ಬೆಳಗ್ಗೆ ಎದ್ದೊಡನೆ ಕಾಫಿ ಗುಟಕರಿಸದೆ ದಿನ ಆರಂಭವಾಗುವುದೇ ಇಲ್ಲ ಎಂಬವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಕಾಫಿ ಸೇವನೆ ಬಹಳಷ್ಟು ಮಂದಿಯ ಆಹಾರ ಕ್ರಮದ ಅವಿಭಾಜ್ಯ ಅಂಗ. ಅಂತವರಿಗೊಂದು ಕಹಿ ಸುದ್ದಿ! ಹೆಚ್ಚು ಕಾಫಿ ಸೇವನೆಯು ಮೆದುಳಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ದಕ್ಷಿಣ ಆಸ್ಟ್ರೇಲಿಯದ ವಿಶ್ವವಿದ್ಯಾನಿಲಯವೊಂದು ನಡೆಸಿದ ಹೊಸ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಅತೀ ದೊಡ್ಡ ಅಧ್ಯಯನದಲ್ಲಿ ಕಾಫಿ ಸೇವನೆಯು ಒಟ್ಟು ಮೆದುಳಿನ ಪರಿಣಾಮ ಮತ್ತು ಬುದ್ದಿಮಾಂದ್ಯತೆಯ ಅಪಾಯಕ್ಕೆ ಸಂಬಂಧಪಟ್ಟಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ‘ನ್ಯೂಟ್ರಿಶಿನಲ್ ನ್ಯೂರೋಸೈನ್ಸ್’ ಜರ್ನಲ್ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.
ದಕ್ಷಿಣ ಆಸ್ಟ್ರೇಲಿಯದ ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ, ಯುನಿಸಾದ ಆಸ್ಟ್ರೇಲಿಯನ್ ಫಾರ್ ಪ್ರೆಸಿಶನ್ ಹೆಲ್ತ್ ಮತ್ತು ಅಂತಾರಾಷ್ಟ್ರೀಯ ಸಂಶೋಧಕರ ಒಂದು ತಂಡವು ನಡೆಸಿದ ಈ ಅಧ್ಯಯನದಲ್ಲಿ, ಭಾಗವಹಿಸಿದ್ದ 17,702 ಯುಕೆ ಬಯೋ ಬ್ಯಾಂಕ್ ಮಂದಿಯಲ್ಲಿ (37-73 ವಯೋಮಾನ) ಮೆದುಳಿನ ಮೇಲೆ ಕಾಫಿ ಸೇವನೆಯ ಪರಿಣಾಮವನ್ನು ಗಮನಿಸಲಾಯಿತು. ದಿನಕ್ಕೆ 6 ಲೋಟಕ್ಕಿಂತ ಹೆಚ್ಚು ಕಾಫಿ ಕುಡಿಯುವವರು ಬುದ್ದಿಮಾಂದ್ಯತೆಗೆ ಒಳಗಾಗುವ ಅಪಾಯ ಶೇಕಡಾ 53ರಷ್ಟು ಹೆಚ್ಚಿರುತ್ತದೆ ಎಂಬುವುದು ಅದರಿಂದ ತಿಳಿದುಬಂತು.
ಪ್ರಮುಖ ಸಂಶೋಧಕ ಮತ್ತು ಯುನಿಸಾ ಪಿಹೆಚ್ಡಿ ಅಭ್ಯರ್ಥಿ ಕಿಟ್ಟಿ ಫಾಮ್, ಈ ಸಂಶೋಧನೆಯು ಸಾರ್ವಾಜನಿಕ ಆರೋಗ್ಯಕ್ಕೆ ಮುಖ್ಯ ಒಳನೋಟಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
“ಕಾಫಿ ಜಗತ್ತಿನ ಜನಪ್ರಿಯ ಪೇಯಗಳಲ್ಲಿ ಒಂದು. ಜಗತ್ತಿನಲ್ಲಿ ವರ್ಷಕ್ಕೆ 9 ಬಿಲಿಯನ್ ಕಿಲೋಗ್ರಾಂಗಳಷ್ಟು ಕಾಫಿ ಬಳಸಲಾಗುತ್ತದೆ, ಆರೋಗ್ಯದ ಮೇಲೆ ಯಾವುದೇ ಪರಿಣಾಮಗಳನ್ನು ನಾವು ಅರ್ಥ ಮಾಡಿಕೊಳ್ಳುವುದು ವಿಮರ್ಶಾತ್ಮಕವಾಗಿದೆ” ಎಂದು ಫಾಮ್ ಹೇಳಿದ್ದಾರೆ.
“ಇದು ಕಾಫಿ, ಮೆದುಳಿನ ಪ್ರಮಾಣದ ಮಾಪನಗಳು, ಬುದ್ದಿಮಾಂದ್ಯತೆಯ ಅಪಾಯಗಳು ಮತ್ತು ಪಾರ್ಶ್ವವಾಯುವಿನ ಅಪಾಯಗಳ ನಡುವಿನ ಸಂಬಂಧದ ಕುರಿತ ಅತ್ಯಂತ ವ್ಯಾಪಕವಾದ ತನಿಖೆ ಇದಾಗಿದೆ – ವಾಲ್ಯೂಮೆಟ್ರಿಕ್ ಮೆದುಳಿನ ಇಮೇಜಿಂಗ್ ಡಾಟಾ ಮತ್ತು ಒಂದು ವ್ಯಾಪಕ ಗೊಂದಲಕಾರಿ ಅಂಶಗಳನ್ನು ತಿಳಿಯುವ ಅತೀ ದೊಡ್ಡ ಅಧ್ಯಯನವೂ ಆಗಿದೆ” ಎಂದೂ ಹೇಳಿದ್ದಾರೆ.
ಬುದ್ದಿಮಾಂದ್ಯತೆ ಎಂದರೆ ಮೆದುಳಿನ ಕ್ಷೀಣಗೊಳ್ಳುವ ಸ್ಥಿತಿ, ಅದು ನೆನಪಿನ ಶಕ್ತಿ, ಆಲೋಚನೆ, ನಡವಳಿಕೆ ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಜಗತ್ತಿನಲ್ಲಿ ಸುಮಾರು 50 ಮಿಲಿಯನ್ ಜನರಿಗೆ ಈ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ. ಆಸ್ಟ್ರೇಲಿಯದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಡಿಮೆನ್ಶಿಯಾ ಅಂದರೆ ಬುದ್ದಿಮಾಂದ್ಯತೆ ಎರಡನೇ ಕಾರಣವಾಗಿದ್ದು, ದಿನಕ್ಕೆ ಸುಮಾರು 250 ಜನರಲ್ಲಿ ಈ ರೋಗ ಪತ್ತೆಯಾಗುತ್ತಿದೆ.
ವಿಶ್ವದಲ್ಲಿ, 25 ವರ್ಷಕ್ಕಿಂತ ಮೇಲ್ಪಟ್ಟ ನಾಲ್ವರು ವಯಸ್ಕರಲ್ಲಿ, ಒಬ್ಬರಿಗೆ ಪಾರ್ಶ್ವವಾಯು ಉಂಟಾಗುತ್ತದೆ. ಈ ವರ್ಷ 13.7 ಮಿಲಿಯನ್ ಜನರಿಗೆ ಪಾರ್ಶ್ವವಾಯು ಉಂಟಾಗುತ್ತದೆ ಮತ್ತು ಅದರ ಪರಿಣಾಮವಾಗಿ 5.5 ಮಿಲಿಯನ್ ಜನರು ಸಾವನ್ನಪ್ಪಲಿದ್ದಾರೆ ಎಂದು ದತ್ತಾಂಶಗಳು ಸೂಚಿಸುತ್ತವೆ.
ಯುನಿಸಾದ ಆಸ್ಟ್ರೇಲಿಯನ್ ಫಾರ್ ಪ್ರೆಸಿಶನ್ ಹೆಲ್ತ್ನ ಹಿರಿಯ ತನಿಖಾಧಿಕಾರಿ ಮತ್ತು ನಿರ್ದೇಶಕರಾದ ಎಲಿನಾ ಹಿಪ್ಪೊನೆನ್ ಪ್ರಕಾರ, ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು ಮತ್ತು ಕಾಫಿಯ ಜೊತೆ ಸ್ವಲ್ಪ ನೀರನ್ನೂ ಕುಡಿಯಬೇಕು. ದಿನಕ್ಕೆ ಎರಡು ಕಪ್ನಷ್ಟು ಕಾಫಿಯನ್ನಷ್ಟೇ ಕುಡಿಯುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ