ನಮ್ಮ ದೇಹದಲ್ಲಿನ ಪ್ರತಿಯೊಂದು ಪ್ರಮುಖ ಪ್ರಕ್ರಿಯೆಯನ್ನು ನಿರ್ದೇಶಿಸುವ ಕೆಲಸವನ್ನು ಹಾರ್ಮೋನುಗಳು (Hormonal Imbalance) ಮಾಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹಾರ್ಮೋನುಗಳು ನಮ್ಮ ದೇಹದೊಳಗಿನ ಪ್ರಬಲ ಸಂದೇಶವಾಹಕಗಳಾಗಿವೆ, ನಮ್ಮ ರಕ್ತಪ್ರವಾಹದ (Bloodstream) ಮೂಲಕ ನಮ್ಮ ಅಂಗಗಳು ಮತ್ತು ಅಂಗಾಂಶಗಳೊಂದಿಗೆ ಸಂವಹನ ನಡೆಸುತ್ತವೆ ಅಂತ ಹೇಳಬಹುದು. ಅದರಲ್ಲೂ ಮಹಿಳೆಯರಿಗೆ, ಹಸಿವು (Hungery), ತೂಕ (Weight), ಮನಸ್ಥಿತಿಯನ್ನು ನಿಯಂತ್ರಿಸುವುದು, ಋತುಚಕ್ರ (Menstrual Cycle), ಅಂಡೋತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಗರ್ಭಧಾರಣೆಗಾಗಿ ಮಹಿಳೆಯ ದೇಹವನ್ನು ಸಿದ್ಧಪಡಿಸುವಂತಹ ದೈಹಿಕ ಕಾರ್ಯಗಳಲ್ಲಿ ಹಾರ್ಮೋನುಗಳು ಪ್ರಮುಖ ಪಾತ್ರವಹಿಸುತ್ತವೆ ಅಂತ ಹೇಳಬಹುದು.
ವಯಸ್ಸಾದಂತೆ ಹಾರ್ಮೋನುಗಳು ಸ್ವಾಭಾವಿಕವಾಗಿ ಏರಿಳಿತಗೊಳ್ಳುತ್ತವೆ, ಆದಾಗ್ಯೂ, ಈ ರೀತಿಯ ಅಸಮತೋಲನವು ಒತ್ತಡ, ವೈದ್ಯಕೀಯ ಪರಿಸ್ಥಿತಿಗಳು ಅಥವಾ ಔಷಧಿಗಳಂತಹ ಅಂಶಗಳಿಂದ ಪ್ರಚೋದಿಸಲ್ಪಡಬಹುದು.
ಹಾರ್ಮೋನುಗಳ ಅಸಮತೋಲನದ ಲಕ್ಷಣಗಳು:
ಈ ಹಾರ್ಮೋನುಗಳ ಅಸಮತೋಲನವು ಅನೇಕ ರೀತಿಯ ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು. ಈ ಅಸಮತೋಲನದ ರೋಗಲಕ್ಷಣಗಳು ಇಲ್ಲಿವೆ ನೋಡಿ.
ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಾವ ಆಹಾರವನ್ನು ತಿನ್ನುತ್ತೀರಿ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಎಂದರೆ ಆರೋಗ್ಯಕರ, ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಹಾರ್ಮೋನುಗಳ ಸಮತೋಲನವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಪ್ರೋಟೀನ್, ಕಬ್ಬಿಣ, ಜೀವಸತ್ವಗಳು, ಕಾರ್ಬೋಹೈಡ್ರೇಟ್ ಗಳು ಮತ್ತು ಮೊಟ್ಟೆಯ ಹಳದಿ ಲೋಳೆ, ತುಪ್ಪ ಮತ್ತು ಕೊಬ್ಬಿನ ಮೀನುಗಳಂತಹ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.
ಸರಿಯಾದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಹೆಚ್ಚಿನ ಬಿಎಂಐ ಹೊಂದಿರುವ ಮಹಿಳೆಯರು ಹೆಚ್ಚು ಹಾರ್ಮೋನುಗಳ ಅಸಮತೋಲನದಿಂದ ಬಳಲುತ್ತಿರುತ್ತಾರೆ.
ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡಲು ವ್ಯಾಯಾಮ ಮಾಡುವುದು ಸೂಕ್ತ
ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ವ್ಯಾಯಾಮ ತುಂಬಾನೇ ಮುಖ್ಯವಾಗಿದೆ. ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ, ವ್ಯಾಯಾಮ ಮಾಡುವುದು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಹಾರ್ಮೋನುಗಳ ಅಸಮತೋಲನದ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ ತಜ್ಞರ ಪ್ರಕಾರ, ನೀವು ಮಧುಮೇಹ, ಚಯಾಪಚಯ ಅಸ್ವಸ್ಥತೆ ಅಥವಾ ಹಾರ್ಮೋನುಗಳ ಸಮಸ್ಯೆಗಳಿಂದ ಉಂಟಾಗುವ ಇತರ ಪರಿಸ್ಥಿತಿಗಳನ್ನು ಹೊಂದಿದ್ದರೆ, ನಿಯಮಿತ ಫಿಟ್ನೆಸ್ ವ್ಯಾಯಾಮವನ್ನು ಪಡೆಯುವುದು ನಿಮ್ಮ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ವ್ಯಾಯಾಮವು ತೂಕ ಹೆಚ್ಚಳವನ್ನು ತಡೆಗಟ್ಟುವ ಮೂಲಕ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಮೂಲಕ ಋತುಬಂಧಕ್ಕೆ ಸಂಬಂಧಿಸಿದ ತೊಂದರೆಯ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಿ
ಒತ್ತಡವು ಕಾರ್ಟಿಸೋಲ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ, ಇದು ದೇಹದ ಹೋರಾಟದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಕಾರ್ಟಿಸೋಲ್ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಅತಿಯಾದ ಒತ್ತಡದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾದಾಗ, ಇದು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ.
ಉಸಿರಾಟದ ವ್ಯಾಯಾಮಗಳು, ಕೆಫೀನ್ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ದಿನಚರಿ ಬರೆಯುವುದು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುವ ಕೆಲವು ಚಟುವಟಿಕೆಗಳಾಗಿವೆ.
ರಾಸಾಯನಿಕಗಳಿರುವ ಸೌಂದರ್ಯವರ್ಧಕಗಳನ್ನು ಬಳಸಬೇಡಿ
ಎಂಡೋಕ್ರೈನ್ ಅಡ್ಡಿಪಡಿಸುವ ರಾಸಾಯನಿಕಗಳು (ಇಡಿಸಿ) ಅಧಿಕವಾಗಿರುವ ಸೌಂದರ್ಯವರ್ಧಕ ಉತ್ಪನ್ನಗಳು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು.
ಅಲ್ಲದೆ ಇದು ಫಲವತ್ತತೆಯ ಮೇಲೆ ಸಹ ಪರಿಣಾಮ ಬೀರಬಹುದು. 18 ರಿಂದ 44 ವರ್ಷ ವಯಸ್ಸಿನ 143 ಮಹಿಳೆಯರನ್ನು ಒಳಗೊಂಡ ಅಧ್ಯಯನವು ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಬಳಸುವ ಸೌಂದರ್ಯವರ್ಧಕಗಳು ಸಂತಾನೋತ್ಪತ್ತಿ ಹಾರ್ಮೋನುಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಕಂಡು ಹಿಡಿದಿದೆ. ಚರ್ಮಕ್ಕಾಗಿ ರಾಸಾಯನಿಕ ಮುಕ್ತ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಲು ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ