HOME » NEWS » Lifestyle » LINKEDIN DATA REVELS COMPETITION FOR JOBS IN INDIA SPIKED 30 PERCENT SESR

ಭಾರತದಲ್ಲಿ ಉದ್ಯೋಗ ಸ್ಪರ್ಧೆ ಶೇ30ರಷ್ಟು ಹೆಚ್ಚಳ; ಲಿಂಕ್ಢೇನ್​ ಅಧ್ಯಯನದಲ್ಲಿ ಬಯಲು

ಭಾರತದ ವೃತ್ತಿಯಲ್ಲಿ ದಿಗ್ಗಜವಾಗಿರುವ ಪ್ರೋಗ್ರಾಮಿಂಗ್​ ಲಾಕ್ವೇಜ್​ ಕೌಶಲ್ಯ ಅತಿ ವೇಗವಾಗಿ ಬೆಳೆಯುತ್ತಿದೆ. ಮೆಷಿನ್​ ಲರ್ನಿಂಗ್​, ಡಾಟಾ ಸ್ಟ್ರಕ್ಚರ್​, ಡಿಜಿಟಲ್​ ಮಾರ್ಕೆಟಿಂಗ್​ ಮತ್ತು ಎಚ್​ಟಿಎಂಎಲ್​ 5ಗಳ 2019-20ರಲ್ಲಿ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯವಾಗಿದೆ.

news18-kannada
Updated:October 29, 2020, 5:41 PM IST
ಭಾರತದಲ್ಲಿ ಉದ್ಯೋಗ ಸ್ಪರ್ಧೆ ಶೇ30ರಷ್ಟು ಹೆಚ್ಚಳ; ಲಿಂಕ್ಢೇನ್​ ಅಧ್ಯಯನದಲ್ಲಿ ಬಯಲು
jobs
  • Share this:
ಉದ್ಯೋಗ ಮಾಡಬೇಕೆಂಬುದು ಯುವಜನತೆಯ ಕನಸು. ಆದರೆ, ಈಗ ಉದ್ಯೋಗ ಸಿಗುವುದು ಸುಲಭ ಮಾರ್ಗವಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಉದ್ಯೋಗದ ಪೈಪೋಟಿಯೆ ಶುರವಾಗಿದೆ. ಯುವಜನತೆ ಮಧ್ಯೆ ಉದ್ಯೋಗಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದು, ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ 2019ರಿಂದ ಈಚೆಗೆ ಶೇ 30 ರಷ್ಟು ಹೆಚ್ಚಿದೆ ಎಂದು ವೃತ್ತಿಪರ ನೆಟ್​ವರ್ಕ್​ ಆಗಿರುವ ಲಿಂಕ್ಡೇನ್​ ತಿಳಿಸಿದೆ. ಭಾರತದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಶೇ.12 ರಷ್ಟು ಬೆಳವಣಿಗೆ ಕಂಡಿದ್ದು, ಉದ್ಯೋಗಿಗಳ ನಡುವಿನ ಸ್ಪರ್ಧೆಯಲ್ಲಿ ಶೇ.30ರಷ್ಟು ಹೆಚ್ಚಾಗಿದೆ ಎಂದು ಲಿಂಕ್ಢೇನ್​ ಲೇಬರ್​ ಮಾರ್ಕೆಟ್​ ಡಾಟಾ ತಿಳಿಸಿದೆ.

ಲಿಂಕ್ಡೇನ್​ ಪ್ರಕಾರ ಭಾರತದ ಜನರು ಹೆಚ್ಚಾಗಿ ರಿಕ್ರಿಯೇಷನ್​, ಪ್ರವಾಸ, ಚಿಲ್ಲರೆ, ಮತ್ತು ಕಾರ್ಪೋರೇಟ್​ ಸೇವೆಯಂತಹ ಕೆಲಸವನ್ನು ಹುಡುಕುತ್ತಾರೆ. ಅದರಲ್ಲಿಯೂ ತಮ್ಮ ಹುದ್ದೆ ಹೊರತಾದ ಕ್ಷೇತ್ರದಲ್ಲಿ ಕೆಲಸ ಶೋಧಿಸುವವರ ಸಂಖ್ಯೆ ಕೂಡ ಅಧಿಕವಿದೆ.

ಇದನ್ನು ಓದಿ: ಯುವ ಜೋಡಿಗಳ ಫೋಟೋ ಶೂಟ್​ಗೆ ಈಗ ಕೆಎಸ್​ಆರ್​ಟಿಸಿ ಡಬ್ಬಲ್​ ಡೆಕ್ಕರ್​ ಬಸ್​ ಲಭ್ಯ; ಅದು ಡಿಸ್ಕೌಂಟ್​ ಆಫರ್​​ನಲ್ಲಿ

ರಿಕ್ರಿಯೇಷನ್​ ಮತ್ತು ಪ್ರವಾಸದಂತಹ ಉದ್ಯೋಗಗಳಿಗೆ 3.8 ಪಟ್ಟು ಜನರು ಉದ್ಯೋಗ ಹೊಂದಿದರೆ, ಚಿಲ್ಲರೆ ವ್ಯಾಪಾರದಲ್ಲಿ 1.5ಪಟ್ಟು ಹಾಗೂ ಕಾರ್ಪೋರೇಟರ್​ ಸೇವೆಗಳಲ್ಲಿ 1.4ರಷ್ಟು ಜನರು ಕೆಲಸ ಆಯ್ದುಗೊಂಡಿದ್ದಾರೆ. ಈ ಕೆಲಸ ಆಯ್ದುಗೊಂಡವರೆಲ್ಲಾ ಈ ಹಿಂದೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿಸಿದ್ದಾರೆ. ತಮ್ಮ ಮೂಲ ಕ್ಷೇತ್ರದ ಹೊರತಾಗಿ ಕೆಲಸ ನೋಡುವರ ಸಂಖ್ಯೆ ಹೆಚ್ಚಾಗಿದೆ ಎಂದು ಇದೇ ವೇಳೆ ತಿಳಿಸಿದೆ.

ಇನ್ನು ಭಾರತದ ವೃತ್ತಿಯಲ್ಲಿ ದಿಗ್ಗಜವಾಗಿರುವ ಪ್ರೋಗ್ರಾಮಿಂಗ್​ ಲಾಕ್ವೇಜ್​ ಕೌಶಲ್ಯ ಅತಿ ವೇಗವಾಗಿ ಬೆಳೆಯುತ್ತಿದೆ. ಮೆಷಿನ್​ ಲರ್ನಿಂಗ್​, ಡಾಟಾ ಸ್ಟ್ರಕ್ಚರ್​, ಡಿಜಿಟಲ್​ ಮಾರ್ಕೆಟಿಂಗ್​ ಮತ್ತು ಎಚ್​ಟಿಎಂಎಲ್​ 5ಗಳ 2019-20ರಲ್ಲಿ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯವಾಗಿದೆ.
Published by: Seema R
First published: October 29, 2020, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories