ನಿಮ್ಮ ಜೀವನವನ್ನು ಸರಳಗೊಳಿಸುವ ಅಡಿಗೆಮನೆಯ ಪ್ರಮುಖ ಅಂಶಗಳು

ಬೌಲ್​ನಲ್ಲಿ ಮೊಟ್ಟೆ ಒಡೆಯುವುದು ಅತ್ಯಂತ ಕಷ್ಟದ ಹಾಗೂ ಅಸಹನೀಯ ಕೆಲಸ. ಆದರೆ ಮೊಟ್ಟೆಯ ಸಿಪ್ಪೆ ತೆಗೆಯುವುದು ಅತ್ಯಂತ ಸುಲಭ. ನಿಮ್ಮ ಬೆರಳುಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಸಿಪ್ಪೆ ತೆಗೆಯಲು ಪ್ರಯತ್ನಿಸಿ. ನಿಜಕ್ಕೂ ನೀವು ಅಚ್ಚರಿಪಡುತ್ತೀರಿ.

news18-kannada
Updated:August 6, 2019, 2:15 PM IST
ನಿಮ್ಮ ಜೀವನವನ್ನು ಸರಳಗೊಳಿಸುವ ಅಡಿಗೆಮನೆಯ ಪ್ರಮುಖ ಅಂಶಗಳು
ಫೈಲ್​ ಫೋಟೊ: ಕಿಚನ್​
  • Share this:
ಅಡಿಗೆ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯ. ರುಚಿಕರವಾದ ಆಹಾರ ತಯಾರಿಸಲು ಸಾಕಷ್ಟು ಸಮಯ ಅಗತ್ಯ. ಈ ಲೇಖನ ನಿಮ್ಮ ಸಮಯ ಉಳಿಸಿ ಅಡಿಗೆಯನ್ನು ಪರಿಣಾಮಕಾರಿಯಾಗಿ ಮಾಡುವ ಕೆಲವು ಸರಳ ಸಲಹೆಗಳನ್ನು ನೀಡುತ್ತದೆ.

ಎಲ್ಲಾ ಚೆರಿ ಟೊಮ್ಯಾಟೋಗಳನ್ನೂ ಒಟ್ಟಿಗೆ ಕತ್ತರಿಸಿ:

ನಿಮಗೆ ಬೇಕಾಗುವಷ್ಟು ಚೆರಿ ಟೊಮ್ಯಾಟೋವನ್ನು ಪ್ಲೇಟ್ ಗೆ ಹಾಕಿ ಅದರ ಮೇಲೆ ಮತ್ತೊಂದು ಪ್ಲೇಟ್ ಇಡಿ. ಮತ್ತೊಂದು ಪ್ಲೇಟ್ ಗಟ್ಟಿಯಾಗಿ ಹಿಡಿಯಿರಿ. ಈಗ ಚಾಕು ತೆಗೆದುಕೊಂಡು ಎಲ್ಲಾ ಟೊಮ್ಯಾಟೋಗಳನ್ನೂ ಒಟ್ಟಾಗಿ ಕತ್ತರಿಸಿ. ಎರಡೂ ಪ್ಲೇಟ್ ಗಳು ಪ್ಲಾಸ್ಟಿಕ್​ನದ್ದಾದರೆ ಉತ್ತಮ.

ಟೊಮಾಟೋ ಸಾಂದರ್ಭಿಕ ಚಿತ್ರ[/caption]

ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಪ್ಯಾನ್ ಕೇಕ್:

ಪ್ಯಾನ್ ಕೇಕ್ ಅನೇಕ ಜನರಿಗೆ ಮೆಚ್ಚಿನ ಖಾದ್ಯ. ನೀವು ಇದಕ್ಕೆ ಬದಲಾವಣೆ ನೀಡಲು ಬಯಸಿದರೆ ಪ್ಯಾನ್ ನಲ್ಲಿ ಸ್ಟೀಲ್ ಕುಕ್ಕಿ ಮೌಲ್ಡ್ ಇಟ್ಟು ಆಕಾರಕ್ಕೆ ಅನುಗುಣವಾಗಿ ಹಿಟ್ಟು ಸುರಿಯಿರಿ. ಈ ಮೂಲಕ ಮಕ್ಕಳು ಮತ್ತು ಹಿರಿಯರಿಗೆ ಇಷ್ಟವಾಗುವಂತೆ ವಿವಿಧ ಆಕಾರದ ಪ್ಯಾನ್ ಕೇಕ್ ಗಳನ್ನು ನೀವು ತಯಾರಿಸಬಹುದು.

ಬೆಣ್ಣೆಯನ್ನು ಸುಲಭವಾಗಿ ಕರಗಿಸಿ:

ಸಣ್ಣ ಲೋಟ ತೆಗೆದುಕೊಂಡು, ಅದನ್ನು ಸ್ವಲ್ಪ ಬಿಸಿಮಾಡಿ, ಬೆಚ್ಚಗಿನ ಉಷ್ಣಾಂಶ ಸಾಕು. ಈಗ ಬೆಣ್ಣೆಯ ಮೇಲೆ ಲೋಟವನ್ನು ತಲೆಕೆಳಗಾಗಿ ಇಡಿ. ಬೆಣ್ಣೆ ಕರಗುತ್ತದೆ, ಇದು ಸಂಪೂರ್ಣ ಕರಗುವುದಿಲ್ಲ ಆದರೆ ಇದರ ವಿನ್ಯಾಸ ಬ್ರೆಡ್ ಮೇಲೆ ಹಾಕುವಂತಿರುತ್ತದೆ.ಮೊಟ್ಟೆಯ ಸಿಪ್ಪೆ ಸುಲಭವಾಗಿ ತೆಗೆಯಿರಿ:

ಬೌಲ್ ನಲ್ಲಿ ಮೊಟ್ಟೆ ಒಡೆಯುವುದು ಅತ್ಯಂತ ಕಷ್ಟದ ಹಾಗೂ ಅಸಹನೀಯ ಕೆಲಸ. ಆದರೆ ಮೊಟ್ಟೆಯ ಸಿಪ್ಪೆ ತೆಗೆಯುವುದು ಅತ್ಯಂತ ಸುಲಭ. ನಿಮ್ಮ ಬೆರಳುಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಸಿಪ್ಪೆ ತೆಗೆಯಲು ಪ್ರಯತ್ನಿಸಿ. ನಿಜಕ್ಕೂ ನೀವು ಅಚ್ಚರಿಪಡುತ್ತೀರಿ.

First published: August 6, 2019, 2:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading