LIC ಪಾಲಿಸಿದಾರರೇ ಎಚ್ಚರ.. ಇವುಗಳನ್ನು ಮಾಡದಿದ್ದರೆ ಎಲ್ಲಾ ಹಣವನ್ನು ಕಳೆದುಕೊಳ್ಳಬಹುದು ಜೋಕೆ!

LIC Insurance Policy holders alert: ಪಾಲಿಸಿಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ಬೇಕಾದರೆ ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಮಾಹಿತಿ ಪಡೆಯಬಹುದು. ಯಾವುದೇ ಸಂಖ್ಯೆಗೆ ಕರೆ ಮಾಡುವ ಮೂಲಕ ಪಾಲಿಸಿಯ ಬಗ್ಗೆ ಮಾಹಿತಿ ಪಡೆಯಬೇಡಿ.

LIC logo

LIC logo

  • Share this:
LIC fraud alert: ನೀವು ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ನಿಂದ ಪಾಲಿಸಿಯನ್ನು ಹೊಂದಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಬ್ಯಾಂಕ್ ಖಾತೆದಾರರನ್ನು ಮೋಸದ ಜಾಲಕ್ಕೆ ತಳ್ಳುವ ಆನ್‌ಲೈನ್ ವಂಚನೆಗಳು ಹೆಚ್ಚಾಗಿದೆ. ಪಾಲಿಸಿ ಹೊಂದಿರುವವರು ಈಗ ಇದೇ ರೀತಿಯ ಮೋಸದ ಜಾಲಗಳಿಗೆ ಬಲಿಯಾಗುವ ಪ್ರಕರಣಗಳು ಹೆಚ್ಚಾಗಿದೆ. ವಂಚಕರು ಎಲ್‌ಐಸಿಯ ಪಾಲಿಸಿದಾರರ ಬಳಿ ತಾವು ವಿಮಾ ನಿಯಂತ್ರಕರ (IRDAI) ಅಧಿಕಾರಿ ಅಥವಾ ಎಲ್‌ಐಸಿಯ ಉದ್ಯೋಗಿ ಎಂದು ಹೇಳಿಕೊಂಡು ಫೋನ್​​ ಮಾಡಿ ವಂಚಿಸುತ್ತಿದ್ದಾರೆ.

ಮೋಸದ ಜಾಲ ಹೇಗಿರುತ್ತೆ..?

ಈ ವಂಚಕರು ಮೊದಲು ಎಲ್‌ಐಸಿ ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ನಿಮ್ಮಿಂದ ಮಾಹಿತಿ ಪಡೆದು ನಿಮ್ಮ ಖಾತೆಯಿಂದ ಹಣವನ್ನು ತೆಗೆಯುತ್ತಾರೆ. ಆಗಾಗ್ಗೆ ನಡೆಯುತ್ತಿರುವ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಐಸಿ ತನ್ನ ಗ್ರಾಹಕರನ್ನು ಈ ವಂಚನೆಯಿಂದ ರಕ್ಷಿಸಲು ಎಚ್ಚರಿಕೆಯನ್ನು ನೀಡಿದೆ.  ಎಲ್ಐಸಿ ತನ್ನ ಗ್ರಾಹಕರಿಗೆ ಯಾವುದೇ ಪಾಲಿಸಿಯನ್ನು ಯಾವುದೇ ಗ್ರಾಹಕರಿಗೆ ಒಪ್ಪಿಸಲು ಸೂಚಿಸುವುದಿಲ್ಲ ಎಂದು ಹೇಳಿದೆ. ಇಂತಹ ಸಂಶಯಾಸ್ಪದ ಕರೆಗಳನ್ನು ತೆಗೆದುಕೊಳ್ಳದಂತೆ ಗ್ರಾಹಕರಿಗೆ ಕಂಪನಿ ಮನವಿ ಮಾಡಿದೆ. ಗ್ರಾಹಕರು ತಮ್ಮ ಪಾಲಿಸಿಯನ್ನು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬೇಕು ಎಂದು ಕಂಪನಿ ಹೇಳುತ್ತಿದೆ.

ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್‌ ನಲ್ಲಿ ತನ್ನ ಎಲ್ಲಾ ಗ್ರಾಹಕರಿಗೆ ತಪ್ಪು ಪಾಲಿಸಿ ಮಾಹಿತಿಯನ್ನು ನೀಡುವ ಮೂಲಕ ಗ್ರಾಹಕರನ್ನು ವಂಚಿಸುವ ಫೋನ್ ಕರೆಗಳ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದೆ. ಇದರೊಂದಿಗೆ, ವಂಚಕರು ಎಲ್ಐಸಿ ಅಧಿಕಾರಿಗಳು ಅಥವಾ ಐಆರ್ಡಿಎಐ ಅಧಿಕಾರಿಗಳು ಎಂದು ಹೇಳಿಕೊಂಡು ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಲಕ್ಷಗಟ್ಟಲೆ ಮೌಲ್ಯದ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ವಂಚನೆಯಿಂದ ಬಚಾವ್​​​ ಆಗಲು ಏನು ಮಾಡಬೇಕು?

ಪಾಲಿಸಿಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ಬೇಕಾದರೆ ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಮಾಹಿತಿ ಪಡೆಯಬಹುದು. ಯಾವುದೇ ಸಂಖ್ಯೆಗೆ ಕರೆ ಮಾಡುವ ಮೂಲಕ ಪಾಲಿಸಿಯ ಬಗ್ಗೆ ಮಾಹಿತಿ ಪಡೆಯಬೇಡಿ. ನಿಮಗೆ ಕರೆ ಬಂದರೆ, ಅದರಲ್ಲಿ ನಿಮಗೆ ಮಾಹಿತಿ ಕೇಳಿದರೆ, ನಿಮಗೆ ಅನುಮಾನಗಳಿದ್ದರೆ, ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಇದಲ್ಲದೇ, ನೀವು ಈ ಲಿಂಕ್   spuriouscalls@licindia.com ಗೆ ದೂರನ್ನು ಕಳುಹಿಸುವ ಮೂಲಕ ವರದಿ ಮಾಡಬಹುದು. ನೀವು co_crm_fb@licindia ಗೆ ಇಮೇಲ್ ಮಾಡುವ ಮೂಲಕವೂ ದೂರು ಸಲ್ಲಿಸಬಹುದು.

ನೀವು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ದೂರು ಪರಿಹಾರ ಅಧಿಕಾರಿಯ ಸಂಪರ್ಕ ಮಾಹಿತಿಯನ್ನು ಕಂಡುಕೊಳ್ಳಬಹುದು, ದೂರನ್ನು ದಾಖಲಿಸಬಹುದು.

 ನಕಲಿ ಕರೆಯನ್ನು ತಪ್ಪಿಸುವುದು ಹೇಗೆ ?

  1. ಅಂತಹ ಕರೆಗಳಲ್ಲಿ ಹೆಚ್ಚು ಮಾತನಾಡಬೇಡಿ .

  2. ಅವರ ಯಾವುದೇ ವಿವರಗಳನ್ನು ಹಂಚಿಕೊಳ್ಳಬೇಡಿ. ಪಾಲಿಸಿಯ ಬಗ್ಗೆ ಯಾರಿಗೂ ಯಾವುದೇ ಮಾಹಿತಿಯನ್ನು ನೀಡಬೇಡಿ.


ಇದನ್ನು ಹೊರತುಪಡಿಸಿ, ಯಾರಾದರೂ ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವ ಬಗ್ಗೆ ಆಮಿಷವೊಡ್ಡಿದರೆ ಅಂತವರಿಗೆ ಯಾವುದೇ ಮಾಹಿತಿಯನ್ನು ನೀಡಬೇಡಿ. ನಿಮ್ಮ ಪಾಲಿಸಿ ವಿವರಗಳನ್ನು ಅಥವಾ ಇತರ ಯಾವುದೇ ಮಾಹಿತಿಯನ್ನು ಕರೆ ಮಾಡಿದವರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರು ಪ್ರತಿ ತಿಂಗಳು 4,500 ರೂ. ಹೆಚ್ಚುವರಿ ಸಂಬಳ ಪಡೆಯಬಹುದು.. ಹೇಗೆ ಗೊತ್ತಾ?

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: