Skin care Tips: ವಯಸ್ಸು 25-30, ಕಾಡುತ್ತಿರೋ ಮುಖದ ಸುಕ್ಕು ಹೋಗೋಕೆ ಇಲ್ಲಿದೆ ಟಿಪ್ಸ್​

ವಯಸ್ಸು ಆಗ್ತಿದ್ದಂತೆ ಮುಖ ಸುಕ್ಕುಗಟ್ಟಿದಂತೆ ಕಾಣೋದಕ್ಕೆ ಆರಂಭವಾಗುತ್ತದೆ. ಹಣೆ, ಕಣ್ಣಿನ ಬಳಿ ನೆರಿಗೆಗಳು ಪ್ರತ್ಯಕ್ಷವಾಗುತ್ತೆ. ಇದನ್ನ ಅಕಾಲಿಕ ವೃದ್ಧಾಪ್ಯ ಅಂತಾನೂ ಕರೆಯಲಾಗುತ್ತದೆ. ಈ ಸಮಸ್ಯೆಯಿಂದ ಪಾರಾಗೋಕೆ ಇಲ್ಲಿದೆ ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಯೌವ್ವನ ಅನ್ನೋದು ಬದುಕಿನ ಪ್ರಮುಖ ಘಟ್ಟ. ನಾವು ನೋಡೋಕೆ ಯಾವಾಗಲೂ ಯೌವ್ವನದಿಂದ (Young) ಕೂಡಿರಬೇಕು, ಮುಖ ಲವಲವಿಕೆಯಲ್ಲಿ (Energetic) ಇರಬೇಕು ಅಂತಾ ಬಯಸ್ತೇವೆ. ಅದರಲ್ಲೂ ಹುಡುಗೀರಂತು (Girls) ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಇರ್ತಾರೆ. ದಾಟೋ ವಯಸ್ಸನ್ನು (Age) ನಿಲ್ಲಿಸಲು ಆಗಲ್ಲ. ಹಾಗಂತ ವಯಸ್ಸಾಯ್ತು ಅಂತಾ ಸುಮ್ಮನಿರೋಕು ಆಗಲ್ಲ. ವಯಸ್ಸು ಆಗ್ತಿದ್ದಂತೆ ಅದರ ಲಕ್ಷಣಗಳು ಮುಖದಲ್ಲಿ (Face) ಗೋಚರಿಸೋಕೆ ಶುರುವಾಗುತ್ತೆ. ಮುಖ ಸುಕ್ಕುಗಟ್ಟಿದಂತೆ ಕಾಣೋದಕ್ಕೆ ಆರಂಭವಾಗುತ್ತದೆ. ಹಣೆ, ಕಣ್ಣಿನ ಬಳಿ ನೆರಿಗೆಗಳು ಪ್ರತ್ಯಕ್ಷವಾಗುತ್ತೆ. ಇದನ್ನ ಅಕಾಲಿಕ ವೃದ್ಧಾಪ್ಯ ಅಂತಾನೂ ಕರೆಯಲಾಗುತ್ತದೆ. ಅಲ್ಲದ ವಯಸ್ಸಿನಲ್ಲಿ ಕಾಡುವ ಈ ಸಮಸ್ಯೆಯಿಂದ ಪಾರಾಗೋಕೆ ಇಲ್ಲಿದೆ ಟಿಪ್ಸ್

ನಮ್ಮ ದೇಹ ಮತ್ತು ಮನಸ್ಸು ಸಮಯದೊಂದಿಗೆ ಹಲವಾರು ಪರಿವರ್ತನೆಗಳ ಮೂಲಕ ಸಾಗುತ್ತವೆ. ಕೆಲವರಿಗೆ, ಈ ಬದಲಾವಣೆಗಳು ಸಾಮಾನ್ಯಕ್ಕಿಂತ ಮುಂಚೆಯೇ ಸಂಭವಿಸುತ್ತವೆ. ಹಾಗಾಗಿ ಮುಖ ಸುಕ್ಕುಗಟ್ಟುವಿಕೆ ಆರಂಭವಾಗುತ್ತದೆ.

ಜೀವನಶೈಲಿಯಿಂದ ಮುಖ ಸುಕ್ಕು

ಕೆಲವರ ವಯಸ್ಸು 25ರಿಂದ 30 ಅಥವಾ 35 ಆಗಿರುತ್ತದೆ ಅಷ್ಟೇ. ಆದ್ರೆ ಅಷ್ಟು ಬೇಗ ಮುಖ ಸುಕ್ಕುಗಟ್ಟುವುದು ಶುರುವಾಗಿರುತ್ತದೆ. ಇದು ಜೆನೆಟಿಕ್ಸ್ ಮತ್ತು ಜೀವನಶೈಲಿ ಎರಡರಿಂದಲೂ ಬರುತ್ತದೆ. ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸತೊಡಗುತ್ತವೆ.

Lifestyle Skin care Tips beauty sense Here tips to get rid of facial wrinkles
ಸಾಂದರ್ಭಿಕ ಚಿತ್ರ


ಜೀವನಶೈಲಿ ಬದಲಿಸಿಕೊಳ್ಳಿ

ನಮ್ಮ ಕೆಲಸ, ಒತ್ತಡದ ಬದುಕು ಕೂಡ ಮುಖ ಸುಕ್ಕುಗಟ್ಟಲು ಕಾರಣ. ಹಾಗಾಗಿ ಜೈವನಶೈಲಿಯನ್ನು ಬದಲಿಕೊಂಡರೆ ಇದರಿಂದ ದೂರ ಉಳಿಯಬಹುದು.

ಇದನ್ನೂ ಓದಿ: ಮಕ್ಕಳಿಗಾಗಿ ಸರಳ ಮತ್ತು ಉಪಯುಕ್ತ ಆರೋಗ್ಯ ಸಲಹೆಗಳು!

ಸೊಪ್ಪು-ತರಕಾರಿ ಹೆಚ್ಚು ತಿನ್ನಿ

ಆರೋಗ್ಯಕರ ಜೀವನಕ್ಕೆ ಊಟದಲ್ಲಿ ಸೊಪ್ಪು-ತರಕಾರಿ ಅತೀಮುಖ್ಯ. ಹಾಗಾಗಿ ಊಟದಲ್ಲಿ, ಬೆಳಗ್ಗೆ ಅಥವಾ ಮಧ್ಯಾಹ್ನ ಹೆಚ್ಚು ಸೊಪ್ಪು-ತರಕಾರಿಗೆ ಒತ್ತುಕೊಡಿ.

ಹಣ್ಣು ಜಾಸ್ತಿ ತಿನ್ನಿ

ದೇಹದಲ್ಲಿ ಸದಾ ನೀರಿನ ಅಂಶ ಇರುವಂತೆ ನೋಡಿಕೊಳ್ಳಿ. ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸಿ. ತಾಜಾ ಹಣ್ಣುಗಳು, ತರಕಾರಿ, ಸೊಪ್ಪು, ಖನಿಜ, ಜೀವಸತ್ವ, ಸಮೃದ್ಧ ಪೋಷಕಾಂಶಗಳಿಂದ ಕೂಡಿದ ಆಹಾರ ಸೇವನೆ ಮಾಡುವುದು ಅತಿ ಮುಖ್ಯ.

Lifestyle Skin care Tips beauty sense Here tips to get rid of facial wrinkles
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಮಕ್ಕಳಿಗೆ ಸಾಂಪ್ರದಾಯಿಕ ಉಡುಪು ಖರೀದಿಸಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಕಲೆಕ್ಷನ್

ಚೆನ್ನಾಗಿ ನಿದ್ರಿಸಿ

ನಮ್ಮ ಮುಖ ಕಾಂತಿಯುತವಾಗಿ ಕಾಣದೇ ಇರಲು ಮುಖ್ಯ ಕಾರಣ ನಿದ್ರೆ. ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಿದರೆ, ದೇಹಕ್ಕೆ ಎನರ್ಜಿ ಸಿಕ್ಕಂತಾಗುತ್ತದೆ. ಮಲಗುವ ಸಮಯದಲ್ಲಿ ಮೊಬೈಲ್ ದೂರ ಇಟ್ಟು ಮಲಗಿ. ಚೆನ್ನಾಗಿ ನಿದ್ರಿಸಿ. ಆಗ ಕಣ್ಣು ಮತ್ತು ಮುಖ ರಿಲ್ಯಾಕ್ಸ್ ಆಗುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ

ಪ್ರತಿನಿತ್ಯ ಕನಿಷ್ಠ ಅರ್ಧಗಂಟೆಯಾದರು ವಾಕಿಂಗ್ ಮಾಡಿ. ಎಸಿಯಲ್ಲಿ ಕುಳಿತು ಜಡ್ಡುಗಟ್ಟಿದ ದೇಹಕ್ಕೆ ವ್ಯಾಯಾಮ ಮುಖ್ಯ. ಮಾತ್ರವಲ್ಲದೇ ಲವಲವಿಕೆಯಿಂದ ಕೆಲಸ ಮಾಡೋದಕ್ಕೆ ವಾಕಿಂಗ್ ಅತ್ಯಗತ್ಯ.

Lifestyle Skin care Tips beauty sense Here tips to get rid of facial wrinkles
ನಿತ್ಯ ವ್ಯಾಯಾಮ ಮಾಡಿ


ಜಂಕ್​ಫುಡ್​ನಿಂದ ದೂರವಿರಿ

ಹೊರಗೆ ಕಾಲಿಟ್ಟ ತಕ್ಷಣ ನಮಗೆ ತಿಂಡಿ-ತಿನಿಸುಗಳು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಆದರೆ ಜಂಕ್ ಫುಡ್​ನಿಂದ ದೂರವಿರಿ. ಆಲ್ಕೋಹಾಲ್, ಧೂಮಪಾನವನ್ನು ತ್ಯಜಿಸುವುದು ಬಹುಮುಖ್ಯವಾಗಿದೆ.

ಎಣ್ಣೆ ಪದಾರ್ಥಗಳ ಸೇವನೆ ಬೇಡ

ಮುಖ ಸುಕ್ಕುಗಟ್ಟಲು ಪ್ರಮುಖ ಕಾರಣ ನಾವು ಸೇವಿಸುವ ಆಹಾರವೂ ಒಂದು. ಹಾಗಾಗಿ ಊಟದ ಮೆನುವಲ್ಲಿ ಎಣ್ಣೆಯ ಅಂಶದಿಂದ ದೂರ ಇರಿ. ಆದಷ್ಟು ಎಣ್ಣೆ ಸೇರಿಸದ ಆಹಾರ ಸೇವಿಸಿ

ನೀರು ಹೆಚ್ಚು ಸೇವಿಸಿ

ಪ್ರತಿನಿತ್ಯ ಹೆಚ್ಚಾಗಿ ನೀರು ಕುಡಿಯಿರಿ. ದೇಹದಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದರೆ ಆರೋಗ್ಯವೂ ಚೆನ್ನಾಗಿರುತ್ತೆ. ಕಾಂತಿಯುತವಾಗಿಯೂ ಕಾಣುತ್ತೀರಿ. ಮುಖ ತೊಳೆಯುವುದಕ್ಕೂ ಆದಷ್ಟು ತಣ್ಣೀರು ಬಳಸಿ. ಇದು ಮುಖವನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಸೂರ್ಯನಿಗೆ ನೇರವಾಗಿ ಚರ್ಮವೊಡ್ಡುವುದನ್ನು ನಿಯಂತ್ರಿಸಿ.
Published by:Thara Kemmara
First published: