Health Tips: ಕಾರಣವೇ ಇಲ್ಲದೆ ತೂಕ ಕಳೆದುಕೊಂಡಿದ್ದೀರಾ? ಹಾಗಾದ್ರೆ ನಿಮಗೆ ಸಮಸ್ಯೆಗಳಿರಬಹುದು

Weight Loss: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತೂಕ ಹೆಚ್ಚಾದಾಗ ಚಿಂತಿಸುವುದು ಸಾಮಾನ್ಯ. ಆದರೆ ತೂಕ ಕಡಿಮೆಯಾದಗಲೂ ಚಿಂತಿಸುವ ಅಗತ್ಯವಿದೆ. ನಾವು ತೂಕ ಕಡಿಮೆ ಮಾಡಲು ಯಾವುದೇ ಪ್ರಯತ್ನ ಮಾಡದೇ ಅಥವಾ ಯಾವುದೇ ಕಾರಣವಿಲ್ಲದೆ ತೂಕವನ್ನು ಕಳೆದುಕೊಳ್ಳುವುದು ಯಾವುದೋ ಒಂದು ಸಮಸ್ಯೆಯ ಸೂಚನೆಯಾಗಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Weight Loss:  ನಿಮ್ಮ ಜೀವನಶೈಲಿಯಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲದಿದ್ದಾಗಲೂ  ಸಹ ನೀವು ಎಂದಾದರೂ ತೂಕ ಕಳೆದುಕೊಂಡಿದ್ದೀರಾ? ಕಾರಣವೇ ಇಲ್ಲದೇ ತೂಕದಲ್ಲಿ ಕಡಿಮೆಯಾಗಿರುವ ಅನುಭವ ನಿಮಗೂ ಆಗಿದೆಯಾ?. ದೇಹದ ತೂಕದಲ್ಲಿ ಏರಿಳಿತ ಆಗುವುದು  ಸಹಜ ಆದರೆ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ  ಶೇಕಡಾ 5 ಕ್ಕಿಂತ ಹೆಚ್ಚು  ಬಾರಿ ಏರಿಳಿತ ಉಂಟಾದಾಗ ನಿಜಕ್ಕೂ ಚಿಂತಿಸಬೇಕಾದ ವಿಚಾರವಾಗುತ್ತದೆ. ಈ ಬಗ್ಗೆ ನಾವು ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಈಗ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ತೂಕ ಹೆಚ್ಚಾದಾಗ ಚಿಂತಿಸುವುದು ಸಾಮಾನ್ಯ. ಆದರೆ  ತೂಕ ಕಡಿಮೆಯಾದಗಲೂ ಚಿಂತಿಸುವ ಅಗತ್ಯವಿದೆ. ನಾವು ತೂಕ ಕಡಿಮೆ ಮಾಡಲು ಯಾವುದೇ ಪ್ರಯತ್ನ ಮಾಡದೇ ಅಥವಾ  ಯಾವುದೇ ಕಾರಣವಿಲ್ಲದೆ ತೂಕವನ್ನು ಕಳೆದುಕೊಳ್ಳುವುದು ಯಾವುದೋ ಒಂದು ಸಮಸ್ಯೆಯ ಸೂಚನೆಯಾಗಿರುತ್ತದೆ. ಅಲ್ಲದೇ ಇಂಥಹ ಸಮಯದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ಸಲಹೆ ಪಡೆಯುವುದು ಅವಶ್ಯಕ.

ಹಾಗಾದ್ರೆ ನಮ್ಮ ದೇಹದ ತೂಕದಲ್ಲಿ ವ್ಯತ್ಯಾಸವಾಗಲು ಕಾರಣಗಳೇನಿರಬಹುದು?

ಅತಿಯಾದ ಥೈರಾಯ್ಡ್ (Hyperthyroidism)

ನಿಮ್ಮ ಥೈರಾಯ್ಡ್ ಗ್ರಂಥಿಯು ಅತಿಯಾದ ಥೈರಾಯ್ಡ್ ಹಾರ್ಮೋನ್ ಅನ್ನು  ಬಿಡುಗಡೆ ಮಾಡಿದಾಗ ಈ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಆ ಹಾರ್ಮೋನ್ ಜೀರ್ಣಕ್ರಿಯೆ ಸೇರಿದಂತೆ ದೇಹದ ಅನೇಕ ಕಾರ್ಯಗಳನ್ನು ನಿಯಂತ್ರಿಸುತ್ತದೆ, ಇದು ತೂಕ ಇಳಿಕೆಯಲ್ಲಿ ಸಹ ಕಾರಣವಾಗುತ್ತದೆ. ನಿಮಗೆ ಹೈಪರ್ ಥೈರಾಯ್ಡ್ ಇದ್ದಾಗ, ನಿಮಗೆ ಎಷ್ಟೇ ಹಸಿವಾದರೂ ಸಹ, ದೇಹದಲ್ಲಿ ಕ್ಯಾಲೋರಿಗಳು ಬೇಗ ಕರಗಿಹೋಗುತ್ತವೆ. ಇನ್ನು ಬೇರೆ ಲಕ್ಷಣಗಳೆಂದರೆ, ಹೆಚ್ಚು ಆಯಾಸವಾಗುವುದು,  ಸ್ನಾಯುಗಳಲ್ಲಿ ನೋವು ಸೇರಿದಂತೆ ಬೇರೆ ಬೇರೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿದ್ರಾ ಹೀನತೆ, ಅತಿಸಾರ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ಆರಂಭವಾಗುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಈ ಮೂರು ಗಿಡಮೂಲಿಕೆಗಳು

ಪ್ಯಾಂಕ್ರಿಯಾಟೈಟಿಸ್ (Pancreatitis)

ಮೇದೋಜ್ಜೀರಕ ಗ್ರಂಥಿಯು(Pancreas) ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳನ್ನು ಉತ್ಪಾದನೆ ಮಾಡುತ್ತದೆ.  ಆದರೆ ನಿಮ್ಮ ಮೇದೋಜೀರಕ ಗ್ರಂಥಿಯಲ್ಲಿ ಸಮಸ್ಯೆ ಉಂಟಾದಾಗ, ದೇಹದ ತೂಕ ತಿಳಿಯದಂತೆ ಕಡಿಮೆಯಾಗಲು ಆರಂಭಿಸುತ್ತದೆ. ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಇರುವವರು ಬೇಗನೆ ತೂಕ ಕಳೆದುಕೊಳ್ಳುತ್ತಾರೆ. ಏಕೆಂದರೆ ಅವರ ದೇಹವು ಸರಿಯಾದ ಜೀರ್ಣಕ್ರಿಯೆಗೆ  ಬೇಕಾಗುವಷ್ಟು ಕಿಣ್ವಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇನ್ನು ಹೊಟ್ಟೆ ನೋವು, ಅತಿಸಾರ ಅಥವಾ  ಹೆಚ್ಚು ಕೊಬ್ಬಿನ ಅಂಶಗಳಿರುವ ಆಹಾರ ಸೇವನೆ ಮಾಡಿದರೆ ವಾಂತಿಯಾಗುವುದು ಪ್ಯಾಂಕ್ರಿಯಾಟೈಟಿಸ್ನ ಇತರ ರೋಗ ಲಕ್ಷಣಗಳು.

ಮಧುಮೇಹ

ಒಬ್ಬ ವ್ಯಕ್ತಿಗೆ ಮಧುಮೇಹ ರೋಗವಿದ್ದಾಗ ಅವರ ದೇಹವು ಇನ್ಸುಲಿನ್ ಉತ್ಪಾದನೆ ಮಾಡಲು ಸಾಧ್ಯವಾಗುವುದಿಲ್ಲ ಅಥವಾ ಉತ್ಪಾದನೆಯಾದರೂ ಸಹ ಅಗತ್ಯವಿರುವ ರೀತಿಯಲ್ಲಿ ಬಳಸಲು ಸಾಧ್ಯವಾಗದ ಕಾರಣ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ನಮ್ಮ ಜೀವಕೋಶಕ್ಕೆ ಬೇಕಾಗಿರುವ ಅಂಶಗಳು ಸಿಗದಿದ್ದಾಗ , ನಮ್ಮ ದೇಹವು ಕೊಬ್ಬಿನ ಅಂಶಗಳನ್ನು ಸುಡಲು ಆರಂಭಿಸುತ್ತದೆ. ಈ ಕಾರಣದಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಇನ್ನು ಮಧುಮೇಹಿಗಳಲ್ಲಿ ಬಾಯಾರಿಕೆ, ಸುಸ್ತು, ಹಸಿವು ಅಥವಾ ಸಾಮಾನ್ಯಕ್ಕಿಂತ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುವುದು ಕೂಡ ಸಾಮಾನ್ಯವಾಗಿದೆ.

ಇದನ್ನೂ ಓದಿ: ಹಾಲುಣಿಸುವ ತಾಯಿ ಏನನ್ನು ತಿನ್ನಬೇಕು? ಏನು ತಿನ್ನಬಾರದು? ವೈದ್ಯರು ಹೇಳಿದ ಕಿವಿಮಾತು...

ಸ್ನಾಯು ನಷ್ಟ(Muscle loss)

ನಿಮ್ಮ ಸ್ನಾಯುಗಳಲ್ಲಿನ ಶಕ್ತಿ ಕಡಿಮೆಯಾದರೆ ಅಥವಾ ಸ್ಯಾಯು ಬಲವನ್ನು ಬಳಸದೇ ಇದ್ದಲ್ಲಿ ತೂಕ ಕಡಿಮೆಯಾಗುವ ಸಾಧ್ಯತೆ ಹೆಚ್ಚು.  ಸಾಮಾನ್ಯವಾಗಿ ಇಂಥಹ ಸಮಸ್ಯೆ ಬರುವುದು ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದವರಲ್ಲಿ ಮತ್ತು ವ್ಯಾಯಾಮ ಮಾಡದವರು ಹಾಗೂ ಹೆಚ್ಚು ಕುಳಿತು ಕೆಲಸ ಮಾಡುವವರಲ್ಲಿ ಕಂಡು ಬರುತ್ತದೆ. ಇನ್ನು ಸ್ನಾಯುಗಳಿಗೆ ಬೇಕಾಗುವ ಪೋಷಕಾಂಶಗಳು ಲಭಿಸಿದರೆ ಮತ್ತು ವ್ಯಾಯಾಮ ಮಾಡುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು. ಇದಿಷ್ಟೇ ಅಲ್ಲದೇ  ಸ್ನಾಯು ಸಮಸ್ಯೆ ಆದಲ್ಲಿ ನಮಗೆ ಹೆಚ್ಚು.  ಗಾಯಗಳಾಗುತ್ತವೆ, ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಉದರದ ಕಾಯಿಲೆ

ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು  ಗ್ಲುಟನ್ ( ಅಂಟಿನ ಅಂಶಗಳು) ಸೇವನೆಯಿಂದ ಸಣ್ಣ ಕರುಳಿಗೆ ಹಾನಿಯಾಗುತ್ತದೆ. ಆದ್ದರಿಂದ, ನೀವು ಉದರದ ಕಾಯಿಲೆಯನ್ನು ಹೊಂದಿದ್ದರೆ ಅದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುತ್ತದೆ. ನಿಮ್ಮ ಸಣ್ಣ ಕರುಳಿನ ಒಳಪದರಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವ ಸಾಮರ್ಥ್ಯವನ್ನು  ಕಡಿಮೆ ಮಾಡುತ್ತದೆ. ಇದು  ತೂಕದ ಇಳಿಕೆಗೆ ಕಾರಣವಾಗುತ್ತದೆ.

ಖಿನ್ನತೆ

ಖಿನ್ನತೆಯು ಹೆಚ್ಚಾಗಿ ನಮಗೆ ಹಸಿವಾಗದಂತೆ ತಡೆಯುತ್ತದೆ. ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದರೆ ದೇಹದ ತೂಕ ಕಡಿಮೆಯಾಗುತ್ತದೆ. ಆದರೆ ದೇಹದಲ್ಲಿನ ಬದಲಾವಣೆಯನ್ನು ಗಮನಿಸಿ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
Published by:Sandhya M
First published: