• Home
 • »
 • News
 • »
 • lifestyle
 • »
 • Weight Lifting: ಅಕಾಲಿಕ ಮರಣದ ಅಪಾಯ ಕಡಿಮೆ ಮಾಡುತ್ತೆ ವೇಯ್ಟ್ ಲಿಫ್ಟಿಂಗ್! ಯಾವಾಗ? ಹೇಗೆ ಮಾಡ್ಬೇಕು?

Weight Lifting: ಅಕಾಲಿಕ ಮರಣದ ಅಪಾಯ ಕಡಿಮೆ ಮಾಡುತ್ತೆ ವೇಯ್ಟ್ ಲಿಫ್ಟಿಂಗ್! ಯಾವಾಗ? ಹೇಗೆ ಮಾಡ್ಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ರಿಟಿಷ್‌ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಈ ಬಗ್ಗೆ ಅಧ್ಯಯನದ ವರದಿಯೊಂದು ಪ್ರಕಟವಾಗಿದೆ. ಅದರಲ್ಲಿ ತೂಕ ಎತ್ತುವುದು ಒಳ್ಳೆಯ ವ್ಯಾಯಾಮದ ಜೊತೆಗೆ ಅಕಾಲಿಕ ಸಾವಿನ ಅಪಾಯ ಕಡಿಮೆ ಎಂದು ಹೇಳಲಾಗಿದೆ.

 • Share this:

  ಸದ್ಯ ವ್ಯಾಯಾಮ (Exercise) ಆರೋಗ್ಯಕ್ಕೆ ಒಳ್ಳೆಯದು (Good For Health) ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಅದರಲ್ಲೂ ಓಡುವುದು, ಸೈಕ್ಲಿಂಗ್‌, ಏರೋಬಿಕ್ಸ್‌ ನಂತಹ ವ್ಯಾಯಾಮಗಳು ಬೆಸ್ಟ್‌ ಅಂತ ತಜ್ಞರೂ ಹೇಳ್ತಾರೆ. ಆದ್ರೆ ಈ ವ್ಯಾಯಾಮಗಳಲ್ಲಿ ತೂಕ ಎತ್ತುವಂತಹ ಕಸರತ್ತುಗಳನ್ನು ಮಾಡೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ (Benefits) ಅನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಆದ್ರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ನಿಮ್ಮ ದೈನಂದಿನ ವ್ಯಾಯಾಮಗಳಲ್ಲಿ ವೇಯ್ಟ್‌ ಲಿಫ್ಟಿಂಗ್‌ (Weight Lifting) ಸೇರಿಸಿಕೊಂಡರೆ ಹಲವು ಆರೋಗ್ಯ ಪ್ರಯೋಜನಗಳ ಜೊತೆಗೆ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.


  ಮರಣದ ಅಪಾಯ ಹೇಗೆ ಕಡಿಮೆ ಮಾಡುತ್ತೆ ವೇಯ್ಟ್‌ ಲಿಫ್ಟಿಂಗ್?‌


  ಬ್ರಿಟಿಷ್‌ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಈ ಬಗ್ಗೆ ಅಧ್ಯಯನದ ವರದಿಯೊಂದು ಪ್ರಕಟವಾಗಿದೆ. ಅದರಲ್ಲಿ ತೂಕ ಎತ್ತುವುದು ಒಳ್ಳೆಯ ವ್ಯಾಯಾಮದ ಜೊತೆಗೆ ಅಕಾಲಿಕ ಸಾವಿನ ಅಪಾಯ ಕಡಿಮೆ ಎಂದು ಹೇಳಲಾಗಿದೆ.


  ಇಂತಹ ಮಾಡರೇಟ್‌ ಇಂಟೆನ್ಸಿಟಿ ಎಕ್ಸಸೈಜ್‌ ಅಥವಾ ಮಧ್ಯಮ-ತೀವ್ರತೆಯ ವ್ಯಾಯಾಮ ಲಘುವಾಗಿ ಬೆರವರಿಳಿಸುವ ಚಟುವಟಿಕೆ ಅಥವಾ ಉಸಿರಾಟ ಹಾಗೂ ಹೃದಯ ಬಡಿತವನ್ನು ಮಧ್ಯಮ ಮಟ್ಟಕ್ಕೆ ಹೆಚ್ಚಿಸುವ ಚಟುವಟಿಕೆ ಅಂತ ಹೇಳಲಾಗಿದೆ. ಅಲ್ಲದೇ ತೂಕ ಎತ್ತುವಂಥ ಚಟುವಟಿಕೆಗಳು ಬೆವರಿಳಿಸುವ ಹಾಗೂ ಹೃದಯ ಬಡಿತವನ್ನು ಅತ್ಯಂತ ವೇಗಗೊಳಿಸುವ ಚಟುವಟಿಕೆಗಳು ಅಂತಲೂ ಸೇರಿಸಲಾಗಿದೆ.


  weight lifting and body building How beneficial is to heart health here know
  ಸಾಂದರ್ಭಿಕ ಚಿತ್ರ


  ಅಂದಹಾಗೆ ಮೇರಿಲ್ಯಾಂಡ್‌ನ ರಾಕ್‌ವಿಲ್ಲೆಯಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು, ಅಮೆರಿಕದ ಹತ್ತು ಕ್ಯಾನ್ಸರ್ ಕೇಂದ್ರಗಳಿಂದ 100,000 ಪುರುಷರು ಮತ್ತು ಮಹಿಳೆಯರ ಡೇಟಾವನ್ನು ಪರಿಗಣಿಸಿದ್ದಾರೆ.


  ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


  ಅಧ್ಯಯನದ ವರದಿ ಏನ್​ ಹೇಳುತ್ತೆ!?


  ಇದರಲ್ಲಿ ಭಾಗವಹಿಸುವವರ ಸರಾಸರಿ ವಯಸ್ಸು 71 ಆಗಿದ್ದು, ಸರಾಸರಿ ಬಾಡಿ ಮಾಸ್ ಇಂಡೆಕ್ಸ್ 27.8 (ಅಧಿಕ ತೂಕ)ಹೊಂದಿತ್ತು. ಅವರು ಹೃದ್ರೋಗ ಸೇರಿದಂತೆ ಯಾವ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದನ್ನು ದಶಕಗಳ ಕಾಲ ಅಧ್ಯಯನ ಮಾಡಲಾಯ್ತು. ಅದರಲ್ಲಿ ಸುಮಾರು ಕಾಲು ಭಾಗದಷ್ಟು ಜನರು (23%) ತೂಕ ಎತ್ತುವುದನ್ನು ವರದಿ ಮಾಡಿದ್ದಾರೆ. ಅದರಲ್ಲಿ 16% ಜನರು ಇದನ್ನು ನಿಯಮಿತವಾಗಿ ಮಾಡುತ್ತಾರೆ. ಅಂದರೆ ವಾರಕ್ಕೆ ಒಂದರಿಂದ ಆರು ಬಾರಿ ಮಾಡಿದ್ದಾರೆ.


  ವೇಟ್‌ಲಿಫ್ಟಿಂಗ್ ಮತ್ತು ಏರೋಬಿಕ್ ವ್ಯಾಯಾಮಗಳು ಕ್ಯಾನ್ಸರ್ ಹೊರತುಪಡಿಸಿ ಯಾವುದೇ ಕಾರಣದಿಂದ ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುವುದರಲ್ಲಿ ಪ್ರತ್ಯೇಕ ಸಂಬಂಧ ಹೊಂದಿವೆ ಎನ್ನುತ್ತದೆ ಸಂಶೋಧನೆ.


  ಏರೋಬಿಕ್ ಚಟುವಟಿಕೆಯನ್ನು ವರದಿ ಮಾಡದ ವಯಸ್ಕರಿಗೆ, ಯಾವುದೇ ವೇಟ್‌ಲಿಫ್ಟಿಂಗ್ ಅವರು ಎಷ್ಟು ಬಾರಿ ತೂಕವನ್ನು ಎತ್ತುತ್ತಾರೆ ಎಂಬುದರ ಆಧಾರದ ಮೇಲೆ ಆರಂಭಿಕ ಸಾವಿನ ಪ್ರಮಾಣ 9% -22% ಕಡಿಮೆ ಅಪಾಯದೊಂದಿಗೆ ಸಂಬಂಧಿಸಿದೆ. ತೂಕ ಎತ್ತದ, ಆದರೆ ಯಾವುದೇ ಮಟ್ಟದ ಏರೋಬಿಕ್ ವ್ಯಾಯಾಮ ಮಾಡಿದವರಿಗೆ ಇದು 24%-34% ಆಗಿತ್ತು ಅನ್ನೋದು ವಿಶೇಷ.


  ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


  ಪುರುಷರಿಗಿಂತ ಮಹಿಳೆಯರಿಗೇ ಪ್ರಯೋಜನ ಹೆಚ್ಚು!


  ವೇಟ್‌ಲಿಫ್ಟಿಂಗ್ ಮತ್ತು ಏರೋಬಿಕ್ ವ್ಯಾಯಾಮ ಎರಡನ್ನೂ ಮಾಡಿದವರಲ್ಲಿ ಸಾವಿನ ಅಪಾಯ ಕಡಿಮೆ ಕಂಡುಬಂದಿದೆ. ಉದಾಹರಣೆಗೆ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ತೂಕವನ್ನು ಎತ್ತುವುದು ಮತ್ತು ಕನಿಷ್ಠ ಶಿಫಾರಸು ಮಾಡಿದ ಏರೋಬಿಕ್ ವ್ಯಾಯಾಮವನ್ನು ಮಾಡುವುದರಿಂದ ಅಕಾಲಿಕ ಮರಣದ ಅಪಾಯವು 41%-47% ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ವೇಯ್ಟ್‌ ಲಿಫ್ಟಿಂಗ್‌ ನಿಂದ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.


  ಅಂದಹಾಗೆ, ವೇಟ್‌ಲಿಫ್ಟಿಂಗ್ ಏರೋಬಿಕ್ ವ್ಯಾಯಾಮಕ್ಕೆ ಸಮಾನವಾದ ಪ್ರಯೋಜನಕಾರಿ ಪರಿಣಾಮಗಳನ್ನು ಹೊಂದಿರಬಹುದು. ಉದಾಹರಣೆಗೆ, ರಕ್ತದೊತ್ತಡ ಮತ್ತು ರಕ್ತದ ಲಿಪಿಡ್ (ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು) ಪ್ರೊಫೈಲ್ ಅನ್ನು ಸುಧಾರಿಸುವ ಮೂಲಕ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವುದು ಇದರಲ್ಲಿ ಸೇರಿದೆ. ಒಟ್ಟಾರೆ, ಸರಿಯಾದ ವ್ಯಾಯಾಮವನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವುದು ಆರೋಗ್ಯಕ್ಕೆ ಒಳ್ಳೆಯದು.

  Published by:ಪಾವನ ಎಚ್ ಎಸ್
  First published: