Health Tips: ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಹಾಗಾದ್ರೆ ಈಗಲೇ ನಿಲ್ಲಿಸಿ.

Daily Routine : ನಮ್ಮ ಅಭ್ಯಾಸಗಳು ನಮ್ಮ ಆರೋಗ್ಯ ಮೇಲೆ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಬದಲಾವಣೆ ಮಾಡಿಕೊಂಡರಷ್ಟೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಆಧುನಿಕ ಜೀವನದಲ್ಲಿ ಎಲ್ಲವೂ ಬದಲಾಗಿದೆ. ನಾವು ಖಂಡಿತವಾಗಿಯೂ  ಕೆಲವೊಂದು ಹವ್ಯಾಸಗಳನ್ನು ಅನುಸರಿಸುತ್ತೇವೆ. ಅವುಗಳಲ್ಲಿ ಒಳ್ಳೆಯದು ಇದೆ ಹಾಗೂ ಕೆಟ್ಟ ಹವ್ಯಾಸಗಳು ಇದೆ. ಆದರೆ ನಮ್ಮ ಕೆಟ್ಟ ಹವ್ಯಾಸಗಳು ನಮ್ಮ ಆರೋಗ್ಯವನ್ನು  ಮತ್ತು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.  ಕಾಲ ಬದಲಾದಂತೆ ಕೆಲಸದ ಒತ್ತಡ ಹಾಗೂ ಜವಾಬ್ದಾರಿಗಳು ಹೆಚ್ಚಾಗಿವೆ. ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಹಲವಾರು ತಪ್ಪುಗಳನ್ನು ಮಾಡುತ್ತೇವೆ ಹಾಗೂ ಬಿಡುವಿಲ್ಲದ ಸಮಯದ ಕಾರಣದಿಂದ ನಾವು ಹೆಚ್ಚಿನ ಜನರೊಂದಿಗೆ ಬೆರೆಯುವುದಿಲ್ಲ. ಈ ಎಲ್ಲ ಕಾರಣಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.

ನಿದ್ರೆ ಕಡಿಮೆ ಮಾಡುವುದು:  ನೀವು ಸರಿಯಾಗಿ ನಿದ್ರೆ ಮಾಡದಿದ್ದರೆ ಅದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನಿಮ್ಮ ನಿದ್ರೆ ಸರಿಯಾಗಿ ಆಗದಿದ್ದಲ್ಲಿ ಮರುದಿನ ನಿಮಗೆ ಎಷ್ಟು ಕಿರಿಕಿರಿಯಾಗುತ್ತದೆ ಎಂಬುದನ್ನ ನೀವು ಗಮನಿಸಿರಬೇಕು. ನಿದ್ದೆ ಕಡಿಮೆ ಆದರೆ ನಮಗೆ ಕೆಲಸದಲ್ಲಿ ಉತ್ಸಾಹವೇ ಇರುವುದಿಲ್ಲ. ನಿದ್ದೆಯ ಸಮಸ್ಯೆ ಬಹಳ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ನಮ್ಮ ದೇಹವು ಪ್ರತಿ ದಿನ ಚೇತರಿಸಿಕೊಳ್ಳಲು ಮತ್ತು ಉತ್ಸಾಹದಿಂದಿರಲು ನಿದ್ದೆಯ ಅವಶ್ಯಕತೆ ಇದೆ. ನಾವು ಪ್ರತಿದಿನ ಕನಿಷ್ಠ 6 ಗಂಟೆಗಳ ನಿದ್ರೆ ಮಾಡಬೇಕು. ನಿದ್ರೆಯ ಸಮಯದಲ್ಲಿ ಹೆಚ್ಚಿನ ವ್ಯತ್ಯಾಸ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ, ಉಸಿರಾಟ ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕರಾತ್ಮಕವಾಗಿ ಪರಿಣಾಮ ಬೀರುತ್ತದೆ. ನಿದ್ದೆ ಸರಿಯಾಗದಿದ್ದಲ್ಲಿ ಒಂದೆಲ್ಲ ಒಂದು ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಹೆಚ್ಚಿನ ಮಾಂಸಹಾರ-ಪ್ರೋಟೀನ್ ಆಹಾರಗಳನ್ನು ತಿನ್ನುವುದು: ಚೀಸ್ ಮತ್ತು ಮಾಂಸದಂತಹ ಪ್ರಾಣಿ ಪ್ರೋಟೀನ್ ಸಮೃದ್ಧವಾಗಿರುವ ಊಟವನ್ನು ಅತಿಯಾಗಿ ಸೇವಿಸುವುದರಿಂದ IGF1 ಹೆಸರಿನ ಹಾರ್ಮೋನ್ ನಿಂದಾಗಿ ಕ್ಯಾನ್ಸರ್ ಬೆಳವಣಿಗೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಅಪಾಯಕಾರಿ ಅಂಶವೆಂದರೆ ಇದು ಧೂಮಪಾನಕ್ಕೆ ಸಮ. ಅಂತಹ ಪ್ರೋಟೀನ್‌ಗಳ ಅತಿಯಾದ ಸೇವನೆಯನ್ನು ತಪ್ಪಿಸಲು, ನಿಮ್ಮ ಆಹಾರದಲ್ಲಿ ಬೀನ್ಸ್‌ನಂತಹ ಸಸ್ಯ ಪ್ರೋಟೀನ್‌ಗಳನ್ನು ಸೇರಿಸುವುದು ಉತ್ತಮ. ಯಾವಾಗಲೂ ಒಂದೇ ಆಹಾರ ಪದ್ಧತಿಯನ್ನು ಪಾಲನೆ ಮಾಡಬಾರದು, ಅದರಲ್ಲೂ ಮಾಂಸಹಾರ ಮತ್ತು ಸಸ್ಯಹಾರದ ವಿಚಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ದೇಹದ ತೂಕ ಇಳಿಯಬೇಕಾ? ಹಾಗಾದ್ರೆ ಈ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿ

ದೀರ್ಘಕಾಲ ಕುಳಿತುಕೊಳ್ಳುವುದು:  ನೀವು ಕೆಲಸಕ್ಕೆ ಹೋದಾಗ ಇಡೀ ದಿನ ನಿಮ್ಮ ಕುರ್ಚಿಗೆ ಅಂಟಿಕೊಳ್ಳುವುದು ಧೂಮಪಾನದಷ್ಟೇ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಧ್ಯಯನಗಳ ಪ್ರಕಾರ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಅದು ಕೆಲಸ ಮಾಡುವಾಗ ಅಥವಾ ಚಾಲನೆ ಮಾಡುವಾಗ ಯಾವಾಗಾದರೂ ಸರಿ ಒಳ್ಳೆಯ ಅಭ್ಯಾಸವಲ್ಲ. ಈ ಅಭ್ಯಾಸ  ಶ್ವಾಸಕೋಶ, ಸ್ತನ ಮತ್ತು ಕೊಲೊನ್ ನಂತಹ ವಿವಿಧ ಕ್ಯಾನ್ಸರ್​ಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಪ್ರತಿ ಒಂದು ಅಥವಾ ಎರಡು ಗಂಟೆಗಳಿಗೊಮ್ಮೆ ಸ್ವಲ್ಪ ನಿಮ್ಮ ಸುತ್ತ ಮುತ್ತ ಓಡಾಡುವುದನ್ನ ಮರೆಯಬೇಡಿ. 2 ನಿಮಿಷಗಳ ಬಿಡುವು ಪಡೆದ ನಂತರ ನಿಮ್ಮ ಕೆಲಸವನ್ನು ಮುಂದುವರಿಸಿ.

ಏಕಾಂಗಿಯಾಗಿರುವುದು : ಸಾಮಾನ್ಯ ಜೀವನದಲ್ಲಿ, ನಾವು ಏಕಾಂಗಿಯಾಗಿರುವುದನ್ನು ಒಂದು ಪ್ರಮುಖ ಸಮಸ್ಯೆಯೆಂದು ಪರಿಗಣಿಸುವುದಿಲ್ಲ. ಆದರೆ ಅದು ಖಂಡಿತವಾಗಿಯೂ ಒಂದು ಸಮಸ್ಯೆ. ಒಬ್ಬಂಟಿಯಾಗಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಇದು ಆತಂಕ, ಭಾವನಾತ್ಮಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ನಾವು ಏಕಾಂಗಿಯಾಗಿದ್ದಾಗ ಕೆಟ್ಟ ಚಟಗಳ ದಾಸರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ನೀವು ಸ್ನೇಹಿತರನ್ನು ಮಾಡಿಕೊಳ್ಳುವುದು ಒಳ್ಳೆಯದು. ಹೆಚ್ಚಿನ ಸ್ನೇಹಿತರ ಅವಶ್ಯಕತೆ ಇಲ್ಲದಿರಬಹುದು ಆದರೆ ನಿಮ್ಮ ಮನಸಿನ ತಳಮಳ, ದುಗುಡ, ನೋವು ನಲಿವುಗಳನ್ನು ಹಂಚಿಕೊಳ್ಳುವ ಮತ್ತು ಅರ್ಥ ಮಾಡಿಕೊಳ್ಳುವ ಒಬ್ಬ ಸ್ನೇಹಿತನನ್ನ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ನಿಯಂತ್ರಿತ ಪರಿಸರದಲ್ಲಿ ಬದುಕುವುದು: ಅನೇಕ ಜನರು ಸೂರ್ಯನ ಬೆಳಕನ್ನು ತೆಗೆದುಕೊಳ್ಳುವ ಬದಲು ನಿಯಂತ್ರಿತ ಪರಿಸರದಲ್ಲಿ ಬದುಕಲು ಪ್ರಾರಂಭಿಸಿದ್ದಾರೆ. ಸೂರ್ಯನ  ಹೆಚ್ಚಿನ ಬೆಳಕು ಚರ್ಮದ ಕ್ಯಾನ್ಸರ್‌ಗೆ ಕಾರಣವಾಗಬಹುದು, ಆದರೆ ಒಳಗಡೆ ಟ್ಯಾನಿಂಗ್ ಕೂಡ  ದೇಹದ ಆರೋಗ್ಯಕ್ಕೆ ಬಹಳ ಹಾನಿಕಾರಕ.  ಟ್ಯಾನಿಂಗ್ ಸಲೂನ್‌ಗೆ ಹೋಗುವುದನ್ನು ನಿಲ್ಲಿಸಿ ಮತ್ತು ಸಾಕಷ್ಟು ಸೂರ್ಯನ ಬೆಳಕನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.
Published by:Sandhya M
First published: