ಈ ಒಂದು ದೈನಂದಿನ ಅಭ್ಯಾಸ ಬದಲಿಸಿದರೆ, ನಿಮ್ಮ ಆಯಸ್ಸು ಹೆಚ್ಚಾಗತ್ತಂತೆ!

ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಜನರು ಜೀವನಶೈಲಿ ಬದಲಾಯಿಸುವುದರಿಂದ ದೀರ್ಘಾಯುಷ್ಯ ಪಡೆಯಬಹುದು ಎಂದು ತಿಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಯಾರು ದೀರ್ಘಾಯುಷ್ಯವನ್ನು ಬಯಸುವುದಿಲ್ಲ ಹೇಳಿ. ಈ ಹಿನ್ನೆಲೆ ಹಲವರು ಆರೋಗ್ಯಕರ ಜೀವನ ನಡೆಸಲು ಬಯಸುತ್ತಾರೆ. ಇದರರ್ಥ ಅವರು ಕೊನೆಯುಸಿರಿರುವವರೆಗೂ ತಮ್ಮ ಎಲ್ಲ ಇಂದ್ರಿಯಗಳನ್ನು ನಿಯಂತ್ರಿಸಲು ಬಯಸುತ್ತಾರೆ. ದೀರ್ಘಾಯುಷ್ಯಕ್ಕೆ ಯಾವುದೇ ರಹಸ್ಯವಿಲ್ಲ. ಆದರೆ ನೀವು ದೀರ್ಘಾಯುಷ್ಯಕ್ಕೆ ಅನುಕೂಲಕರವಾದ ಅಭ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಫ್ರಾಂಟಿಯರ್ಸ್ ಇನ್ ಏಜಿಂಗ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ, ಜನರು ಜೀವನಶೈಲಿ ಬದಲಾಯಿಸುವುದರಿಂದ ದೀರ್ಘಾಯುಷ್ಯ ಪಡೆಯಬಹುದು ಎಂದು ತಿಳಿಸಿದೆ. "ಮಾನವನ ದೀರ್ಘಾಯುಷ್ಯವು ನಿಯಮಿತವಾದ ನಿದ್ರೆಯ ಮಾದರಿಗಳಿಗೆ ಸಂಬಂಧಿಸಿದೆ, ದೀರ್ಘಾವಧಿಯ ಜೀವನಕ್ಕಾಗಿ ನಿಧಾನವಾಗಿ ನಿದ್ರೆಯ ಮಾದರಿಗಳನ್ನು ಅಳವಡಿಸಿಕೊಳ್ಳುವುದು ನಾವು ದೀರ್ಘಾಯುಷ್ಯ ಸಾಧಿಸಲು ಇಡುವ ಮೊದಲ ಹೆಜ್ಜೆಯಾಗಿದೆ'' ಎಂದು ಸಂಶೋಧನಾ ಅಧ್ಯಯನ ಸೂಚಿಸಿದೆ.


ಅಧ್ಯಯನದಸಂಶೋಧನೆಗಳು


ಈ ಅಧ್ಯಯನದಲ್ಲಿ ಮೂರು ಪ್ರಮುಖ ಲಕ್ಷಣಗಳು ದೀರ್ಘಾಯುಷ್ಯದೊಂದಿಗೆ ಸಸಂಬಂಧ ಹೊಂದಿವೆ. ಅವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ
  • ಹಿರಿಯ ವಯಸ್ಕರಿಗೆ ಹೋಲಿಸಿದರೆ ಅತಿ ಹಿರಿಯ ವಯಸ್ಸಾದ ವ್ಯಕ್ತಿಗಳಲ್ಲಿ ನಿಧಾನ-ತರಂಗ ನಿದ್ರೆಯ ನಿರ್ವಹಣೆಯ ಅವಶ್ಯಕತೆಯಿದೆ.

  • ಹಿರಿಯ ವಯಸ್ಕ ವ್ಯಕ್ತಿಗಳಲ್ಲಿ ಕಟ್ಟುನಿಟ್ಟಾಗಿ ನಿಯಮಿತವಾದ ನಿದ್ರೆ ಮಾದರಿಗಳ ಅಸ್ತಿತ್ವ

  • ಹಿರಿಯ ವಯಸ್ಕರಲ್ಲಿ ಅನುಕೂಲಕರ ಲಿಪಿಡ್ ಪ್ರೊಫೈಲ್ ಮೇಲೆ ಪರಿಣಾಮ ಬೀರುವುದು.


ವಯಸ್ಸಾದವರ ಮೆದುಳಿನಲ್ಲಿ ನಿದ್ರೆ ಮತ್ತು ಲಿಪಿಡ್ ಚಯಾಪಚಯ ನಿಯಂತ್ರಣವು ಮಾನವ ದೀರ್ಘಾಯುಷ್ಯವನ್ನು ನಿರ್ವಹಿಸುವಲ್ಲಿ ಬೆಂಬಲಿಸುತ್ತವೆ ಎಂದು ಇಸಿಜಿ ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಲಿಪಿಡ್ ವಿಶ್ಲೇಷಣೆಯು ರಕ್ತ ಪರೀಕ್ಷೆಯಾಗಿದ್ದು ಅದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ಅಳೆಯಲು ಬಳಸಲಾಗುವುದು. ರಕ್ತದಲ್ಲಿ ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ನಿಯಮಿತವಾದ ನಿದ್ರೆಯ ಮಾದರಿಯು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ.


ಇದನ್ನು ಓದಿ: ರಕ್ತದೊತ್ತಡ ನಿಯಂತ್ರಿಸುವ ಈ ಐದು ಹಣ್ಣುಗಳನ್ನು ನೀವು ಸೇವಿಸಲೇಬೇಕು!

ಮೇಯೊಕ್ಲಿನಿಕ್ತಜ್ಞರುಸೂಚಿಸಿದಂತೆಉತ್ತಮನಿದ್ರೆಗಾಗಿಸರಳಸಲಹೆಗಳುನಿಮ್ಮನ್ನುಪ್ರೇರೇಪಿಸುತ್ತದೆ!
  • ನಿದ್ರೆಯ ವೇಳಾಪಟ್ಟಿ ಅನುಸರಿಸಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಹೋಗಿ ಹಾಗೂ ಬೆಳಗ್ಗೆ ಎದ್ದೇಳಿ. 7-8 ಗಂಟೆಗಳ ಕಾಲ ನಿದ್ರೆ ಮಾಡಿ

  • ಮಲಗುವ ಮುನ್ನ ನಿಕೋಟಿನ್, ಕೆಫೀನ್ ಮತ್ತು ಆಲ್ಕೋಹಾಲ್ ಸೇವಿಸಬೇಡಿ. ಇದರ ಜೊತೆಗೆ, ಮಲಗುವ ಮುನ್ನ ಭಾರಿ, ಮಸಾಲೆಯುಕ್ತ ಊಟ ಮಾಡಬೇಡಿ.

  • ನೆಮ್ಮದಿಯ ವಾತಾವರಣ ಸೃಷ್ಟಿಸಿ: ತಂಪಾದ, ಗಾಢವಾದ ಮತ್ತು ಶಾಂತವಾದ ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಚಟುವಟಿಕೆಯ ಗದ್ದಲವಿಲ್ಲದೆ ನಿದ್ರಿಸಿ. ಮಲಗುವ ಕೋಣೆಯಲ್ಲಿ ಎಲ್ಲಾ ಡಿಜಿಟಲ್ ಪರದೆಗಳನ್ನು ನಿಷೇಧಿಸಿ.

  • ಹಗಲಿನಲ್ಲಿ ನಿದ್ರೆ ಮಾಡಬೇಡಿ: ನೀವು ಚಿಕ್ಕನಿದ್ರೆ ಮಾಡಲು ಬಯಸಿದರೆ, ನಿಮ್ಮನ್ನು 30 ನಿಮಿಷಗಳವರೆಗೆ ಮಿತಿಗೊಳಿಸಿ. ಇಲ್ಲವಾದರೆ ನೀವು ರಾತ್ರಿಯಲ್ಲಿ ನಿದ್ರೆ ಮಾಡಲು ಕಷ್ಟವಾಗುತ್ತದೆ.

  • ದಿನದಲ್ಲಿ ದೈಹಿಕವಾಗಿ ಸಕ್ರಿಯರಾಗಿರಿ: ನಿಯಮಿತ ದೈಹಿಕ ವ್ಯಾಯಾಮವು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ಆದರೆ, ಮಲಗುವ ಸಮಯದಲ್ಲಿ ವ್ಯಾಯಾಮ ಮಾಡಬೇಡಿ.

  • ಒತ್ತಡಕ್ಕೆ ವಿದಾಯ ಹೇಳಿ: ಜೀವನದ ಸಣ್ಣ ಮತ್ತು ದೊಡ್ಡ ಚಿಂತೆಗಳನ್ನು ನಿರ್ವಹಿಸಲು ಕಲಿಯಿರಿ. ಬಿಕ್ಕಟ್ಟು ಮತ್ತು ಸಂಘರ್ಷ ಪರಿಹರಿಸಿ. ಧ್ಯಾನ, ಪ್ರಾಣಾಯಾಮ, ಯೋಗ ಮಾಡಿ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: