ಲಿಚಿ ಗುಲಾಬಿ ಬಣ್ಣದ ನೋಡಲು ಸುಂದರವಾದ ಹಣ್ಣು. ಇದು ನೋಡಲು ಮಾತ್ರವಲ್ಲದೇ ಹಲವು ಪೋಷಕಾಂಶಗಳಿಂದ ಸಮೃದ್ಧವಾದ ಹಣ್ಣು ಆಗಿದೆ. ಇದು ಒಳಗಡೆ ಬಿಳಿಯಾದ ಖಂಡವನ್ನು ಹೊಂದಿದೆ. ಲಿಚಿ ರಸಭರಿತ ಹಣ್ಣು. ಇದು ಬೇಸಿಗೆಯ ಹಣ್ಣು ಆಗಿದೆ. ಇದು ಕಾಕ್ಟೇಲ್ ಮತ್ತು ಖಾರದ ಭಕ್ಷ್ಯಗಳ ಪರಿಮಳ ಹೆಚ್ಚಿಸುತ್ತದೆ. ಹಸಿಯಾದ ತಾಜಾ ಲಿಚಿ ಹಣ್ಣುಗಳ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ವರ್ಷವಿಡೀ ಲಿಚಿ ಉತ್ಪನ್ನಗಳನ್ನು ಬಳಸಲು ಲಿಚಿಯನ್ನು ಒಣಗಿಸಿ, ಸಿರಪ್ ರೀತಿಯಲ್ಲಿ ಬಳಕೆ ಮಾಡುವುದು ಇದೆ. ತಾಜಾ ಲಿಚಿಯನ್ನು ತಿನ್ನಲು ಋತುಮಾನಕ್ಕಾಗಿ ಕಾಯಬೇಕಾಗುತ್ತದೆ.
ಲಿಚಿ ಹಣ್ಣು ತಿನ್ನಲು ಸರಿಯಾದ ಮಾರ್ಗ ಯಾವುದು?
ಲಿಚಿಯನ್ನು ಅನೇಕ ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ತಾಜಾ ಲಿಚಿ ಹಣ್ಣನ್ನು ಮಾತ್ರ ಸೇವಿಸಿ.
ಲಿಚಿ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆದಿರುವ ಹಣ್ಣು ಆಗಿದೆ. ಚೀನಾದಲ್ಲಿ ಮೀನು ಮತ್ತು ಮಾಂಸದ ಭಕ್ಷ್ಯ ತಯಾರಿಕೆಯಲ್ಲೂ ಲಿಚಿ ಸೇರಿಸಲಾಗುತ್ತದೆ. ಈ ಬೇಸಿಗೆಯ ಹಣ್ಣು ನಿಮ್ಮನ್ನು ಶಕ್ತಿಯುತವಾಗಿಸುತ್ತದೆ. ಹಾಗೂ ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ಇದರಲ್ಲಿ ವಿಟಮಿನ್, ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳಿವೆ. ಹಾಗಾದ್ರೆ ಇಲ್ಲಿ ನಾವು ಲಿಚಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
ವೇಟ್ ಲಾಸ್ ಗೆ ಲಿಚಿ ಹಣ್ಣಿನ ಸೇವನೆ ಪ್ರಯೋಜನಕಾರಿ
ಲಿಚಿ ಹಣ್ಣು ಆಹಾರದ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ನೀರಿನಲ್ಲಿ ಸಮೃದ್ಧವಾಗಿದೆ. ಲಿಚಿಯಲ್ಲಿ ಕ್ಯಾಲೋರಿ ಮತ್ತು ಕೊಬ್ಬು ತುಂಬಾ ಕಡಿಮೆ. ಲಿಚಿಯಲ್ಲಿರುವ ಆಹಾರದ ಫೈಬರ್ ತೂಕ ನಷ್ಟಕ್ಕೆ ಸಹಕಾರಿ ಆಗಿದೆ. ಲಿಚಿ ಹಣ್ಣಿನ ಸೇವನೆ ಮಾಡುವುದು ಕರುಳಿನ ಚಲನೆ ನಿಯಂತ್ರಿಸುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.
ಮಲಬದ್ಧತೆಯ ಸಮಸ್ಯೆ ನಿವಾರಿಸುತ್ತದೆ
ತೂಕ ಹೆಚ್ಚಾಗಲು ಹಲವು ಕಾರಣಗಳಿವೆ. ಅದರಲ್ಲಿ ಮಲಬದ್ಧತೆ ಸಮಸ್ಯೆ ಸಹ ಒಂದು. ತೂಕ ನಷ್ಟಕ್ಕೆ ಲಿಚಿಯ ಸೇವನೆ ಸಹಾಯ ಮಾಡುತ್ತದೆ. ಲಿಚಿಯಲ್ಲಿ ಬಹಳಷ್ಟು ಫೈಬರ್ ಇದೆ. ಇದು ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ. ಇದು ಮಲವನ್ನು ಮೆದುವಾಗಿಸಿ, ಸರಾಗವಾಗಿ ಹೊರ ಹೋಗುವಂತೆ ಮಾಡುತ್ತದೆ. ಲಿಚಿಯ ಸೇಚವನೆಯಿಂದ ರಕ್ತದೊತ್ತಡ ಸಹ ನಿಯಂತ್ರಣಕ್ಕೆ ಬರುತ್ತದೆ. ಹೆಚ್ಚು ಶಕ್ತಿಯುತವಾಗಿಸುತ್ತದೆ.
ಲಿಚಿ ಚರ್ಮದ ಆರೋಗ್ಯಕ್ಕೆ ಸಹಕಾರಿ
ಲಿಚಿ ರಸವು ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಆಲಿಗೊನಾಲ್ ಮತ್ತು ಪಾಲಿಫಿನಾಲ್‌ಗಳ ಉತ್ತಮ ಮೂಲ. ಉತ್ಕರ್ಷಣ ನಿರೋಧಕವಾಗಿದ್ದು ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಸ್ಪಷ್ಟವಾದ ಚರ್ಮವನ್ನು ನೀಡುತ್ತದೆ.
ಲಿಚಿ ಜ್ಯೂಸ್ ಉರಿಯೂತದ ಚರ್ಮ ಮತ್ತು ಮೊಡವೆ ಕಲೆ ನಿವಾರಣೆಗೆ ಸಹಕಾರಿ. ವಿಟಮಿನ್ ಸಿ ಮತ್ತು ವಿಟಮಿನ್ ಇ ವಯಸ್ಸಾದ ಪರಿಣಾಮ ನಿಧಾನಗೊಳಿಸುತ್ತದೆ. ಲಿಚಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲೆ ಸೂರ್ಯನ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ
ದೈನಂದಿನ ಆಹಾರದಲ್ಲಿ ಲಿಚಿ ಸೇರಿಸಿದರೆ ದೇಹಕ್ಕೆ ಶಕ್ತಿಯುತವಾದ ಫ್ಲೇವನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್ ಗಳು ಸಿಗುತ್ತವೆ. ಇದು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಗುಣ ಹೊಂದಿವೆ. ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಫೈಟೊಕೆಮಿಕಲ್ ಪದಾರ್ಥಗಳಾದ ಪ್ರೊಆಂಥೋಸಯಾನಿಡಿನ್‌ಗಳು ಮತ್ತು ಪಾಲಿಫಿನಾಲ್‌ಗಳು ಸ್ವತಂತ್ರ ರಾಡಿಕಲ್‌ಗಳನ್ನು ನಿವಾರಿಸುತ್ತದೆ.
ಮೂತ್ರಪಿಂಡದ ಆರೋಗ್ಯಕ್ಕೂ ಒಳ್ಳೆಯದು
ಲಿಚಿ ಎಲೆಗಳು ಮುಖ್ಯವಾಗಿ ಪ್ರಬಲವಾದ ಉರಿಯೂತದ ಗುಣಲಕ್ಷಣಗಳಿಂದ ಕೂಡಿವೆ. ಯಕೃತ್ತಿನ ಕಲ್ಲುಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರಕೋಶದ ಕಾರ್ಯ ಸರಿಪಡಿಸುತ್ತದೆ ಮತ್ತು ದೇಹದಿಂದ ವಿಷ ಹೊರಗೆ ಹಾಕುತ್ತದೆ. ಯೂರಿಕ್ ಆಸಿಡ್ ಮತ್ತು ಕ್ರಿಯೇಟಿನೈನ್ ಪ್ರಮಾಣ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ
ಮೂಳೆಗಳನ್ನು ಬಲಪಡಿಸುತ್ತದೆ
ಲಿಚಿಯಲ್ಲಿ ಕಬ್ಬಿಣ, ತಾಮ್ರ, ಮ್ಯಾಂಗನೀಸ್, ರಂಜಕ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಈ ಎಲ್ಲಾ ವಸ್ತುಗಳು ಮೂಳೆಗಳಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಕಾರಿ. ಇದು ಮೂಳೆಗಳ ಬಲವರ್ಧನೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ