• Home
  • »
  • News
  • »
  • lifestyle
  • »
  • Pink Lips: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!

Pink Lips: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ತುಟಿಗಳಿಗೆ ಏನೇ ಮಾಡುವ ಮೊದಲು ಯೋಚನೆ ಮಾಡಲಾಗುತ್ತದೆ. ಈ ಋತುವಿನಲ್ಲಿ ನಿಮ್ಮ ತುಟಿಗಳನ್ನು ಆರೋಗ್ಯವಾಗಿ ಮತ್ತು ಮೃದುವಾಗಿಡಲು ನೀವು ಸೌಂದರ್ಯ ವರ್ಧಕ ಉತ್ಪನ್ನಗಳ ಬದಲು ಮನೆ ಮದ್ದು ಮಾಡಬಹುದು...

  • Share this:

    ಬದಲಾಗುತ್ತಿರುವ ಹವಾಮಾನವು ಚರ್ಮದ (Skin) ಮೇಲೆ ಹೆಚ್ಚು ಗೋಚರವಾಗುತ್ತದೆ. ಅದರ ಜೊತೆಗೆ ತುಟಿಗಳ ಬಣ್ಣ (Lips Color) ಬದಲಾಗುವುದು, ಕಪ್ಪಾಗುವುದು (Black), ತುಟಿಗಳು ಬಿರಿಯುವುದು, ಸೀಳುವುದು ಹೀಗೆ ಇದೆಲ್ಲಾ ಪರಿಣಾಮವು ತುಟಿಗಳ ಮೇಲೆ ಮೊದಲು ಗೋಚರಿಸುತ್ತದೆ. ಒಂದೋ ತುಟಿಗಳು ಒಣಗುತ್ತವೆ (Dry). ಮತ್ತು ಸಿಪ್ಪೆ ಕೀಳುತ್ತದೆ. ಜೊತೆಗೆ ಅವುಗಳ ಬಣ್ಣ ಗಾಢವಾಗುತ್ತಾ ಹೋಗುತ್ತದೆ. ಅಂದರೆ ಲಿಪ್ ಪಿಗ್ಮೆಂಟೇಶನ್ (Lip Pigmentation) ಉಂಟಾಗುತ್ತದೆ. ಈ ಸಮಸ್ಯೆ ತೊಡೆದು ಹಾಕಲು ನೀವು ಮಾರುಕಟ್ಟೆಯ ಕೆಲವು ಉತ್ಪನ್ನಗಳನ್ನು ಬಳಕೆ ಮಾಡಬಹುದು. ಆದರೆ ಇದು ಹಚ್ಚುವುದು ಬಿಟ್ಟ ನಂತರ ಮತ್ತೆ ಸಮಸ್ಯೆ ಉಂಟು ಮಾಡುತ್ತದೆ.  


    ತುಟಿಗಳನ್ನು ಆರೋಗ್ಯವಾಗಿ ಮತ್ತು ಮೃದುವಾಗಿಡುವುದು ಹೇಗೆ?


    ಮುಖದ ಸಮಸ್ಯೆ ನಿವಾರಿಸಲು ನೀವು ಹಲವು ಮನೆ ಮದ್ದು ಮಾಡಿರಬಹುದು. ಆದರೆ ತುಟಿಗಳಿಗೆ ನೀವು ಮನೆ ಮದ್ದು ಮಾಡುವುದು ಉತ್ತಮ. ತುಟಿಗಳಿಗೆ ಏನೇ ಮಾಡುವ ಮೊದಲು ಯೋಚನೆ ಮಾಡಲಾಗುತ್ತದೆ. ಈ ಋತುವಿನಲ್ಲಿ ನಿಮ್ಮ ತುಟಿಗಳನ್ನು ಆರೋಗ್ಯವಾಗಿ ಮತ್ತು ಮೃದುವಾಗಿಡಲು ನೀವು ಸೌಂದರ್ಯ ವರ್ಧಕ ಉತ್ಪನ್ನಗಳ ಬದಲು ಮನೆ ಮದ್ದು ಮಾಡಿ.


    ಕೆಲವು ಉತ್ಪನ್ನಗಳು ಚರ್ಮದ ಅದರಲ್ಲೂ ತುಟಿಯ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಕಾಸ್ಮೆಟಿಕ್ ಉತ್ಪನ್ನಗಳು ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ. ದೀರ್ಘಾವಧಿಯ ತುರಿಕೆ ಅಥವಾ ಅಲರ್ಜಿ ಉಂಟು ಮಾಡಲು ಇದು ಕಾರಣ ಆಗುತ್ತದೆ. ಹಾಗಾದ್ರೆ ಇಲ್ಲಿ ನಾವು ಇಂದು ತುಟಿಗಳನ್ನು ಯಾವಾಗಲೂ ಮೃದುವಾಗಿ ಇಡುವುದು ಹೇಗೆ ಎಂದು ನೋಡೋಣ.


    ಇದನ್ನೂ ಓದಿ: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?


    ತೆಂಗಿನ ಎಣ್ಣೆ ಬಳಸಿ


    ತೆಂಗಿನ ಎಣ್ಣೆಯು ತುಟಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಎನ್ ಸಿಬಿಐ ವರದಿ ಪ್ರಕಾರ, ತೆಂಗಿನ ಎಣ್ಣೆ ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ನಿಮ್ಮ ತುಟಿಗಳನ್ನು ತೇವಗೊಳಿಸುತ್ತದೆ. ಹಾಗೂ ತುಟಿಗಳ ಮೇಲಿನ ಸೋಂಕನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಪ್ರತಿ ರಾತ್ರಿ ನಿಮ್ಮ ತುಟಿಗಳಿಗೆ ಹೆಚ್ಚುವರಿ ವರ್ಜಿನ್ ತೆಂಗಿನ ಎಣ್ಣೆ ಬಳಸಬಹುದು.


    ಕಿತ್ತಳೆ ಸಿಪ್ಪೆ ಬಳಸಿ


    ತುಟಿಗಳು ತುಂಬಾ ಒಣಗಿದ್ದರೆ ಅವುಗಳಿಗೆ ಎಕ್ಸ್‌ಫೋಲಿಯೇಶನ್ ಅಗತ್ಯ ಇರುತ್ತದೆ. ಆಗ ಕಿತ್ತಳೆ ಸಿಪ್ಪೆಯ ಸಹಾಯದಿಂದ ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡಿ. ಇದು ಉತ್ತಮ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿದ್ದು, ತುಟಿಯ ಬಣ್ಣವನ್ನು ಹೆಚ್ಚಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಮಾತ್ರ ಬಳಸಬಹುದು. ಅಥವಾ ಒಣಗಿದ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಹಾಲು ಬೆರೆಸಿ ನಿಮ್ಮ ತುಟಿಗಳನ್ನು ಎಫ್ಫೋಲಿಯೇಟ್ ಮಾಡಬಹುದು.


    ನಿಂಬೆ ಮತ್ತು ಜೇನುತುಪ್ಪ


    ನಿಂಬೆ ಮತ್ತು ಜೇನುತುಪ್ಪದ ಪೇಸ್ಟ್ ತುಟಿಯ ವಿನ್ಯಾಸ ಮೃದು ಮತ್ತು ಆರೋಗ್ಯವಾಗಿರಿಸುತ್ತದೆ. ಜೇನುತುಪ್ಪವು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ತುಟಿಗಳನ್ನು ಮೃದುವಾಗಿಸುತ್ತದೆ.


    ಇಂಡಿಯನ್ ಜರ್ನಲ್ ಆಫ್ ಡರ್ಮಟಾಲಜಿ ಪ್ರಕಾರ, ನಿಂಬೆ ಬಳಕೆ ಎಲ್ಲಾ ರೀತಿಯ ಪಿಗ್ಮೆಂಟೇಶನ್ ಅನ್ನು ದೂರವಿರಿಸಲು ಪ್ರಯೋಜನಕಾರಿ ಆಗಿದೆ. ನೀವು ಈ ಮಿಶ್ರಣವನ್ನು ವಾರಕ್ಕೆ ಮೂರು ಬಾರಿ ಬಳಸಬಹುದು. ಇದನ್ನು ತುಟಿಗಳ ಮೇಲೆ ಹಚ್ಚಿ ಒಣಗಲು ಬಿಡಿ ಮತ್ತು ನಂತರ ಒರೆಸಿ.


    ಗುಲಾಬಿ ದಳ ಮತ್ತು ಹಾಲು


    ನಿಮ್ಮ ತುಟಿಗಳಿಗೆ ನೈಸರ್ಗಿಕವಾಗಿ ಗುಲಾಬಿ ಬಣ್ಣ ಬರುವಂತೆ ಮಾಡಲು ನೀವು ಗುಲಾಬಿ ದಳಗಳ ಜೊತೆ ಹಾಲನ್ನು ಬಳಸಿ. ಗುಲಾಬಿ ದಳ ನಿಮ್ಮ ತುಟಿಗಳಿಗೆ ನೈಸರ್ಗಿಕ ಗುಲಾಬಿ ಬಣ್ಣ ನೀಡುತ್ತದೆ. ಹಾಲಿನ ಜೊತೆಗೆ ಇದು ಅದ್ಭುತ ಪರಿಹಾರ ನೀಡುತ್ತದೆ. ಹಾಗೂ ಒಣ ತುಟಿ ಸಮಸ್ಯೆ ನಿವಾರಣೆ ಮಾಡುತ್ತದೆ.


    ಇದನ್ನೂ ಓದಿ: ಮೂಳೆಗಳ ಸಮಸ್ಯೆ ಹಾಗೂ ಶೀತ ತಡೆಯಲು ಈ ಪದಾರ್ಥಗಳ ಸೇವನೆ ಪ್ರಯೋಜನಕಾರಿ!


    ಆಲೂಗಡ್ಡೆ ಬಳಸಿ


    ಆಲೂಗಡ್ಡೆ ನಿಮ್ಮ ತುಟಿಗಳ ಬಣ್ಣ ಕಾಪಾಡಲು ಸಹಾಯ ಮಾಡುತ್ತದೆ. ಅದರ ಸುತ್ತಲಿನ ಡಾರ್ಕ್ ನ್ನು ತೆಗೆದು ಹಾಕುತ್ತದೆ. ಇದು ಪಿಷ್ಟ ಹೊಂದಿದೆ. ತುಟಿಗಳಿಗೆ ಆಲೂಗಡ್ಡೆ ಉಜ್ಜಬೇಕು. ನಂತರ ಅನ್ವಯಿಸಿ ಒಣಗಿದ ನಂತರ ಒರೆಸಿ.

    Published by:renukadariyannavar
    First published: