• Home
  • »
  • News
  • »
  • lifestyle
  • »
  • Life after COVID: ಕೊರೋನಾ ಬಳಿಕ  ಟ್ರಿಪ್ ಹೋಗಲು ಈ ಸ್ಥಳಗಳೇ ಬೆಸ್ಟ್​ ಅಂತಿದ್ದಾರೆ ಜನ!

Life after COVID: ಕೊರೋನಾ ಬಳಿಕ  ಟ್ರಿಪ್ ಹೋಗಲು ಈ ಸ್ಥಳಗಳೇ ಬೆಸ್ಟ್​ ಅಂತಿದ್ದಾರೆ ಜನ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆ ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ. ಟೂರಿಸಂ ಸ್ಪಾಟ್‌ಗಳು ಸಹ ಪುನರಾರಂಭಗೊಂಡು ಜನರ ಪ್ರವೇಶಕ್ಕೆ ಅನುಮತಿ ನೀಡುತ್ತಿವೆ.

  • Trending Desk
  • Last Updated :
  • New Delhi, India
  • Share this:

ಕೊರೋನಾ ಸೋಂಕು(Corona Virus) ಹರಡಲು ಆರಂಭವಾದಾಗಿನಿಂದಲೂ ಜನಜೀವನ(Life) ಸಂಪೂರ್ಣವಾಗಿ ಬದಲಾಗಿದೆ. ಜನರ ಓಡಾಟ, ಮನೋರಂಜನಾ ಚಟುವಟಿಕೆಗಳಿಗೆ ಸ್ಪಲ್ಪ ಮಟ್ಟಿಗೆ ಬ್ರೇಕ್(Break) ಬಿದ್ದಿದೆ. ಅದರಲ್ಲೂ ಕೋವಿಡ್ ಕಾಲಘಟ್ಟದಲ್ಲಿ ಕರ್ಫ್ಯೂ(Curfew), ಲಾಕ್‌ಡೌನ್‌(Lock down)ನಿಂದ ಪ್ರವಾಸೋದ್ಯಮ(Tourism)ದ ಮೇಲೆ ಅತಿ ಹೆಚ್ಚು ಹೊಡೆತ ಬಿದ್ದಿತ್ತು.


ಹಲವು ರಾಜ್ಯಗಳು ತಮ್ಮ ಪ್ರವಾಸಿತಾಣಗಳಿಗೆ ಜನರು ಪ್ರವೇಶಿಸಲು ನಿರ್ಬಂಧ ವಿಧಿಸಿದ್ದವು. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆ ಜನಜೀವನವೂ ಸಹಜ ಸ್ಥಿತಿಗೆ ಮರಳಿದೆ. ಟೂರಿಸಂ ಸ್ಪಾಟ್‌ಗಳು ಸಹ ಪುನರಾರಂಭಗೊಂಡು ಜನರ ಪ್ರವೇಶಕ್ಕೆ ಅನುಮತಿ ನೀಡುತ್ತಿವೆ.


ಭಾರತೀಯರು ಸಹ ಕೋವಿಡ್‌ನಿಂದ ತಮ್ಮ ಪ್ರವಾಸಗಳಿಗೆ ಬ್ರೇಕ್‌ ಹಾಕಿದ್ದರು. ಈಗ ಅವರ ಪ್ರವಾಸದ ಆಸೆಗೆ ರೆಕ್ಕೆಗಳು ಬಂದಿವೆ ಅಂತಾನೇ ಹೇಳಬಹುದು.ಪ್ರವಾಸಕ್ಕೆ ಬೇರೆ ದೇಶಕ್ಕೆ ಹೋಗಲು ಅಷ್ಟಾಗಿ ಭಾರತೀಯರು ಈಗ ಇಷ್ಟಪಡುತ್ತಿಲ್ಲ. ನಮ್ಮ ದೇಶದಲ್ಲಿಯೇ ಉತ್ತಮ ಸ್ಥಳಗಳ ಹುಡುಕಾಟ ನಡೆಸಿ, ಇಲ್ಲಿಯೇ ಪ್ರವಾಸಕ್ಕೆ ತೆರಳುವ ಟ್ರೆಂಡ್‌ ಇತ್ತಿಚೀಗೆ ಹೆಚ್ಚಾಗಿದೆ ಎಂದು ಹೇಳಬಹುದು.


ಈಗಾಗಲೇ ಆತಿಥ್ಯ ಕಂಪನಿಗಳು ಮತ್ತು ಟ್ರಾವೆಲ್ ಏಜೆನ್ಸಿಗಳು ಪ್ರಯಾಣ ಮತ್ತು ವಸತಿಗಾಗಿ ಭಾರಿ ಏರಿಕೆಯನ್ನು ಮಾಡಿವೆ. ಕೋವಿಡ್ ಸೋಂಕುಗಳು ಕಡಿಮೆಯಾದ ನಂತರ, ಎಲ್ಲ ಕಡೆಯೂ ಪ್ರಯಾಣವು ಪುನರಾರಂಭಗೊಂಡಿದೆ. ಫೇಮಸ್‌ ಸ್ಥಳಗಳು ಓಪನ್‌ ಕೂಡ ಆಗಿವೆ. ಆದರೆ ಸಾಂಕ್ರಾಮಿಕ ರೋಗದಿಂದ ಉಂಟಾದ ಬದಲಾವಣೆಯು ಅನೇಕ ಹೊಸ ಸ್ಥಳಗಳನ್ನು ಪ್ರವಾಸಿಗರಿಗೆ ಹುಡುಕಿ ಕೊಟ್ಟಿದೆ. ಅವು ಭಾರತೀಯ ಪ್ರಯಾಣಿಕರಿಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ.


ಟ್ರಾವೆಲ್‌ ಆಪರೇಟರ್‌ಗಳು ಹೇಳುವುದೇನು?


“2021 ರ ವರ್ಷವು 'ವರ್ಕ್‌ ಫ್ರಮ್‌ ಎನಿವೇರ್‌ʼ ಆಗಿದ್ರೆ, 2022 ನೇ ವರ್ಷವನ್ನು ಅನ್ನು 'ಬಕೆಟ್ ಲಿಸ್ಟ್' ವರ್ಷ ಎಂದು ಕರೆಯಬಹುದು. ಭಾರತೀಯರು ಹೊಸ ಹೊಸ ಪ್ರವಾಸಿ ತಾಣಗಳನ್ನು ನೋಡುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ದೀರ್ಘ ಅವಧಿಯವರೆಗೆ ಪ್ರವಾಸ ಮಾಡಿರದ ಕಾರಣ ಈಗ ಪ್ರವಾಸಕ್ಕೆ ತೆರಳಬೇಕೆಂದು ಅನೇಕ ಹೊಸ ಪ್ರಯಾಣದ ಸ್ಥಳಗಳನ್ನು ಲಿಸ್ಟ್‌ ಮಾಡುತ್ತಿದ್ದಾರೆ” ಎಂದು ಟ್ರಾವೆಲ್ ಆಪರೇಟರ್‌ಗಳು ಹೇಳುತ್ತಾರೆ.


ಕೋವಿಡ್‌ ನಂತರ ಮನಿಕಂಟ್ರೋಲ್‌ ಪಟ್ಟಿ ಮಾಡಿರುವ ಭಾರತೀಯರು ಹುಡುಕುತ್ತಿರುವ ಹೊಸ ಪ್ರೇಕ್ಷಣಿಯ ಸ್ಥಳಗಳಿವು


ಈಗ ಭಾರತೀಯರ ಚಿತ್ತ ಆಧ್ಯಾತ್ಮಿಕತೆಯ ಕಡೆಗೆ ತೆರಳಿದೆ. ಹೆಚ್ಚು ಹೆಚ್ಚು ಭಾರತೀಯರು ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸವನ್ನು ಆರಂಭ ಮಾಡುತ್ತಿದ್ದಾರೆ.


ಆಧ್ಯಾತ್ಮಿಕ ತಾಣಗಳು


ಆಧ್ಯಾತ್ಮಿಕ ತಾಣವಾದ ವಾರಣಾಸಿಯ ಪ್ರವಾಸಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. 2021 ಕ್ಕೆ ಹೋಲಿಸಿದರೆ ಈ ವರ್ಷ ರೈಲು ಪ್ರಯಾಣದ ಸರ್ಚಿಂಗ್‌ನಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಆಂಧ್ರಪ್ರದೇಶದ ತಿರುಪತಿಯ ಪ್ರವಾಸಕ್ಕೆ ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೇಸಿಗೆ ಪ್ರಯಾಣಕ್ಕಾಗಿ ಶೇಕಡಾ 200 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ ಕಂಡಿದೆ.


“ತಿರುಪತಿ, ಶಿರಡಿ ಮತ್ತು ವೈಷ್ಣೋದೇವಿಯಂತಹ ಸ್ಥಳಗಳಿಗೆ ಬಸ್ ಪ್ರಯಾಣದ ಬೇಡಿಕೆ ಹೆಚ್ಚುತ್ತಿದೆ. ಈ ಚಳಿಗಾಲದಲ್ಲಿ ಮತ್ತಷ್ಟು ಪ್ರಯಾಣದ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ” ಎಂದು ಟ್ರಾವೆಲ್ ಆಪರೇಟರ್‌ಗಳು ಹೇಳಿದ್ದಾರೆ.


ಜನಪ್ರಿಯವಾಗುತ್ತಿರುವ ಸಣ್ಣ ಮಾರುಕಟ್ಟೆಗಳು


“ಸಾಂಕ್ರಾಮಿಕ ರೋಗದ ನಂತರ ಮತ್ತು ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಊರಿಗೆ ಭೇಟಿ ನೀಡಿದಾಗ 2ನೇ ಮತ್ತು 3ನೇ ಹಂತದ ನಗರಗಳಿಗೆ ಭೇಟಿ ನೀಡುವುದು ಮತ್ತು ಅಲ್ಲಿ ತಮ್ಮ ಸಮಯವನ್ನು ಕಳೆಯುವುದು ಹೆಚ್ಚಾಗುತ್ತಿದೆ” ಎಂದು ಟ್ರಾವೆಲ್ ಆಪರೇಟರ್‌ಗಳು ಹೇಳಿದ್ದಾರೆ.


EaseMyTrip ಸಹ- ಸಂಸ್ಥಾಪಕ ಹೇಳುವುದೇನು?


"ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಬ್ಬದ ಋತುವಿನಲ್ಲಿ 2ನೇ ಮತ್ತು 3ನೇ ಹಂತದ ನಗರಗಳಿಗೆ ಭೇಟಿ ನೀಡುವ ಜನರಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಿದೆ. ಜೈಪುರ, ಆಗ್ರಾ, ಊಟಿ, ಲಕ್ನೋ, ನಾಗ್ಪುರ, ಮಧುರೈ, ಇಂದೋರ್ ಪ್ರಯಾಣಿಕರ ಆದ್ಯತೆಯ ತಾಣಗಳಾಗಿವೆ" ಎಂದು EaseMyTrip ಸಹ- ಸಂಸ್ಥಾಪಕ ರಿಕಾಂತ್ ಪಿಟ್ಟಿ ತಿಳಿಸಿದ್ದಾರೆ.


ಜೈಪುರ, ಇಂದೋರ್ ಮತ್ತು ಲಕ್ನೋದಂತಹ ನಗರಗಳು ಶೈಕ್ಷಣಿಕ ಕೇಂದ್ರಗಳಾಗಿ ಹೊರಹೊಮ್ಮಿವೆ ಮತ್ತು ಈ ಸ್ಥಳಗಳು ಭಾರತದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಗೋವಾ, ಶಿರಡಿ, ನಾಗ್ಪುರ್, ರಾಜ್‌ಕೋಟ್‌ನಲ್ಲಿ ಕೋವಿಡ್ ನಂತರದ ಮತ್ತು ಪೂರ್ವ ಕೋವಿಡ್‌ಗೆ ಹೋಲಿಸಿದರೆ ಬಸ್ ಪ್ರಯಾಣದ ಸರ್ಚಿಂಗ್‌ಗಳು ಶೇಕಡಾ 100 ರಷ್ಟು ಹೆಚ್ಚಳವನ್ನು ಕಂಡಿವೆ ಎಂದು ಆನ್‌ಲೈನ್ ಬಸ್ ಟಿಕೆಟಿಂಗ್ ಕಂಪನಿಯಾದ ಅಭಿಬಸ್‌ನ ಸಿಒಒ ರೋಹಿತ್ ಶರ್ಮಾ ಹೇಳಿದ್ದಾರೆ.


ಗುಪ್ತ ಸ್ಥಳಗಳ ಅನ್ವೇಷಣೆ


“ಪ್ರಯಾಗ್‌ರಾಜ್, ರಾಯ್‌ಪುರ, ಪುರಿ, ನಾಸಿಕ್, ಬರೇಲಿಯಂತಹ ಹಲವಾರು ಆಫ್‌ಬೀಟ್ ಸ್ಥಳಗಳು 2022 ರ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿವೆ. ಇದು ಹೆಚ್ಚಾಗಿ ನೋಡಿರದ ದೇಶೀಯ ಸ್ಥಳಗಳನ್ನು ಹುಡುಕುವ ಭಾರತೀಯ ಪ್ರಯಾಣಿಕರ ಒಲವನ್ನು ಸೂಚಿಸುತ್ತದೆ” ಎಂದು ಹಾಸ್ಪಿಟಾಲಿಟಿ ಚೈನ್ OYO ಹೇಳಿದೆ.


ಸಾಂಕ್ರಾಮಿಕ ರೋಗ ಕೋವಿಡ್‌ ನಂತರ, ಸ್ಥಳಿಯ ಸ್ಥಳಗಳ ಹುಡುಕಾಟವು ತನ್ನ ವೇಗವನ್ನು ಪಡೆದುಕೊಂಡಿದೆ. ಕೊಚ್ಚಿ, ವಾರಣಾಸಿ ಮತ್ತು ವಿಶಾಖಪಟ್ಟಣಂನಂತಹ ಸ್ಥಳಗಳು ಭಾರತೀಯ ಪ್ರಯಾಣಿಕರು ಹುಡುಕುತ್ತಿರುವ ಅಗ್ರ ಶ್ರೇಯಾಂಕದ ತಾಣಗಳಾಗಿ ಹೊರಹೊಮ್ಮಿವೆ.


ಬೇಸಿಗೆ ರಜೆಗೆ ಹೇಳಿ ಮಾಡಿಸಿದ ಸ್ಥಳಗಳು


“ಭಾರತದಲ್ಲಿ ಬೇಸಿಗೆ ಪ್ರಯಾಣಕ್ಕೆ ಕಾಶ್ಮೀರ, ಗೋವಾ, ಅಂಡಮಾನ್‌ ಮತ್ತು ನಿಕೋಬಾರ್‌ ಸ್ಥಳಗಳು ಹೆಚ್ಚು ಸೂಕ್ತ ಸ್ಥಳಗಳು ಆಗಿವೆ. ಕಾಶ್ಮೀರ ಸ್ಥಳಕ್ಕೆ 2022 ರಲ್ಲಿ ಬರೋಬ್ಬರಿ 23 ಲಕ್ಷ ಪ್ರಯಾಣಿಕರು ಭೇಟಿ ನೀಡುವ ಮೂಲಕ ಹಳೆ ರೆಕಾರ್ಡ್‌ಗಳನ್ನು ಬ್ರೇಕ್‌ ಮಾಡಿದೆ. ಬೇಸಿಗೆ ರಜೆಗೆ ಕಾಶ್ಮೀರ್‌ ಬೆಸ್ಟ್‌” ಎಂದು ಇಕ್ಸಿಗೋದ ಪ್ರಯಾಣ ಸಂಗ್ರಾಹಕ, CPTO ಗ್ರೂಪ್‌ ಮತ್ತು ಸಹ ಸಂಸ್ಥಾಪಕ ಆಗಿರುವ ರಂಜನಿಶ್‌ ಕುಮಾರ್‌ ಹೇಳಿದರು.


ಜನಪ್ರಿಯ ವಿದೇಶಿ ಪ್ರವಾಸಿ ಸ್ಥಳಗಳು


ಪ್ರಯಾಣಿಕರಲ್ಲಿ ಕೆಲವರು ಈಗಲೂ ವಿದೇಶದ ಪ್ರಯಾಣಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಅದರಲ್ಲಿ ವಿಯ್ನೆಟ್‌ಂ, ಬಾಲಿ, ಟರ್ಕಿ ಮತ್ತು ಸಿಂಗಾಪೂರ್‌ ದೇಶಗಳ ಗಡಿ ತೆರೆದರೆ ಅಲ್ಲಿಗೆ ಪ್ರವಾಸಕ್ಕೆ ಪ್ಲಾನ್‌ ಮಾಡುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಬಹುದು. ಭಾರತೀರು ಹೆಚ್ಚು ಭೇಟಿ ನೀಡುವ ಸ್ಥಳವೆಂದರೆ ವಿಯ್ನೆಟಂ, ಇದರ ನಂತರದ ಸ್ಥಳವೆಂದರೆ ಬಾಲಿ ಆಗಿದೆ. ಇವೆರಡು ಇಂಡಿಯನ್ಸ್‌ಗೆ ಆಲ್‌ ಟೈಮ್‌ ಫೇವರೇಟ್‌ ಇಂಟರ್‌ನ್ಯಾಷನಲ್‌ ಸ್ಥಳಗಳು ಆಗಿವೆ ಎಂದು ಹೇಳಬಹುದಾಗಿದೆ.

Published by:Latha CG
First published: