• Home
  • »
  • News
  • »
  • lifestyle
  • »
  • Weight Loss: ತೂಕ ಇಳಿಕೆಗೆ ನಿಂಬೆ, ಕಾಫಿ ವಿಯರ್ಡ್ ಫುಡ್ ಕಾಂಬಿನೇಷನ್ ಆರೋಗ್ಯಕ್ಕೆ ಎಷ್ಟು ಸೂಕ್ತ?

Weight Loss: ತೂಕ ಇಳಿಕೆಗೆ ನಿಂಬೆ, ಕಾಫಿ ವಿಯರ್ಡ್ ಫುಡ್ ಕಾಂಬಿನೇಷನ್ ಆರೋಗ್ಯಕ್ಕೆ ಎಷ್ಟು ಸೂಕ್ತ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಯರ್ಡ್ ಫುಡ್ ಕಾಂಬಿನೇಷನ್ ಅಡಿಯಲ್ಲಿ ನಿಂಬೆ ಜೊತೆ ಕಾಫಿ ಕುಡಿಯುವುದು ತೂಕ ಕಡಿಮೆ ಮಾಡುತ್ತೆ ಎಂದು ಹೇಳಲಾಗುತ್ತಿದೆ. ಅನೇಕರು ನಿಂಬೆ ಮತ್ತು ಕಾಫಿಯನ್ನು ಒಟ್ಟಿಗೆ ಸೇವಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ತಿದ್ದಾರೆ ಎಂಬ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹಾಗಾದ್ರೆ ಈ ನಿಂಬೆ ಮತ್ತು ಕಾಫಿ ಸೇವನೆ ಸಂಯೋಜನೆ ತೂಕ ಇಳಿಕೆಗೆ ಸಹಾಯ ಮಾಡುತ್ತಾ ಅನ್ನೋದನ್ನ ಇಲ್ಲಿ ತಿಳಿಯೋಣ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಷನ್ (Weird Food Combination) ಹೆಸರಿನಲ್ಲಿ ಕಾಫಿ (Coffee), ಸಾಮಾಜಿಕ ಮಾಧ್ಯಮದಲ್ಲಿ (Social Media) ಸಾಕಷ್ಟು ಟ್ರೆಂಡಿಂಗ್ ನಲ್ಲಿ (Trending) ಇದೆ. ತೂಕ ಇಳಿಕೆಗೆ ಕಾಫಿ ಮತ್ತು ನಿಂಬೆ ಸಂಯೋಜನೆ ಫಲಿತಾಂಶ ನೀಡುತ್ತದೆ ಎಂಬ ವಿಷಯವನ್ನು ನೀವು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು. ಅಷ್ಟಕ್ಕೂ ಕಾಫಿ ಜೊತೆ ನಿಂಬೆನಾ? ಅಂತಾ ಹುಬ್ಬೇರಿಸಿದವರು ಇದ್ದಾರೆ. ಇನ್ನು ಕೆಲವರು ಕಾಫಿ ಮತ್ತು ನಿಂಬೆ ಸಂಯೋಜನೆ ನಿಜಕ್ಕೂ ತೂಕ ಇಳಿಸುತ್ತಾ ಅಂತಾ ಪ್ರಶ್ನೆ ಮಾಡಿದವರಿದ್ದಾರೆ. ಇತ್ತೀಚೆಗೆ ಈ ಕಾಫಿ ಮತ್ತು ನಿಂಬೆ ವಿಯರ್ಡ್ ಫುಡ್ ಕಾಂಬಿನೇಷನ್ ಸಖತ್ ವೈರಲ್ ಆಗ್ತಿದೆ.


    ತೂಕ ಇಳಿಕೆಗೆ ನಿಂಬೆ ಮತ್ತು ಕಾಫಿ ಸಂಯೋಜನೆ ಎಷ್ಟು ಸರಿ?


    ವಿಯರ್ಡ್ ಫುಡ್ ಕಾಂಬಿನೇಷನ್ ಅಡಿಯಲ್ಲಿ ನಿಂಬೆ ಜೊತೆ ಕಾಫಿ ಕುಡಿಯುವುದು ತೂಕ ಕಡಿಮೆ ಮಾಡುತ್ತೆ ಎಂದು ಹೇಳಲಾಗುತ್ತಿದೆ.


    ಅನೇಕರು ನಿಂಬೆ ಮತ್ತು ಕಾಫಿಯನ್ನು ಒಟ್ಟಿಗೆ ಸೇವಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ತಿದ್ದಾರೆ ಎಂಬ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಹಾಗಾದ್ರೆ ಈ ನಿಂಬೆ ಮತ್ತು ಕಾಫಿ ಸೇವನೆ ಸಂಯೋಜನೆ ತೂಕ ಇಳಿಕೆಗೆ ಸಹಾಯ ಮಾಡುತ್ತಾ ಅನ್ನೋದನ್ನ ಇಲ್ಲಿ ತಿಳಿಯೋಣ.


    ಏನಿದು ನಿಂಬೆ ಕಾಫಿ ವಿಯರ್ಡ್ ಫುಡ್ ಕಾಂಬಿನೇಷನ್?


    ನಿಂಬೆ ಮತ್ತು ಕಾಫಿ ಎರಡೂ ನಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳು. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಕಾಫಿ ಕೆಫೀನ್ ಹೊಂದಿದೆ.


    ಇದು ಚಯಾಪಚಯವನ್ನು ವೇಗವಾಗಿಸುತ್ತದೆ. ಕಾಫಿ ನಿಮ್ಮ ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಮತ್ತು ನಿಮ್ಮ ಗಮನ ಮತ್ತು ಮನಸ್ಥಿತಿ ಸುಧಾರಿಸುತ್ತದೆ.




    ನಿಂಬೆಯು ದೈನಂದಿನ ಕ್ಯಾಲೋರಿ ಸೇವನೆ ಪ್ರಮಾಣ ಕಡಿಮೆ ಮಾಡುತ್ತದೆ. ನಿಂಬೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿ ತಡೆಯುತ್ತದೆ.


    ನಿಂಬೆ ಮತ್ತು ಕಾಫಿ ತೂಕ ನಷ್ಟಕ್ಕೆ ಸಹಕಾರಿಯೇ?


    ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗರಿಮಾ ಶ್ರೀವಾಸ್ತವ ಪ್ರಕಾರ, ಕಾಫಿ ಚಯಾಪಚಯ ಹೆಚ್ಚಿಸಲು ಮತ್ತು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


    ದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದರೆ ನಾವು ಇದನ್ನು ಸಂಜೆ ಅಥವಾ ರಾತ್ರಿ ಸೇವಿಸಿದರೆ ನಿದ್ರೆಯ ಕ್ರಮದಲ್ಲಿ ಅಡಚಣೆ ಉಂಟಾಗುತ್ತದೆ ಅಂತಾರೆ.


    ಇದು ತೂಕ ಹೆಚ್ಚಿಸುತ್ತದೆ ಅಂತಾರೆ. ಹಾಗೆಯೇ ಬೊಜ್ಜು ಕಡಿಮೆ ಮಾಡಲು ನಿಂಬೆ ಸಹಕಾರಿ. ಇನ್ಸುಲಿನ್ ಪ್ರತಿರೋಧ ಮತ್ತು ಲಿಪಿಡ್ ಚಯಾಪಚಯ ಸುಧಾರಿಸಲು ಇದು ಪ್ರಯೋಜನಕಾರಿ. 


    ನಿಂಬೆಯಲ್ಲಿ ಆಮ್ಲಾ ಗುಣವಿದ್ದು ತೂಕ ಕಡಿಮೆ ಮಾಡುತ್ತದೆ ಅಂತಾರೆ ಗರಿಮಾ. ಡಾ.ಗರಿಮಾ ಪ್ರಕಾರ, ನಿಂಬೆ ಮತ್ತು ಕಾಫಿಯನ್ನು ಒಟ್ಟಿಗೆ ಸೇವಿಸಿದರೂ ಮತ್ತು ಪ್ರತ್ಯೇಕವಾಗಿ ಸೇವಿಸಿದ್ರೂ ದೇಹದ ಮೇಲೆ ಅದೇ ಪರಿಣಾಮ ಬೀರುತ್ತದೆ.


    ತೂಕ ಕಡಿಮೆಯಾಗುತ್ತದೋ ಅಥವಾ ಇಲ್ಲವೋ ಎಂಬುದು ನಿಮ್ಮ ದೇಹದ ಸ್ವಭಾವವನ್ನು ಅವಲಂಬಿಸಿರುತ್ತದೆ ಅಂತಾ ಹೇಳಿದ್ದಾರೆ. ಕಾಫಿ ಮತ್ತು ನಿಂಬೆ ಎರಡನ್ನೂ ಮಿತವಾಗಿ ಬೆಳಗ್ಗೆ ಸೇವಿಸಬಹುದು. ಇಲ್ಲದಿದ್ದರೆ ಅದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.


    ನಿಂಬೆ ಮತ್ತು ಕಾಫಿ ಆರೋಗ್ಯಕರವೇ?


    ನಿಂಬೆ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸಿಟ್ರಿಕ್ ಆಮ್ಲ ಹೊಂದಿದೆ. ಇದನ್ನು ಹೆಚ್ಚು ಸೇವಿಸಿದರೆ ನಿಮ್ಮ ಜೀರ್ಣಾಂಗ ವ್ಯವಸ್ಥೆ ಕೆರಳುವಿಕೆ, ಆಸಿಡ್ ರಿಫ್ಲಕ್ಸ್, ಎದೆಯುರಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.


    ಇದನ್ನೂ ಓದಿ: ಪಳ ಪಳ ಹೊಳೆಯುವ ಚರ್ಮಕ್ಕಾಗಿ ಇಲ್ಲಿವೆ 9 ಸರಳ ಫೇಸ್‍ಪ್ಯಾಕ್‍ಗಳು


    ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ನಿರ್ಜಲೀಕರಣ ಸಮಸ್ಯೆ, ಆಮ್ಲೀಯತೆ, ಯಕೃತ್ತಿಗೆ ಹಾನಿ, ತಲೆನೋವಿಗೆ, ರಾತ್ರಿ ನಿದ್ರೆಗೆ ತೊಂದರೆ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಉತ್ತಮವಲ್ಲ. ತಜ್ಞರನ್ನು ಮೊದಲು ಸಂಪರ್ಕಿಸಿ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು