ಎರಡು ಮೊಟ್ಟೆಯ ಕಥೆ: ಬಿಳಿ ಮತ್ತು ಕಂದು ಮೊಟ್ಟೆಯಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?

ಮಾಂಸ ಮತ್ತು ಮೊಟ್ಟೆಗಾಗಿ ಸಾಕಾಲಾಗುವ ಪೌಲ್ಟ್ರಿ ಕೋಳಿಗಳು ಬಿಳಿ ಮೊಟ್ಟೆ ಇಡುತ್ತದೆ. ಇವುಗಳು ಹೆಚ್ಚು ಮೊಟ್ಟೆಗಳನ್ನು ಇಡುವುದರಿಂದ ಮಾರುಕಟ್ಟೆಯಲ್ಲಿ ಬಿಳಿ ಮೊಟ್ಟೆಗಳು ಅಧಿಕ ಸಂಖ್ಯೆಯಲ್ಲಿ ಸಿಗುತ್ತಿದೆ.

zahir | news18
Updated:July 3, 2019, 10:05 PM IST
ಎರಡು ಮೊಟ್ಟೆಯ ಕಥೆ: ಬಿಳಿ ಮತ್ತು ಕಂದು ಮೊಟ್ಟೆಯಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?
ಮೊಟ್ಟೆ
  • News18
  • Last Updated: July 3, 2019, 10:05 PM IST
  • Share this:
ಆಹಾರ ಮತ್ತು ಆರೋಗ್ಯದ ವಿಚಾರಕ್ಕೆ ಬಂದಾಗ ಕಂದು (ಬ್ರೌನ್) ಬಣ್ಣದ ಆಹಾರಗಳು ಉತ್ತಮ ಎನ್ನಲಾಗುತ್ತದೆ. ಬ್ರೌನ್ ಬ್ರೆಡ್, ಗೋಧಿ ಪಾಸ್ತ, ಬ್ರೌನ್ ಶುಗರ್...ಹೀಗೆ ಕಂದು ಬಣ್ಣದ ಆಹಾರಗಳು ಇತರೆ ಬಿಳಿ ಬಣ್ಣದ ಆಹಾರಗಳಿಗಿಂತ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಹಾಗೆಯೇ ಮಾರುಕಟ್ಟೆಯಲ್ಲಿ ಸಿಗುವ ಬಿಳಿ ಮೊಟ್ಟೆ ಮತ್ತು ಕಂದು ಮೊಟ್ಟೆಗಳ ವಿಷಯಕ್ಕೆ ಬಂದರೆ, ಕಂದು ಬಣ್ಣದ ಮೊಟ್ಟೆಗಳು ದುಬಾರಿಯಾಗಿರುತ್ತದೆ. ಇದಕ್ಕೆ ಕಾರಣ ಕಂದು ಬಣ್ಣದ ಮೊಟ್ಟೆಗಳು ಆರೋಗ್ಯಕ್ಕೆ ಉತ್ತಮ ಎಂದು ನಂಬಲಾಗಿರುವುದು.ಸಾಮಾನ್ಯವಾಗಿ ಬಿಳಿ ಮೊಟ್ಟೆಗಳು ಎಲ್ಲ ಕಡೆ ದೊರಕುತ್ತದೆ. ಇದರ ಬೆಲೆಯು ಕಡಿಮೆ ಇರುವುದರಿಂದ ಜನರು ಹೆಚ್ಚಾಗಿ ಇದೇ ಮೊಟ್ಟೆಯನ್ನು ಖರೀದಿಸುತ್ತಾರೆ. ಆದರೂ ಜನರಲ್ಲಿ ಕಂದು ಬಣ್ಣದ ಮೊಟ್ಟೆಯೇ ಉತ್ತಮ ಎಂಬ ಭಾವನೆಯಿದೆ. ಆದರೆ ಆರೋಗ್ಯ ತಜ್ಞರ ಅಭಿಪ್ರಾಯದ ಪ್ರಕಾರ ಈ ಎರಡು ಮೊಟ್ಟೆಗಳಲ್ಲಿ ಅಂತಹ ವ್ಯತ್ಯಾಸವಿಲ್ಲ. ಬಿಳಿ ಮತ್ತು ಕಂದು ಮೊಟ್ಟೆಗಳಲ್ಲಿರುವ ನ್ಯೂಟ್ರೀಶನಲ್ ವ್ಯಾಲ್ಯೂ ನಡುವೆ ಹೆಚ್ಚೇನು ವಿಭಿನ್ನತೆ ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಾಕಾಲಾಗುವ ನಾಟಿ ಕೋಳಿ( ಕಂಟ್ರಿ ಚಿಕನ್)ಗಳು ಹಾಕುವ ಮೊಟ್ಟೆಯು ಕಂದು ಬಣ್ಣದಿಂದ ಕೂಡಿರುತ್ತದೆ. ಅದೇ ರೀತಿ ಫಾರಂನಲ್ಲಿ ಬೆಳೆಯಲಾಗು ಪೌಲ್ಟ್ರಿ ಕೋಳಿಗಳು ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಇಲ್ಲಿ ಕಂಟ್ರಿ ಕೋಳಿ, ಪೌಲ್ಟ್ರಿ ಕೋಳಿಗಿಂತ ಹೆಚ್ಚು ಆಹಾರವನ್ನು ಸೇವಿಸುತ್ತದೆ ಎಂಬುದೇ ವ್ಯತ್ಯಾಸ ಎನ್ನುತ್ತಾರೆ.ಮಾಂಸ ಮತ್ತು ಮೊಟ್ಟೆಗಾಗಿ ಸಾಕಾಲಾಗುವ ಪೌಲ್ಟ್ರಿ ಕೋಳಿಗಳು ಬಿಳಿ ಮೊಟ್ಟೆ ಇಡುತ್ತದೆ. ಇವುಗಳು ಹೆಚ್ಚು ಮೊಟ್ಟೆಗಳನ್ನು ಇಡುವುದರಿಂದ ಮಾರುಕಟ್ಟೆಯಲ್ಲಿ ಬಿಳಿ ಮೊಟ್ಟೆಗಳು ಅಧಿಕ ಸಂಖ್ಯೆಯಲ್ಲಿ ಸಿಗುತ್ತಿದೆ. ಹಾಗೆಯೇ ಹೆಚ್ಚಿನವರು ಕಂದು ಮೊಟ್ಟೆಯ ಲೋಳೆಗಳು ಹೆಚ್ಚು ಸಮೃದ್ಧವಾಗಿರುತ್ತದ ಎಂದು ಅಭಿಪ್ರಾಯ ಪಡುತ್ತಾರೆ. ಅದು ಕೋಳಿಗಳು ತಿನ್ನುವ ಆಹಾರದಿಂದ ಬದಲಾಗುವುದು ಹೊರತು, ಮೊಟ್ಟೆಯ ಶೆಲ್​ಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.ಕಂಟ್ರಿಗಳು ಕೋಳಿಗಳು ನೈಸರ್ಗಿಕ ಆಹಾರಗಳನ್ನು ಸೇವಿಸುವುದರಿಂದ ಅವುಗಳ ಮಾಂಸ ಮತ್ತು ಮೊಟ್ಟೆಗಳು ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಹೊರತು ಪಡಿಸಿ ಇವೆರಡು ಕೋಳಿಗಳ ಮೊಟ್ಟೆಯ ಪೌಷ್ಠಿಕಾಂಶದಲ್ಲಿ ಅಂತಹ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಹಾಗೆಯೇ ಮಲೇಷ್ಯಾ, ಸಿಂಗಾಪೂರ್ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂದು ಮೊಟ್ಟೆಯು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುತ್ತದೆ. ಇಲ್ಲಿ ಕಂದು ಮೊಟ್ಟೆಗಳಿಗೆ ಹೇಗೆ ಬೇಡಿಕೆ ಇದೆಯೋ, ಅಲ್ಲಿ ಬಿಳಿ ಮೊಟ್ಟೆಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಮೊಟ್ಟೆಯ ಬಣ್ಣದಲ್ಲಿ ವ್ಯತ್ಯಾಸವಿದೆ ಹೊರತು ಮೊಟ್ಟೆಯಿಂದ ಸಿಗುವ ಆರೋಗ್ಯಕರ ಗುಣದಲ್ಲಿ ಅಲ್ಲಾ ಎಂಬುದು ತಜ್ಞರ ಅಭಿಪ್ರಾಯ.
First published: July 3, 2019, 10:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading