ಎಲ್​ಐಸಿಯ 8 ಸಾವಿರ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ..!

LIC Assistant recruitment: ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ನಂತರ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಪ್ರಾದೇಶಿಕ ಭಾಷಾ ಪರೀಕ್ಷೆಗೆ ಕರೆಯಲಾಗುವುದು.

zahir | news18-kannada
Updated:September 30, 2019, 8:00 AM IST
ಎಲ್​ಐಸಿಯ 8 ಸಾವಿರ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ..!
jobs
  • Share this:
LIC Assistant 8000 jobs: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಲ್‌ಐಸಿ) ದ ಸಹಾಯಕ ಮತ್ತು ಕ್ಲರ್ಕ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನಾಂಕ. ಎಲ್ಐಸಿ ಸಹಾಯಕ ನೇಮಕಾತಿ ಅಡಿಯಲ್ಲಿ ದೇಶಾದ್ಯಂತ 8000 ಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಈ ಹುದ್ದೆಗಳ ನೇಮಕಾತಿ ಪರೀಕ್ಷೆಯು ಬ್ಯಾಂಕ್ ಕ್ಲರ್ಕ್ ಮತ್ತು ಪಿಒ ಪರೀಕ್ಷೆಗಳಂತೆಯೇ ಇರಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಲ್ಐಸಿ ಸಹಾಯಕ ಪರೀಕ್ಷೆಗಾಗಿ ಅಕ್ಟೋಬರ್ 01 ರೊಳಗೆ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ಮಾದರಿ:

ಎಲ್‌ಐಸಿ ಸಹಾಯಕ ಹುದ್ದೆಗಳ ಆಯ್ಕೆಯು ಆನ್‌ಲೈನ್ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ. ಇಲ್ಲಿ ಎರಡು ಪರೀಕ್ಷೆಗಳು ಇರಲಿದ್ದು, ಪ್ರಾಥಮಿಕ ಪರೀಕ್ಷೆ ಮತ್ತು ಮುಖ್ಯ ಪರೀಕ್ಷೆ ಎರಡು ವಿಭಾಗಗಳಲ್ಲಿ ಅರ್ಹತೆಯನ್ನು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯನ್ನು 21 ಅಕ್ಟೋಬರ್ ಮತ್ತು 22 ಅಕ್ಟೋಬರ್ 2019 ರಂದು ಆನ್‌ಲೈನ್‌ ಮೂಲಕ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ನಂತರ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಪ್ರಾದೇಶಿಕ ಭಾಷಾ ಪರೀಕ್ಷೆಗೆ ಕರೆಯಲಾಗುವುದು. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಈ ಮೂಲಕ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಾಥಮಿಕ ಪರೀಕ್ಷಾ ಮಾದರಿ:
100 ಅಂಕಗಳ ಪ್ರಾಥಮಿಕ ಪರೀಕ್ಷೆಯಲ್ಲಿ 100 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದಕ್ಕೆ 60 ನಿಮಿಷಗಳಲ್ಲಿ ಉತ್ತರಿಸಬೇಕು.
- ಪ್ರಶ್ನೆ ಪತ್ರಿಕೆ ಮೂರು ಭಾಗಗಳಾಗಿರುತ್ತದೆ. ಮೊದಲ ಭಾಗದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ 30 ಪ್ರಶ್ನೆಗಳಿವೆ. ಎರಡನೆಯದರಲ್ಲಿ ಸಂಖ್ಯಾತ್ಮಕ ಸಾಮರ್ಥ್ಯದ 35 ಪ್ರಶ್ನೆಗಳು ಮತ್ತು ಮೂರನೇ ಭಾಗದಲ್ಲಿ 35 ತಾರ್ಕಿಕ ಪ್ರಶ್ನೆಗಳು ಇರುತ್ತವೆ.- ನೆಗೆಟಿವ್ ಮಾರ್ಕಿಂಗ್ ಇರಲಿದೆ. ತಪ್ಪು ಉತ್ತರಕ್ಕಾಗಿ .25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಪ್ರಾಥಮಿಕ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಗೋಕಾಕ್ ಚಳವಳಿಗೆ ಬಗ್ಗೆ ತಿಳಿದಾಗ ಹೆಮ್ಮೆ ಅನಿಸಿತು: ಗಣೇಶನ ಹೋರಾಟದೊಂದಿಗೆ ಕನ್ನಡಕ್ಕೆ ಸಿಕ್ಕ ಹೊಸ ಗೀತಾ

ಮುಖ್ಯ ಪರೀಕ್ಷಾ ಮಾದರಿ:
200 ಅಂಕಗಳ ಮುಖ್ಯ ಪರೀಕ್ಷೆಯಲ್ಲಿ 200 ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಿರಲಿವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಎರಡೂವರೆ ಗಂಟೆ ನೀಡಲಾಗುತ್ತದೆ.
- ಈ ಪ್ರಶ್ನೆ ಪತ್ರಿಕೆ ನಾಲ್ಕು ಭಾಗಗಳನ್ನು ಹೊಂದಿರಲಿವೆ. ಮೊದಲನೆಯದಾಗಿ ಸಾಮಾನ್ಯ / ಆರ್ಥಿಕ ಜಾಗೃತಿಯ 50 ಪ್ರಶ್ನೆಗಳನ್ನು ನೀಡಲಾಗುತ್ತದೆ.
- ಎರಡನೇ ಭಾಗದಲ್ಲಿ ಜನರಲ್ ಇಂಗ್ಲಿಷ್‌ನ 40 ಪ್ರಶ್ನೆಗಳು, ಮೂರನೆಯದರಲ್ಲಿ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್‌ನ 50 ಪ್ರಶ್ನೆಗಳು ಇರಲಿವೆ. ನಾಲ್ಕನೇ ಭಾಗದಲ್ಲಿ ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್‌ನ 60 ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
- ನೆಗೆಟಿವ್ ಮಾರ್ಕಿಂಗ್ ಇರಲಿದೆ. ಪ್ರತಿ ತಪ್ಪು ಉತ್ತರಕ್ಕೂ .25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
- ಕೆಲವು ವಲಯಗಳಲ್ಲಿ, ಪ್ರಶ್ನೆ ಪತ್ರಿಕೆಯನ್ನು ಐದು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಐದನೇ ಭಾಗ ಹಿಂದಿ ಭಾಷೆಯಲ್ಲಿರಲಿದ್ದು, 40 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಉಳಿದ ನಾಲ್ಕು ಭಾಗಗಳಲ್ಲಿ 40–40 ಪ್ರಶ್ನೆಗಳಿರಲಿವೆ.

ಹೆಚ್ಚಿನ ಮಾಹಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ licindia.in ಗೆ ಭೇಟಿ ನೀಡಿ.

 

First published: September 30, 2019, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading