LIC Assistant Notification: ಎಲ್​ಐಸಿ ಉದ್ಯೋಗಾವಕಾಶ: 8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೂರ್ವ ಮತ್ತು ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡೂ ಪರೀಕ್ಷೆಗಳು ಆನ್‌ಲೈನ್‌ನಲ್ಲಿರಲಿವೆ.

zahir | news18-kannada
Updated:September 18, 2019, 8:34 AM IST
LIC Assistant Notification: ಎಲ್​ಐಸಿ ಉದ್ಯೋಗಾವಕಾಶ: 8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
  • Share this:
LIC Assistant Notification: ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ದೇಶಾದ್ಯಂತ ಖಾಲಿ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಲ್​ಐಸಿಯ ಹೊಸ ಅಧಿಸೂಚನೆಯಲ್ಲಿ ಒಟ್ಟು 8 ಸಾವಿರ ಸಹಾಯಕ ಹುದ್ದೆಗಳ ಭರ್ತಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಈ ನೇಮಕಾತಿಯ ಮೂಲಕ ದೇಶದ ವಿವಿಧ ಪ್ರದೇಶಗಳಲ್ಲಿರುವ ವಿಭಾಗೀಯ ಕಚೇರಿಗಳಲ್ಲಿ ಸಹಾಯಕ (ಎಲ್‌ಐಸಿ ಸಹಾಯಕ) ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈ ಹುದ್ದೆಗಳ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅಕ್ಟೋಬರ್ 1 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ. ಈ ಹುದ್ದೆಗಳ ಹೆಚ್ಚಿನ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ಸಂಖ್ಯೆ:

8000 ಹುದ್ದೆಗಳು

ನೇಮಕಾತಿ ನಡೆಯುವ ರಾಜ್ಯಗಳು:
ಮಧ್ಯಪ್ರದೇಶ, ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ, ಮಣಿಪುರ, ಅಂಡಮಾನ್ ಮತ್ತು ನಿಕೋಬಾರ್, ಬಿಹಾರ, ಜಾರ್ಖಂಡ್, ಒಡಿಶಾ, ದೆಹಲಿ, ರಾಜಸ್ಥಾನ, ಜಮ್ಮುರಾಜ್ , ಚಂಡೀಗಢ , ಉತ್ತರ ಪ್ರದೇಶ, ಉತ್ತರಾಖಂಡ, ತಮಿಳುನಾಡು, ಕೇರಳ, ಪುಂಡುಚೇರಿ, ಲಕ್ಷದ್ವೀಪ, ಅರುಮಾಚಲ ಪ್ರದೇಶ ಮತ್ತು ಕರ್ನಾಟಕ.

ವಿದ್ಯಾರ್ಹತೆ:ಈ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:
ಪೂರ್ವ ಮತ್ತು ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎರಡೂ ಪರೀಕ್ಷೆಗಳು ಆನ್‌ಲೈನ್‌ನಲ್ಲಿರಲಿವೆ. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಇದರ ನಂತರ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುಗುತ್ತದೆ.

ಇದನ್ನೂ ಓದಿ: ಸೆ.30 ಕಡೆಯ ದಿನ: ಇನ್ನೂ ಕೂಡ ಆಧಾರ್-ಪ್ಯಾನ್ ಕಾರ್ಡ್​ ಲಿಂಕ್ ಮಾಡಿಲ್ವಾ? ಹಾಗಿದ್ರೆ ಇಲ್ಲಿದೆ ಸುಲಭ ವಿಧಾನ

ಅರ್ಜಿ ಶುಲ್ಕ:
ಎಸ್‌ಸಿ / ಎಸ್‌ಟಿ- 50 ರೂ.
ಇತರರಿಗೆ - 600 ರೂ.

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಈ ಲಿಂಕ್​​ ibpsonline.ibps.in ಕ್ಲಿಕ್ ಮಾಡಿ ಅಪ್ಲಿಕೇಶನ್ ಸಲ್ಲಿಸಬಹುದು.

ಇದನ್ನೂ ಓದಿ: ಪೋರ್ನ್​ ವೀಕ್ಷಕರೇ ಎಚ್ಚರ: ನಿಮ್ಮ ವಿಡಿಯೋ ಕೂಡ ರೆಕಾರ್ಡ್​ ಆಗುತ್ತಿದೆ..!

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಾರಂಭ: ಸೆಪ್ಟೆಂಬರ್ 17, 2019
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 1, 2019

ಸ್ವಿಟ್ಜರ್ಲೆಂಡ್​ನಲ್ಲಿ ಒಡೆಯ-ಒಡತಿ: ಕೊಡಗಿನ ವೈಯ್ಯಾರಿ ಜೊತೆ ದರ್ಶನ್ ಸ್ಟೆಪ್ಸ್

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading