Lemon: ಸೌಂದರ್ಯ ಹೆಚ್ಚಿಸುವುದರಿಂದ ಹಿಡಿದು ತೂಕ ಇಳಿಸುವುದರವರೆಗೆ, ನಿಂಬೆಹಣ್ಣಿನ ಪ್ರಯೋಜನಗಳು ಒಂದೆರೆಡಲ್ಲ
ಮಾರುಕಟ್ಟೆಯಲ್ಲಿ ಅತೀಹೆಚ್ಚು ಬೇಡಿಕೆಯಲ್ಲಿರುವ ಮತ್ತು ಎಲ್ಲರೂ ಉಪಯೋಗಿಸುವ ಹಣ್ಣು ನಿಂಬೆ ಹಣ್ಣು. ಹುಳಿ ಪದಾರ್ಥವಾಗಿದ್ದರೂ ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ನಿಂಬೆ ಹಣ್ಣು (Lemon) ಯಾವುದಕ್ಕೆ ಬೇಡ ಹೇಳಿ..? ನೀರಿನಲ್ಲಿ (Water) ಹಾಕಿ ಕುಡಿಯಲು, ಶರಬತ್ತು ಮಾಡಲು, ಅಡುಗೆ ಮಾಡಲು, ತಿಂಡಿ ಜೊತೆಗೆ ತಿನ್ನಲು, ದೃಷ್ಟಿಯಾಗದಿರಲೆಂದು ಅಮವಾಸ್ಯೆಗೆ ಮನೆಯ ಬಾಗಿಲಿಗೆ ಕಟ್ಟಲು, ವಾಹನಗಳು (Vehicles) , ಅಂಗಡಿಗಳಲ್ಲಿ ನಿಂಬೆ ಹಣ್ಣು ಬಳಸ್ತಾರೆ. ಶುಭ ಕಾರ್ಯಗಳಿಗೂ ನಿಂಬೆ ಬೇಕು. ವಾಮಾಚಾರ, ಅಶುಭ ಕಾರ್ಯಗಳಿಗೆ ಹೀಗೆ ಒಂದಲ್ಲ ಎರಡಲ್ಲ ಹಲವು ಕೆಲಸಗಳಿಗೆ ನಿಂಬೆ ಸಂಜೀವಿನಿಯಾಗಿ ಮತ್ತು ತುಂಬಾ ಪ್ರಯೋಜನಕಾರಿಯಾಗಿದೆ. ತಲೆಯ ಹೊಟ್ಟು ಕಡಿಮೆ ಮಾಡಲು, ಬೊಜ್ಜಿನ ಸಮಸ್ಯೆಗೆ, ಜ್ವರ, ನೆಗಡಿ, ಮುಖದ ಕಪ್ಪು ಕಲೆ ಸಮಸ್ಯೆ (Problem), ದೇಹದಿಂದ ಬರುವ ದುರ್ಗಂಧ, ಮೂತ್ರಕಟ್ಟು ನಿವಾರಣೆ, ಉದರ ಸಂಬಂಧಿ ಕಾಯಿಲೆಗಳು, ಮೊಣಕೈ ಕಪ್ಪಾಗುವುದು ಹೀಗೆ ಸಾಕಷ್ಟು ಸಮಸ್ಯೆಗಳ ನಿವಾರಣೆಗೆ ನಿಂಬೆಹಣ್ಣು ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಇಂತಹ ನಿಂಬೆ ಹಣ್ಣಿನ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು.
ಮಾರುಕಟ್ಟೆಯಲ್ಲಿ ಅತೀಹೆಚ್ಚು ಬೇಡಿಕೆಯಲ್ಲಿರುವ ಮತ್ತು ಎಲ್ಲರೂ ಉಪಯೋಗಿಸುವ ಹಣ್ಣು ನಿಂಬೆ ಹಣ್ಣು. ಹುಳಿ ಪದಾರ್ಥವಾಗಿದ್ದರೂ ದೇಹಕ್ಕೆ ಮತ್ತು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ವಿಟಮಿನ್ ಸಿ ಯನ್ನು ಯಥೇಚ್ಛವಾಗಿ ಹೊಂದಿದೆ.
ಆರೋಗ್ಯ ಭಾಗ್ಯಕ್ಕೆ ನಿಂಬೆ
ಜ್ವರದಿಂದ ದೇಹ ಬಳಲಿದಾಗ ನಿಂಬೆರಸ ಸೇವಿಸಿದರೆ ಬಳಲಿಕೆ ಕಡಿಮೆಯಾಗುತ್ತದೆ.
ತಲೆಯ ತುಂಬಾ ಹೊಟ್ಟಿನ ಸಮಸ್ಯೆ ಆಗಿದ್ದರೆ ಕೂದಲಿನ ಬುಡಕ್ಕೆ ನಿಂಬೆ ರಸ ಹಾಕಿ ತಿಕ್ಕಿದರೆ ಹೊಟ್ಟು ಕಡಿಮೆಯಾಗುತ್ತದೆ.
ಮುಖದಲ್ಲಿನ ಕೊಳೆ, ಜಿಡ್ಡು ಕಡಿಮೆ ಮಾಡಿ ಮುಖದ ಕಾಂತಿ ಹೆಚ್ಚಿಸಲು ಸ್ವಲ್ಪ ಕಡಲೆ ಹಿಟ್ಟಿಗೆ ಜೇನುತುಪ್ಪ ಮತ್ತು ನಿಂಬೆರಸ ಕಲೆಸಿ ಮುಖಕ್ಕೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತೊಳೆದರೆ ಮುಖ ಫಳ ಫಳ ಹೊಳೆಯುತ್ತದೆ.
ನಿಂಬೆರಸ ಮತ್ತು ಎಳನೀರು ಸೇರಿಸಿ ಕೂಡಿದರೆ ಮೂತ್ರಕಟ್ಟು ನಿವಾರಣೆಯಾಗುತ್ತದೆ.
ತಲೆಹೊಟ್ಟು ಇರುವ ಜಾಗಕ್ಕೆ ಸ್ನಾನಕ್ಕೆ ಹೋಗುವ 15 ನಿಮಿಷಗಳ ಮೊದಲು ನಿಂಬೆ ರಸವನ್ನು ಹಚ್ಚಿಕೊಳ್ಳಬೇಕು. ಇದರಿಂದ ಹೊಟ್ಟು ನಿವಾರಣೆಯಾಗುತ್ತದೆ.
ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ತಲೆ ಹೊಟ್ಟಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಉಚ್ಛಾಟಿಸಿ ಕೂದಲ ಬುಡಗಳನ್ನು ಗಟ್ಟಿಗೊಳಿಸುತ್ತದೆ.
ಸೇಬು ಹಣ್ಣಿನ ತುಂಡುಗಳು ಕಪ್ಪಾಗದಂತೆ ನೋಡಿಕೊಳ್ಳಲು ನೀರಿನ ಪಾತ್ರೆಗೆ ನಿಂಬೆ ರಸ ಹಾಕಿ ಸೇಬಿನ ತುಂಡುಗಳನ್ನು ಕೊಂಚ ಹೊತ್ತು ಮುಳುಗಿಸಿಟ್ಟು ನಂತರ ಹೊರತೆಗೆದು ಟ್ರೇನಲ್ಲಿ ಇರಿಸಿದರೆ ಸೇಬಿನ ತುಂಡುಗಳು ತಾಜಾ ಆಗಿಯೇ ಇರುತ್ತವೆ.
Published by:renukadariyannavar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ