Lifetime Fitness: ನೀವು 50 ವರ್ಷದ ನಂತರವೂ ಫಿಟ್ ಆಗಿರಬೇಕೇ..? ಈ ಟಿಪ್ಸ್‌ಗಳನ್ನು ಅನುಸರಿಸಿ

ನೀವು ಹೆಚ್ಚು ಕಾಲ ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಏನು ಮಾಡಿದರೆ ಒಳ್ಳೆಯದು ಎಂದು ಫಿಟ್ನೆಸ್ ತರಬೇತುದಾರರಾದ ಕೀತ್ ಲಜಾರಸ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎಲ್ಲ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ(Developed Countries) ಭಾರತ(India)ದಲ್ಲಿ ಪುರುಷರು(Gents) ಮತ್ತು ಮಹಿಳೆ(Ladies)ಯರು ತಮ್ಮ ಜೀವನದುದ್ದಕ್ಕೂ ತಮ್ಮ ಸಮಯ, ಶಕ್ತಿ, ಹಣ ಹೀಗೆ ಎಲ್ಲವನ್ನೂ ತಮ್ಮ ಮಕ್ಕಳ ಶಾಲೆ(School)ಗೆ, ನಂತರ ಕಾಲೇಜು(College), ಉದ್ಯೋಗ(Employment) ಮತ್ತು ಕೆಲವೊಮ್ಮೆ ಮದುವೆಯವರೆಗೆ ಅವರನ್ನು ನೋಡಿಕೊಳ್ಳುವುದರಲ್ಲಿಯೇ ಅವರು ತಮ್ಮ 50ನೇ ವಯಸ್ಸನ್ನು ತಲುಪಿರುತ್ತಾರೆ. ಇವೆಲ್ಲದರ ಮಧ್ಯೆ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವುದು ಕಷ್ಟಕರವಾಗುತ್ತದೆ. ಇದೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿದ ನಂತರ ತಮ್ಮ ಆರೋಗ್ಯ(Health)ದ ಕಡೆಗೆ ಗಮನ ಕೊಡಲು ಶುರು ಮಾಡುತ್ತಾರೆ. ಅಷ್ಟರಲ್ಲಿಯೇ ಅವರಿಗೆ ಮಂಡಿ ನೋವು, ಸ್ನಾಯು ಸೆಳೆತ, ರಕ್ತದೊತ್ತಡ(Blood Pressure), ಮಧುಮೇಹ(Sugar) ಹೀಗೆ ಅನೇಕ ರೋಗಗಳು ಬಹುತೇಕರನ್ನು ಆವರಿಸಿರುತ್ತದೆ.

ನಿಮ್ಮ ಆರೋಗ್ಯ ನಿರ್ಲಕ್ಷಿಸಬೇಡಿ, ನೀವು ಜೀವನ ಪರ್ಯಂತ ಫಿಟ್ ಆಗಿರುವುದು ಹೇಗೆ ಅಂತೀರಾ? ಇಲ್ಲಿವೆ ನೋಡಿ ತಜ್ಞರು ನೀಡಿದ ಕೆಲವು ಸಲಹೆಗಳು.

ಆನ್‌ಲೈನ್‌ನಲ್ಲಿರುವ ‘ಮೆನ್ಸ್ ಹೆಲ್ತ್’ನಲ್ಲಿ ಉಲ್ಲೇಖಿಸಿದ ಹಾಗೆ ನೀವು ನಿಮ್ಮ ಕನಸಿನ ದೇಹದ ಆಕಾರ ಪಡೆಯಲು ಮತ್ತು ಆರೋಗ್ಯವಾಗಿರಲು ನೀವು ಈ ವಯಸ್ಸಿನಲ್ಲಿಯೂ ಜಿಮ್‌ಗೆ ಹೋಗಬಹುದು ಎಂದು ತಿಳಿಸಿದೆ.

ವೈಯಕ್ತಿಕ (ಫಿಟ್ನೆಸ್) ತರಬೇತುದಾರರಾದ ಕೀತ್ ಲಜಾರಸ್ ಅವರು ‘ಮೆನ್ಸ್ ಹೆಲ್ತ್’ ಸಂಪರ್ಕ ಹೊಂದಿದ್ದು, ಸ್ವತಃ ತಾವೇ 55 ವರ್ಷದ ವ್ಯಕ್ತಿಯಾಗಿದ್ದು ಮತ್ತು ಉತ್ತಮ ಫಿಟ್ನೆಸ್ ಹೊಂದಿರುವ 50ಕ್ಕಿಂತಲೂ ಹೆಚ್ಚಿನ ವಯಸ್ಸಿನವರಿಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.

ನೀವು ಹೆಚ್ಚು ಕಾಲ ನಿಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಹೇಗೆ?

ನೀವು ಹೆಚ್ಚು ಕಾಲ ನಿಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳಲು ಏನು ಮಾಡಿದರೆ ಒಳ್ಳೆಯದು ಎಂದು ಫಿಟ್ನೆಸ್ ತರಬೇತುದಾರರಾದ ಕೀತ್ ಲಜಾರಸ್ ತಿಳಿಸಿದ್ದಾರೆ.

ನೀವು ಪ್ರತಿದಿನ ಜಿಮ್ ಗೆ ಹೋಗುತ್ತಿದ್ದರೆ ಹೀಗೆ ಮಾಡಿ:

ನೀವು ಪ್ರತಿದಿನ ಜಿಮ್‌ಗೆ ಹೋಗುತ್ತಿದ್ದರೆ, ನೀವು ನಿಮ್ಮ ಸಂಪೂರ್ಣ ದೇಹದ ತಾಲೀಮು ಮಾಡಿ. ಯುವಕರ ಹಾಗೆ ಒಂದೊಂದು ದಿನ ಕೈ, ಕಾಲಿನ, ಭುಜದ, ಎದೆಯ ಭಾಗದ, ಹೊಟ್ಟೆಯ ಭಾಗದ ತಾಲೀಮು ಮಾಡುವುದಕ್ಕಿಂತಲೂ ಇಡೀ ದೇಹದ ತಾಲೀಮು ಮಾಡುವುದು ನೀವು ಫಿಟ್ ಆಗಿರಲು ಸಹಾಯ ಮಾಡುತ್ತದೆ ಎಂದು ಲಜಾರಸ್ ಹೇಳುತ್ತಾರೆ.

ಇದನ್ನೂ ಓದಿ:Weight Loss: ದೇಹದ ತೂಕ ಇಳಿಸುವಾಗ ನೀರಿನ ತೂಕ ಹಾಗೂ ಕೊಬ್ಬಿನ ತೂಕದ ಬಗ್ಗೆ ಗಮನವಿರಲಿ

ಕೆಲವು ವರ್ಷಗಳ ಹಿಂದೆ ವ್ಯಾಯಾಮ ತ್ಯಜಿಸಿದವರಿಗೆ:

ನೀವು ಮೊದಲು ವ್ಯಾಯಾಮ ಮಾಡಿ ಮಧ್ಯದಲ್ಲಿ ಬಿಟ್ಟು ನಂತರ ತುಂಬಾ ವರ್ಷಗಳ ಬಳಿಕ ಮತ್ತೆ ಶುರು ಮಾಡಬೇಕೆಂದು ಎಂದುಕೊಂಡರೆ ನೀವು ಮೊದಲಿನಿಂದ ತಾಲೀಮನ್ನು ಪ್ರಾರಂಭಿಸಬೇಕು ಎಂದು ಲಜಾರಸ್ ಹೇಳುತ್ತಾರೆ. ತುಂಬಾ ವರ್ಷಗಳವರೆಗೆ ಯಾವುದೇ ತಾಲೀಮು ಮಾಡದೆ ಇರುವುದರಿಂದ ನಿಮ್ಮ ದೇಹದ ಚಲನೆಯಲ್ಲಿ ಸ್ವಲ್ಪ ಜಡತ್ವ ಬಂದಿರುತ್ತದೆ ಎಂದು ಲಜಾರಸ್ ಹೇಳುತ್ತಾರೆ. ನೀವು ಮೊದಲು ಎಷ್ಟೇ ತೂಕ ಎತ್ತಿದರೂ ಸಹ ಈಗ ತೂಕವನ್ನು ಎತ್ತಲು ಹೋಗಬೇಡಿ. ನೀವು ತೂಕದ ಕಡೆ ಗಮನಕೊಡದೆ ನಿಮ್ಮ ದೇಹದ ಫಿಟ್ನೆಸ್ ಕಡೆಗೆ ಗಮನ ಹರಿಸುವುದು ಒಳ್ಳೆಯದು ಎಂದು ಲಜಾರಸ್ ಹೇಳುತ್ತಾರೆ.

50ನೇ ವಯಸ್ಸಿನಲ್ಲಿ ಫಿಟ್ನೆಸ್ ತರಬೇತಿ ಪ್ರಾರಂಭಿಸುವವರಿಗೆ:

"ಮೊದಲನೆಯದಾಗಿ, 50ನೇ ವಯಸ್ಸಿನಲ್ಲಿ ನೀವು ತಾಲೀಮು ಮಾಡುವುದನ್ನು ಪ್ರಾರಂಭಿಸಿದರೆ ಮೂಲವಾಗಿರುವಂತಹ ದೇಹದ ಚಲನೆಯ ತಾಲೀಮುಗಳನ್ನು ಮಾಡಿರಿ ಎಂದು ಲಜಾರಸ್ ಹೇಳುತ್ತಾರೆ. ಹೊಸದಾಗಿ ಫಿಟ್ನೆಸ್ ತರಬೇತಿ ಪ್ರಾರಂಭಿಸಿದವರು ಕಾಲ್ಬೆರಳುಗಳನ್ನು ಸ್ಪರ್ಶಿಸುವುದು, ಮೇಲೆ ಕೆಳಗೆ ಸಣ್ಣದಾಗಿ ಹಾರುವುದು, ದೇಹವನ್ನು ಎರಡು ಕಡೆಗಳಲ್ಲಿ ವಾಲಿಸುವುದು ಒಳ್ಳೆಯದು ಎಂದು ಇವರು ಹೇಳುತ್ತಾರೆ.

ಇದನ್ನೂ ಓದಿ:Belly Fat Loss Tips: ವ್ಯಾಯಾಮ ಮಾಡದೇ ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿವೆ ಸಿಂಪಲ್ ಟಿಪ್ಸ್​

ನಿಧಾನವಾಗಿ ಊಟ ಮಾಡಿ:

"ನೀವು ಹೊಟ್ಟೆ ತುಂಬುವವರೆಗೂ ಆಹಾರ ಸೇವಿಸಬೇಡಿ, 2008 ರ ಬ್ರಿಟಿಷ್ ಮೆಡಿಕಲ್ ಜರ್ನಲ್ ಅಧ್ಯಯನದ ಪ್ರಕಾರ ತ್ವರಿತವಾಗಿ ತಿನ್ನುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. "ನಿಮ್ಮ ಹೊಟ್ಟೆ ತುಂಬಿದೆ ಎಂದು ದೇಹದಿಂದ ಸಂಕೇತವನ್ನು ಪಡೆಯಲು ನೀವು ನಿಜವಾಗಿಯೂ ನಿಧಾನವಾಗಿ ತಿನ್ನಬೇಕು. ಬುದ್ಧಿವಂತಿಕೆಯಿಂದ ನೀವು ತಿನ್ನುವ ಆಹಾರ ಪದಾರ್ಥ ಆಯ್ಕೆ ಮಾಡಿಕೊಳ್ಳಿ. ಸಾಕಷ್ಟು ಪ್ರೋಟೀನ್, ಕಡಿಮೆ ಬಿಳಿ ಕಾರ್ಬ್ಸ್ ಇರುವ ಆಹಾರ ಸೇವಿಸಿರಿ ಎಂದು ಲಜಾರಸ್ ಹೇಳುತ್ತಾರೆ.
Published by:Latha CG
First published: