ಭಾರತದಲ್ಲಿ (India) ಬೇಳೆ ಕಾಳುಗಳನ್ನು (Lentils) ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ. ಪ್ರತಿ ಮನೆಯಲ್ಲೂ (Home) ಬೇಳೆ ಕಾಳುಗಳಿಂದ ತಯಾರಿಸಿದ ಅಡುಗೆ (Recipe) ಸಿದ್ಧಪಡಿಸಿ ಊಟ ಮಾಡಲಾಗುತ್ತದೆ. ಆರೋಗ್ಯಕ್ಕೆ (Health) ಹೆಚ್ಚು ಪ್ರಯೋಜನ ನೀಡುವ ಬೇಳೆ ಕಾಳುಗಳನ್ನು ವಿವಿಧ ರೀತಿಯ ರೆಸಿಪಿ ಮೂಲಕ ಸೇವನೆ ಮಾಡುವುದು ರೂಢಿ. ಬೇಳೆ ಕಾಳುಗಳನ್ನು ದೊಡ್ಡ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಇಲ್ಲಿ ಪ್ರತಿ ಮನೆಯಲ್ಲೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಬೇಳೆ ಕಾಳುಗಳ ದಾಲ್, ಸಾಂಬಾರ್, ಪಲ್ಯವನ್ನು ನಿಯಮಿತವಾಗಿ ತಯಾರಿಸಿ, ಸೇವನೆ ಮಾಡಲಾಗುತ್ತದೆ. ಬೇಳೆ ಕಾಳುಗಳು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತವೆ. ಸಾಕಷ್ಟು ಬಗೆಯ ಬೇಳೆ ಕಾಳುಗಳನ್ನು ಕಾಣಬಹುದು.
ಬೇಳೆ ಕಾಳುಗಳು ರುಚಿಕರ ಮತ್ತು ಆರೋಗ್ಯದ ಉಗ್ರಾಣ
ಬೇಳೆ ಕಾಳುಗಳು ರುಚಿಕರ ಮತ್ತು ಆರೋಗ್ಯದ ಉಗ್ರಾಣವಾಗಿದೆ. ಹಲವಾರು ವಿಧದ ಬೇಳೆ ಕಾಳುಗಳಿವೆ ಮತ್ತು ಎಲ್ಲಾ ರೀತಿಯ ಕಾಳುಗಳು ಪ್ರೋಟೀನ್ ಮತ್ತು ಫೈಬರ್ನಿಂದ ಸಮೃದ್ಧವಾಗಿವೆ. ನಾವು ಬೇಳೆ ಕಾಳುಗಳ ಸೇವನೆಯ ಬಗ್ಗೆ ಮತ್ತು ಪ್ರಯೋಜನಗಳ ಬಗ್ಗೆ ಹೇಳೋದಾದ್ರೆ ಅವುಗಳು ವಿಟಮಿನ್ಗಳು, ಖನಿಜಗಳು ಮತ್ತು ಫೈಬರ್ನಲ್ಲಿ ಸಮೃದ್ಧವಾಗಿವೆ.
ಬೇಳೆ ಕಾಳುಗಳನ್ನು ಸೇವಿಸುವುದರಿಂದ ಎಲ್ಡಿಎಲ್ ಮಟ್ಟ ಕಡಿಮೆ ಮಾಡಲು ಸಹಕಾರಿ ಆಗಿದೆ. ಅಂದರೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತವೆ. ಇದು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ. ಬೇಳೆ ಕಾಳುಗಳು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.
ಇದನ್ನೂ ಓದಿ: ಮಧುಮೇಹಿಗಳಿಗೆ ಈ ಚಹಾ ವರದಾನವಾಗಿದೆ! ಪ್ರತಿನಿತ್ಯ ಸೇವಿಸಿ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಿ!
ಹೀಗಿದ್ದರೂ ಕೆಲವೊಮ್ಮೆ ಆರೋಗ್ಯಕರ ಪದಾರ್ಥಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ. ಅತಿಯಾದರೆ ಅಮೃತವೂ ವಿಷ ಎಂಬಂತೆ ಬೇಳೆ ಕಾಳುಗಳನ್ನು ಅತಿಯಾಗಿ ಸೇವನೆ ಮಾಡುವುದು ಅನಾರೋಗ್ಯ ಮತ್ತು ಕೆಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.
ಬೇಳೆ ಕಾಳುಗಳನ್ನು ಹೆಚ್ಚು ಸೇವನೆ ಮಾಡುವುದರ ಅಡ್ಡ ಪರಿಣಾಮಗಳು
ಈ ನಿಯಮವು ಬೇಳೆ ಕಾಳುಗಳ ವಿಷಯದಲ್ಲಿಯೂ ಅನ್ವಯಿಸುತ್ತದೆ. ಬೇಳೆ ಕಾಳುಗಳ ಅತಿಯಾದ ಸೇವನೆಯು ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಇದರಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ. ಬೇಳೆ ಕಾಳುಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಇಲ್ಲಿ ತಿಳಿಯೋಣ.
ಮೂತ್ರಪಿಂಡ ವೈಫಲ್ಯದ ಅಪಾಯ
ಹೆಚ್ಚಿನ ಪ್ರಮಾಣದಲ್ಲಿ ಬೇಳೆ ಕಾಳುಗಳನ್ನು ಸೇವನೆ ಮಾಡಿದರೆ, ಅದು ನಿಮ್ಮ ಮೂತ್ರಪಿಂಡಗಳ ಮೇಲೆ ನೇರ ಪರಿಣಾಮ ಬೀರಬಹುದು. ಅತಿಯಾಗಿ ಸೊಪ್ಪನ್ನು ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗುತ್ತವೆ. ವರದಿಯೊಂದರ ಪ್ರಕಾರ, ಸೊಪ್ಪಿನಲ್ಲಿ ಆಕ್ಸಲೇಟ್ ಅಂಶ ಹೆಚ್ಚಿದ್ದು, ಕಿಡ್ನಿ ಸ್ಟೋನ್ ಹಾಗೂ ಇತರೆ ಸಮಸ್ಯೆಗಳಿಂದ ಬಳಲುತ್ತಿರುವವರು ಬೇಳೆ ಕಾಳುಗಳನ್ನು ಸೇವಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು.
ಹೊಟ್ಟೆಯಲ್ಲಿ ಗ್ಯಾಸ್ ರೂಪುಗೊಳ್ಳುವ ಸಾಧ್ಯತೆ ಹೆಚ್ಚು
ಹೆಚ್ಚು ಬೇಳೆ ಕಾಳುಗಳನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. ಒಂದು ವರದಿಯ ಪ್ರಕಾರ, ಬೇಳೆ ಕಾಳುಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ. ಮತ್ತು ಇದನ್ನು ಹೆಚ್ಚು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಇದಲ್ಲದೇ ಬೇಳೆ ಕಾಳುಗಳನ್ನು ತಿನ್ನುವುದರಿಂದ ಅನೇಕರಿಗೆ ಅಸಿಡಿಟಿಯೂ ಇರುತ್ತದೆ.
ಸ್ಥೂಲಕಾಯ ಅಪಾಯ
ಬೇಳೆ ಕಾಳು ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿದೆ. ಆಹಾರದಲ್ಲಿ ನೀವು ಹೆಚ್ಚು ಪ್ರೋಟೀನ್ ಸೇವಿಸಿದರೆ, ನಂತರ ದೇಹದ ತೂಕವು ವೇಗವಾಗಿ ಹೆಚ್ಚುತ್ತದೆ. ಹೆಚ್ಚುವರಿ ಪ್ರೋಟೀನ್ ದೇಹದಲ್ಲಿ ಕೊಬ್ಬಿನಂತೆ ಸಂಗ್ರಹವಾಗುತ್ತದೆ.
ಗೌಟ್ ಅಥವಾ ಯೂರಿಕ್ ಆಮ್ಲದ ಅಪಾಯ
ಒಬ್ಬ ವ್ಯಕ್ತಿಯು ಸಂಧಿವಾತದಿಂದ ಬಳಲುತ್ತಿದ್ದರೆ, ಅವನು ವೈದ್ಯರ ಸಲಹೆಯಿಲ್ಲದೆ ಬೇಳೆ ಕಾಳು ಮತ್ತು ದ್ವಿದಳ ದಾನ್ಯಗಳನ್ನು ಸೇವಿಸಬಾರದು. ಒಂದು ವರದಿಯ ಪ್ರಕಾರ, ಬೇಳೆ ಕಾಳಿನಲ್ಲಿ ಪ್ಯೂರಿನ್ಗಳು ಅಧಿಕವಾಗಿದ್ದು, ದೇಹಕ್ಕೆ ಹಾನಿಕಾರಕ.
ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ
ಜೀರ್ಣಕ್ರಿಯೆ ಕೆಟ್ಟದಾಗುತ್ತದೆ
ಬೇಳೆ ಕಾಳುಗಳಲ್ಲಿ ಲೆಕ್ಟಿನ್ಗಳು ಅಧಿಕವಾಗಿದ್ದು, ಇದು ನಿಮ್ಮ ಜೀರ್ಣಕ್ರಿಯೆಗೆ ಅಡ್ಡ ಪರಿಣಾಮ ಬೀರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ