ನಿಮ್ಮ ಜೀವನವನ್ನು ಸರಳಗೊಳಿಸುವ ಅಡಿಗೆಮನೆಯ ಪ್ರಮುಖ ಅಂಶಗಳು

ಬೌಲ್ ನಲ್ಲಿ ಮೊಟ್ಟೆ ಒಡೆಯುವುದು ಅತ್ಯಂತ ಕಷ್ಟದ ಹಾಗೂ ಅಸಹನೀಯ ಕೆಲಸ. ಆದರೆ ಮೊಟ್ಟೆಯ ಸಿಪ್ಪೆ ತೆಗೆಯುವುದು ಅತ್ಯಂತ ಸುಲಭ. ನಿಮ್ಮ ಬೆರಳುಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಸಿಪ್ಪೆ ತೆಗೆಯಲು ಪ್ರಯತ್ನಿಸಿ. ನಿಜಕ್ಕೂ ನೀವು ಅಚ್ಚರಿಪಡುತ್ತೀರಿ.

news18
Updated:July 16, 2019, 3:56 PM IST
ನಿಮ್ಮ ಜೀವನವನ್ನು ಸರಳಗೊಳಿಸುವ ಅಡಿಗೆಮನೆಯ ಪ್ರಮುಖ ಅಂಶಗಳು
ಫೈಲ್​ ಫೋಟೊ: ಕಿಚನ್​
  • News18
  • Last Updated: July 16, 2019, 3:56 PM IST
  • Share this:
ಅಡಿಗೆ ಪ್ರತಿಯೊಂದು ಮನೆಯಲ್ಲೂ ಸಾಮಾನ್ಯ. ರುಚಿಕರವಾದ ಆಹಾರ ತಯಾರಿಸಲು ಸಾಕಷ್ಟು ಸಮಯ ಅಗತ್ಯ. ಈ ಲೇಖನ ನಿಮ್ಮ ಸಮಯ ಉಳಿಸಿ ಅಡಿಗೆಯನ್ನು ಪರಿಣಾಮಕಾರಿಯಾಗಿ ಮಾಡುವ ಕೆಲವು ಸರಳ ಸಲಹೆಗಳನ್ನು ನೀಡುತ್ತದೆ.

ಎಲ್ಲಾ ಚೆರಿ ಟೊಮ್ಯಾಟೋಗಳನ್ನೂ ಒಟ್ಟಿಗೆ ಕತ್ತರಿಸಿ:

ನಿಮಗೆ ಬೇಕಾಗುವಷ್ಟು ಚೆರಿ ಟೊಮ್ಯಾಟೋವನ್ನು ಪ್ಲೇಟ್ ಗೆ ಹಾಕಿ ಅದರ ಮೇಲೆ ಮತ್ತೊಂದು ಪ್ಲೇಟ್ ಇಡಿ. ಮತ್ತೊಂದು ಪ್ಲೇಟ್ ಗಟ್ಟಿಯಾಗಿ ಹಿಡಿಯಿರಿ. ಈಗ ಚಾಕು ತೆಗೆದುಕೊಂಡು ಎಲ್ಲಾ ಟೊಮ್ಯಾಟೋಗಳನ್ನೂ ಒಟ್ಟಾಗಿ ಕತ್ತರಿಸಿ. ಎರಡೂ ಪ್ಲೇಟ್ ಗಳು ಪ್ಲಾಸ್ಟಿಕ್​ನದ್ದಾದರೆ ಉತ್ತಮ.

ಟೊಮಾಟೋ ಸಾಂದರ್ಭಿಕ ಚಿತ್ರ[/caption]

ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಪ್ಯಾನ್ ಕೇಕ್:

ಪ್ಯಾನ್ ಕೇಕ್ ಅನೇಕ ಜನರಿಗೆ ಮೆಚ್ಚಿನ ಖಾದ್ಯ. ನೀವು ಇದಕ್ಕೆ ಬದಲಾವಣೆ ನೀಡಲು ಬಯಸಿದರೆ ಪ್ಯಾನ್ ನಲ್ಲಿ ಸ್ಟೀಲ್ ಕುಕ್ಕಿ ಮೌಲ್ಡ್ ಇಟ್ಟು ಆಕಾರಕ್ಕೆ ಅನುಗುಣವಾಗಿ ಹಿಟ್ಟು ಸುರಿಯಿರಿ. ಈ ಮೂಲಕ ಮಕ್ಕಳು ಮತ್ತು ಹಿರಿಯರಿಗೆ ಇಷ್ಟವಾಗುವಂತೆ ವಿವಿಧ ಆಕಾರದ ಪ್ಯಾನ್ ಕೇಕ್ ಗಳನ್ನು ನೀವು ತಯಾರಿಸಬಹುದು.

ಬೆಣ್ಣೆಯನ್ನು ಸುಲಭವಾಗಿ ಕರಗಿಸಿ:

ಸಣ್ಣ ಲೋಟ ತೆಗೆದುಕೊಂಡು, ಅದನ್ನು ಸ್ವಲ್ಪ ಬಿಸಿಮಾಡಿ, ಬೆಚ್ಚಗಿನ ಉಷ್ಣಾಂಶ ಸಾಕು. ಈಗ ಬೆಣ್ಣೆಯ ಮೇಲೆ ಲೋಟವನ್ನು ತಲೆಕೆಳಗಾಗಿ ಇಡಿ. ಬೆಣ್ಣೆ ಕರಗುತ್ತದೆ, ಇದು ಸಂಪೂರ್ಣ ಕರಗುವುದಿಲ್ಲ ಆದರೆ ಇದರ ವಿನ್ಯಾಸ ಬ್ರೆಡ್ ಮೇಲೆ ಹಾಕುವಂತಿರುತ್ತದೆ.ಮೊಟ್ಟೆಯ ಸಿಪ್ಪೆ ಸುಲಭವಾಗಿ ತೆಗೆಯಿರಿ:

ಬೌಲ್ ನಲ್ಲಿ ಮೊಟ್ಟೆ ಒಡೆಯುವುದು ಅತ್ಯಂತ ಕಷ್ಟದ ಹಾಗೂ ಅಸಹನೀಯ ಕೆಲಸ. ಆದರೆ ಮೊಟ್ಟೆಯ ಸಿಪ್ಪೆ ತೆಗೆಯುವುದು ಅತ್ಯಂತ ಸುಲಭ. ನಿಮ್ಮ ಬೆರಳುಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಸಿಪ್ಪೆ ತೆಗೆಯಲು ಪ್ರಯತ್ನಿಸಿ. ನಿಜಕ್ಕೂ ನೀವು ಅಚ್ಚರಿಪಡುತ್ತೀರಿ.

First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ