• Home
  • »
  • News
  • »
  • lifestyle
  • »
  • Skin Care: ನಿಂಬೆಹಣ್ಣನ್ನು ಸರಿಯಾಗಿ ಉಪಯೋಗಿಸದೇ ಇದ್ದರೆ, ಪರಿಣಾಮಗಳನ್ನು ಎದುರಿಸಬೇಕಾಗತ್ತದೆ

Skin Care: ನಿಂಬೆಹಣ್ಣನ್ನು ಸರಿಯಾಗಿ ಉಪಯೋಗಿಸದೇ ಇದ್ದರೆ, ಪರಿಣಾಮಗಳನ್ನು ಎದುರಿಸಬೇಕಾಗತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕ ಜನರು ಚರ್ಮದ ಸೌಂದರ್ಯಕ್ಕಾಗಿ ನಿಂಬೆಯನ್ನು ಬಳಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಆಗಿದೆ. ಇದನ್ನು ಅತಿಯಾಗಿ ಮತ್ತು ತಪ್ಪು ರೀತಿಯಲ್ಲಿ ಬಳಸಿದರೆ ತ್ವಚೆಗೆ ತೊಂದರೆ ಸಹ ಉಂಟಾಗುವ ಸಾಧ್ಯತೆ ಹೆಚ್ಚು. ಯಾವುದೇ ವಸ್ತುವಾಗಿರಲಿ ಅದು ಎಲ್ಲರಿಗೂ ಒಂದೇ ರೀತಿಯ ಪರಿಣಾಮ ಉಂಟು ಮಾಡುವುದಿಲ್ಲ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ನಿಂಬೆ (Lemon) ಚಿಕ್ಕದಾಗಿದ್ದರೂ ಅದು ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ನೀಡುತ್ತದೆ. ನಿಂಬೆಯು ಹಲವು ಆರೋಗ್ಯ ವರ್ಧಕ ಪೋಷಕಾಂಶಗಳ (Nutrients) ನಿಧಿ ಆಗಿದೆ. ಪ್ರಮುಖವಾಗಿ ನಿಂಬೆಯಲ್ಲಿ ವಿಟಮಿನ್ ಸಿ (Vitamin C) ಯಂತಹ ಪ್ರಮುಖ ಪೋಷಕಾಂಶಗಳು ಇವೆ. ಇದು ಇಮ್ಯುನಿಟಿ ಹೆಚ್ಚಿಸಲು ಸಹಕಾರಿ ಆಗಿದೆ. ನಿಂಬೆಯನ್ನು ಆಹಾರ (Food) ಕ್ರಮದಲ್ಲಿ ಸೇರಿಸುವುದು ಹಲವು ಪ್ರಯೋಜನ ನೀಡುತ್ತದೆ. ನಿಂಬೆಯು ತೂಕ ಇಳಿಕೆಗೆ ಪರಿಣಾಮಕಾರಿ ಪದಾರ್ಥ ಆಗಿದೆ. ಇನ್ನು ನಿಂಬೆಯು ತನ್ನ ಪೋಷಕ ತತ್ವದಿಂದ ತ್ವಚೆಯ ಆರೋಗ್ಯಕ್ಕೂ ಸಹಕಾರಿ ಆಗಿದೆ. ಆದರೆ ಕೆಲವೊಮ್ಮೆ ನಿಂಬೆಯ ತಪ್ಪಾದ ಬಳಕೆ ಕೆಲವು ಕೆಟ್ಟ ಪರಿಣಾಮ ಸಹ ಬೀರುತ್ತದೆ.


    ನಿಂಬೆಯನ್ನು ತ್ವಚೆಯ ಆರೈಕೆಗೆ ಬಳಸುವುದು ಹೇಗೆ?  


    ಅನೇಕ ಜನರು ಚರ್ಮದ ಸೌಂದರ್ಯಕ್ಕಾಗಿ ನಿಂಬೆಯನ್ನು ಬಳಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಚರ್ಮ ಎರಡಕ್ಕೂ ಪ್ರಯೋಜನಕಾರಿ ಆಗಿದೆ. ಇದನ್ನು ಅತಿಯಾಗಿ ಮತ್ತು ತಪ್ಪು ರೀತಿಯಲ್ಲಿ ಬಳಸಿದರೆ ತ್ವಚೆಗೆ ತೊಂದರೆ ಸಹ ಉಂಟಾಗುವ ಸಾಧ್ಯತೆ ಹೆಚ್ಚು.


    ಯಾವುದೇ ವಸ್ತುವಾಗಿರಲಿ ಅದು ಎಲ್ಲರಿಗೂ ಒಂದೇ ರೀತಿಯ ಪರಿಣಾಮ ಉಂಟು ಮಾಡುವುದಿಲ್ಲ ಅಂತಾರೆ ತಜ್ಞರು. ನಿಂಬೆ ಉತ್ತಮವಾಗಿದೆ. ಆದರೆ ಇದು ಎಲ್ಲಾ ಚರ್ಮದ ಪ್ರಕಾರಗಳಿಗೆ ಕೆಲಸ ಮಾಡದಿರಬಹುದು. ಇಲ್ಲಿ ನಾವು ನಿಂಬೆಯನ್ನು ತಪ್ಪಾದ ರೀತಿ ಬಳಸಿದರೆ ಯಾವ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂಬುದನ್ನು ನೋಡೋಣ.




    ನಿಂಬೆಯ ತಪ್ಪಾದ ಬಳಕೆಯಿಂದ ಚರ್ಮದ ಮೇಲೆ ಉಂಟಾಗುವ ಅಡ್ಡಪರಿಣಾಮಗಳು ಹೀಗಿವೆ


    ಸನ್ಬರ್ನ್ ಸಾಧ್ಯತೆ


    ಚರ್ಮದ ಮೇಲೆ ಸಿಟ್ರಸ್ ಹಣ್ಣುಗಳನ್ನು ನೇರವಾಗಿ ಬಳಸಿದರೆ ಅದು ಸನ್ಬರ್ನ್ ಸಾಧ್ಯತೆ ಹೆಚ್ಚಿಸುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೊದಲು ಚರ್ಮದ ಮೇಲೆ ಸಿಟ್ರಸ್ ಹಣ್ಣುಗಳನ್ನು ಬಳಸಬೇಡಿ. ಸಿಟ್ರಸ್ ಹಣ್ಣುಗಳಲ್ಲಿರುವ ತೈಲಗಳು ಫೋಟೋಟಾಕ್ಸಿಕ್ ಆಗಿರುತ್ತವೆ. ಇದು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.


    ರಾಸಾಯನಿಕ ಲ್ಯುಕೋಡರ್ಮಾ


    ಮೆಲನಿನ್ ಕೊರತೆ ಚರ್ಮವು ಹಗುರವಾಗಲು ಕಾರಣವಾಗುತ್ತದೆ. ಮೆಲನಿನ್ ಚರ್ಮದ ನೈಸರ್ಗಿಕ ಬಣ್ಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಹಾರ್ಮೋನ್ ಆಗಿದೆ. ಸಾಮಾನ್ಯವಾಗಿ ಜನರು ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಹಗುರಗೊಳಿಸಲು ನಿಂಬೆ ರಸ ಬಳಸುತ್ತಾರೆ.


    ಆದರೆ ಕಪ್ಪು ಕಲೆಗಳನ್ನು ಕಡಿಮೆ ಮಾಡುವ ಬದಲು ಕೆಲವೊಮ್ಮೆ ಬಿಳಿ ಬಣ್ಣದ ಲ್ಯುಕೋಡರ್ಮಾ ಕಲೆಗಳು ಬೆಳೆಯಲು ಇದು ಕಾರಣವಾಗುತ್ತದೆ. ಹಾಗಾಗಿ ನಿಂಬೆ ರಸವನ್ನು ಅತಿಯಾಗಿ ಬಳಸಬೇಡಿ.


    ಫೈಟೊಫೋಟೋ ಡರ್ಮಾಟಿಟಿಸ್ ಸಮಸ್ಯೆ


    ಫೈಟೊಫೋಟೋ ಡರ್ಮಾಟಿಟಿಸ್ ಎಂಬುದು ಸಿಟ್ರಸ್ ಹಣ್ಣುಗಳಿಂದ ಉಂಟಾಗುವ ಒಂದು ರೀತಿಯ ಚರ್ಮದ ಅಲರ್ಜಿ ಆಗಿದೆ. ನಿಂಬೆಯ ಅತಿಯಾದ ಬಳಕೆ ಮತ್ತು ಸೂರ್ಯನಿಗೆ ಒಡ್ಡಿಕೊಳ್ಳುವ ಸ್ವಲ್ಪ ಮೊದಲು ಅದರ ಬಳಕೆಯು ಉರಿಯೂತದ ಪ್ರತಿಕ್ರಿಯೆ ಉಂಟು ಮಾಡುತ್ತದೆ. ಈ ಸ್ಥಿತಿಯು ಚರ್ಮದ ಕೆಂಪು, ಊತ ಮತ್ತು ಗುಳ್ಳೆ ಉಂಟು ಮಾಡುತ್ತದೆ.


    ಸಿಟ್ರಸ್ ಹಣ್ಣುಗಳಲ್ಲಿನ ಆಮ್ಲಗಳಿಂದ ಚರ್ಮದ ಕಿರಿಕಿರಿಯು ಸಾಮಾನ್ಯ ಅಡ್ಡ ಪರಿಣಾಮವಾಗಿದೆ. ಚರ್ಮದ ಶುಷ್ಕತೆ, ಕೆಂಪು ಮತ್ತು ಚರ್ಮದ ಸಿಪ್ಪೆಸುಲಿಯುವಿಕೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಂಬೆ ಬಳಸುವ ಮೊದಲು ಜಾಗ್ರತೆ ವಹಿಸಿ. ಚರ್ಮವು ಸೂಕ್ಷ್ಮವಾಗಿರುವವರು ಸಿಟ್ರಸ್ ಹಣ್ಣುಗಳ ಬಳಕೆ ಮಾಡದಿರಿ.


    ನಿಂಬೆ ರಸ ತ್ವಚೆಗೆ ಅನ್ವಯಿಸಿ ರಾತ್ರಿಯಿಡೀ ಇಡಬಹುದೇ?


    ನಿಂಬೆಯಲ್ಲಿ ಬಹಳಷ್ಟು ಆಮ್ಲವಿದೆ. ಹಾಗಾಗಿ ಇದನ್ನು ರಾತ್ರಿಯಿಡೀ ಹಚ್ಚಿ ಮಲಗಬೇಡಿ. ಇದನ್ನು ದೀರ್ಘಕಾಲದವರೆಗೆ ಇರಿಸಿದರೆ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ಚರ್ಮವು ಸೂಕ್ಷ್ಮವಾಗಿದ್ದರೆ ನಿಂಬೆಯ ಬಳಕೆ ಮಾಡ್ಬೇಡಿ.


    ನಿಂಬೆಯ ಬಳಕೆ ಸರಿಯಾದ ವಿಧಾನ ಯಾವುದು?


    ತ್ವಚೆಗೆ ಎರಡು ಹನಿ ಹಚ್ಚಿ ನೋಡಿ. ಒಂದು ದಿನ ಕಾಯಿರಿ. ಅದು ಯಾವುದೇ ಸಮಸ್ಯೆ ಉಂಟು ಮಾಡದಿದ್ದರೆ, ಸಂಪೂರ್ಣವಾಗಿ ಮುಖಕ್ಕೆ ಅನ್ವಯಿಸಿ.


    ಇದನ್ನೂ ಓದಿ: ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಲು ನೀವು ಮಾಡಬೇಕಿರೋದು ಇಷ್ಟು


    ನಿಂಬೆ ರಸವನ್ನು ಚರ್ಮದ ಮೇಲೆ ಉಜ್ಜಬೇಡಿ. ಹತ್ತಿ ಪ್ಯಾಡ್ ಸಹಾಯದಿಂದ ಲಘು ಒತ್ತಡದಿಂದ ಅದನ್ನು ಟ್ಯಾಪ್ ಮಾಡುತ್ತಾ, ರಸವನ್ನು ಅನ್ವಯಿಸಿ. ನಿಂಬೆಹಣ್ಣನ್ನು ನೇರವಾಗಿ ತ್ವಚೆಯ ಮೇಲೆ ಹಚ್ಚುವ ಬದಲು ಇದನ್ನು ಫೇಸ್ ಪ್ಯಾಕ್ ಅಥವಾ ಫೇಸ್ ಮಾಸ್ಕ್ ನಂತೆ ಬಳಸಿ.

    Published by:renukadariyannavar
    First published: