲವಾಗಿರಬೇಕೆಂದರೆ ಉಗುರು ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಒದಗಿಸುವ ಆಹಾರಗಳನ್ನು (Food)  ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವೆಲ್ಲರೂ ಕೆಲವು ಹಂತದಲ್ಲಿ ಸುಂದರವಾಗಿ ಬೆಳೆಸಿದ ಉಗುರುಗಳು (Nails)  ಸುಲಭವಾಗಿ ಮುರಿಯುವ ನೋವನ್ನು ಅನುಭವಿಸಿದ್ದೇವೆ. ಕೆಲವೊಮ್ಮೆ ನಾವು ಉಗುರಗಳ ಮೇಲೆ ಅಲಂಕಾರ  ಮಾಡಿರುತ್ತೇವೆ, ಆದರೆ ಅದು ಹೆಚ್ಚು ಹೊತ್ತು ಉಳಿಯುವುದಿಲ್ಲ. ಇದಕ್ಕೆಲ್ಲ ಕಾರಣ ನಮ್ಮ ಉಗುರಿನ ಆರೋಗ್ಯ (Nail Health) ಸರಿಯಿಲ್ಲದಿರುವುದು. ಆರೋಗ್ಯವಂತ ಉಗುರು ಕಾಪಾಡಿಕೊಳ್ಳುವುದು ಕಷ್ಟಕರವೇನಲ್ಲ. ನಿಮ್ಮ ಉಗುರುಗಳು ಬಲವಾಗಿರಬೇಕೆಂದರೆ ಉಗುರು ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಒದಗಿಸುವ ಆಹಾರಗಳನ್ನು (Food)  ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ದುರ್ಬಲವಾದ ಉಗುರುಗಳನ್ನು ಬಲಪಡಿಸುವ ಟಾಪ್ 5 ಆಹಾರ ಪದಾರ್ಥಗಳು ಇಲ್ಲಿವೆ:

ಹಾಲು

ಉಗುರುಗಳನ್ನು ಬಲಪಡಿಸಲು ಕ್ಯಾಲ್ಸಿಯಂ (Calcium) ಮತ್ತು ವಿಟಮಿನ್‌ಗಳು (Vitamin) ಒಟ್ಟಾಗಿ ಕೆಲಸ ಮಾಡುತ್ತವೆ. ನೀವು ಆ ಉಗುರುಗಳ ಆರೋಗ್ಯ ಕಾಪಾಡಲು ಹಾಗೂ ನಿಮ್ಮ ಉಗುರು ಬೇಗ ಮುರಿಯಬಾರದು ಎಂದರೆ ಪ್ರತಿದಿನ ಹಾಲನ್ನು ಸೇವನೆ ಮಾಡುವುದು ಉತ್ತಮ ಎನ್ನಲಾಗುತ್ತದೆ.

ಮೊಟ್ಟೆಗಳು

ಜೀವಸತ್ವಗಳು, ಪ್ರೋಟೀನ್ (Proteins) ಮತ್ತು ಖನಿಜಗಳು (Minerals) ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆ ಸುಲಭವಾಗಿ ಉಗುರುಗಳು ಮುರಿಯದಂತೆ ತಡೆದು, ಅವುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನೀವು ನಿರ್ವಹಣೆ ಮಾಡುತ್ತಿದ್ದರೆ ಹಳದಿ ಲೋಳೆಯನ್ನು ತೆಗೆದು ಹಾಕಿ  ಅದನ್ನು ತಿನ್ನುವುದು ಉತ್ತಮ.

ಹಣ್ಣುಗಳು

ಇದನ್ನೂ ಓದಿ: ಹೊಸ ವರ್ಷದಿಂದ ನಿಮ್ಮ ಆರೋಗ್ಯದ ಬಗ್ಗೆ ಹೀಗೆ ಕಾಳಜಿವಹಿಸಿ

ನೀವು ಯಾವ ಆರೋಗ್ಯ ಪ್ರಯೋಜನವನ್ನು ಹುಡುಕುತ್ತಿದ್ದರೂ ಹಣ್ಣುಗಳು ಎಲ್ಲದ್ದಕ್ಕೂ ಉತ್ತಮ. ಅವುಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ವಿಟಮಿನ್ಗಳನ್ನು ನೀಡುತ್ತವೆ. ನೀವು ಬಲವಾದ ಉಗುರುಗಳನ್ನು ಕಾಪಾಡಿಕೊಳ್ಳಲು  ನಿಮ್ಮ ಆಹಾರದಲ್ಲಿ ಸ್ಟ್ರಾಬೆರಿ ಮತ್ತು ಬಾಳೆಹಣ್ಣುಗಳನ್ನು ಹೆಚ್ಚು ಸೇವನೆ ಮಾಡಿ.

ನಟ್ಸ್​ಗಳು

ಖನಿಜಗಳು ಮತ್ತು ವಿಟಮಿನ್ ಎ, ಇ ಮತ್ತು ಕೆ ಸಮೃದ್ಧವಾಗಿರುವ ಬೀಜಗಳು ಉಗುರುಗಳ ಆರೋಗ್ಯಕ್ಕೆ ಉತ್ತಮ. ಬಾದಾಮಿಯನ್ನು ತಕ್ಷಣವೇ ನಿಮ್ಮ ಆಹಾರದಲ್ಲಿ ಸೇರಿಸಿ, ಏಕೆಂದರೆ ಅವು ಮೆಗ್ನೀಸಿಯಮ್‌ನ ಶ್ರೀಮಂತ ಮೂಲವಾಗಿದೆ, ಇದು ಉಗುರನ್ನು ಬಲವಾಗಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ತರಕಾರಿಗಳು

ನಿಮಗೆ ಬಲವಾದ ಮತ್ತು ಆರೋಗ್ಯಕರ ಉಗುರುಗಳು ಬೇಕು ಎಂದರೆ ನಿಮ್ಮ ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ಸೇರಿಸುವುದನ್ನು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಅವುಗಳು ಕಬ್ಬಿಣ, ಫೋಲೇಟ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿದೆ.

ಚಿಕನ್

ಇದರಲ್ಲಿರುವ ಪ್ರೋಟೀನ್ ಬಲವಾದ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುವ ರೀತಿಯಲ್ಲಿಯೇ, ಇದು ನಿಮ್ಮ ಬೆರಳಿನ ಉಗುರುಗಳಿಗೆ ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ.  ಮಾಂಸವು ಉಗುರುಗಳಿಗೆ ಉತ್ತಮವ ಆಹಾರ.

ಬಿಯರ್​

ಇದು ನಿಜವಾಗಲು ಉಗುರಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು  ಹೇಳಲಾಗುತ್ತದೆ. ಗೋಧಿಯಿಂದ ತಯಾರಿಸಿದ ಬಿಯರ್ ಸಿಲಿಕಾನ್‌ ಅಂಶವನ್ನು ಸಮೃದ್ಧವಾಗಿ ಹೊಂದಿದೆ. ಇದು ನಿಮ್ಮ ಮೂಳೆಗಳನ್ನು ಹಾಗೂ ಪ್ರತಿಯಾಗಿ ನಿಮ್ಮ ಉಗುರುಗಳನ್ನು ಬಲಪಡಿಸುತ್ತದೆ ಎಂದು ಸಾಬೀತಾಗಿದೆ.

ಸಾಲ್ಮನ್ ಫಿಶ್

ಇದನ್ನೂ ಓದಿ: ವಿದೇಶದಲ್ಲಿ ಈ ವರ್ಷ ಹೆಚ್ಚು ಪ್ರಸಿದ್ಧವಾದ ಭಾರತೀಯ ವಸ್ತುಗಳಿವು

ಸಾಲ್ಮನ್​ ಫಿಶ್​ನಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದ್ದು, ಜೊತೆಗೆ ಪೋಷಕಾಂಶಗಳಾದ ಬಯೋಟಿನ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಸಮೃದ್ಧವಾಗಿ ಹೊಂದಿದೆ. ಸಾಲ್ಮನ್ ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್ ಬಿ 6 ಮತ್ತು ಬಿ 12 ಗಳಿಂದ ತುಂಬಿರುತ್ತದೆ, ಇದು ಉಗುರುಗಳನ್ನು ಸೀಳುವುದು, ಒಡೆಯುವುದು, ಸಿಪ್ಪೆಸುಲಿಯುವುದು ಅಥವಾ ಬೇರೆ ರೀತಿಯಲ್ಲಿ ಬೀಳದಂತೆ ತಡೆಯಲು ಸಹಾಯ ಮಾಡುತ್ತದೆ.
Published by:Sandhya M
First published: